Author: editor.udayarashmi@gmail.com

ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಎಲ್ಲಾ ತಾಲೂಕಾ ಮಟ್ಟದಲ್ಲಿ ವಿಕಲಚೇತನರ ಕುಂದುಕೊರತೆ ಸಭೆ ನಡೆಸಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.ಅವರು ಶನಿವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ೨೦೧೬ರ ಕಾಯ್ದೆ ಅನ್ವಯ ಪುನಶ್ವೇತನ ಹಕ್ಕುಗಳ ರಕ್ಷಣೆ ಮತ್ತು ಅಭಿವೃದ್ಧಿ ಹಾಗೂ ವಿಕಲಚೇತನರ ವಿವಿಧ ವಿಷಯಗಳು ಹಾಗೂ ವಿಕಲಚೇತನರ ಕುಂದು-ಕೊರತೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಸರ್ಕಾರವು ವಿಕಲಚೇತನರ ಉನ್ನತಿಗಾಗಿ ಹಲವು ಯೋನಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಯ ಲಾಭ ಅರ್ಹ ವಿಕಲಚೇತನರಿಗೆ ದೊರಕಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಅರ್ಹರು ಸಹ ಈ ಯೋಜನೆಗಳ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.ವಿಕಲಚೇತನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅವರಿಗೆ ಮೀಸಲಿರಿಟ್ಟಿರುವ ಶೇ.೫% ಹಣವನ್ನು ಸರ್ಕಾರದ ಮಾರ್ಗ ಸೂಚಿಯಂತೆ ಕ್ರಮವಹಿಸಿ, ವಿಕಲಚೇತನರ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ೨೦೧೬ರ ಕಾಯ್ದೆಯಡಿ ಬರುವ ವಿಕಲಚೇತನರ ಕಾಯ್ದೆ ಕಾನೂನು…

Read More

ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ | ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಐತಿಹಾಸಿಕ ಪ್ರವಾಸಿ ತಾಣ, ಸ್ಮಾರಕಗಳ ದರ್ಶನ ಮಾಡುವ ಮೂಲಕ ವಿದ್ಯಾರ್ಥಿಗಳು ಇತಿಹಾಸ, ಕಲೆ, ಸಂಸ್ಕೃತಿ, ಐತಿಹಾಸಿಕ ಸ್ಥಳಗಳ ಮಹತ್ವ ತಿಳಿದುಕೊಳ್ಳಲು ಹಾಗೂ ಜ್ಞಾನದ ಹರವು ಹೆಚ್ಚಿಸಿಕೊಳ್ಳಲು ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವು ಸಹಾಯಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.ಅವರು ಶನಿವಾರ ಪ್ರವಾಸೋದ್ಯಮ ಇಲಾಖೆ ಹಾಗೂ ಕೆ.ಎಸ್.ಟಿ.ಡಿ.ಸಿ ವತಿಯಿಂದ ೨೦೨೪-೨೫ನೇ ಸಾಲಿನ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ನಗರದ ಕೆಎಸ್‌ಟಿಡಿಸಿ ಹೊಟೇಲ್ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳು ತಾವು ಭೇಟಿ ನೀಡುವ ಸ್ಥಳಗಳ ಮಹತ್ವ, ಅಲ್ಲಿನ ಐತಿಹ್ಯ ತಿಳಿದುಕೊಂಡು, ತಮ್ಮಗಾದ ಪ್ರವಾಸ ಅನುಭವದ ಪ್ರವಾಸ ಪ್ರಬಂಧ ಬರೆದು ತಮ್ಮ ಶಾಲಾ ಮುಖ್ಯೋಪಾಧ್ಯಯರಿಗೆ ಸಲ್ಲಿಸುವಂತೆಯೂ, ಅತ್ಯುತ್ತಮ ಮೂರು ಪ್ರವಾಸ ಕಥನದ ಪ್ರಬಂಧಗಳನ್ನು ಆಯ್ಕೆ ಮಾಡಿ, ಬಹುಮಾನ ವಿತರಿಸಲಾಗುವುದೆಂದು ಮಕ್ಕಳಿಗೆ ಸ್ಫೂರ್ತಿ ನೀಡಿದರು. ವಿದ್ಯಾರ್ಥಿ ಜೀವನದಲ್ಲಿ ಓದಿಗೆ ಮಹತ್ವ ನೀಡಬೇಕು. ಅಧ್ಯಯನಶೀಲತೆಯನ್ನು…

Read More

ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳು ಪರೀಕ್ಷೆಯನ್ನು ಭಯಮುಕ್ತವಾಗಿ ಎದುರಿಸಬೇಕು, ಸೂಕ್ತ ತಯಾರಿ ಯೊಂದಿಗೆ ಹಬ್ಬದಲ್ಲಿ ಸಂಭ್ರಮಿಸುವಂತೆ, ಪರೀಕ್ಷೆಗಳನ್ನು ಸಂಭ್ರಮಿಸಿ ಎದುರಿಸಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅಭಿಪ್ರಾಯಪಟ್ಟರು.ಅವರು ಶನಿವಾರ ಪ್ರಾರಂಭವಾದ ಸಿಬಿಎಸ್‌ಸಿ ಬೋರ್ಡ ನ, ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು ಆಕ್ಟ್ ಶಾರದಾ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರದ ಮುಂದೆ ಪರೀಕ್ಷೆ ಬರೆಯುತ್ತಿರುವ ವಿದ್ದ್ಯಾರ್ಥಿಗಳಿಗೆ ಪುಷ್ಪಗುಚ್ಛ ನೀಡಿ ಶುಭ ಹಾರೈಸಿದ ಅವರು ಪಾಲಕರು, ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಸಮಯ ಕಳೆದರು.ಕರ್ನಾಟಕ ಬಾಲವಿಕಾಸ ಅಕೇಡೆಮಿಯ ಅಧ್ಯಕ್ಷರ ಈ ನಡೆಗೆ ಪಾಲಕರು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.ಶಿಕ್ಷಣ ತಜ್ಞರಾದ ಏನ್ ಎಮ್ ಬಿರಾದಾರ ಗುರುಗಳು ಹಾಗೂ ಶಿಕ್ಷಕರು, ಪಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಕಾಂಗ್ರೆಸ್‌ನಲ್ಲಿ ಹೊಸ ನಾಯಕತ್ವ ಸಿದ್ದಗೊಳ್ಳುವವರೆಗೆ ಸಿದ್ದರಾಮಯ್ಯ ಅನಿವಾರ್ಯ | ಸಚಿವ ಸತೀಶ್ ಜಾರಕಿಹೊಳಿ ಅಭಿಮತ ಬೆಂಗಳೂರು: ಕಾಂಗ್ರೆಸ್‌ನಲ್ಲಿ ಹೊಸ ನಾಯಕತ್ವ ಸಿದ್ದಗೊಳ್ಳುವವರೆಗೆ ಸಿದ್ದರಾಮಯ್ಯ ಅನಿವಾರ್ಯ ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿರುವ ಅವರು, ಮುಂದಿನ ಚುನಾವಣೆ ಗೆಲ್ಲಬೇಕು ಅಂದ್ರೆ ಸಿದ್ದರಾಮಯ್ಯ ಬೇಕು ಎಂದು ಹೇಳಿದ್ದಾರೆ. ಈ ಮೂಲಕ ಅಧಿಕಾರ ಹಸ್ತಾಂತರದ ವಿರುದ್ಧವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಬೇಕು ಎಂಬ ಕಾಂಗ್ರೆಸ್ ಶಾಸಕ ರಾಯರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ನಮಗೆ ಬೇಕೆ ಬೇಕು. ಚುನಾವಣೆ ನಿವೃತ್ತಿ ಆದ್ರೂ ಕೂಡ ರಾಜಕೀಯದಲ್ಲಿ ಇರಬೇಕು. ಮುಂದಿನ ಚುನಾವಣೆ ಗೆಲ್ಲಬೇಕು ಅಂದ್ರೆ ಅವರು ಇರಬೇಕು. ಸಿದ್ದರಾಮಯ್ಯ ಇರಬೇಕು ಎಂಬ ಆಸೆ ಇದೆ, ಹೊಸ ನಾಯಕತ್ವ ತಯಾರಾಗುವರೆಗೆ ಸಿದ್ದರಾಮಯ್ಯ ಅನಿವಾರ್ಯ ಎಂದು ಸತೀಶ್ ಜಾರಕಿಹೊಳಿ ಅವರು ಅಭಿಪ್ರಾಯಪಟ್ಟಿದ್ದಾರೆ.ನಮ್ಮ ಆಶಯ ಕೂಡ ಅದೆ ಇದೆ. ಚುನಾವಣೆ ನಿವೃತ್ತಿ ಆದ್ರೂ ಸಕ್ರಿಯ ರಾಜಕೀಯದಲ್ಲಿ ಇರಬೇಕು. ಮುಂದಿನ ಚುನಾವಣೆ ಗೆಲ್ಲಬೇಕು ಅಂದ್ರೆ ಸಿದ್ದರಾಮಯ್ಯ ಬೇಕು.…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗ್ರಾಮ ಪಂಚಾಯಿತಿ ಅಡಿಯ ಮನೆಗಳ ಹಂಚಿಕೆಯಲ್ಲಿ ಫಲಾನುಭವಿಗಳಿಂದ ಮೂವತ್ತು ಸಾವಿರ ಹಣ ಪಡೆಯಲಾಗಿದೆ ಎಂದು ಪಿಡಿಓ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯರು ಗಂಭೀರ ಆರೋಪ ಪಡೆದಿದ್ದಾರೆ.ತಾಲ್ಲೂಕಿನ ಕೆರೂಟಗಿ ಗ್ರಾಮ ಪಂಚಾಯಿತಿಯಲ್ಲಿ ೨೦೨೨-೨೩ ನೇ ಬಸವ ವಸತಿ ಹಾಗೂ ೨೦೨೪-೨೫ ನೇ ಸಾಲಿನ ಅಂಬೇಡ್ಕರ್ ಮನೆಗಳ ಹಂಚಿಕೆಯಲ್ಲಿ ಭಾರಿ ಗೋಲಮಾಲ್ ನಡೆದಿದ್ದು, ಗ್ರಾಮಸಭೆ ಮಾಡದೇ ನೋಡಲ್ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ೨೦೨೪ರ ನವೆಂಬರ್ ೨೭ ರಂದು ನಡೆಯದೇ ಇರುವ ಗ್ರಾಮಸಭೆಯ ದಿನಾಂಕ ನಮೂದಿಸಿ ಮನೆಗಳ ಫಲಾನುಭವಿಗಳಿಂದ ತಲಾ ಮೂವತ್ತು ಸಾವಿರ ಹಣ ಪಡೆದು ಮನೆಗಳ ಹಂಚಿಕೆ ಮಾಡಲಾಗಿದೆ. ಈಗಾಗಲೇ ಇದರ ಕುರಿತು ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಅಧಿಕೃತ ಮನವಿ ಮಾಡಿದ್ದರೂ ಕ್ಯಾರೆ ಅನ್ನದೇ ಪಿಡಿಓ ಸರ್ವಾಧಿಕಾರ ಚಲಾಯಿಸುತ್ತಿದ್ದರೆ.ಗ್ರಾಮಸಭೆ ಜರುಗಿಸಲಾಗಿದೆ ಎಂದು ಹೇಳಲಾದ ದಿನದಂದು ನೋಡಲ್ ಅಧಿಕಾರಿಗಳು ಮೈಸೂರಿನಲ್ಲಿ ತರಬೇತಿಯಲ್ಲಿದ್ದರು. ಅವರ ಗೈರುಹಾಜರಾತಿಯಲ್ಲಿ ಮನೆಗಳ ಹಂಚಿಕೆ ತಪ್ಪು ಈ ಕುರಿತು ಜಿ.ಪಂ ಸಿಇಓ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಉತ್ತರ ಭಾರತದಲ್ಲಿ ಗಂಗಾನದಿಗೆ ಇರುವ ಪ್ರಾಮುಖ್ಯತೆ ದಕ್ಷಿಣ ಭಾರತದಲ್ಲಿ ಕೃಷ್ಣಾ ನದಿಗೂ ಇದೆ. ಗಂಗಾ ತೀರದಲ್ಲಿ ವಾರಾಣಸಿ, ತೀರ್ಥರಾಜ, ಪ್ರಯಾಗ ಮುಂತಾದವು ತೀರ್ಥಯಾತ್ರಾ ಸ್ಥಳಗಳಿರುವಂತೆ, ಕೃಷ್ಣಾ ತೀರದಲ್ಲಿಯೂ ಗೋಷ್ಟದ ತೀರ್ಥ, ಸಿದ್ಧ ತೀರ್ಥ, ಸೀತಾ ತೀರ್ಥ, ಕೃಷ್ಣ ತೀರ್ಥ, ರಾಮ ತೀರ್ಥ, ಆಂಜನೇಯ ತೀರ್ಥ- ಮುಂತಾದ ತೀರ್ಥಧಾಮಗಳಿವೆ. ಶ್ರೀ ಯಲಗೂರು ಕ್ಷೇತ್ರವು ಆಂಜನೇಯ ತೀರ್ಥ ಸನಿಹದ ಭಕ್ತಿ ಆಕರ್ಷಣೆ. ಐತಿಹಾಸಿಕ ವಿಜಯಪುರ ಜಿಲ್ಲೆಯ ಸುಪ್ರಸಿದ್ಧ , ಪ್ರಾಣದೇವರ ಜಾಗೃತ ಸ್ಥಳಗಳಲ್ಲೋಂದಾಗಿರುವ ಸ್ಥಳ ಆಲಮಟ್ಟಿ ಸಮೀಪದ ಯಲಗೂರ ಹನುಮಾನ್.ಯಲಗೂರು ಆಂಜನೇಯನ ದೇವಾಲಯ ಹೊಂದಿದ ಪುಣ್ಯಕ್ಷೇತ್ರ. ಇಲ್ಲಿ ಆಂಜನೇಯನನ್ನು ಯಲಗೂರೇಶ ಎಂತಲೂ ಕರೆಯಲಾಗುತ್ತದೆ. ಚಂದ್ರಗಿರಿ, ಅರಳದಿನ್ನಿ, ಯಲಗೂರು, ಕಾಗಿನಕುಂಟೆ, ಬೂದಿಹಾಳ, ಮಸೂತಿ, ನಾಗಸಂಪಿಗೆ… ಹೀಗೆ ಏಳು ಊರಿಗೆ ಒಡೆಯನಾಗಿ ನೆಲೆ ನಿಂತಿದ್ದಾನೆ ಈ ಯಲಗೂರೇಷ. ಸಾಮಾನ್ಯವಾಗಿ ಊರಿಗೊಂದು ಆಂಜನೇಯನ ದೇವಾಲಯವಿರುತ್ತದೆ. ಆದರೆ, ಇಲ್ಲಿ ಏಳೂ ಊರುಗಳಿಗೆ ಒಬ್ಬನೇ ಆಂಜನೇಯ ಎಂಬುದೇ ವಿಶೇಷ.ದೇವಸ್ಥಾನ ಪ್ರವೇಶಿಸುವ ದ್ವಾರದ ಬಳಿ ವಿಶಾಲ ಜಾಗ, ನಾನಾ…

Read More

ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾನ್ ಗ್ರಾಮದ ಲಕ್ಷ್ಮಿ ಮತ್ತು ಖoಡೂಜಿಯವರ ಮಗಳಾಗಿ 1831 ರಲ್ಲಿ ಸಾವಿತ್ರಿಬಾಯಿಯವರು ಜನಿಸಿದರು. ಅವರ ತಂದೆ ತಾಯಿ ತೀರ ಬಡವರಾಗಿದ್ದರಿಂದ ಮೂಲ ಶಿಕ್ಷಣ ಕೊಡಿಸಲು ಶಾಲೆಗೆ ಕಳಿಸಲು ಆಗಲಿಲ್ಲ.ಅವರು ಬಾಲ್ಯದಿಂದಲೂ ಅನೇಕ ದೈನಂದಿನ ಅಪಮಾನಗಳನ್ನು ಅನುಭವಿಸಿಯೇ ಬೆಳೆದವರು. ಸಾವಿತ್ರಿಬಾಯಿಯವರು ಬಡ ಮತ್ತು ತನ್ನಂತೆಯೇ ಕೆಳ ಜಾತಿಯವರಾದ ಹಾಗೂ ನಾಲ್ಕು ವರ್ಷ ಹಿರಿಯರಾದ ಜ್ಯೋತಿಬಾ ಅವರನ್ನು ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಮದುವೆಯಾದರು.ಜ್ಯೋತಿಬಾ ಅವರು ಒಂದು ಧರ್ಮ ಪ್ರಚಾರದ ಸಂಸ್ಥೆಯ ಶಾಲೆಯಲ್ಲಿ 7ನೇ ಶ್ರೇಣಿಯವರಿಗೆ ಓದಿದರು. ಇದರಿಂದ ಜ್ಯೋತಿಬಾ ರವರಿಗೆ ಶಿಕ್ಷಣವು ಮನುಷ್ಯನ ಏಳಿಗೆಗೆ ಬಹಳ ಸಹಾಯಕಾರಿ ಎಂದು ಅರಿವಾಯಿತು ಅಲ್ಲದೆ ಅನ್ಯಾಯ ಅಸಮತೋಲನಗಳನ್ನು ಚೆನ್ನಾಗಿ ಅರ್ಥ ಮಾಡಿಸಿತು. ಅವರಿಗೆ ಈ ಜ್ಞಾನ ಬೆಳಗಿದಂತೆಲ್ಲ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಕಾಶವೇ ಇಲ್ಲವೆಂದು ಮನದಟ್ಟಾಯಿತು. ಸಾವಿತ್ರಿಬಾಯಿ ಅವರಿಗೆ ಪ್ರಾಥಮಿಕ ಶಿಕ್ಷಣವು ಮನೆಯಲ್ಲಿ ಜ್ಯೋತಿಬಾ ಮತ್ತು ಅವರ…

Read More

ಲೇಖನ- ಸ್ವಪ್ನಾ ಜೆ ರಾಥೋಡ್ಬಿಎ ಪತ್ರಿಕೋದ್ಯಮ ವಿದ್ಯಾರ್ಥಿನಿ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಕಾಲೇಜು ವಿಜಯಪುರ ಉದಯರಶ್ಮಿ ದಿನಪತ್ರಿಕೆ ಸೇವಾಲಾಲರು 1739ರ ಫೆಬ್ರವರಿ 15ರ ಸೋಮವಾರ ಬೆಳಗಿನ ಜಾವ 9 ಗಂಟೆಗೆ ಶಿವರಾತ್ರಿಯ ದಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿಯ ಸೂರಗೊಂಡನ ಕೊಪ್ಪ (ಭಾಯಘಡ)ದಲ್ಲಿ ಜನಿಸಿದರು. ಸಂತ ಸೇವಾಲಾಲರ ಜಯಂತಿಯನ್ನು ಸರ್ಕಾರದಿಂದ ಪ್ರತಿವರ್ಷ ಫೆಬ್ರವರಿ 15 ರಂದು ಆಚರಿಸಲಾಗುತ್ತಿದೆ. ‘ರಾಭೇನಿತೋ ಚಾಬೇನ್ ಮಳೇನಿ’ ಅಂದರೆ ‘ಕೆಲಸ ಮಾಡದಿದ್ದರೆ ತಿನ್ನಲು ಸಿಗುವುದಿಲ್ಲ’ ಎಂಬುದು ಸೇವಾಲಾಲರ ನಾಣ್ಣುಡಿ.’ಹಾತೇಮ ಕಾಟಿರೆ ಝುಲನರೆ ಗೋರೂರ ತಾಂಡೆನ ಜಾರೋ ಫೆವನರ ತಾಂಡೋ ತಾಂಡೆಮ ಸೀಕವಾಡಿ ದೇವರ’ ಅಂದರೆ, ‘ಕೈಯಲ್ಲಿ ಧ್ವಜ ಹೀಡಿದು, ಬಂಜಾರರ ತಾಂಡಕ್ಕೆ ಹೋಗುವ ತಾಂಡ ತಾಂಡಗಳಲ್ಲಿ ಶಾಲೆ ನೀಡಲು’ ಎಂಬ ಲಾವಣಿ ಹಾಡು ಸೇವಾಲಾಲರು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ಸಾರುತ್ತದೆ. ಐದು ಸಾವಿರಕ್ಕೂ ಹೆಚ್ಚಿನ ಸಂಸ್ಥಾನಗಳಿಗೆ ರಸ್ತೆ ಇಲ್ಲದಿದ್ದಾಗ ಬಂಜಾರ ಸಮುದಾಯದ ಶ್ರಮಜೀವಿಗಳು ಕಾಡುಹಾದಿಯಲ್ಲಿ ವ್ಯಾಪಾರಕ್ಕಾಗಿ ಸಂಚಾರ ಮಾಡುತ್ತ, ಸರಕು, ಆಹಾರ,…

Read More

ಹಡಲಸಂಗದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಶರಣು ಹೀರಾಪೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದು ಮಕ್ಕಳಿಗೆ ಕಲಿಕೆಯ ವಿಧಾನ ಸುಗಮಗೊಳಿಸುವ ಮೂಲಕ ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಿದಾಗ ಮಾತ್ರ ಶಿಕ್ಷಕನ ಸಂವಹನ ಕ್ಕೆ ಅರ್ಥ ಬರುವುದು ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಶರಣು ಹೀರಾಪೂರ ಅಭಿಪ್ರಾಯ ಪಟ್ಟರು.ಇಂಡಿ ತಾಲ್ಲೂಕಿನ ಹಡಲಸಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಡಲಸಂಗ ದಲ್ಲಿ ಜರುಗಿದ ಕ್ಲಸ್ಟರ್ ಹಂತದ ಎಫ್ ಎಲ್ ಎನ್ ಕಲಿಕಾ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಇಂದು ಮಕ್ಕಳ ಕಲಿಕೆ ಎನ್ನುವುದು ಉಲ್ಲಾಸ ದಾಯಕ ಮತ್ತು ಉತ್ಸಾಹದಿಂದ ಪರಸ್ಪರ ಸಂವಹನ ವಾಗಬೇಕಿದೆ, ಇಂದು ವಿದ್ಯಾರ್ಥಿಗಳ ಬುನಾದಿ ಅಕ್ಷರ ಜ್ನಾನ, ಸಂಖ್ಯಾ ಜ್ನಾನ ಸಾಮರ್ಥ್ಯ ಹೆಚ್ಚಿಸಲು ಶಿಕ್ಷಣ ಇಲಾಖೆ ಗಣಿತ ಗಣಕ, ಗಣಿತ ಕಲಿಕಾ ಆಂದೋಲನ, ಓದು ಕರ್ನಾಟಕ ದಂತಹ ಉಪಕ್ರಮಗಳ ಮೂಲಕ ನಾವಿನ್ಯಯುತ ಯೋಜನೆ ಗಳನ್ನು ಅನುಷ್ಠಾನ ಗೊಳಿಸುತ್ತಿದೆ.ಇವುಗಳು ಒಂದರಿಂದ ಐದನೇ ತರಗತಿ ವರೆಗಿನ ವಿದ್ಯಾರ್ಥಿಗಳ ಜ್ನಾನ ವಿಕಸಿತವಾಗಲು ಸಹಕಾರಿಯಾಗಿದೆ ಎಂದರು.ಗಟ್ಟಿ ಓದು,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾಡಪರ ಚಿಂತನೆ,ಜಾತಿ, ಧರ್ಮ ಬೇದವಿಲ್ಲದೆ ಸಮಾಜ ಸೇವೆ ಹಾಗೂ ಹೋರಾಟದ ಮನೋಭೂಮಿಕೆಯನ್ನು ಪರಿಗಣಿಸಿ, ನಮ್ಮ ಸರ್ವಧರ್ಮದ ಕರ್ನಾಟಕ ರಾಜ್ಯ ಜಾತ್ಯಾತೀತ ಬಿ.ಜೆಡ್, ಜಮೀರ ಅಹ್ಮದ ಖಾನ್ ಬ್ರಿಗೇಡ್ (ರಿ) ಹೆಚ್. ಎಮ್. ಶಕೀಲ್ ನವಾಜ ಹಾಗೂ ಎಮ್. ವಿನಾಯಕ ಅವರ ಒಪ್ಪಿಗೆ ಮೇರೆಗೆ ರಾಜ್ಯಾಧ್ಯಕ್ಷರಾದ ಗುಜ್ಜಲ್ ಲಿಂಗಣ್ಣ ನಾಯಕ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧ್ಯಕ್ಷರನ್ನಾಗಿ ನಗರದ ದಸ್ತಗೀರಸಾಬ ಸಾಲೋಟಗಿ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Read More