Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಆರ್ಥಿಕ ವರ್ಷ ೨೦೨೫-೨೬ ರಿಂದ ಆರ್ಥಿಕ ವರ್ಷ ೨೦೨೭-೨೮ ರ ಅವಧಿಯ ವಿದ್ಯುತ್ ದರ ಪರಿಷ್ಕರಣೆ ಕುರಿತು ಸಾರ್ವಜನಿಕ ವಿಚಾರಣಾ ಸಭೆಯನ್ನು ಫೆಬ್ರವರಿ ೨೭ ರಂದು ಬೆಳಿಗ್ಗೆ ೧೦.೩೦ ಕ್ಕೆ ನವನಗರದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ನಿಗಮ ಕಛೇರಿಯ ನೂತನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೆಸ್ಕಾಂನ ಅಧಿಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸೌಂದರ್ಯಿಕರಣಕ್ಕಾಗಿ ಸ್ವಚ್ಛತೆ, ರಸ್ತೆ ನಿರ್ಮಾಣ, ಉದ್ಯಾನವನಗಳ ನಿರ್ವಹಣೆ ಸೇರಿದಂತೆ ಜನದಟ್ಟಣೆಯನ್ನು ನಿಯಂತ್ರಿಸಿ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಮಧ್ಯ ಭಾಗದಲ್ಲಿ ಸುಸಜ್ಜಿತವಾದ ಕಾರ ಪಾರ್ಕಿಂಗ್ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸೂಕ್ತವಾದ ಯೋಜನೆಯೊಂದು ರೂಪಿಸಿಕೊಂಡು ವಿಜಯಪುರ ನಗರದ ಸೌಂದರ್ಯಿಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ನಗರದ ಸಂಚಾರ ನಿರ್ವಹಣೆಗೆ ಪೊಲೀಸ್ ಇಲಾಖೆ ರೂಪಿಸಿರುವ ಅಡ್ವಾನ್ಸ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಸರ್ಕಾರದ ಪೂರ್ವಾನುಮೋದನೆಯೊಂದಿಗೆ ಅನುಷ್ಠಾನಗೊಳಿಸುವಂತೆ ಅವರು ಸೂಚನೆ ನೀಡಿದರು.ವಿಜಯಪುರ ನಗರದಲ್ಲಿ ಮಳೆಗಾಲದಲ್ಲಿ ಜಲಾವೃತಗೊಳ್ಳುವ ಪ್ರದೇಶಗಳಲ್ಲಿನ ತಗ್ಗು ಪ್ರದೇಶಗಳಾದ ಸರ್ಕಾರಿ ಆಸ್ತಿ, ರಾಜ್…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಯಾಳವಾರ ಪಿಕೆಪಿಎಸ್ ವ್ಯಾಪ್ತಿಯ ಗ್ರಾಮಗಳ ಎಲ್ಲ ರೈತ ಸಮುದಾಯದ ಅನುಕೂಲಕ್ಕಾಗಿ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಹೇಳಿದರು.ತಾಲ್ಲೂಕಿನ ಯಾಳವಾರ ಗ್ರಾಮದ ತೊಗರಿ ಖರೀದಿ ಕೇಂದ್ರದಲ್ಲಿ ಮಂಗಳವಾರ ತೊಗರಿ ಖರೀದಿಗೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ರೈತರ ಹೆಸರುಗಳು ನೊಂದಣಿಯಾಗಿದ್ದು, ಮತ್ತು ಎಲ್ಲ ರೈತಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು .ಈ ಭಾಗದ ಪ್ರತಿಯೊಬ್ಬ ರೈತರ ತೊಗರಿ ಖರೀದಿಯಾಗುವವರೆಗೂ ಎಲ್ಲವನ್ನು ಪ್ರಾಮಾಣಿಕವಾಗಿ ಖರೀದಿ ಮಾಡಲಾಗುವುದು ಎಂದು ಹೇಳುತ್ತಾ, ರೈತರ ಕುರಿತು ವಿಶೇಷ ಕಾಳಜಿ ವಹಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.ಸಾನಿಧ್ಯ ವಹಿಸಿದ್ದ ಮಹಾಲಿಂಗೇಶ್ವರಶ್ರೀ ಹಾಗೂ ಕಾಶೀನಾಥ ಸ್ವಾಮೀಜಿ ತೂಕದ ಯಂತ್ರಕ್ಕೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.ಪಿಕೆಪಿಎಸ್ ಉಪಾಧ್ಯಕ್ಷ ರಾಜುಗೌಡ ನ್ಯಾಮಣ್ಣವರ, ಸದಸ್ಯರಾದ ಆನಂದಗೌಡ ಮೂಲಿಮನಿ, ತಮ್ಮಣ್ಣ ನಾಯ್ಕೋಡಿ, ಕಾರ್ಯ ನಿರ್ವಹಣಾಧಿಕಾರಿ ಚೆನ್ನಬಸಪ್ಪ ಲಗಳಿ, ಕುಪೇಂದ್ರ ಜಾಯವಾಡಗಿ, ಮುತ್ತುಗೌಡ ಪಾಟೀಲ, ಬಸನಗೌಡ ದೊಡಮನಿ, ಅರುಣ ಹುಣಶ್ಯಾಳ, ರವಿಗೌಡ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಬೆಳಗಾಂವಿ ಗಡಿಭಾಗದಲ್ಲಿ ಮತ್ತು ಮಹಾರಾಷ್ಟçದಲ್ಲಿ ಕನ್ನಡಿಗರ ಮೇಲಿನ ಮರಾಠ ಪುಂಡರ ದೌರ್ಜನ್ಯ ಖಂಡಿಸಿ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಪಟ್ಟಣದ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ಮಂಗಳವಾರ ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿ ಮರಾಠ ಪುಂಡರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾಂವಿ ಗಡಿಭಾಗದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಕರ್ನಾಟಕ ಸಾರಿಗೆ ಬಸ್‌ಗಳಿಗೆ ಹಾಗೂ ಚಾಲಕರಿಗೆ ಮಸಿ ಬಳಿಯುವ ಮೂಲಕ ದೌರ್ಜನ್ಯ ಮಾಡಲಾಗುತ್ತಿದೆ. ಜೊತೆಗೆ ಕನ್ನಡ ಧ್ಜಜಕ್ಕೂ ಅಪಮಾನ ಮಾಡಲಾಗುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥ ಕ್ರಮಗಳಾಗಿದ್ದು ಕೂಡಲೇ ಇಂತಹ ಪ್ರಕರಣಗಳನ್ನು ಹುಟ್ಟುಹಾಕುವ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಸೇನೆ ರಸ್ತೆಗಿಳಿದು ಉಗ್ರ ಪ್ರತಿಭಟನೆ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ತಾಲ್ಲುಕಾಧ್ಯಕ್ಷ ಹಸನ್‌ಸಾಬ್ ನದಾಫ್, ಪ್ರಕಾಶ ಗುಡಿಮನಿ, ಅಶೋಕ ಗೋಲ್ಲರ, ಹುಸೇನ್ ಕೊಕಟನೂರ, ಸುನೀಲ ಕನಮಡಿ, ಶ್ರೀಕಾಂತ ಬಜಂತ್ರಿ, ಹಮೀದ್ ಮುಲ್ಲಾ, ಅಬ್ಬಾಸಲಿ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಮರ್ಪಕ ಗುಣಮಟ್ಟದ ವಿದ್ಯುತ್ ಪೂರೈಕೆ ಹಾಗೂ ಕೈಬಿಟ್ಟಿರುವ ಹಿಂದಿನ ಯೋಜನೆಗಳನ್ನು ಪುನರ್ ಆರಂಭಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ಕೈಗೊಂಡರು.ಪಟ್ಟಣದ ಹೆಸ್ಕಾಂ ಕಚೇರಿ ಮುಂದೆ ಸೋಮವಾರ ಬೆಳಿಗ್ಗೆಯಿಂದ ಪ್ರತಿಭಟನೆ ಆರಂಭಿಸಿ ವಿವಿಧ ಬೇಡಿಕೆಗಳ ಪರಿಹಾರಕ್ಕೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ಹಿರೇಗೌಡರ ಮಾತನಾಡಿ, ಗ್ರಾಮೀಣ ಪ್ರದೇಶದ ತೋಟದ ಮನೆಗಳಿಗೆ ರಾತ್ರಿ ಸಮಯ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಹಾಗೂ ಜಾನುವಾರಗಳ ಸುರಕ್ಷತೆಗಾಗಿ ಸಿಂಗಲ್ ಫೇಸ್ ಅಥವಾ ಟೂ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಯುಎನ್‌ಆಯ್‌ಪಿ ಅಂತಹ ಮೊದಲು ಆರಂಭಿಸಿದ ಯೋಜನೆಗಳನ್ನು ಪುನಃ ಆರಂಭಿಸಬೇಕು. ಹಳೆಯದಾದ ಕಂಬಗಳು, ವೈಯರ್‌ಗಳನ್ನು ಬದಲಾಯಿಸಬೇಕು, ಅಕ್ರಮ ಸಕ್ರಮಕ್ಕೆ ರೈತರು ಸಲ್ಲಿಸಿದ ಅರ್ಜಿಗಳ ಕುರಿತು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದರು.ರೈತ ಮುಖಡರಾದ ಅಜೀಜ್ ಯಲಗಾರ, ಸಾಹೇಬಗೌಡ ದಾನಗೊಂಡ, ವಿರೇಶ ಕುದರಿ, ಸಂಗನಗೌಡ ಬಿರಾದಾರ, ರೇಣುಕಾ ಪಾಟೀಲ ಮಾತನಾಡಿದರು.ಪ್ರತಿಭಟನೆ ಕಾರಣವಾಗಿ ರೈತರು ಪಟ್ಟಣ ಸೇರಿದಂತೆ ವಿವಿಧ…
ವಿಜಯಪುರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅತಿ ಹೆಚ್ಚು ಜಿಲ್ಲೆಯಲ್ಲಿ ಉತ್ತಮವಾದ ಮಾಲ್ದಂಡಿ ಜೋಳ ಬೆಳೆಯುತ್ತಿದ್ದು ಬೆಂಬಲ ಬೆಲೆ ಯೋಜನೆಯಡಿ ಬಿಳಿ ಜೋಳ ಖರೀದಿಸುವ ಕುರಿತು ಜಿಲ್ಲೆಯ ರೈತರಲ್ಲಿ ಸೂಕ್ತವಾದ ತಿಳುವಳಿಕೆ ಹಾಗೂ ಜಾಗೃತಿ ಮೂಡಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರೈತರು ಬೆಂಬಲ ಬೆಲೆಯಡಿ ಜೋಳ ಮಾರಾಟಕ್ಕೆ ನೊಂದಣಿ ಮಾಡಿಸುವಂತೆ ಐಇಸಿ ಕಾರ್ಯಕ್ರಮಗಳ ಮೂಲಕ ಅವರಲ್ಲಿ ಜಾಗೃತಿ ಮೂಡಿಸಿ, ನೋಂದಣಿಗೆ ಕ್ರಮ ವಹಿಸಿ ಬೆಂಬಲ ಬೆಲೆಯಡಿ ಜೋಳ ಖರೀದಿಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಎಲ್ಲ…
ರಚನೆ- ಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಕನಸು ಕಾಣುರಾತ್ರಿ ಪೂರ್ತಿಇರುಳು ಕತ್ತಲೆಕಳೆವ ಶಶಿಗೆ ಹಕ್ಕಿ ಗೂಡಲಿಪ್ರಾಣಿ ಪೊದರಲಿನಿನ್ನ ಪ್ರೇಮಅವನ ಬಯಲಲಿ ಸ್ನೇಹ ಒಲವುಶಾಂತಿ ಪ್ರೀತಿಕರುಣೆ ದಯೆಅವನ ಆಸ್ತಿ ನಿನ್ನ ನಗೆಸಿತಾನು ನಗುವನಿನ್ನ ನೋವದಿಬಳಲುವ ಅವನೆ ನಿನಗೆಜೀವ ಸಾಥಿದೂರ ಪಯಣದಸಾರಥಿ ಸೂರ್ಯ ಸುತ್ತಭೂಮಿ ತಿರುಗಲಿಬಾಳ ಬಟ್ಟೆಗೆಚಂದ್ರ ನಿನ್ನ ಸ್ಫೂರ್ತಿ
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಓರ್ವ ಪುರುಷ ಒಳ್ಳೆಯ ಪತಿಯಾಗದ ಹೊರತು ಒಳ್ಳೆಯ ತಂದೆಯಾಗಲಾರ, ಕಾರಣ ಮಕ್ಕಳು ತಮ್ಮ ತಂದೆ ತನ್ನ ಪತ್ನಿಯೊಂದಿಗೆ ಅಂದರೆ ತಮ್ಮ ತಾಯಿಯೊಂದಿಗೆ ನಡೆದುಕೊಳ್ಳುವ ರೀತಿಯನ್ನು ಗ್ರಹಿಸುವ ಮೂಲಕ ಕಲಿಯುತ್ತಾರೆ. ನಿಮ್ಮ ಪತ್ನಿಯೊಂದಿಗಿನ ನಿಮ್ಮ ನಡವಳಿಕೆಯೇ ನಿಮ್ಮ ಮಕ್ಕಳ ಬದುಕಿನ ಮೂಲ ಬುನಾದಿಯಾಗಿರುತ್ತವೆ. ನಿಮ್ಮ ನಡವಳಿಕೆಯ ಮೂಲಕ ಮಕ್ಕಳು ಸಾಮಾಜಿಕ ಸಂಬಂಧಗಳು ಗೌರವ ಮತ್ತು ಪ್ರೀತಿಯ ಭಾವವನ್ನು ಕಲಿಯುತ್ತವೆ.ಪುರುಷನಾಗಿ ತಮ್ಮ ಪತ್ನಿಯನ್ನು ಗೌರವಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ನಿಮ್ಮ ಕುಟುಂಬಕ್ಕಾಗಿ ನೀವು ಹಣವನ್ನು ದುಡಿಯಬಹುದು ಆದರೆ ಕೌಟುಂಬಿಕ ಪೋಷಣೆ ಮಾಡುವವಳು ಹೆಣ್ಣು ಮಗಳು ಮಾತ್ರ. ತನ್ನೆಲ್ಲ ಶಕ್ತಿ, ಪ್ರೀತಿ, ವಾತ್ಸಲ್ಯ, ಅಕ್ಕರೆಯ ಭಾವನೆಗಳನ್ನು ಹರಿಸಿ ಆಕೆ ಕುಟುಂಬದ ಸದಸ್ಯರಿಗೆ ಬದುಕಲು ಒಂದು ಸುರಕ್ಷಿತವಾದ ಮತ್ತು ಪ್ರೀತಿಯ ವಾಸಸ್ಥಾನವನ್ನು ನೀಡುತ್ತಾಳೆ. ಆಕೆಯನ್ನು ಗೌರವಿಸುವ ಮೂಲಕ ನೀವು ನಿಮ್ಮ ಕುಟುಂಬದ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುತ್ತೀರಿ.ನಿಮ್ಮ ಪತ್ನಿ ಕೇವಲ ನಿಮ್ಮ ಸಂಗಾತಿಯಲ್ಲ… ಆಕೆ ನಿಮ್ಮೊಂದಿಗೆ…
ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ ಕಮಲಾದೇವಿಯವರು 1903 ಏಪ್ರಿಲ್ ಮೂರರಂದು ಮಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಗಿರಿಜಾಬಾಯಿ, ತಂದೆ ಮಂಗಳೂರಿನ ಜಿಲ್ಲಾ ಕಲೆಕ್ಟರ್ ಆಗಿದ್ದರು. ಕಮಲಾದೇವಿಯವರ ಮದುವೆ ಅವರ 14ನೇ ವಯಸ್ಸಿನಲ್ಲಿ ಆಯಿತು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಎರಡು ವರ್ಷಗಳ ಬಳಿಕ ಅವರು ವಿಧವೆಯಾದರೂ ಕಮಲಾದೇವಿ ಧೃತಿಗೆಡಲಿಲ್ಲ. ಉನ್ನತ ವರ್ಗದ ಕುಟುಂಬಗಳ ಹೆಣ್ಣು ಮಕ್ಕಳಿಗೆ ಬಹಿಷ್ಕೃ ತವಾದ ಅಭಿನಯವನ್ನು ಸ್ವೀಕರಿಸಿದ ಕಮಲಾದೇವಿ ಎರಡು ಮೂಕಿ ಚಿತ್ರಗಳಲ್ಲಿ ಸಹ ಅಭಿನಯಿಸಿದರು.1920 ರಲ್ಲಿ ಕಮಲಾದೇವಿಯವರ ಮದುವೆ ಸರೋಜಿನಿ ನಾಯ್ಡು ಅವರ ಸೋದರರಾದ ಸುಪ್ರಸಿದ್ಧ ಕವಿ ಹಾಗೂ ನಾಟಕಕಾರರಾದ ಹರೀoದ್ರನಾಥ್ ಚಟ್ಟೋಪಾಧ್ಯಾಯ ಇವರೊಡನೆ ಜರುಗಿತು. ಕೆಲದಿನಗಳಲ್ಲಿಯೇ ಹರೀoದ್ರನಾಥರೊಡನೆ ಕಮಲಾದೇವಿ ಅಲ್ಲಿ ಬೆಡ್ ಫೋರ್ಡ್ ಕಾಲೇಜು ಸೇರಿಕೊಂಡು ಸಮಾಜಶಾಸ್ತ್ರದ ಅಧ್ಯಯನ ಮಾಡಿದರು. 1923ರಲ್ಲಿ ಭಾರತಕ್ಕೆ ಮರಳಿದ ದಂಪತಿಗಳು ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಕಮಲಾದೇವಿ ಸೇವಾದಳವನ್ನು ಸೇರಿದರು.1926ರಲ್ಲಿ ಮಾರ್ಗಾರೇಟ್ ಕಜಿನ್ ಇವರ ಸಲಹೆ ಮೇರೆಗೆ ಮದ್ರಾಸ್ ಪ್ರಾಂತೀಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿರುವ ಈ ದಿನಗಳಲ್ಲಿ, ಸಾಹಿತ್ಯ ಆಸಕ್ತರನ್ನು ಒಂದು ಕಡೆ ಸೇರಿಸಿ ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಈ ಮೂಲಕ ಕನ್ನಡದ ಅಳಿಲು ಸೇವೆ ಸಲ್ಲಿಸುವ ಉದ್ದೇಶದ “(ಅ)ಪರಿಚಿತ ಓದುಗರ ಭೇಟಿ” ಕಾರ್ಯಕ್ರಮ ರವಿವಾರ ನಗರದ ಬಾರಾ ಕಮಾನ್ ಉದ್ಯಾನವನದಲ್ಲಿ ಯಶಸ್ವಿಯಾಗಿ ನೆರವೇರಿತು.ಬೆಳಗ್ಗೆ 10-30 ಗಂಟೆಯ ಸುಮಾರಿಗೆ ಸೇರಿದ ಎಲ್ಲ ಸಾಹಿತ್ಯ ಆಸಕ್ತರು ಅಲ್ಲಲ್ಲಿ ಕುಳಿತು ತಮಗೆ ಇಷ್ಟವಾದ ಕೃತಿಗಳನ್ನು ಓದಿದರು. ನಂತರ 12-00 ಗಂಟೆಗೆ ಬೇರೆ ಬೇರೆ ಭಾಗಗಳಿಂದ ಬಂದಿರುವ ಅಪರಿಚಿತ ಓದುಗರು ತಮ್ಮ ತಮ್ಮ ಪರಿಚಯಗಳನ್ನು ಮಾಡಿಕೊಂಡು ಪರಿಚಿತರಾದರು. ಆನಂತರ ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಕೆಲವು ಆಸಕ್ತರು ತಾವು ಬರೆದ ಸ್ವರಚಿತ ಕವಿತೆಗಳನ್ನು ಓದಿದರು. ಹಾಗೆಯೇ ಕೆಲವರು ತಾವು ಓದಿದ ಇಷ್ಟವಾದ ಪುಸ್ತಕದ ಕುರಿತು ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಘುತ್ತಮ ಅರ್ಜುಣಗಿ ಉಪನ್ಯಾಸಕರು ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತು ಮಾತನಾಡಿದರು. ‘ಓದುವ ಹವ್ಯಾಸವನ್ನು ರೂಢಿಸಿಕೊಂಡು ತನ್ಮೂಲಕ…
