ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಿಕೋಟಾ ಪಟ್ಟಣದ ತಿಕೋಟಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ೬ನೇ ಬಾರಿಗೆ ಮಲ್ಲಿಕಾರ್ಜುನ ಸಿದ್ದಪ್ಪ ಜತ್ತಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ.
ಸಂಸ್ಥಾಪಕ ಅಧ್ಯಕ್ಷರಾದ ಇವರು ಬಿ.ಕಾಂ. ಹಾಗೂ ಸಿ.ಎ. ಪದವಿ ಹೊಂದಿದ್ದು ಪ್ರಾಮಾಣಿಕರಾಗಿದ್ದಾರೆ. ಪ್ರತಿ ವರ್ಷ ಶೇ. ೧೨ ರಷ್ಟು ಲಾಭಾಂಶ ಹಂಚುವ ಈ ಸಂಘ ವ್ಯಾಪಾರಸ್ಥರಿಗೆ ಹಾಗೂ ರೈತರಿಗೆ ಅನುಕೂಲತೆ ಒದಗಿಸಿದೆ.
ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಹಿರಿಯ ನಿರೀಕ್ಷಕ ಎನ್.ಎಂ. ಅವಟಿ ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದರು. ಇವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಯಿತು.
ಸಂಘದ ನಿರ್ದೇಶಕರಾದ ಸಿದ್ದಪ್ಪ ಭೂಸಗೊಂಡ, ರಾಮರಾವ ದೇಸಾಯಿ, ರಾಚಪ್ಪ ಕೊಲಾರ, ಚಂದ್ರಕಾಂತ ಕಡೆಬಾಗಿಲು, ಪ್ರಶಾಂತ ಎಮ್ಮೆನವರ, ಮಹಾದೇವ ಬುಳಗೊಂಡ, ಮಲ್ಲಪ್ಪ ಬಂಡಿ, ಮಹಮ್ಮದಲಿ ಮುಜಾವರ, ಶೋಭ ಮೇತ್ರಿ, ದುಂಡಪ್ಪ ಕಟೆ, ರಾಮಪ್ಪ ಜವನರ, ಮಾಜಿ ವಿಧಾನ ಪರಿಷತ ಸದಸ್ಯ ಜಿ.ಕೆ. ಪಾಟೀಲ ಹಾಗೂ ಹಿರೇಮಠದ ಶಿವಬಸವ ಶಿವಾಚಾರ್ಯರು ಉಪಸ್ಥಿತರಿದ್ದರು.

