ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳು ಪರೀಕ್ಷೆಯನ್ನು ಭಯಮುಕ್ತವಾಗಿ ಎದುರಿಸಬೇಕು, ಸೂಕ್ತ ತಯಾರಿ ಯೊಂದಿಗೆ ಹಬ್ಬದಲ್ಲಿ ಸಂಭ್ರಮಿಸುವಂತೆ, ಪರೀಕ್ಷೆಗಳನ್ನು ಸಂಭ್ರಮಿಸಿ ಎದುರಿಸಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅಭಿಪ್ರಾಯಪಟ್ಟರು.
ಅವರು ಶನಿವಾರ ಪ್ರಾರಂಭವಾದ ಸಿಬಿಎಸ್‌ಸಿ ಬೋರ್ಡ ನ, ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು ಆಕ್ಟ್ ಶಾರದಾ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರದ ಮುಂದೆ ಪರೀಕ್ಷೆ ಬರೆಯುತ್ತಿರುವ ವಿದ್ದ್ಯಾರ್ಥಿಗಳಿಗೆ ಪುಷ್ಪಗುಚ್ಛ ನೀಡಿ ಶುಭ ಹಾರೈಸಿದ ಅವರು ಪಾಲಕರು, ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಸಮಯ ಕಳೆದರು.
ಕರ್ನಾಟಕ ಬಾಲವಿಕಾಸ ಅಕೇಡೆಮಿಯ ಅಧ್ಯಕ್ಷರ ಈ ನಡೆಗೆ ಪಾಲಕರು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ತಜ್ಞರಾದ ಏನ್ ಎಮ್ ಬಿರಾದಾರ ಗುರುಗಳು ಹಾಗೂ ಶಿಕ್ಷಕರು, ಪಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

