Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಗುಲ್ಬರ್ಗದ ಕೊಳಗೇರಿಯಲ್ಲಿ ತರಕಾರಿ ಮಾರುತ್ತಿದ್ದ ಹೆಣ್ಣುಮಗಳನ್ನು ಆಕೆಯ ಗಂಡನೇ ಆ ದಿನ ರಾತ್ರಿ ಆಕೆಯ ಕೊರಳಿನ ತಾಳಿಯನ್ನು ಕೊಡಲು ಕೇಳಿದ. ಇದ್ದುದು ಅದೊಂದೇ ಜೊತೆ ಚಿನ್ನದ ತಾಳಿ ಬೊಟ್ಟು. ಸಹಜವಾಗಿಯೇ ಸಂಪ್ರದಾಯಸ್ಥ ಮನಸ್ಥಿತಿಯ ಆ ಹೆಣ್ಣು ಮಗಳು ಕೊಂಚ ಹಿಂಜರಿದಾಗ ‘ಗಟ್ಟಿ ಗುಂಡು ಕಲ್ಲಿನಂಗ ನಾನ ಅದೀನಿ… ತಾಳಿ ಬೊಟ್ಟ ಮಾರಿದರೆ ನಿನ್ನ ಮಗಳ ಸಾಲಿ ಫೀಸ್ ಕಟ್ಟಾಕ ಬರ್ತೈತಿ’ ಎಂದು ಹೇಳಿದಾಗ ಮರು ಮಾತಿಲ್ಲದೆ ಕೊರಳ ತಾಳಿಯನ್ನು ಬಿಚ್ಚಿಕೊಟ್ಟ ಆಕೆ ಅರಿಶಿಣದ ಕೊಂಬನ್ನು ಕೊರಳಲ್ಲಿ ಧರಿಸಿದಳು.ಹೀಗೆ ಆಕೆಯಿಂದ ತಾಳಿಯ ಬೊಟ್ಟನ್ನು ಇಸಿದುಕೊಂಡು ಮಾರಿ ಮಗಳ ವೈದ್ಯಕೀಯ ಕಾಲೇಜಿನ ಫೀಸ್ ಕಟ್ಟಿದವರು ಬಾಬುರಾವ್ ದೇಶಮಾನೆ ಮತ್ತು ಆ ವೈದ್ಯಕೀಯ ಪದವಿಯನ್ನು ಪಡೆದು ಸ್ನಾತಕೋತ್ತರ ವೈದ್ಯಕೀಯದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸಕಳಾದ ಆ ಮಗಳೇ ನಮ್ಮ ಇಂದಿನ ಕಥೆಯ ಸ್ಫೂರ್ತಿ ದೇವತೆ ಡಾ. ವಿಜಯಲಕ್ಷ್ಮಿ ದೇಶಮಾನೆ. ದೇಶಮಾನೆ ಎಂಬುದು ಅವರ ಮನೆತನದ ಅಡ್ಡ ಹೆಸರಲ್ಲ……
ದೆಹಲಿ ಚುನಾವಣೆ ಪಲಿತಾಂಶ | ಎಎಪಿ 22; ಬಿಜೆಪಿ 48; ಕಾಂಗ್ರೆಸ್ ಹ್ಯಾಟ್ರಿಕ್ ಶೂನ್ಯ ಸಾಧನೆ | ಅರವಿಂದ್ ಕೇಜ್ರಿವಾಲ್ ಗೆ ಸೋಲಿನ ಆಘಾತ ನವದೆಹಲಿ: ರಾಷ್ಟ್ರ ರಾಜಧಾನಿಯ ಚುನಾವಣೆಯಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸುವ ಮೂಲಕ ದೆಹಲಿ ಗದ್ದುಗೆಯನ್ನು 27 ವರ್ಷಗಳ ನಂತರ ಏರುತ್ತಿದೆ. ವಿಧಾನಸಭೆಯ ಒಟ್ಟು 70 ಕ್ಷೇತ್ರಗಳಲ್ಲಿ ಪಕ್ಷವು 48 ಸ್ಥಾನಗಳನ್ನು ಗಳಿಸಿದ್ದು, ಆಡಳಿತರೂಢ ಎಎಪಿಯ ಸಂಖ್ಯೆ 22 ಕ್ಕೆ ಇಳಿದಿದೆ. ಪಕ್ಷದ ಪ್ರಮುಖ ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ಪ್ರಮುಖ ವ್ಯಕ್ತಿಗಳು ಚುನಾವಣೆಯಲ್ಲಿ ಸೋಲುಂಡಿದ್ದು ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಅದಾಗ್ಯೂ, ಮುಖ್ಯಮಂತ್ರಿ ಅತಿಶಿ ಅವರು ತಮ್ಮ ಕಲ್ಕಾಜಿ ಕ್ಷೇತ್ರವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.2020ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 62 ಸ್ಥಾನಗಳನ್ನು ಗೆದ್ದು, ಬಿಜೆಪಿಗೆ 8 ಸ್ಥಾನಗಳಲ್ಲಿ ಸಮಾಧಾನ ಪಡುವಂತೆ ಮಾಡಿತ್ತು. ಅದಕ್ಕೂ ಮುಂಚಿನ 2015ರ ಚುನಾವಣೆಯಲ್ಲಿ ಎಎಪಿ ವಿಧಾನಸಭೆಯ 70 ಕ್ಷೇತ್ರಗಳಲ್ಲಿ 67 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದು, ಬಿಜೆಪಿಗೆ 3 ಸ್ಥಾನಗಳಷ್ಟೆ ದಕ್ಕಿತ್ತು. ಅದಾಗ್ಯೂ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿದ್ಯಾರ್ಥಿಗಳ ಪ್ರಗತಿ ಹಾಗೂ ಸರ್ವಾಂಗೀಣ ಪ್ರಗತಿಗಾಗಿ ಅವರಲ್ಲಿ ಮೌಲ್ಯಯುತ ಶಿಕ್ಷಣದ ಅರಿವು ಮೂಡಿಸಬೇಕು ಎಂದು ಜಮಖಂಡಿಯ ಬಿಎಲ್‌ಡಿಇ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ, ನಿವೃತ್ತ ಪ್ರಾಚಾರ್ಯ ಎಸ್.ಎಚ್.ಲಗಳಿ ಹೇಳಿದರು.ಸಿಂದಗಿ ಪಟ್ಟಣದ ರಾಂಪೂರ ರಸ್ತೆಯ ಹೊರವಲಯದಲ್ಲಿರುವ ಪಿಇಎಸ್ ಗಂಗಾಧರ ಎನ್ ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದತ್ತ ಸಾಗುತ್ತಿರುವ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳೆಡೆಗೆ ಗಮನ ಹರಿಸಬೇಕು. ಸದೃಡ ಸಮಾಜ ನಿರ್ಮಾಣ ವಾಗಬೇಕಾದರೆ ವಿದ್ಯಾರ್ಥಿಗಳಲ್ಲಿ ಮೌಲ್ಯಯುತ ಶಿಕ್ಷಣದ ಅರಿವು ಮೂಡಿಸುವುದು ಅತ್ಯಅವಶ್ಯಕ ಎಂದರು.ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಎಲ್‌ಡಿಇ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ವಿ.ಎಂ.ನುಚ್ಚಿ ಮಾತನಾಡಿದರು. ವಿಶ್ರಾಂತ ಉಪನ್ಯಾಸಕ ಎಸ್.ವಾಯ್. ಬೀಳಗಿ ಪ್ರಾಸಾವಿಕ ನುಡಿಗಳನ್ನಾಡಿದರು.ಈ ವೇಳೆ ಪಿಇಎಸ್ ಸಂಸ್ಥೆಯ ಕಾರ್ಯದರ್ಶಿ ಬಿ.ಪಿ.ಕರ್ಜಗಿ ಸಮ್ಮುಖ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಡಾ.ಸಂತೋಷಕುಮಾರ ಕರ್ಜಗಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಸಮಾರಂಭದಲ್ಲಿ ಪಿಯುಸಿಯಲ್ಲಿ ಪ್ರಥಮ ದ್ವಿತೀಯ ಹಾಗೂ ತೃತಿಯ ಸ್ಥಾನ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ವಿಕಸಿತ ಭಾರತ ಸಂಕಲ್ಪಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ್ಲಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರ ಸಂತಸ ವ್ಯಕ್ತಪಡಿಸಿದ್ದಾರೆ.ಸುಳ್ಳು, ಭ್ರಷ್ಟಚಾರ ಮತ್ತು ದೇಶವನ್ನು ಒಡೆಯುವ ಕೆಲಸ ಹಳೆಯ ಸರಕಾರದಾಗಿತ್ತು. ಅವರಿಗೆ ದೆಹಲಿ ಜನತೆ ತಕ್ಕ ಉತ್ತರ ನೀಡಿದೆ. ದೆಹಲಿಯ ಸರ್ವತೋಮುಖ ಬೆಳವಣಿಗೆಗೆ ಮತ್ತು ಅಲ್ಲಿನ ಜನರ ಜೀವನವನ್ನು ಉತ್ತೇಜಿಸಲು ನಮ್ಮ ಪಕ್ಷದ ಸರಕಾರ ನಿರಂತರವಾಗಿ ಶ್ರಮಿಸಲಿದೆ ಎಂದು ಶ್ರೀಶೈಲಗೌಡ ಬಿರಾದಾರ ತಿಳಿಸಿದ್ದಾರೆ.
ಸಿಂದಗಿಯಲ್ಲಿ ಅರ್ಧಕ್ಕೆ ನಿಂತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ವರದಿ: ರಶ್ಮಿ ನೂಲಾನವರಸಿಂದಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್ ತಾಲ್ಲೂಕಿನಲ್ಲಿ ಪ್ರಾರಂಭಗೊಳ್ಳಲು ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಆಟೊ, ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಊಟ, ತಿಂಡಿ ಅತೀ ಕಡಿಮೆ ದರದಲ್ಲಿ ಲಭ್ಯವಾಗಲೆಂಬ ಉದ್ದೇಶದಿಂದ ೨೦೧೭ರ ಆ.೧೬ರಂದು ಇಂದಿರಾ ಕ್ಯಾಂಟೀನ್‌ಗಳನ್ನು ರಾಜ್ಯದಲ್ಲಿ ಆರಂಭಿಸಲಾಯಿತು. ಆದರೆ ತಾಲ್ಲೂಕಿನ ಜನತೆಗೆ ಇನ್ನೂ ಈ ಯೋಜನೆ ಮರೀಚಿಕೆಯಾಗಿಯೇ ಉಳಿದಿದೆ. ಸದ್ಯ ಅಡುಗೆ ಅನಿಲ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಹೊಸದಾಗಿ ಕ್ಯಾಂಟೀನ್ ಪ್ರಾರಂಭವಾದರೂ ಕೆಲಸ ಮಾತ್ರ ಅರ್ಧಕ್ಕೆ ನಿಂತಿದೆ. ಪ್ರಾರಂಭವಾಗುತ್ತೋ ಇಲ್ಲವೂ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.ಕ್ಯಾಂಟೀನ್ ನಿರ್ಮಾಣ ಕಾರ್ಯ ಆಮೆ ವೇಗದಲ್ಲಿ ನಡೆದಿರುವುದೇ ಇದಕ್ಕೆ ಕಾರಣ. ತಾಲೂಕಿನ ಬಡವರು, ಕಾರ್ಮಿಕರು, ಶಾಲಾ-ಕಾಲೇಜು ಮಕ್ಕಳಿಗೆ, ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ, ಕೋರ್ಟ್ಗೆ ಬರುವ ಸಾರ್ವಜನಿಕರಿಗೆ ಹಾಗೂ ರೈತರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿವಿಧ ಇಲಾಖೆಗಳಿಂದ ಮಾಡಿದ ಕಾಮಗಾರಿಗೆ ಮೂರು ತಿಂಗಳಾದರೂ ಹಣ ಸಂದಾಯವಾಗಿಲ್ಲ. ಒಂದು ತಿಂಗಳ ಗಡುವು ನೀಡುತ್ತೇವೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಅರುಣ ಮಠ ಹೇಳಿದರು.ಸಿಂದಗಿ ಪಟ್ಟಣದ ಸಂಗಮೇಶ್ವರ ದೇವಾಲಯದಲ್ಲಿ ತಾಲೂಕು ಗುತ್ತಿಗೆದಾರರ ಸಂಘದ ವತಿಯಿಂದ ನಡೆದ ಬೃಹತ್ ಪ್ರತಿಭಟನಾ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.ಕಾಮಗಾರಿ ಪೂರ್ಣಗೊಳಿಸಿದರೂ ಸರಕಾರ ಹಣ ಸಂದಾಯ ಮಾಡುತ್ತಿಲ್ಲ. ಇದರಿಂದ ಗುತ್ತಿಗೆದಾರರು ಸಂಕಷ್ಟದಲ್ಲಿ ಸಿಲುಕಿದಂತಾಗಿದೆ. ಕಾರಣ ಫೆ.೧೪ರಂದು ವಿಜಯಪುರದ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಬಳಿಕ ಜಿಲ್ಲಾಧಿಕಾರಿಗಳಿಗೆ ಸಾಂಕೇತಿಕವಾಗಿ ಮನವಿ ಸಲ್ಲಿಸಲಾಗುವುದು. ಸದರಿ ಬೃಹತ್ ಪ್ರತಿಭಟನೆಯಲ್ಲಿ ಸಿಂದಗಿ ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.ಈ ವೇಳೆ ಹಿರಿಯ ಗುತ್ತಿಗೆದಾರ ಮಹಾದೇವಪ್ಪ ಗುಡ್ಲಿಮನಿ ಮಾತನಾಡಿ, ವಯಕ್ತಿಕ ಅಥವಾ ರಾಜಕೀಯ ಕಾರಣದಿಂದ ಈ ಪ್ರತಿಭಟನೆ ಮಾಡುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಸರಕಾರ ಗುತ್ತಿಗೆದಾರರ ಹಣ ಸಂದಾಯ ಮಾಡುತ್ತಿಲ್ಲ. ಇಲ್ಲಿಯವರೆಗೂ ಸರಕಾರ ಪ್ರತಿಶತ ಶೇ.೧೦ರಷ್ಟು ಬಿಲ್ಲ್…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಅಧ್ಯಯನ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಬದಲಾಗಿ ಅವಕಾಶ ಮತ್ತು ಅವಶ್ಯಕತೆ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಬೆಳೆಯುತ್ತಿದೆ ಎಂದು ಪ್ರಾಚಾರ್ಯ ಪ್ರಭುಗೌಡ ಪಾಟೀಲ ಹೇಳಿದರು.ತಾಲ್ಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶೈಕ್ಷಣಿಕ ಪರೀಕ್ಷೆಗಳ ಜೊತೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿಕೊಳ್ಳಬೇಕು. ಇಂದು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ನೌಕರಿಗಾಗಿ ಶಿಕ್ಷಣ ಎಂಬ ಭಾವನೆ ಮೂಡಿರುವುದು ದೊಡ್ಡ ದುರಂತ ಎಂದರು.ಸಂಗನಬಸವ ಅಂತರರಾಷ್ಟ್ರೀಯ ಪ.ಪೂ. ಕಾಲೇಜು ಪ್ರಾಚಾರ್ಯ ಹೇಮಂತಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಪರೀಕ್ಷೆ ತಯಾರಿ ಮಾಡಿಕೊಳ್ಳಬೇಕು. ಪರೀಕ್ಷಾ ವ್ಯವಸ್ಥೆಯ ತಿಳುವಳಿಕೆ, ಪಾಲ್ಗೊಳ್ಳುವಿಕೆಯಲ್ಲಿಯ ಜವಾಬ್ದಾರಿಗಳು ಮತ್ತು ಸೂಕ್ತ ಅಭಿವ್ಯಕ್ತಿ ಸಾಧಿಸಿಕೊಳ್ಳುವುದು ಸರಿಯಾದ ಅಧ್ಯಯನದಷ್ಟೇ ಮುಖ್ಯವಾದದ್ದು ಎಂದು ಮನವರಿಕೆ ಮಾಡಿದರು.ಚಾಣಕ್ಯ ಕರಿಯರ್ ಅಕಾಡೆಮಿಯ ಉಪನ್ಯಾಸಕ ಶಿವುಕುಮಾರ ಹಿರೇಮಠ ಮಾತನಾಡಿ, ಜೀವನದಲ್ಲಿ ಎದೆಗುಂದದೇ ಸತತ ಪ್ರಯತ್ನಶೀಲರಾಗಬೇಕು. ಬದುಕಿನ ಯಶಸ್ಸು ಮಾತ್ರ ನಮ್ಮ ಪ್ರಯತ್ನವನ್ನು ಅವಲಂಬಿಸಿದೆ ಎಂದರು.ಸ್ಥಳೀಯ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಇಂದು ಸಮಾಜಕ್ಕೆ ಹಿರಿಯರ ಅನುಭವದ ಮಾರ್ಗದರ್ಶನದ ಅಗತ್ಯತೆ ಇದೆ. ಭವಿಷ್ಯತ್ತಿನ ಬಗ್ಗೆ ಬಹಳ ಜನರಿಗೆ ಅರ್ಥವಾಗುತ್ತಿಲ್ಲ. ಅದನ್ನು ತಿಳಿಸುವ ಕೆಲಸವಾಗಬೇಕಿದೆ ಎಂದು ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕ ಶನಿವಾರ ಹಮ್ಮಿಲೊಂಡಿದ್ದ ಸಂಘದ ವಾರ್ಷಿಕೋತ್ಸವ ಹಾಗೂ 75 ವರ್ಷ ತುಂಬಿದ ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸರ್ಕಾರಿ ಸೇವೆ ಎಂದರೆ ಅದು ದೇವರ ಸೇವೆ ಎಂದು ತಿಳಿದು ನೈತಿಕತೆ, ಆದರ್ಶ ಪ್ರಾಮಾಣಿಕ ಸೇವೆಯೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತಿದ್ದರು. ಇಂದು ಮಕ್ಕಳಿಗಾಗಿ ಗಳಿಕೆ ಮಾಡಿ ಇಡುತಿದ್ದಾರೆ ವಿನಹ ಮಕ್ಕಳಿಗೆ ಸಂಸ್ಕಾರ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸುತ್ತ ಗಮನ ಹರಿಸುತ್ತಿಲ್ಲ. ದುಶ್ಚಟಗಳು, ಅಪರಾಧಗಳು ನೈತಿಕ ಅದ:ಪತನಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.ನಿವೃತ್ತ ಪ್ರಾಚಾರ್ಯ ವೈ.ಬಿ.ಪಟ್ಟಣಶೆಟ್ಟಿ ಮಾತನಾಡಿ, ಹಿರಿಯರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಪ್ರತಿದಿನ ವ್ಯಾಯಾಮ, ವಾಯು ವಿಹಾರ, ಧ್ಯಾನ…
ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ, ವ್ಹಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ನಮ್ಮ ಹಿರಿಯರು ಪ್ರಾಂಜಲ ಮನಸ್ಸಿನಿಂದ ಎಲ್ಲರಿಗೂ ನೆರವಾಗುವ ಉದ್ದೇಶದಿಂದ ಸಹಕಾರ ಸಂಘಗಳನ್ನು ಬೆಳೆಸಿದ್ದಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಪಡೆಯುವ ಸಾಲದಿಂದ ಕಿರುಕುಳ ತಪ್ಪಿಸಿಕೊಳ್ಳಲು ಸಹಕಾರಿ ಸಂಘಗಳಿಂದ ಸಾಲ ಪಡೆದುಕೊಂಡು ಪ್ರತಿಯೊಬ್ಬರೂ ಆರ್ಥಿಕವಾಗಿ ಸಬಲರಾಗಬೇಕೆಂದು ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ, ವ್ಹಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಮಣೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿದ ನಂತರ ಜರುಗಿದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈಚೆಗೆ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಗೆ ಅನೇಕ ಜನರು ಬಿದ್ದು ಜೀವ ಕಳೆದುಕೊಳ್ಳುತ್ತಿರುವದನ್ನು ನಾವು ಕಾಣುತ್ತಿದ್ದೇವೆ. ಸಾಲ ಸಿಗುತ್ತದೆ ಎಂದು ಎಂದಿಗೂ ಯಥೇಚ್ಛವಾಗಿ ತೆಗೆದುಕೊಳ್ಳಬಾರದು. ಸಾಲದಲ್ಲಿ ಇರುವ ಸ್ಥಿತಿ ಇರಬಾರದು. ನಾವುಗಳೇ ಸಾಲ ನೀಡುವಂತಾಗಬೇಕಿದೆ. ಸಹಕಾರಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಅಪ್ಪಾಸಾಹೇಬ ತವನಪ್ಪಾಬಾಬಾ ಮುತ್ತಿನ ಜೈನ ಅಲ್ಪಸಂಖ್ಯಾತರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಜಯಪುರ ಜಿಲ್ಲೆಯ ದಿಗಂಬರ ಜೈನ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಯಾವುದೇ ಪದವಿ ಪೂರ್ವ, ಪದವಿ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ೨೦೨೩-೨೪ ನೇ ಸಾಲಿನಲ್ಲಿ ತೆರ್ಗಡೆ ಹೊಂದಿ ಸನ್ ೨೦೨೪-೨೫ ನೇ ಸಾಲಿನಲ್ಲಿ ಮುಂದುವರೆಯುತ್ತಿರುವ ವಿದ್ಯಾರ್ಥಿಗಳಿಗೆ ಮೇರಿಟ್ ಆಧಾರದ ಮೇಲೆ ಶಿಷ್ಯವೇತನ ನೀಡುತ್ತಿದ್ದು, ಕಮೀಟಿ ನಿರ್ಧಾರವೆ ಅಂತಿಮ ನಿರ್ಧಾರವಾಗಿರುತ್ತದೆ.ಕಾರಣ ಆಸಕ್ತ ವಿದ್ಯಾರ್ಥಿಗಳು ಶಿಷ್ಯವೇತನ ಅರ್ಜಿ ನಮೂನೆ ಪಡೆಯಲು ಅಪ್ಪಾಸಾಹೇಬ ತವನಪ್ಪಬಾಬಾ ಮುತ್ತಿನ ಅಧ್ಯಕ್ಷರು , ಅಪ್ಪಾಸಾಹೇಬ ತವನಪ್ಪಬಾಬಾ ಮುತ್ತಿನ ಜೈನ ಅಲ್ಪಸಂಖ್ಯಾತರ ಚಾರಿಟೇಬಲ್ ಟ್ರಸ್ಟ ( ರಿ ) , ಬಿ.ಎಸ್ . ರಸ್ತೆ , ಸರಾಫ್ ಬಜಾರ , ವಿಜಯಪುರ-೫೮೬೧೦೧ ಜಿಲ್ಲೆ ವಿಜಯಪುರ ಈ ವಿಳಾಸಕ್ಕೆ ಅಂಚೆ ಕಚೇರಿಯ ಲಕೋಟೆಯಲ್ಲಿ ತಮ್ಮ ವಿಳಾಸದೊಂದಿಗೆ ಟ್ರಸ್ಟಿನ ವಿಳಾಸಕ್ಕೆ ಕಳುಹಿಸಿ ಅರ್ಜಿ ಪಡೆಯಬಹುದು. ಅರ್ಜಿ ಪಡೆಯಲು ಮಾರ್ಚ ೩೧, ೨೦೨೫ ಕೊನೆಯ ದಿನಾಂಕ ಆಗಿರುತ್ತದೆ ಎಂದು…
