ಉದಯರಶ್ಮಿ ದಿನಪತ್ರಿಕೆ
ಇಂಡಿ: ರಾಜ್ಯ ಸರಕಾರಿ ನೌಕರ ಸಂಘದ, ರಾಜ್ಯ ಪ್ರಚಾರ ಮತ್ತು ಸಂಘಟನಾ ಸಮಿತಿ ಸದಸ್ಯರಾಗಿ ಶಿಕ್ಷಕ ರಮೇಶ್ ಮಂಜಣಿ ಅವರನ್ನು ನೇಮಕ ರಾಜ್ಯಧ್ಯಕ್ಷ ಸಿ ಎಸ್ ಷಡಕ್ಷರಿ ಆದೇಶ ಮಾಡಿದ್ದಾರೆ.
ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಗಣೇಣ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕ್ರೀಯಾಶೀಲ, ಸಂಘಟನಾ ಚತುರ ಹಾಗೂ ವಾಗ್ಮಿಯಾಗಿರುವ ಶಿಕ್ಷಕ ರಮೇಶ ಮಂಜಣ್ಣಿ ಅವರ ಸೇವೆ ಗಮನಿಸಿ ಸರಕಾರಿ ನೌಕರರ ವಿಚಾರವನ್ನು ಆಲಿಸಿ ಅವರಿಗೆ ಸಕಾರಾತ್ಮಕ ಬೆಂಬಲ ನೀಡುವುದರ ಜೊತೆಗೆ ಸಕ್ರೀಯ ಕಾರ್ಯನಿರ್ವಹಿಸಲು ಆದೇಶ ನೀಡಿರುತ್ತಾರೆ.
ಜಿಲ್ಲಾ ಅಧ್ಯಕ್ಷ ಸುರೇಶ ಶೇಡಶ್ಯಾಳ ಸೇರಿದಂತೆ ಜಿಲ್ಲೆಯ ಹಾಗೂ ತಾಲ್ಲೂಕಿನ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

