Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತೊಗರಿ ಖರೀದಿ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಲಿ ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ಸಲಹೆ ನೀಡಿದರು.ತ್ರಿವೇಣಿ ಕಾಂಪ್ಲೆಕ್ಷ ಆವರಣದಲ್ಲಿ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ವತಿಯಿಂದ ಆರಂಭಿಸಲಾದ ಎಂ.ಎಸ್.ಪಿ ಬೆಲೆಯ ತೊಗರಿ ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.ವೈಜ್ಞಾನಿಕ ಬೆಲೆ ಸಿಗದೆ ಹೈರಾಣಾಗಿದ್ದ ತೊಗರಿ ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಕನಿಷ್ಠ ಬೆಲೆಯಾದರೂ ಸಿಗಬೇಕೆಂಬ ಉದ್ದೇಶದಿಂದ ಜಾರಿ ಮಾಡಿದ ಯೋಜನೆಯ ಪ್ರಯೋಜನವನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕೆಂಬ ಉದ್ದೇಶದಿಂದ ದಾಸೋಹಿ ಕಂಪನಿಯು ಕೈಗೊಂಡಿರುವ ಕ್ರಮಗಳು ಶ್ಲಾಘನೀಯವಾಗಿದ್ದು ಹೆಚ್ಚಿನ ರೈತರು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹಾಯಕ ನಿರ್ದೇಶಕ ಶಿವಾನಂದ ಗೋಠೆ ಮಾತನಾಡಿ ತೊಗರಿ ಬೆಳೆಗೆ ಸರ್ಕಾರ ನಿಗದಿ ಪಡಿಸಿದ ಕನಿಷ್ಠ ಬೆಂಬಲ ಬೆಲೆಗೆ ಜಿಲ್ಲೆಯಾದ್ಯಂತ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದ್ದು ಹಲವೆಡೆ ಈಗಾಗಲೆ ಹಲವು ಕಡೆ ಗರಿಷ್ಠ ಮಟ್ಟದಲ್ಲಿ ಖರೀದಿಯು ನಡೆಯುತ್ತಿದೆ. ಈ ಮಧ್ಯೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಜ್ಯ ಸರಕಾರಿ ನೌಕರ ಸಂಘದ, ರಾಜ್ಯ ಪ್ರಚಾರ ಮತ್ತು ಸಂಘಟನಾ ಸಮಿತಿ ಸದಸ್ಯರಾಗಿ ಶಿಕ್ಷಕ ರಮೇಶ್ ‌ಮಂಜಣಿ ಅವರನ್ನು ನೇಮಕ ರಾಜ್ಯಧ್ಯಕ್ಷ ಸಿ ಎಸ್ ಷಡಕ್ಷರಿ ಆದೇಶ ಮಾಡಿದ್ದಾರೆ.ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಗಣೇಣ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕ್ರೀಯಾಶೀಲ, ಸಂಘಟನಾ ಚತುರ ಹಾಗೂ ವಾಗ್ಮಿಯಾಗಿರುವ ಶಿಕ್ಷಕ ರಮೇಶ ಮಂಜಣ್ಣಿ ಅವರ ಸೇವೆ ಗಮನಿಸಿ ಸರಕಾರಿ ನೌಕರರ ವಿಚಾರವನ್ನು ಆಲಿಸಿ ಅವರಿಗೆ ಸಕಾರಾತ್ಮಕ ಬೆಂಬಲ‌ ನೀಡುವುದರ ಜೊತೆಗೆ ಸಕ್ರೀಯ ಕಾರ್ಯನಿರ್ವಹಿಸಲು ಆದೇಶ ನೀಡಿರುತ್ತಾರೆ.ಜಿಲ್ಲಾ ಅಧ್ಯಕ್ಷ ಸುರೇಶ ಶೇಡಶ್ಯಾಳ ಸೇರಿದಂತೆ ಜಿಲ್ಲೆಯ ಹಾಗೂ ತಾಲ್ಲೂಕಿನ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಸತತ ಪ್ರಯತ್ನ ಮಾಡಿದರೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಉಪವಿಭಾಗಾಧಿಕಾರಿ ಅಭಿದ್ ಗದ್ಯಾಳ ಹೇಳಿದರು.ಅವರು ಇಂಡಿ ನಗರದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿನಿಯರಾದ ನಿಮ್ಮ ಮೇಲೆ ಹೆಚ್ಚು ಜವಾಬ್ದಾರಿ ಇರುತ್ತದೆ ಆದ್ದರಿಂದ ನಿಮ್ಮ ತಂದೆ ತಾಯಿಗಳಿಗೆ ನಿಮ್ಮ ಕುಟುಂಬಕ್ಕೆ ಹಿತವೆನಿಸುವ ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಇಂದಿನ ಸಮಾಜದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನವಾದ ಅವಕಾಶಗಳಿರುತ್ತವೆ. ನೀವು ಸಾಧನೆ ಮಾಡಬಹುದು ಆದರೆ ಜೀವನದಲ್ಲಿ ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಸಾಗಿ ಗುರಿ ತಲುಪುವವರೆಗೂ ಎಂತಹ ಕಠಿಣ ಪರಿಸ್ಥಿತಿ ಬಂದರು ದೃತಿಗಡದೆ ಮುಂದೆ ಸಾಗಬೇಕು ಆಗ ಮಾತ್ರ ನೀವು ಸಂಕಲ್ಪ ಮಾಡಿದ ಗುರಿ ತಲುಪಲು ಸಾಧ್ಯವಿದೆ ಎಂದರು.ಈ ಶಾಲೆಯ ವಿದ್ಯಾರ್ಥಿನಿಯರು ರಾಜ್ಯೋತ್ಸವ ದಿನದಂದು ಮಾಡಿದ ಸಂಸ್ಕೃತಿಕ ನೃತ್ಯ ತುಂಬಾ ಪ್ರಶಂಷನೀಯವಾದದ್ದು ಹಾಗೆ ಅಭ್ಯಾಸದಲ್ಲಿಯೂ ನಿಮ್ಮ ಸಾಧನೆ ಇರಲಿ ಎಂದರು.ಇದೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: 2025 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿಜಯಪುರ ಗ್ರಾಮೀಣ ವಲಯದ ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಯ ಮುಕ್ತವಾಗಿ ಪರೀಕ್ಷೆ ಬರೆಯಲು ಆಯ್ದ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಂದ ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೇರ ಫೋನಿನ ಕಾರ್ಯಕ್ರಮವನ್ನು ವಿಜಯಪುರ ಗ್ರಾಮೀಣವಲಯದ ಬಿಇಓ‌ಕಛೇರಿಯಲ್ಲಿ ಏರ್ಪಡಿಸಿ ಮಕ್ಕಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಲು ಇರುವ ಎಲ್ಲ ಸಂದೇಹಗಳನ್ನು ನಿವಾರಣೆ ಮಾಡಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಯಾವುದೇ ಕಾರಣಕ್ಕೂ ಮಕ್ಕಳು ಹಾಗೂ ಪಾಲಕರು ಪರೀಕ್ಷೆಯನ್ನು ಯಶಸ್ವಿಯಾಗಿ ಯಾವುದೇ ಚಿಂತೆಯನ್ನು ಮಾಡದೆ ಭಯಮುಕ್ತವಾಗಿ ಪರೀಕ್ಷೆ ಬರೆಯಲು ತಿಳಿಸಿದರು.ಅಕ್ಷತಾ ವಾಡೆದ್ ಜಿಎಚ್ಎಸ್ ಸಿದ್ದಾಪುರಕ್ಕೆಮೊದಲ ಕಾಲ್ ಮಾಡಿ ಪರೀಕ್ಷೆ ಭಯ ನಿವಾರಣೆ ಕುರಿತು ಪ್ರಶ್ನೆಯನ್ನು ಕೇಳಿದರು. ಪರೀಕ್ಷೆಯ ಬಗ್ಗೆ ಭಯಪಡಬೇಕಾಗಿಲ್ಲ ವೆಬ್ ಕಾಸ್ಟಿಂಗ್ ಇದೆ ಎನ್ನುವುದು ಮರೆತು ತಮ್ಮ ಪಾಡಿಗೆ ತಾವು ಪರೀಕ್ಷೆ ಬರೆಯಬೇಕು ಎಂದು ತಿಳಿ ಹೇಳಿದರು.ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರುಗಳಾದ ರವೀಂದ್ರ ಎಲ್ಲಡಗಿ, ಶಾಂತೇಶ ಅವಟಿ, ವಿ.ಆರ್. ಪುರೋಹಿತ, ಎಲ್. ಟಿ. ಮುಲ್ಲಾ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ವಿವಿಧ 52 ದತ್ತಿ ಪ್ರಶಸ್ತಿಗಾಗಿ ಬರಹಗಾರರಿಂದ 2023 ರಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಿತ್ತು. ಮಕ್ಕಳ ಸಾಹಿತ್ಯ ವಿಭಾಗದಲ್ಲಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಬರೆದ ನಲುಗದಿರಲಿ ಪರಿಸರ ಶಿಶುಗೀತೆಗಳ ಸಂಕಲನಕ್ಕೆ “ವಸುದೇವ ಭೂಪಾಲಂ” ದತ್ತಿ ಪುರಸ್ಕಾರ ದೊರೆತಿದೆ. ದೇಶ ವಿದೇಶಗಳಿಂದ 4 ಸಾವಿರಕ್ಕೂ ಅಧಿಕ ಕೃತಿಗಳು ಸಲ್ಲಿಕೆಯಾಗಿದ್ದು, 12 ಜನರ ಪರಿಣಿತರ ಸಮಿತಿ ಆಯ್ಕೆ ಮಾಡಿದ ಪಟ್ಟಿಯನ್ನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಷಿ ನೇತೃತ್ವದ ತಂಡ ಎಲ್ಲ ಕೃತಿಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಬರಹಗಾರರಿಗೂ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೌಲಾಲಿ ಆಲಗೂರ ಇವರಿಗೆ ಪ್ರಶಸ್ತಿ ದೊರೆತಿರುವುದಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಿಂದಗಿ ಸಾಹಿತ್ಯ ಬಳಗ ಅಭಿನಂದನೆ ಜೊತೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದಲ್ಲಿ ಶಿಕ್ಷಣ ರಂಗದ ಇಬ್ಬರೂ ಅಮೋಘ ರತ್ನಗಳು ನಮ್ಮಿಂದ ಕಳಚಿದ ಪ್ರಯುಕ್ತ ಶಿಕ್ಷಣ ಪ್ರೇಮಿಗಳು , ಶ್ರೀ ವಿಶ್ವೇಶ್ವರ ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷರು ಹಿರಿಯರು ದಿ.ಅಪ್ಪಾಸಾಹೇಬ ಕಲ್ಲೂರ ಹಾಗೂ ಶ್ರೀ ವಿಶ್ವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಆಡಳಿತ ಮಂಡಳಿಯ ನಿರ್ದೇಶಕರು ದಿ. ಮನೋಹರ ಭಸ್ಮೆ ರವರಿಗೂ ಶ್ರೀ ವಿಶ್ವೇಶ್ವರ ಬಾಲ ಭಾರತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಮೌನಾಚರಣೆ ಮಾಡಲಾಯಿತು.ಈ ವೇಳೆ ಸಮಿತಿಯ ಅಧ್ಯಕ್ಷ ಎಸ್.ಆಯ್.ಜೋಗೂರ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶಾಲೆಗೆ ಪ್ರಾರಂಭದಲ್ಲಿ ಅಪ್ಪಾಸಾಹೇಬ ಕಲ್ಲೂರ ಹಾಗೂ ಮನೋಹರ ಭಸ್ಮೆ ರವರ ಕೊಡುಗೆ ಅಪಾರವಾದದ್ದು. ಭಸ್ಮೆ ಅವರು ಸದಾಕಾಲವೂ ಶಾಲೆಯ ಅಭಿವೃದ್ಧಿ ಗಾಗಿ ಕೈ ಜೋಡಿಸಿ ಶಾಲೆಯ ಪ್ರಗತಿಗಾಗಿ ದೂರದೃಷ್ಟಿ ಹೊಂದಿದ್ದವರು. ಈರ್ವರೂ ನಮ್ಮಿಂದ ಅಗಲಿದ್ದೂ ಅಪಾರವಾದ ನಷ್ಟವನ್ನು ಉಂಟು ಮಾಡಿದೆ ಎಂದರು.ಈ ವೇಳೆ ಆಡಳಿತ ಮಂಡಳಿಯ ಸದಸ್ಯರಾದ ಅರವಿಂದ ಕುಲಕರ್ಣಿ, ಅಶೋಕ ವಾರದ, ಪ್ರಶಾಂತ ಬಡದಾಳ,…

Read More

ಮೀನುಗಾರರ ಸಂಘದ ರಾಷ್ಟೀಯ ಉಪಾಧ್ಯಕ್ಷ ಡಾ.ಗೌತಮ್ ಆರ್ ಚೌಧರಿ ಆರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸುವ ಅವೈಜ್ಞಾನಿಕ ನೀತಿ ಮತ್ತು ಮೀನುಗಾರರ ಹಿತಾಸಕ್ತಿಗೆ ವಿರುದ್ಧವಾದ ಕ್ರಮಗಳಿಂದ ಮೀನುಗಾರರ ಬದುಕು ಅತಂತ್ರವಾಗುವ ಭೀತಿ ಹೆಚ್ಚುತ್ತಿದೆ ಎಂದು ರಾಷ್ಟೀಯ ಮೀನುಗಾರರ ಸಂಘದ ರಾಷ್ಟೀಯ ಉಪಾಧ್ಯಕ್ಷಡಾ.ಗೌತಮ್ ಆರ್ ಚೌಧರಿ ಆತಂಕ ವ್ಯಕ್ತಪಡಿಸಿದ್ದಾರೆ.ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಹೊನ್ನಾವರದ ಕಾಸರಕೋಡ ಟೊಂಕದ ಸೂಕ್ಷ್ಮ ಮತ್ತು ಸುಂದರ ಕಡಲತೀರದಲ್ಲಿ ಮತ್ತೊಂದು ವಾಣಿಜ್ಯ ಬಂದರು ನಿರ್ಮಾಣದ ವಿವಾದ ಭುಗಿಲೆದ್ದಿದೆ. ಈ ಹಿಂದೆ ಯಾವುದೇ ಅಧಿಕೃತ ಪರವಾನಿಗೆ ಇಲ್ಲದಿದ್ದರೂ, ಕಚ್ಚಾ ರಸ್ತೆ ಸುಧಾರಣೆಯ ನೆಪದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಿ, ಪೊಲೀಸ್ ಬಲ ಪ್ರಯೋಗದ ಮೂಲಕ ಕಾನೂನುಬಾಹಿರವಾಗಿ ಹೊಸ ರಸ್ತೆ ನಿರ್ಮಿಸಲು ಯತ್ನಿಸಲಾಗಿತ್ತು. ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಅಧಿಕಾರಿಗಳು ಮತ್ತು ಪ್ರಭಾವಿಗಳಿಗೆ ಅಲ್ಲ ಎಂಬ ಸತ್ಯ ಸ್ಥಳೀಯರಿಗೆ ಮನವರಿಕೆಯಾಗಿದೆ.ಹೊನ್ನಾವರ ಪೋರ್ಟ್…

Read More

ರಚನೆ- ಗುಜ್ಜರ್ಹಿರಿಯ ಪತ್ರಕರ್ತರುದಾವಣಗೆರೆ ಉದಯರಶ್ಮಿ ದಿನಪತ್ರಿಕೆ ಬಗೆದಷ್ಟುಕೌತುಕದ ಆವಿಷ್ಕಾರಜಲ ಸಂಗಮದಜಲಧಾರಪುಳಕಿತಗೊಂಡವರಜೀವನದ ಪ್ರವರ ತ್ರಿವೇಣಿ ಸಂಗಮದತಿರುಳರಿತ ನಾಗಾಘೋರಿಗಳಸಂಗಮಸಾಧು ಸಂತರಸಮಾಗಮಭಕ್ತ ಸಾಗರದಸರಿಗಮ ನಲಿದರುನರ್ತಿಸಿ ಮೆರೆದರುಕಳಚಿ ಕರ್ಮವಧರಿಸಿದರು ಧರ್ಮದಧೋತರವಅಭಿವಂದಿಸಿದರುಗಂಗೆ ಯಮುನೆ ಸರಸ್ವತಿಯರಿಗೆ ಕೊಂಡೊಯ್ದರುಮನುಕುಲದಮನದ, ನೆಲದಕಪ್ಪುಗಳನುಹರಿಸಿದರುಆದರ್ಶ ಜೀವನದಆವಿಷ್ಕಾರವನು ಕೋಟಿ ಕೋಟಿಭಕುತರ ಬವಣೆನೀಗಿಸಿ ಧನ್ಯಳಾಗಿಸಿದಳುಗಂಗೆಮುಕ್ತವಾಗಿಸಿದಳುಮೃತುವಿನಿಂದತಿಳಿ ನೀಲಯಮುನೆಸ್ಥಿತ ಪ್ರಜ್ಞಳಾಗಿಸಿದಳುಗುಪ್ತಗಾಮಿನಿಸರಸ್ವತಿ ಅದೇಕೆ ಈ ಕುಂಭ ಸ್ನಾನನೀಗಿಸುವಳೇ ಜಗದಜನರ ಹಸಿವಲಕುಮಿಯ ಬವಣೆಯಎನುವ ಅಧಮರಅನುಭೂತಿಸಿದಳುತ್ರಿವೇಣಿ ಸಂಗಮದಲಿಸಮಗಮರಾದರುಮೋಕ್ಷ ಪಡೆದುಪುನೀತರಾದರುಪುನರ್ಜನ್ಮದ ಪಥಕೆಸಾಗಿದ ಪುಣ್ಯಾತ್ಮರುನಮಿಸುವುದುಭರತ ಭೂಮಿಅನವರತ ತ್ರಿವೇಣಿಯಲಿಮಿಂದದವರುಮಿಂದವರ ದರುಶನವಪಡೆದು ಪಾವನರಾಗಿರಿಪಡೆಯಿರಿ ಹಿರಿಯರಆಶೀರ್ವಾದಸ್ಪರ್ಶಿಸಿ ಪಾದವ ಇಹುದು ಶಿವರಾತ್ರಿಶಿವನ ಜಟೆಯಲಿದುಮ್ಮಿಕ್ಕುವುದು ಗಂಗೆ ಮನದ ಧರೆಗೆಭಜಿಸಿ ಭುಜಿಸಿಅಹೋರಾತ್ರಿ ಜಪಿಸಿಶಿವ ಸಂಗಮದಲಿಮೇಳೈಸಿಮನವರಳಿಸಿಮನದ ವಿಕೃತಿಯ ಮರೆತುಪಡೆಯಿರಿಶಿವ ಸಿಂಚನ

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಶ್ರೀಕೃಷ್ಣನ ಪರಮಭಕ್ತನಾಗಿದ್ದ ಋಷಿಯೊಬ್ಬ ನದಿಯ ತೀರದಲ್ಲಿ ವಾಸವಾಗಿದ್ದನು. ಸುಮಾರು ವರ್ಷಗಳಿಂದ ನೀರಿನ ಮೇಲೆ ನಡೆಯುವ ಸಾಧನೆಯಲ್ಲಿ ತೊಡಗಿದ್ದನು. ಬಾಲಕಿ ತಂದುಕೊಡುತ್ತಿದ್ದ ಹಸುವಿನ ಹಾಲನ್ನು ಮಾತ್ರ ಸೇವಿಸುತ್ತಿದ್ದನು. ಒಂದು ದಿನ ಹುಡುಗಿಯ ತಾಯಿ ಮೋಡಗಳು ದಟ್ಟವಾಗಿವೆ. ಮಳೆಯಾಗಿ ನದಿ ತುಂಬಿ ಹರಿಯುವ ಸಾಧ್ಯತೆಯಿದೆ. ಹೀಗಾಗಿ ಹಾಲು ತರಲಾಗುವುದಿಲ್ಲವೆಂದು ಋಷಿಗಳಿಗೆ ತಿಳಿಸಲು ಹೇಳಿದಳು. ಬಾಲಕಿಗೆ ಋಷಿ ‘ಪ್ರವಾಹದ ಬಗ್ಗೆ ಯೊಚಿಸಬೇಡ. ನೀರಿನ ಮೇಲೆ ನಡೆಯುವ ಮಂತ್ರವನ್ನು ಕಲಿಸುತ್ತೇನೆ. ಕಣ್ಮುಚ್ಚಿ ‘ಕೃಷ್ಣ ಕೃಷ್ಣ’ ಅನ್ನು ಆಗ ನೀನು ಆರಾಮವಾಗಿ ನೀರಿನ ಮೇಲೆ ನಡೆಯಬಹುದೆಂದನು. ನಿರೀಕ್ಷಿಸಿದಂತೆ ಮಳೆ ಧಾರಾಕಾರವಾಗಿ ಸುರಿಯಿತು. ನದಿ ತುಂಬಿ ಹರಿಯತೊಡಗಿತು. ಬಾಲಕಿ ಋಷಿಗೆ ಹಾಲನ್ನು ನೀಡಲು ಹೊರಟಳು. ತಾಯಿ ಒಪ್ಪಲಿಲ್ಲ. ಋಷಿಗಳು ತನಗೆ ನೀರಿನ ಮೇಲೆ ನಡೆಯುವ ಮಂತ್ರವನ್ನು ಕಲಿಸಿದ್ದಾರೆಂದು ಒತ್ತಾಯಿಸಿದ ಮೇಲೆ ತಾಯಿ ಒಪ್ಪಿದಳು. ಬಾಲಕಿ ಕೃಷ್ಣ ಕೃಷ್ಣ ಎನ್ನುತ್ತ ನೀರಿನ ಮೇಲೆ ಆರಾಮವಾಗಿ ಬಂದದ್ದನ್ನು ಕಂಡ ಋಷಿ ಆಶ್ಚರ್ಯಗೊಂಡನು. ಅದೇ…

Read More

ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಗಮನ ಸೆಳೆದ ದೇವಿಯರ ಬಡಿಗೆ ಆಟ ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ಜಾತ್ರೆಯು ಶುಕ್ರವಾರ ಸಾವಿರಾರು ಭಕ್ತರ ಮಧ್ಯೆ ಅದ್ಧೂರಿಯಾಗಿ ಜರುಗಿತು.ಶಕ್ರವಾರ ಬೆಳಿಗ್ಗೆಯಿಂದ ಭಕ್ತರು ಚೌಡೇಶ್ವರಿ ದೇವಿಯರಿಗೆ ಹರಕೆಗಳನ್ನು ಮುಟ್ಟಿಸಿ, ದೇವಿಯರಿಗೆ ಉಡಿತುಂಬಿ, ನೈವೇದ್ಯ ಅರ್ಪಿಸಿದರು.ಮಧ್ಯಾಹ್ನ ಗ್ರಾಮದ ಮುಖಂಡರು ಬಾಜಾ ಭಜಂತ್ರಿ, ಡೊಳ್ಳು, ಕಳಸದೊಂದಿಗೆ ದೇವಾಲಯಕ್ಕೆ ಹೋಗಿ ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಡಿಗೇರ ಮನೆತನದ ಅರ್ಚಕರು ದೇವಿಯರ ಮುಖಗಳನ್ನು ಧರಿಸಿ ಗ್ರಾಮದ ಹಳೆ ಅಗಸಿಯಲ್ಲಿ ಗ್ರಾಮದ ಎಡ ಮತ್ತು ಬಲ ಸಮುದಾಯದ ಪ್ರಮುಖರಿಗೆ ಗಂಧವನ್ನು ನೀಡಿದರು. ನೂರಾರು ಭಕ್ತರೊಂದಿಗೆ ಬಡಿಗೆಯ ಆಟ ಆಡುತ್ತಾ ಭಕ್ತ ಸಮೂಹಕ್ಕೆ ದರ್ಶನ ನೀಡಿದರು. ಸಾಯಂಕಾಲ ೬ಕ್ಕೆ ಬಡಿಗೆ ಆಟ ಆಡಿ ಹಳ್ಳದ ದಂಡೆಯ ಕಟ್ಟೆಯ ಮೇಲೆ ದೇವಿಯರು ಆಸೀನರಾದರು. ನೋಡುವ ಜನರ ದೃಷ್ಟಿ ದೇವಿಯರಿಗೆ ತಾಕಬಾರದೆಂದು ಹಡಪದ ಸಮಾಜದವರು ಸೆಗಣಿ ಮತ್ತು ತಳವಾರ ಸಮಾಜದವರು ಬಾನ ಎರಚಿದರು. ದೇವಿಯರು ಬಡಿಗೆ…

Read More