ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಶುಶ್ರೋಷಾಧಿಕಾರಿಗಳ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರು ಪ್ರೀಡಂ ಪಾರ್ಕನಲ್ಲಿ ನಡೆಸುತ್ತಿರುವ ಅಹೋರಾತ್ರಿ ಹೋರಾಟಕ್ಕೆ ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಅಭಿಯಾನ ನೌಕರರ ಸಂಘ ವಿಜಯಪುರ ವತಿಯಿಂದ ಸಂಪೂರ್ಣವಾದ ಬೆಂಬವಲವನ್ನು ನೀಡಲಾಗಿದ್ದು, ಈ ನಿಟ್ಟಿನಲ್ಲಿ ನಮ್ಮೆಲ್ಲ ಬೇಡಿಕೆಗಳು ಈಡೇರುವವರೆಗೆ ನಾವು ಹಮ್ಮಿಕೊಂಡಿರುವ ಹೋರಾಟವನ್ನು ಹಿಂಪಡೆಯುವುದಿಲ್ಲವೆಂದು ವಿಜಯಪುರ ಜಿಲ್ಲಾ ಶಾಖೆಯ ಗೌರವ ಅದ್ಯಕ್ಷ ರಾಜು ಭೋಸಲೆ, ಅಧ್ಯಕ್ಷರಾದ ಶ್ರೀನಾಥ ಹೊಸಕೋಟಿ, ಉಪಾಧ್ಯಕ್ಷರಾದ ಸತೀಶ ಸವನಳ್ಳಿ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಹಳ್ಳಿ, ಖಜಾಂಚಿ ಗೋಪಾಲ ರಬಕವಿ, ಸಂಘದ ಮಾರ್ಗದರ್ಶಕರಾದ ಫೈಜಲ ಇನಾಮದಾರ, ಉಪ ಪ್ರಧಾನ ಕಾರ್ಯದರ್ಶಿ ಜಯತೀರ್ಥ ಅಸ್ಟಪುತ್ರೆ, ಸಾಯಿಪ್ರಕಾಶ ಅವಜಿ, ವಿರೇಶ ಮುದ್ದೇಬಿಹಾಳ, ಲಕ್ಷö್ಮಣ ವಡೆಯರಾಜ, ಜಾವೀದ ಬಾಗಾಯತ, ಶಾಂತವೀರ ಕುಂಬಾರ, ಪ್ರಕಾಶ ನಾಯಕ, ಬಸಪ್ಪ ಅಗ್ನಿ ಇನ್ನಿತರರು ಬೆಂಬಲವನ್ನು ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
