ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಹಿರಿಯ ನ್ಯಾಯವಾದಿ ಜಿ.ಎಸ್ ಕುಲಕರ್ಣಿ ಅವರು ನಿಧನರಾದ ಪ್ರಯುಕ್ತ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನ್ಯಾಯವಾದಿಗಳು ಜಿ.ಎಸ್. ಕುಲಕರ್ಣಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ ಮಾತನಾಡಿ, ಜಿ.ಎಸ್. ಕುಲಕರರ್ಣಿ ಅವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು, ಅವರ ನಿಧನ ನಮ್ಮೆಲ್ಲರಿಗೂ ಆಘಾತವನ್ನುಂಟು ಮಾಡಿದೆ, ಮೃತರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿ ಎಲ್ಲ ನ್ಯಾಯವಾದಿಗಳು ಕಲಾಪದಿಂದ ದೂರ ಉಳಿದರು.
ಹಿರಿಯ ನ್ಯಾಯವಾದಿಗಳಾದ ಎಸ್.ಎಲ್. ನಿಂಬರಗಿ ಮಠ, ಅಜಿತ್ ಧನಶೆಟ್ಟಿ, ಬಿ.ಬಿ. ಕೊಟ್ಟಲಗಿ, ಎ.ಎಂ. ಬಿರಾದಾರ, ಬಿ.ಸಿ. ತಾಂಬೆ, ಎಸ್.ಹೆಚ್. ಬಿರಾದಾರ್, ಎಸ್.ಪಿ. ಪಾಟೀಲ್, ಅನಿಲ್ ಜೋಶಿ ಆರ್.ಜೆ. ಪಾಟೀಲ, ಜಿ.ಎಸ್. ಜೋಶಿ, ಆರ್.ಬಿ. ಬೇನೂರ, ಎಸ್.ಆರ್. ಬಿರಾದಾರ, ಮಹಾಂತೇಶ ಪಾಟೀಲ, ವಿ.ಪಿ. ಪಾಟೀಲ, ಬಿ.ಬಿ. ಬಿರಾದಾರ, ಡಿ.ಜಿ. ಜೋತಗೊಂಡ ಸೇರಿದಂತೆ ಇನ್ನಿತರರು ಇದ್ದರು.

