ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಸಂಗಮೇಶ್ವರ ನಗರದಲ್ಲಿರುವ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಫೆ೨೭ ರಂದು ಶ್ರದ್ಧಾ ಭಕ್ತಿಯಿಂದ, ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.
ಅಂದು ಬೆಳಿಗ್ಗೆ ೬ಗಂಟೆಗೆ ಶ್ರೀ ಬೀರಲಿಂಗೇಶ್ವರ ಪಲ್ಲಕ್ಕಿಯು ತಂಗಡಗಿ ಗ್ರಾಮದ ಕೃಷ್ಣಾ ನದಿಯ ಗಂಗಸ್ಥಳಕ್ಕೆ ಹೋಗಿ ಬರುವದು. ಬಳಿಕ ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಶ್ರೀ ಲಕ್ಷ್ಮಿ ಭಾವಿಯಿಂದ ಕುಂಭ, ಕಳಸ, ವಿಶೇಶ ಡೊಳ್ಳಿನ ವಾಲಗ ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಕರೆತರಲಾಗುವದು. ಬಳಿಕ ಮಹಾ ಮಂಗಳಾರುತಿ ನಂತರ ಮಹಾಪ್ರಸಾದ.
ಮಧ್ಯಾಹ್ನ ೩ಕ್ಕೆ ಮಹಿಳೆಯರಿಗಾಗಿ ಮ್ಯೂಸಿಕಲ್ ಚೇರ್ ಸ್ಪರ್ದೆ, ೪ಕ್ಕೆ ಮಹಿಳೆಯರಿಗಾಗಿ ನಿಂಬೆ ಹಣ್ಣಿನ ಓಟದ ಸ್ಪರ್ದೆ, ೫ಕ್ಕೆ ರೈತ ಗೀತೆ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಧರ್ಮಸಭೆ, ಸಂಜೆ ೭ ಕ್ಕೆ ಚಿತ್ತಾಕಾರದ ಆಕರ್ಷಕ ಮದ್ದು ಸುಡುವದು ಹೀಗೆ ವಿವಿಧ ವಿಶೇಶ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತಾದಿಗಳು ತನು ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ಬೀರಲಿಂಗೇಶ್ವರರ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆ ತಿಳಿಸಿದೆ.
