ಹಡಲಸಂಗದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಶರಣು ಹೀರಾಪೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದು ಮಕ್ಕಳಿಗೆ ಕಲಿಕೆಯ ವಿಧಾನ ಸುಗಮಗೊಳಿಸುವ ಮೂಲಕ ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಿದಾಗ ಮಾತ್ರ ಶಿಕ್ಷಕನ ಸಂವಹನ ಕ್ಕೆ ಅರ್ಥ ಬರುವುದು ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಶರಣು ಹೀರಾಪೂರ ಅಭಿಪ್ರಾಯ ಪಟ್ಟರು.
ಇಂಡಿ ತಾಲ್ಲೂಕಿನ ಹಡಲಸಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಡಲಸಂಗ ದಲ್ಲಿ ಜರುಗಿದ ಕ್ಲಸ್ಟರ್ ಹಂತದ ಎಫ್ ಎಲ್ ಎನ್ ಕಲಿಕಾ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಇಂದು ಮಕ್ಕಳ ಕಲಿಕೆ ಎನ್ನುವುದು ಉಲ್ಲಾಸ ದಾಯಕ ಮತ್ತು ಉತ್ಸಾಹದಿಂದ ಪರಸ್ಪರ ಸಂವಹನ ವಾಗಬೇಕಿದೆ, ಇಂದು ವಿದ್ಯಾರ್ಥಿಗಳ ಬುನಾದಿ ಅಕ್ಷರ ಜ್ನಾನ, ಸಂಖ್ಯಾ ಜ್ನಾನ ಸಾಮರ್ಥ್ಯ ಹೆಚ್ಚಿಸಲು ಶಿಕ್ಷಣ ಇಲಾಖೆ ಗಣಿತ ಗಣಕ, ಗಣಿತ ಕಲಿಕಾ ಆಂದೋಲನ, ಓದು ಕರ್ನಾಟಕ ದಂತಹ ಉಪಕ್ರಮಗಳ ಮೂಲಕ ನಾವಿನ್ಯಯುತ ಯೋಜನೆ ಗಳನ್ನು ಅನುಷ್ಠಾನ ಗೊಳಿಸುತ್ತಿದೆ.
ಇವುಗಳು ಒಂದರಿಂದ ಐದನೇ ತರಗತಿ ವರೆಗಿನ ವಿದ್ಯಾರ್ಥಿಗಳ ಜ್ನಾನ ವಿಕಸಿತವಾಗಲು ಸಹಕಾರಿಯಾಗಿದೆ ಎಂದರು.
ಗಟ್ಟಿ ಓದು, ಕೈಬರಹ, ಕಥೆ ಹೇಳುವುದು, ಸಂತಸದಾಯಕ ಗಣಿತ, ನೆನಪಿನ ಶಕ್ತಿ, ರಸಪ್ರಶ್ನೆ, ಪಾಲಕ ಮಕ್ಕಳ ಸಹ ಸಂಬಂಧ ಚಟುವಟಿಕೆ ಮೂಲಕ ಈ ಕಲಿಕಾ ಹಬ್ಬ ಆಚರಿಸಲಾಗುತ್ತಿದೆ ಎಂದ ಅವರು ಇದೊಂದು ಮಕ್ಕಳ ಕಲಿಕಾ ಉತ್ಸಾಹ ಹೆಚ್ಚಿಸುವ ಕಾರ್ಯಕ್ರಮವಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಯ ಆರ್ ಎನ್ ಬಗಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದೊಂದು ಶಿಕ್ಷಕರ ಮಕ್ಕಳ ಸೇತುಬಂಧ ಉಂಟು ಮಾಡುವ ಚಟುವಟಿಕೆ ಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಡಲಸಂಗ ಕ್ಲಸ್ಟರ್ ನ ಹತ್ತು ಶಾಲೆಗಳ 117 ವಿದ್ಯಾರ್ಥಿಗಳು ಏಳು ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಕಲಿಕಾ ಸಾಮರ್ಥ್ಯ ಪ್ರದರ್ಶಿಸಿದರು.
ವಿದ್ಯಾರ್ಥಿಗಳ ಸ್ಪರ್ಧೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಶಾಲೆಗಳಿಗೆ ಬಹುಮಾನ ವಿತರಿಸಲಾಯಿತು.
ಹಿರಿಯ ಶಿಕ್ಷಕ ಎ. ಎಸ್. ವಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಮಾರ್ಗದರ್ಶಿ ಶಿಕ್ಷಕರು ಉಪಸ್ಥಿತರಿದ್ದರು.

