ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಆದರ್ಶ ಐಟಿಐ ಶಿವಣಗಿ ಇವರ ಸಹಯೋಗದಲ್ಲಿ ಶಿವಣಗಿಯ ಆದರ್ಶ ಐಟಿಐ ಕಾಲೇಜಿನ ಆವರಣದಲ್ಲಿ ಹೊಸಪೇಟೆಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಜ್ ಕಂಪನಿ ಇವರ ವತಿಯಿಂದ ಅಪ್ರೆಂಟಿಶಿಪ್ ಗಾಗಿ ಕ್ಯಾಂಪಸ್ ಸಂದರ್ಶನ ಫೆ.೨೭ರ ಬೆಳಿಗ್ಗೆ ೧೦ ಗಂಟೆಗೆ ಆಯೋಜಿಸಲಾಗಿದೆ.
ಐಟಿಐ ಪಾಸಾದ ೨೫ ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ೦೪ ಫೋಟೊ, ಆಧಾರ ಕಾರ್ಡ್, ಸಹಿತ ಸ್ವ-ವಿವರದೊಂದಿಗೆ ಶಾಲಾ ಶೈಕ್ಷಣಿಕ ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.೮೮೬೭೮೪೮೫೮೧ ಹಾಗೂ ೯೯೪೫೦೦೦೭೯೩ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
