Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಂದಾಯ ಇಲಾಖೆ ಘೋಷಣೆ | ಸಚಿವ ಕೃಷ್ಣ ಬೈರೇಗೌಡ ತೀರ್ಮಾನ | ಹಣ ಡಬ್ಲಿಂಗ್ ಆಸೆಯಿಂದ ಮೋಸ ಹೋಗಿದ್ದ ಗ್ರಾಹಕರು ಬೆಂಗಳೂರು: ಐಎಂಎ ಹಗರಣದಲ್ಲಿ ಹಣ ಕಳೆದುಕೊಂಡ ಎಲ್ಲಾ ಜನರಿಗೂ ರಂಜಾನ್ ಹಬ್ಬಕ್ಕೂ ಮುನ್ನ ನಿಗದಿತ ಪರಿಹಾರದ ಮೊತ್ತವನ್ನು ನೀಡುವುದಾಗಿ ಕಂದಾಯ ಇಲಾಖೆ ಸೋಮವಾರ ಘೋಷಿಸಿದೆ.ಬಹುಕೋಟಿ ಹಗರಣ ನಡೆದ ನಂತರ ಸಂಸ್ಥೆಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈ ಎಲ್ಲಾ ಆಸ್ತಿಗಳನ್ನೂ ಮಾರಿ ರಂಜಾನ್ ಹಬ್ಬಕ್ಕೆ ಮುನ್ನ ಮೋಸ ಹೋದವರಿಗೆ ಹಣ ಹಿಂತಿರುಗಿಸುವ ಸಂಬಂಧ ಸಚಿವ ಕೃಷ್ಣ ಬೈರೇಗೌಡ ಅವರು ಸಭೆ ನಡೆಸಿ ಹಲವು ತೀರ್ಮಾನಗಳನ್ನು ಕೈಗೊಂಡಿದ್ದಾರೆ.ಐಎಂಎ (ಐ-ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದಿಂದಾಗಿ ಹಣ ಕಳೆದುಕೊಂಡ ಎಲ್ಲಾ ಠೇವಣಿದಾರರಿಗೂ ರಂಜಾನ್ ಹಬ್ಬಕ್ಕೂ ಮುನ್ನ ನಿಗದಿತ ಪರಿಹಾರದ ಹಣವನ್ನು ನೀಡಲು ಸೂಕ್ತ ಕ್ರಮವಹಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದು, ಐಎಂಎ ಹಗರಣದ ಮೊತ್ತ ಎಷ್ಟು? ಈ ವರೆಗೆ ಈ ಸಂಸ್ಥೆಯ ಎಷ್ಟು ಕೋಟಿ ಮೌಲ್ಯದ ಸ್ಥಿರಾಸ್ತಿ/ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ? ಕಳೆದ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಸಂಗಮೇಶ್ವರ ನಗರದಲ್ಲಿರುವ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಫೆ೨೭ ರಂದು ಶ್ರದ್ಧಾ ಭಕ್ತಿಯಿಂದ, ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.ಅಂದು ಬೆಳಿಗ್ಗೆ ೬ಗಂಟೆಗೆ ಶ್ರೀ ಬೀರಲಿಂಗೇಶ್ವರ ಪಲ್ಲಕ್ಕಿಯು ತಂಗಡಗಿ ಗ್ರಾಮದ ಕೃಷ್ಣಾ ನದಿಯ ಗಂಗಸ್ಥಳಕ್ಕೆ ಹೋಗಿ ಬರುವದು. ಬಳಿಕ ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಶ್ರೀ ಲಕ್ಷ್ಮಿ ಭಾವಿಯಿಂದ ಕುಂಭ, ಕಳಸ, ವಿಶೇಶ ಡೊಳ್ಳಿನ ವಾಲಗ ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಕರೆತರಲಾಗುವದು. ಬಳಿಕ ಮಹಾ ಮಂಗಳಾರುತಿ ನಂತರ ಮಹಾಪ್ರಸಾದ.ಮಧ್ಯಾಹ್ನ ೩ಕ್ಕೆ ಮಹಿಳೆಯರಿಗಾಗಿ ಮ್ಯೂಸಿಕಲ್ ಚೇರ್ ಸ್ಪರ್ದೆ, ೪ಕ್ಕೆ ಮಹಿಳೆಯರಿಗಾಗಿ ನಿಂಬೆ ಹಣ್ಣಿನ ಓಟದ ಸ್ಪರ್ದೆ, ೫ಕ್ಕೆ ರೈತ ಗೀತೆ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಧರ್ಮಸಭೆ, ಸಂಜೆ ೭ ಕ್ಕೆ ಚಿತ್ತಾಕಾರದ ಆಕರ್ಷಕ ಮದ್ದು ಸುಡುವದು ಹೀಗೆ ವಿವಿಧ ವಿಶೇಶ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತಾದಿಗಳು ತನು ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ಬೀರಲಿಂಗೇಶ್ವರರ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆ ತಿಳಿಸಿದೆ.
ಒಂಭತ್ತು ವಿವಿಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಗೆ ಎಬಿವಿಪಿ ಖಂಡನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದ ಒಂಭತ್ತು ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರ ಖಂಡನೆ ವ್ಯಕ್ತಪಡಿಸಿದೆ.ಈ ಕುರಿತಂತೆ ಸೋಮವಾರ ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಶಿಕ್ಷಣ ಎನ್ನುವುದು ಹೊರೆಯಲ್ಲ ಅದು ಸರ್ಕಾರಗಳ ಜವಾಬ್ದಾರಿ. ಸರ್ಕಾರ ಈ ವರ್ಷದ ಬಜೆಟ್ನಲ್ಲಿ ಹೊಸ ವಿಶ್ವ ವಿಧ್ಯಾಲಯಗಳಿಗೆ ಅನುದಾನ ನೀಡಬೇಕು ಎಂದರು.ಕರ್ನಾಟಕ ರಾಜ್ಯ ಗುಣಮಟ್ಟದ ವಿಶ್ವ ವಿದ್ಯಾಲಯಗಳನ್ನು ಹೊಂದಿರುವ ರಾಜ್ಯ, ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುವ ಕಾರಣಕ್ಕೆ ಬೇರೆ ಬೇರೆ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಕರ್ನಾಟಕಕ್ಕೆ ಉನ್ನತ ಶಿಕ್ಷಣವನ್ನ ಪಡೆಯಲು ಬರುತ್ತಾರೆ. ಆದರೆ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟದ ಉಪ ಸಮಿತಿಯ ಸಭೆಯಲ್ಲಿ ರಾಜ್ಯದ ೯ ವಿಶ್ವವಿದ್ಯಾಲಯಗಳನ್ನು ಆರ್ಥಿಕ ಕಾರಣ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳ ಕೊರತೆಯ ಕಾರಣವನ್ನು ಕೊಟ್ಟು ವಿವಿಗಳನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಶುಶ್ರೋಷಾಧಿಕಾರಿಗಳ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರು ಪ್ರೀಡಂ ಪಾರ್ಕನಲ್ಲಿ ನಡೆಸುತ್ತಿರುವ ಅಹೋರಾತ್ರಿ ಹೋರಾಟಕ್ಕೆ ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಅಭಿಯಾನ ನೌಕರರ ಸಂಘ ವಿಜಯಪುರ ವತಿಯಿಂದ ಸಂಪೂರ್ಣವಾದ ಬೆಂಬವಲವನ್ನು ನೀಡಲಾಗಿದ್ದು, ಈ ನಿಟ್ಟಿನಲ್ಲಿ ನಮ್ಮೆಲ್ಲ ಬೇಡಿಕೆಗಳು ಈಡೇರುವವರೆಗೆ ನಾವು ಹಮ್ಮಿಕೊಂಡಿರುವ ಹೋರಾಟವನ್ನು ಹಿಂಪಡೆಯುವುದಿಲ್ಲವೆಂದು ವಿಜಯಪುರ ಜಿಲ್ಲಾ ಶಾಖೆಯ ಗೌರವ ಅದ್ಯಕ್ಷ ರಾಜು ಭೋಸಲೆ, ಅಧ್ಯಕ್ಷರಾದ ಶ್ರೀನಾಥ ಹೊಸಕೋಟಿ, ಉಪಾಧ್ಯಕ್ಷರಾದ ಸತೀಶ ಸವನಳ್ಳಿ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಹಳ್ಳಿ, ಖಜಾಂಚಿ ಗೋಪಾಲ ರಬಕವಿ, ಸಂಘದ ಮಾರ್ಗದರ್ಶಕರಾದ ಫೈಜಲ ಇನಾಮದಾರ, ಉಪ ಪ್ರಧಾನ ಕಾರ್ಯದರ್ಶಿ ಜಯತೀರ್ಥ ಅಸ್ಟಪುತ್ರೆ, ಸಾಯಿಪ್ರಕಾಶ ಅವಜಿ, ವಿರೇಶ ಮುದ್ದೇಬಿಹಾಳ, ಲಕ್ಷö್ಮಣ ವಡೆಯರಾಜ, ಜಾವೀದ ಬಾಗಾಯತ, ಶಾಂತವೀರ ಕುಂಬಾರ, ಪ್ರಕಾಶ ನಾಯಕ, ಬಸಪ್ಪ ಅಗ್ನಿ ಇನ್ನಿತರರು ಬೆಂಬಲವನ್ನು ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿಕೋಟಾ ಪಟ್ಟಣದ ತಿಕೋಟಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ೬ನೇ ಬಾರಿಗೆ ಮಲ್ಲಿಕಾರ್ಜುನ ಸಿದ್ದಪ್ಪ ಜತ್ತಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ.ಸಂಸ್ಥಾಪಕ ಅಧ್ಯಕ್ಷರಾದ ಇವರು ಬಿ.ಕಾಂ. ಹಾಗೂ ಸಿ.ಎ. ಪದವಿ ಹೊಂದಿದ್ದು ಪ್ರಾಮಾಣಿಕರಾಗಿದ್ದಾರೆ. ಪ್ರತಿ ವರ್ಷ ಶೇ. ೧೨ ರಷ್ಟು ಲಾಭಾಂಶ ಹಂಚುವ ಈ ಸಂಘ ವ್ಯಾಪಾರಸ್ಥರಿಗೆ ಹಾಗೂ ರೈತರಿಗೆ ಅನುಕೂಲತೆ ಒದಗಿಸಿದೆ.ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಹಿರಿಯ ನಿರೀಕ್ಷಕ ಎನ್.ಎಂ. ಅವಟಿ ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದರು. ಇವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಯಿತು.ಸಂಘದ ನಿರ್ದೇಶಕರಾದ ಸಿದ್ದಪ್ಪ ಭೂಸಗೊಂಡ, ರಾಮರಾವ ದೇಸಾಯಿ, ರಾಚಪ್ಪ ಕೊಲಾರ, ಚಂದ್ರಕಾಂತ ಕಡೆಬಾಗಿಲು, ಪ್ರಶಾಂತ ಎಮ್ಮೆನವರ, ಮಹಾದೇವ ಬುಳಗೊಂಡ, ಮಲ್ಲಪ್ಪ ಬಂಡಿ, ಮಹಮ್ಮದಲಿ ಮುಜಾವರ, ಶೋಭ ಮೇತ್ರಿ, ದುಂಡಪ್ಪ ಕಟೆ, ರಾಮಪ್ಪ ಜವನರ, ಮಾಜಿ ವಿಧಾನ ಪರಿಷತ ಸದಸ್ಯ ಜಿ.ಕೆ. ಪಾಟೀಲ ಹಾಗೂ ಹಿರೇಮಠದ ಶಿವಬಸವ ಶಿವಾಚಾರ್ಯರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಹಿರಿಯ ನ್ಯಾಯವಾದಿ ಜಿ.ಎಸ್ ಕುಲಕರ್ಣಿ ಅವರು ನಿಧನರಾದ ಪ್ರಯುಕ್ತ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನ್ಯಾಯವಾದಿಗಳು ಜಿ.ಎಸ್. ಕುಲಕರ್ಣಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ ಮಾತನಾಡಿ, ಜಿ.ಎಸ್. ಕುಲಕರರ್ಣಿ ಅವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು, ಅವರ ನಿಧನ ನಮ್ಮೆಲ್ಲರಿಗೂ ಆಘಾತವನ್ನುಂಟು ಮಾಡಿದೆ, ಮೃತರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿ ಎಲ್ಲ ನ್ಯಾಯವಾದಿಗಳು ಕಲಾಪದಿಂದ ದೂರ ಉಳಿದರು.ಹಿರಿಯ ನ್ಯಾಯವಾದಿಗಳಾದ ಎಸ್.ಎಲ್. ನಿಂಬರಗಿ ಮಠ, ಅಜಿತ್ ಧನಶೆಟ್ಟಿ, ಬಿ.ಬಿ. ಕೊಟ್ಟಲಗಿ, ಎ.ಎಂ. ಬಿರಾದಾರ, ಬಿ.ಸಿ. ತಾಂಬೆ, ಎಸ್.ಹೆಚ್. ಬಿರಾದಾರ್, ಎಸ್.ಪಿ. ಪಾಟೀಲ್, ಅನಿಲ್ ಜೋಶಿ ಆರ್.ಜೆ. ಪಾಟೀಲ, ಜಿ.ಎಸ್. ಜೋಶಿ, ಆರ್.ಬಿ. ಬೇನೂರ, ಎಸ್.ಆರ್. ಬಿರಾದಾರ, ಮಹಾಂತೇಶ ಪಾಟೀಲ, ವಿ.ಪಿ. ಪಾಟೀಲ, ಬಿ.ಬಿ. ಬಿರಾದಾರ, ಡಿ.ಜಿ. ಜೋತಗೊಂಡ ಸೇರಿದಂತೆ ಇನ್ನಿತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ಸ್ಕೌಟ್ಸ್, ಗೈಡ್ಸ್ ನಂತಹ ಸಂಸ್ಥೆಗಳು ಮಕ್ಕಳಲ್ಲಿ ಸೇವಾ ಮನೋಭಾವ,ಶಿಸ್ತು ಬೆಳೆಸಲು ಸಹಾಯ ಮಾಡುತ್ತವೆ ಎಂದು ಭಾರತ ಸ್ಕೌಟ್ಸ್ ,ಗೈಡ್ಸ್ ತಾಲೂಕ ಸಂಸ್ಥೆ ಇಂಡಿಯ ಅಧ್ಯಕ್ಷರು ಹಾಗೂ ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣನವರ ಹೇಳಿದರು.ಅವರು ಶನಿವಾರದಂದು ತಾಲೂಕಿನ ಝಳಕಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ವಿಜಯಪುರ, ತಾಲೂಕ ಸಂಸ್ಥೆ ಇಂಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಇಂಡಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಝಳಕಿ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೪ ೨೫ನೇ ಸಾಲಿನ ದ್ವಿತೀಯ ಸೋಪಾನ ಪರೀಕ್ಷಾ ಶಿಬಿರ ಹಾಗೂ ಸಂಸ್ಥಾಪಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಕಾರ್ಯದರ್ಶಿ ಜಗದೀಶ ಬೋಳಸುರ ಮಾತನಾಡಿ,ಮಕ್ಕಳು ಅಂಕಗಳ ಬೆನ್ನು ಹತ್ತದೇ ಮೌಲ್ಯ ಶಿಕ್ಷಣದತ್ತ ಒಲವು ತೋರಿಸಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಹತ್ತಿರ ಮೋಗಲಾಯಿ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು.ಶಾಸಕ ಅಶೋಕ ಮನಗೂಳಿ, ಡಾ.ಇಸ್ಮಾಯಿಲ್ ಮೊಗಲಾಯಿ, ಡಾ. ಶಾಂತವೀರ ಮನಗೂಳಿ, ಅಶೋಕ ವಾರದ, ಅಶೋಕ ಅಲ್ಲಾಪೂರ ಸೇರಿದಂತೆ ಹಲವರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯ ೩೫ ವಾರ್ಡಗಳನ್ನು ಬಯಲು ಶೌಚಮುಕ್ತ ವಾರ್ಡಗಳೆಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರು ಘೋಷಿಸಿದ್ದಾರೆ.ಪಾಲಿಕೆ ವ್ಯಾಪ್ತಿಯ ೩೫ ವಾರ್ಡಗಳನ್ನು ಬಯಲು ಶೌಚಮುಕ್ತ ವಾರ್ಡಗಳೆಂದು ಘೋಷಿಸಲು ವಿವಿಧ ವಾರ್ಡಗಳಲ್ಲಿ ಶೌಚಾಲಯ ರಹಿತ ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿ, ಶೌಚಾಲಯ ಸೌಲಭ್ಯದಿಂದ ವಂಚಿತರಾದ ಕುಟುಂಬಗಳು, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು, ಶಾಲಾ ಮುಖ್ಯಸ್ಥರು ಹಾಗೂ ಭಾದಿತರಾಗಬಹುದಾದ ವ್ಯಕ್ತಿ, ಸಂಘ, ಸಂಸ್ಥೆಗಳಿಂದ ಆಕ್ಷೇಪಣೆ-ಸಲಹೆಗಳನ್ನು ಸಲ್ಲಿಸಲು ಕೋರಲಾಗಿತ್ತು.ಆದರೆ ಈ ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಬಾರದ ಹಿನ್ನಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ೩೫ ವಾರ್ಡಗಳನ್ನು ಓಡಿಎಫ್+ ಬಯಲು ಶೌಚ ಮುಕ್ತ ಘೋಷಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಸೋಸೈಟಿ ಕರ್ನಾಟಕ ಸರ್ಕಾರದ ವತಿಯಿಂದ ಇದೇ ಫೆ.೨೬,೨೭ ಹಾಗೂ ೨೮ ರಂದು ಬೆಂಗಳೂರಿನ ಅಂತರರಾಷ್ಟ್ರೀಯ ಕನವೆನ್ಶನಲ್ ಸೆಂಟರ್‌ನಲ್ಲಿ ಟ್ರಾವೆಲ್ ಎಕ್ಸಪೋ-೨೦೨೫ ಕಾರ್ಯಕ್ರಮ ಭಾಗವಹಿಸಲಿರುವ ವಿದೇಶಿಗರಿಗೆ ರಾಜ್ಯದ ಪರಿಚಯ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದೇಶದ ವಿವಿಧ ಪ್ರವಾಸಿ ನಿರ್ವಾಹಕರ ತಂಡವೊಂದು ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಪ್ರವಾಸೋದ್ಯಮ ತಾಣಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿತು.ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೋಟೆಲ್ ಉದ್ದಿಮೆದಾರರು, ಟ್ರಾವೇಲ್ ಏಜೆನ್ಸಿ, ಹೋಂ-ಸ್ಟೇ ಕರಕುಶಲ ಮಳಿಗೆದಾರರು, ಪ್ರವಾಸೋದ್ಯಮ ಸ್ಟೇಕ್ ಹೋಲ್ಡರಗಳಿಗೆ ವ್ಯಾಪಾರ -ವಹಿವಾಟಿಕೆ ಮಾಡಿಕೊಳ್ಳಲು ನೂರಾರು ವಿದೇಶಿ ಸಂಸ್ಥೆಗಳು-ದೇಶದ ಎಲ್ಲಾ ಭಾಗದ ಪಾಲುದಾರ ಸಂಸ್ಥೆಗಳಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ ವಿದೇಶಿ ಪ್ರವಾಸಿ ನಿರ್ವಾಹಕರ ತಂಡ ವಿಜಯಪುರ ನಗರದ ಗೋಲಗುಮ್ಮಟ, ಗಗನ್ ಮಹಲ್ ಸೇರಿದಂತೆ ವಿವಿಧ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಪ್ರವಾಸಿ ತಾಣಗಳ ವೈವಿಧ್ಯತೆ, ಸಂಸ್ಕೃತಿ ಪರಂಪರೆ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದಲ್ಲಿರುವ ವಿವಿಧ…
