ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬೆಳಗಾಂವಿ ಗಡಿಭಾಗದಲ್ಲಿ ಮತ್ತು ಮಹಾರಾಷ್ಟçದಲ್ಲಿ ಕನ್ನಡಿಗರ ಮೇಲಿನ ಮರಾಠ ಪುಂಡರ ದೌರ್ಜನ್ಯ ಖಂಡಿಸಿ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ಮಂಗಳವಾರ ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿ ಮರಾಠ ಪುಂಡರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾಂವಿ ಗಡಿಭಾಗದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಕರ್ನಾಟಕ ಸಾರಿಗೆ ಬಸ್‌ಗಳಿಗೆ ಹಾಗೂ ಚಾಲಕರಿಗೆ ಮಸಿ ಬಳಿಯುವ ಮೂಲಕ ದೌರ್ಜನ್ಯ ಮಾಡಲಾಗುತ್ತಿದೆ. ಜೊತೆಗೆ ಕನ್ನಡ ಧ್ಜಜಕ್ಕೂ ಅಪಮಾನ ಮಾಡಲಾಗುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥ ಕ್ರಮಗಳಾಗಿದ್ದು ಕೂಡಲೇ ಇಂತಹ ಪ್ರಕರಣಗಳನ್ನು ಹುಟ್ಟುಹಾಕುವ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಸೇನೆ ರಸ್ತೆಗಿಳಿದು ಉಗ್ರ ಪ್ರತಿಭಟನೆ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಲ್ಲುಕಾಧ್ಯಕ್ಷ ಹಸನ್‌ಸಾಬ್ ನದಾಫ್, ಪ್ರಕಾಶ ಗುಡಿಮನಿ, ಅಶೋಕ ಗೋಲ್ಲರ, ಹುಸೇನ್ ಕೊಕಟನೂರ, ಸುನೀಲ ಕನಮಡಿ, ಶ್ರೀಕಾಂತ ಬಜಂತ್ರಿ, ಹಮೀದ್ ಮುಲ್ಲಾ, ಅಬ್ಬಾಸಲಿ ಆಹೇರಿ, ಇಮಾಮ್ ಮುಲ್ಲಾ, ಪರಶು ನಾಯ್ಕೋಡಿ, ದಾವುಲಸಾಬ್ ಹೆಬ್ಬಾಳ, ಅರವಿಂದ ಸೋನ್ನಳ್ಳಿ, ಭೀರು ಹಳ್ಳಿ, ಮಲ್ಲು ಉತ್ನಾಳ, ಶಿವು ರೊಳ್ಳಿ, ಶಿವನಗೌಡ ಸುರಗಳ್ಳಿ, ರಮೇಶ ನಾಯ್ಕೋಡಿ, ಭುವನೇಶ್ವರಿ ಸಣ್ಣಕ್ಕಿ ಇದ್ದರು.

