Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಫೆ.೨೩ರ ಬೆಳಿಗ್ಗೆ ೦೯ಕ್ಕೆ ಜಿಲ್ಲಾ ಪೋಲಿಸ್ ಪರೇಡ ಮೈದಾನದಲ್ಲಿ ಶ್ವಾನ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಎಲ್ಲ ಶ್ವಾನ ಮಾಲೀಕರು ತಮ್ಮ ಎಲ್ಲ ವಿವಿಧ ತಳಿಗಳ ಶ್ವಾನಗಳ ಹೆಸರನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪಶು ಆಸ್ಪತ್ರೆ ವಿಜಯಪುರ ಇವರಲ್ಲಿ ಹೆಸರು ನೋದಾಯಿಸುವಂತೆಯೂ ಹೆಚ್ಚಿನ ಮಾಹಿತಿಗಾಗಿ ಡಾ.ಬಿ.ಎಸ್.ಕನಮಡಿ, ಮುಖ್ಯ ಪಶುವೈದ್ಯಾಧಿಕಾರಿಗಳು ಮೊ:೬೩೬೧೩೦೭೯೧೬, ಡಾ. ಸುಜಾತ ಎಸ್.ಎಂ, ಮುಖ್ಯ ಪಶುವೈದ್ಯಾಧಿಕಾರಿಗಳ ಮೊ: ೯೮೪೫೮೭೩೭೦೧, ಡಾ|| ರಮೇಶ ರಾಠೋಡ ಹಿರಿಯ ಪಶುವೈದ್ಯಾಧಿಕಾರಿಗಳು ಪಶು ಚಿಕಿತ್ಸಾಲಯ ತಿಡಗುಂದಿ ವಿಜಯಪುರ ಮೊಬೈಲ್ ಸಂಖ್ಯೆ:೯೪೮೦೩೫೮೪೩೫, ಡಾ. ಸತೀಶ ಪಾಟೀಲ್ ಹಿರಿಯ ಪಶುವೈದ್ಯಾಧಿಕಾರಿ ಮೊ.೭೩೪೯೪೪೨೩೧೮ಈ ಶ್ವಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉತ್ತಮ ಶ್ವಾನಗಳಿಗೆ ಬಹುಮಾನ ನೀಡಲಾಗುವುದು. ಶ್ವಾನಗಳ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಉಪನಿರ್ದೇಶಕರು ಹಾಗೂ ಮುಖ್ಯ ಪಶುವೈದ್ಯಾಧಿಕಾರಿಗಳು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಇವರು ಪತ್ರಿಕಾ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಆದರ್ಶ ಐಟಿಐ ಶಿವಣಗಿ ಇವರ ಸಹಯೋಗದಲ್ಲಿ ಶಿವಣಗಿಯ ಆದರ್ಶ ಐಟಿಐ ಕಾಲೇಜಿನ ಆವರಣದಲ್ಲಿ ಹೊಸಪೇಟೆಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಜ್ ಕಂಪನಿ ಇವರ ವತಿಯಿಂದ ಅಪ್ರೆಂಟಿಶಿಪ್ ಗಾಗಿ ಕ್ಯಾಂಪಸ್ ಸಂದರ್ಶನ ಫೆ.೨೭ರ ಬೆಳಿಗ್ಗೆ ೧೦ ಗಂಟೆಗೆ ಆಯೋಜಿಸಲಾಗಿದೆ.ಐಟಿಐ ಪಾಸಾದ ೨೫ ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ೦೪ ಫೋಟೊ, ಆಧಾರ ಕಾರ್ಡ್, ಸಹಿತ ಸ್ವ-ವಿವರದೊಂದಿಗೆ ಶಾಲಾ ಶೈಕ್ಷಣಿಕ ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.೮೮೬೭೮೪೮೫೮೧ ಹಾಗೂ ೯೯೪೫೦೦೦೭೯೩ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುದ್ದೇಬಿಹಾಳದ ನಗರಕ್ಕೆ ಹೊಸದಾಗಿ ಸೃಜಿಸಲಾದ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಲಯಕ್ಕೆ ಹೋಗಿ ಬರುವ ಕಕ್ಷಿದಾರರು, ನ್ಯಾಯವಾದಿಗಳು, ವಕೀಲರು ನ್ಯಾಯಾಲಯದ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ವಿಜಯಪುರ ನಗರದಿಂದ ಮುದ್ದೇಬಿಹಾಳ ನಗರಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ವತಿಯಿಂದ ನೂತನವಾಗಿ ವೇಗದೂತ ಬಸ್ ಆರಂಬಿಸಲಾಗಿದೆ.ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ನಗರದ ಕೋರ್ಟ್ ಆವರಣದಲ್ಲಿ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ವಿಜಯಪುರ (ಕಾರ್ಯಸ್ಥಳ ಮುದ್ದೇಬಿಹಾಳ) ಶ್ರೀಮತಿ ಸಿಂಧೂ ಪೋತದಾರ ಅವರು ನೂತನವಾಗಿ ಕಲ್ಯಾಣ ಕರ್ನಾಟಕ ಆರಂಭಿಸಲಾದ ಬಸ್‌ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ವಿಜಯಪುರದಿಂದ ಬೆಳಿಗ್ಗೆ ೮ ಗಂಟೆಗೆ ಹೊರಟು ೧೦ ಗಂಟೆಗೆ ಮುದ್ದೇಬಿಹಾಳನ್ನು ತಲುಪುತ್ತದೆ. ಸಾಯಂಕಾಲ ೬ ಗಂಟೆಗೆ ಮುದ್ದೇಬಿಹಾಳದಿಂದ ಹೊರಟು ವಿಜಯಪುರಕ್ಕೆ ರಾತ್ರಿ ೮ ಗಂಟೆಗೆ ತಲುಪಲಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೆಕೆಂದು ಸಿಂಧೂ ಪೋತದಾರ ಹೇಳಿದರು.ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ…
ವಿಜಯಪುರ ಜಿಲ್ಲಾಡಳಿತದಿಂದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಎಡಿಸಿ ಸೋಮಲಿಂಗ ಗೆಣ್ಣೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೇರ-ನಿಷ್ಠುರ, ಆದರ್ಶ ವಿಚಾರಗಳನ್ನು ಹಾಗೂ ಸತ್ಯ ನುಡಿಗಳನ್ನು ತ್ರಿಪದಿಗಳ ಮೂಲಕ ಸಾರಿ, ಜನಮಾನಸದಲ್ಲಿ ನೆಲೆನಿಂತ ಕವಿ ಸರ್ವಜ್ಞ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂಡದನ್ನು, ಅನುಭವಿಸಿದನ್ನು ಕೇವಲ ಮೂರು ಸಾಲುಗಳಲ್ಲಿ ಸರಳ ಹಾಗೂ ಸುಂದರವಾಗಿ ಒಳಿತು ಕೆಡಕುಗಳ ಸಂದೇಶವನ್ನು ತ್ರಿಪದಿಗಳಲ್ಲಿ ಸರ್ವಜ್ಞರು ಈ ಲೋಕಕ್ಕೆ ಸಾರಿದರು.ಸಕಲ ಸಂಪತ್ತಿನಲ್ಲಿ ವಿದ್ಯೆಯೇ ಶ್ರೇಷ್ಠ ಸಂಪತ್ತು. ವಿದ್ಯೆ ಎಂಬ ಸಂಪತ್ತನ್ನು ದಾರ್ಶನಿಕರ, ವಚನಕಾರರ ಸಾರ ಇಂದಿನ ಯುವ ಜನಾಂಗ ಅರಿತುಕೊಳ್ಳಬೇಕು. ಇಂತಹ ಸತ್ಪುರುಷರು ಸಾರಿದ ಸಂದೇಶ ಅವರ ನುಡಿಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸಬಹುದು ಎಂದು ಅಭಿಪ್ರಾಯ ವ್ಯಕ್ತ…
ಪೊಲೀಸರಿಂದ ರೂ.೬೨ ಲಕ್ಷಕ್ಕೂ ಅಧಿಕ ನಗದು, ೫೫ ಗ್ರಾಂ ಚಿನ್ನ ಸೇರಿದಂತೆ ಅನೇಕ ದಾಖಲೆಗಳ ವಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಕಿರುಸಾಲ, ಬಡ್ಡಿ ವ್ಯವಹಾರ ನಡೆಸುವವರ ಮೇಲೆ ದಾಳಿ ಮಾಡಿ ಶೋಧನೆ ಕೈಕೊಂಡು ರೂ.೬೨ ಲಕ್ಷ ನಗದು, ೫೫ ಗ್ರಾಂ ಚಿನ್ನ ಸೇರಿದಂತೆ ಅನೇಕ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿ, ಈಗಾಗಲೇ ಜಾರಿಯಲ್ಲಿರುವ ಕಾನೂನುಗಳ ಅಡಿ ಮತ್ತು ಮೈಕ್ರೋ ಫೈನಾನ್ಸ್ ಗಳಿಗೆ ಸಂಬಂಧಿಸಿದಂತೆ, ಇತ್ತೀಚೆಗೆ ಜಾರಿಗೆ ಬಂದಿರುವ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ, 2025 ರ ಅಧಿಸೂಚನೆಯ ಹಿನ್ನೆಲೆಯಲ್ಲಿ, ವಿಜಯಪುರ ಜಿಲ್ಲೆಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಿರುಸಾಲ, ಬಡ್ಡಿ ವ್ಯವಹಾರ (ಲೇವಾದೇವಿ) ನಡೆಸುತ್ತಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಬಂದ ಆಧಾರದಲ್ಲಿ ಅಂತವರ ಮನೆ/ಕಚೇರಿ/ಸಂಸ್ಥೆಗಳ ಮೇಲೆ ದಾಳಿ ನಡೆಸಿ, ಅವರು ಬಡ್ಡಿ ವ್ಯವಹಾರದಲ್ಲಿ ಬಲವಂತದ ಕ್ರಮ…
ವಿಜಯಪುರದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ 31ನೇ ರಾಜ್ಯಮಟ್ಟದ ಸಮ್ಮೇಳನವನ್ನು ಈ ಬಾರಿ ಶರಣ ನಾಡು ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಫೆಬ್ರುವರಿ 22 ಮತ್ತು 23 ಎರಡು ದಿನಗಳ ಕಾಲ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬೆಳಿಗ್ಗೆ 12.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಸಿ.ಎಂ.ತಾಳಿಕೋಟಿ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ 30 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ವಿಜಯಪುರದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲು ಕೇಂದ್ರ ಸಮಿತಿ ಸಮ್ಮತಿಸಿದೆ. ರಾಜ್ಯದ ಯಾವುದೇ ವೈದ್ಯಾಧಿಕಾರಿಗೆ ತೊಂದರೆಯಾದರೆ ಅವರ ಬೆನ್ನಿಗೆ ನಿಂತು ಸಹಕಾರ ನೀಡಿ ಸಮಸ್ಯೆ ಬಗೆಹರಿಸುವ ಹಾಗೂ ವೈದ್ಯಾಧಿಕಾರಿಗಳ ಹಿತಪರ ಸಂಘಟನಾತ್ಮಕವಾಗಿ ಧ್ವನಿಯಾಗಲು ಸಂಘ ರಚಿಸಿಕೊಂಡಿದ್ದೇವೆ ಎಂದರು.ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದೊಂದು ಜಿಲ್ಲೆ ಆಯ್ಕೆ ಮಾಡಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯ ಸಮ್ಮೇಳನ ನಡೆಸಲಾಗುವುದು. ಕಳೆದ 2022…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಭೂತನಾಳ ತಾಂಡಾದಲ್ಲಿ ಜನಿಸಿದ ಅಶೋಕ ಸೋಮುಲು ವಾಲೀಕಾರ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2023-2024ನೇ ಸಾಲೀನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಅಶೋಕ ವಾಲೀಕಾರ ಅವರು ತಮ್ಮ 12 ನೇ ವಯಸ್ಸಿನಿಂದ ಹಲಿಗೆ ಬಾರಿಸುವ ಕಾಯಕದಲ್ಲಿ ತೊಡಗಿದ್ದಾರೆ. ತಂದೆಯಿಂದ ಹಲಿಗೆ ಬಾರಿಸುವುದನ್ನು ಕಲಿತು, ಮಹಾರಾಷ್ಟ್ರ, ಕೆರಳ ಹಲವು ರಾಜ್ಯಗಳಲ್ಲಿ ವೈವಿದ್ಯಮಯವಾಗಿ ಹಲಿಗೆ ಬಾರಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ತಮ್ಮದೇ ಆದ ಒಂದು ತಂಡವನ್ನು ಕಟ್ಟಿಕೊಂಡು, ಜನನ, ಮರಣ, ಮದುವೆ ಸಮಾರಂಭಗಳಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅತ್ತ್ಯುತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲಿ ಮತ್ತು ಮೈಸೂರು ದಸಾರ ಹಬ್ಬ ದಲ್ಲಿಯೂ ಕೂಡ ಪ್ರದರ್ಶನ ನೀಡಿದ್ದಾರೆ.ಇವರ ಕಲೆಯನ್ನು ಗುರುತಿಸಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2023-2024ನೇ ಸಾಲೀನ ವಾರ್ಷಿಕ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
ಲೇಖನ- ಡಾ. ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಕಲ್ಯಾಣ ಕ್ರಾಂತಿಯ ಕೊನೆಯ ಹೆಜ್ಜೆ ಗುರುತುಗಳು ಎಂಬ ನನ್ನ ಸಂಶೋಧನಾ ಲೇಖನ ಸಿದ್ಧ ಪಡಿಸುವಲ್ಲಿ ಮತ್ತು ಕ್ಷೇತ್ರ ಕಾರ್ಯ ಮಾಡುವಲ್ಲಿ ಹಲವಾರು ಶರಣರ ಸಮಾಧಿ ಕುರುಹುಗಳನ್ನು ಗುರುತಿಸಲು ಸಹಾಯಕವಾದದ್ದು ಜನರ ನಂಬಿಕೆ, ಜನಪದಿಗರ ಹೇಳಿಕೆ ಸಮಾಧಿಗಳನ್ನು ಪತ್ತೆ ಹಚ್ಚುವಲ್ಲಿ ಸಾಧ್ಯವಾಯಿತು.ಬಸವಣ್ಣನವರು ಕಲ್ಯಾಣವನ್ನು ತೊರೆದ ಮೇಲೆ ಸೋಮಿದೇವ ಶರಣರ ಹತ್ಯೆಗೆ ಆದೇಶಿಸುತ್ತಾನೆ. ಬಸವಣ್ಣನವರ ಗಡಿಪಾರಿನ ನಂತರ ಕಲ್ಯಾಣ ಕ್ರಾಂತಿಯ ರಕ್ತ ಸಿಕ್ತ ಹೋರಾಟದಲ್ಲಿ ಚೆನ್ನ ಬಸವಣ್ಣನವರ ನೇತೃತ್ವದಲ್ಲಿ ಮಡಿವಾಳ ಮಾಚಿದೇವರು ಶರಣ ಸೇನೆಯನ್ನು ಹುರುದುಂಬಿಸಿ ಶರಣರ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಸೋವಿದೇವನ ಸೈನಿಕರಿಗೆ ಪ್ರತಿರೋಧ ತೋರಿಸುತ್ತಾ. ಮಾದನ ಹಿಪ್ಪರಗಿ, ಬೆಳಗಾವಿ , ಕಾದ್ರೊಳ್ಳಿ , ಹುಣಶೀಕಟ್ಟಿ , ಮೂಗಬಸವ ,ಮುರಗೋಡ ,ತಲ್ಲೂರು ,ಕಾರಿಮನಿ , ಕಟಕೋಳ , ಚಂದರಗಿ, ಗೊಡಚಿಗೆ ಬಂದು ಮಾಚಿದೇವರು ಐಕ್ಯರಾಗುತ್ತಾರೆ. ಮುದಿ ವೀರಣ್ಣನ ಗುಡಿ ಶರಣ ಮಡಿವಾಳ ಮಾಚಿದೇವರ ಐಕ್ಯಸ್ಥಳ. ಮುದಿ ವೀರಣ್ಣನ ಕೈಯಲ್ಲಿ ಖಡ್ಗ ಮತ್ತು ಎದೆಯ…
ಲೇಖನ- ಮಮತಾ ಸತೀಶ್ ಹೆಗಡೆಶಿರಸಿ ಉದಯರಶ್ಮಿ ದಿನಪತ್ರಿಕೆ ತಡವಾಗಿ ಆದರೂ ತಪ್ಪಿನ ಅರಿವಾಗಿದ್ದಕ್ಕೆ ಮತ್ತೆ ಸಂತೃಪ್ತಿಯ ನಿಟ್ಟುಸಿರುಬಿಟ್ಟರು. ಮತ್ತೆ ಛಲದಿಂದ ಫೇಕ್ಟರಿಯನ್ನ ಕಟ್ಟಿ ನಡೆಸತೊಡಗಿದರು. ಮನೆಯಲ್ಲಿ ಸಂತೃಪ್ತಿ ನೆಮ್ಮದಿ ಆಗಮಿಸತೊಡಗಿತು. ಹಾಗಾಗಿ ಸಂತೃಪ್ತಿ ಯೇ ಶ್ರೇಷ್ಟ ಸಂಪತ್ತು ಅನ್ನುವುದರಲ್ಲಿ ಎರಡು ಮಾತಿಲ್ಲ. ನಾವು ನಮ್ಮಿಷ್ಟದಂತೆ ಅತಿಯಾಸೆ ಮಾಡದೆ ಇದ್ದುದರಲ್ಲೆ ನೆಮ್ಮದಿಯನ್ನ ಪಡೆದುಕೊಳ್ಳುವುದನ್ನ ಕಲಿತು ನಡೆಸುವ ಜೀವನವೇ ಸಂತೃಪ್ತ ಜೀವನ ಶ್ರೇಷ್ಟ ಜೀವನ ಸಂತೃಪ್ತಿಯಿಲ್ಲದ ಐಶ್ವರ್ಯ ನರಕಕ್ಕೆ ಸಮಾನ. ಓಡಹುಟ್ಟಿದವರ ಸಹಕಾರ ಸಹನೆ ಹಿರಿಕಿರಿಯರ ಸ್ನೇಹಪರತೆಯ ಒಡನಾಟ ಮಮಕಾರ ಬಂಧನವೆ ಶ್ರೇಷ್ಟ ಸಂಪತ್ತು. ಕಷ್ಟನಷ್ಟಗಳಲಿ ಜೊತೆಯಾಗಿ ನಡೆವವರೆ ನಮ್ಮ ಹಿತೈಷಿಗಳು.ಇಲ್ಲದ ದಾಹಗಳಿಗೆ ಮಾರುಹೋಗದೆ ಸಂಗ ಜೀವನ ನಡೆಸಿ ಹಿಡಿತದ ಬದುಕೆ ಶ್ರೇಷ್ಟ ಸಂತೃಪ್ತ ಬದುಕು. ಸುಖವ ಹಂಚಿ ಬಾಳಿದರೆ ಜೀವನ ನಂದನವನ. ಅರಿತು ನಡೆವ ಬಾಳೆ ಸಂತೃಪ್ತ ಜೀವನ.
ರಚನೆ- ವಿನಯ ಉದಯರಶ್ಮಿ ದಿನಪತ್ರಿಕೆ ಹರೆಯದ ಬದುಕೆಲ್ಲ ಚಂದಇರಲು ಅನುರಾಗ ಬಂಧಬೆಸೆದು ಭಾವದಾನುಬಂಧಒಲವಿನ ನವರಾಗದಿಂದ ನವ್ಯ ಕನಸಿಗೆ ರೆಕ್ಕೆ ಮೂಡಿಹೃದಯ ಸುಸ್ವರದಿ ಹಾಡಿಸಪ್ತಪದಿಯಲಿ ಜೊತೆಗೂಡಿಮನದಿ ಸಪ್ತವರ್ಣ ಮೂಡಿ ಉಲ್ಲಾಸ ಉತ್ಸಾಹದ ಕಾಲಯೌವ್ವನ ಆಶಿಸಿ ಅನುಗಾಲಯುವಮನದಿ ಮೋಹಜಾಲಜಗದಿ ಪ್ರೇಮಸ್ವರ್ಗದ ಹಂಬಲ
