ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಅಪ್ಪಾಸಾಹೇಬ ತವನಪ್ಪಾಬಾಬಾ ಮುತ್ತಿನ ಜೈನ ಅಲ್ಪಸಂಖ್ಯಾತರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಜಯಪುರ ಜಿಲ್ಲೆಯ ದಿಗಂಬರ ಜೈನ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಯಾವುದೇ ಪದವಿ ಪೂರ್ವ, ಪದವಿ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ೨೦೨೩-೨೪ ನೇ ಸಾಲಿನಲ್ಲಿ ತೆರ್ಗಡೆ ಹೊಂದಿ ಸನ್ ೨೦೨೪-೨೫ ನೇ ಸಾಲಿನಲ್ಲಿ ಮುಂದುವರೆಯುತ್ತಿರುವ ವಿದ್ಯಾರ್ಥಿಗಳಿಗೆ ಮೇರಿಟ್ ಆಧಾರದ ಮೇಲೆ ಶಿಷ್ಯವೇತನ ನೀಡುತ್ತಿದ್ದು, ಕಮೀಟಿ ನಿರ್ಧಾರವೆ ಅಂತಿಮ ನಿರ್ಧಾರವಾಗಿರುತ್ತದೆ.
ಕಾರಣ ಆಸಕ್ತ ವಿದ್ಯಾರ್ಥಿಗಳು ಶಿಷ್ಯವೇತನ ಅರ್ಜಿ ನಮೂನೆ ಪಡೆಯಲು ಅಪ್ಪಾಸಾಹೇಬ ತವನಪ್ಪಬಾಬಾ ಮುತ್ತಿನ ಅಧ್ಯಕ್ಷರು , ಅಪ್ಪಾಸಾಹೇಬ ತವನಪ್ಪಬಾಬಾ ಮುತ್ತಿನ ಜೈನ ಅಲ್ಪಸಂಖ್ಯಾತರ ಚಾರಿಟೇಬಲ್ ಟ್ರಸ್ಟ ( ರಿ ) , ಬಿ.ಎಸ್ . ರಸ್ತೆ , ಸರಾಫ್ ಬಜಾರ , ವಿಜಯಪುರ-೫೮೬೧೦೧ ಜಿಲ್ಲೆ ವಿಜಯಪುರ ಈ ವಿಳಾಸಕ್ಕೆ ಅಂಚೆ ಕಚೇರಿಯ ಲಕೋಟೆಯಲ್ಲಿ ತಮ್ಮ ವಿಳಾಸದೊಂದಿಗೆ ಟ್ರಸ್ಟಿನ ವಿಳಾಸಕ್ಕೆ ಕಳುಹಿಸಿ ಅರ್ಜಿ ಪಡೆಯಬಹುದು. ಅರ್ಜಿ ಪಡೆಯಲು ಮಾರ್ಚ ೩೧, ೨೦೨೫ ಕೊನೆಯ ದಿನಾಂಕ ಆಗಿರುತ್ತದೆ ಎಂದು ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಅಪ್ಪಾಸಾಹೇಬ ತವನಪ್ಪಾಬಾಬಾ ಮುತ್ತಿನ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೋ.೮೯೭೧೫೦೪೫೩೯, ೯೪೪೮೧೭೯೭೩೨ ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.
