ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗ್ರಾಮ ಪಂಚಾಯಿತಿ ಅಡಿಯ ಮನೆಗಳ ಹಂಚಿಕೆಯಲ್ಲಿ ಫಲಾನುಭವಿಗಳಿಂದ ಮೂವತ್ತು ಸಾವಿರ ಹಣ ಪಡೆಯಲಾಗಿದೆ ಎಂದು ಪಿಡಿಓ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯರು ಗಂಭೀರ ಆರೋಪ ಪಡೆದಿದ್ದಾರೆ.
ತಾಲ್ಲೂಕಿನ ಕೆರೂಟಗಿ ಗ್ರಾಮ ಪಂಚಾಯಿತಿಯಲ್ಲಿ ೨೦೨೨-೨೩ ನೇ ಬಸವ ವಸತಿ ಹಾಗೂ ೨೦೨೪-೨೫ ನೇ ಸಾಲಿನ ಅಂಬೇಡ್ಕರ್ ಮನೆಗಳ ಹಂಚಿಕೆಯಲ್ಲಿ ಭಾರಿ ಗೋಲಮಾಲ್ ನಡೆದಿದ್ದು, ಗ್ರಾಮಸಭೆ ಮಾಡದೇ ನೋಡಲ್ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ೨೦೨೪ರ ನವೆಂಬರ್ ೨೭ ರಂದು ನಡೆಯದೇ ಇರುವ ಗ್ರಾಮಸಭೆಯ ದಿನಾಂಕ ನಮೂದಿಸಿ ಮನೆಗಳ ಫಲಾನುಭವಿಗಳಿಂದ ತಲಾ ಮೂವತ್ತು ಸಾವಿರ ಹಣ ಪಡೆದು ಮನೆಗಳ ಹಂಚಿಕೆ ಮಾಡಲಾಗಿದೆ. ಈಗಾಗಲೇ ಇದರ ಕುರಿತು ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಅಧಿಕೃತ ಮನವಿ ಮಾಡಿದ್ದರೂ ಕ್ಯಾರೆ ಅನ್ನದೇ ಪಿಡಿಓ ಸರ್ವಾಧಿಕಾರ ಚಲಾಯಿಸುತ್ತಿದ್ದರೆ.
ಗ್ರಾಮಸಭೆ ಜರುಗಿಸಲಾಗಿದೆ ಎಂದು ಹೇಳಲಾದ ದಿನದಂದು ನೋಡಲ್ ಅಧಿಕಾರಿಗಳು ಮೈಸೂರಿನಲ್ಲಿ ತರಬೇತಿಯಲ್ಲಿದ್ದರು. ಅವರ ಗೈರುಹಾಜರಾತಿಯಲ್ಲಿ ಮನೆಗಳ ಹಂಚಿಕೆ ತಪ್ಪು ಈ ಕುರಿತು ಜಿ.ಪಂ ಸಿಇಓ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಿ ರಾಠೋಡ, ಬಾಬು ಮೇಲಿನಮನಿ, ನಿಂಗನಗೌಡ ಚಟ್ಟರಕಿ, ಬಾಬು ರಾಠೋಡ, ಸಂತೋಷ ರಾಠೋಡ ಆಗ್ರಹಿಸಿದ್ದಾರೆ.
