ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಯಾಳವಾರ ಪಿಕೆಪಿಎಸ್ ವ್ಯಾಪ್ತಿಯ ಗ್ರಾಮಗಳ ಎಲ್ಲ ರೈತ ಸಮುದಾಯದ ಅನುಕೂಲಕ್ಕಾಗಿ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಹೇಳಿದರು.
ತಾಲ್ಲೂಕಿನ ಯಾಳವಾರ ಗ್ರಾಮದ ತೊಗರಿ ಖರೀದಿ ಕೇಂದ್ರದಲ್ಲಿ ಮಂಗಳವಾರ ತೊಗರಿ ಖರೀದಿಗೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ರೈತರ ಹೆಸರುಗಳು ನೊಂದಣಿಯಾಗಿದ್ದು, ಮತ್ತು ಎಲ್ಲ ರೈತಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು .ಈ ಭಾಗದ ಪ್ರತಿಯೊಬ್ಬ ರೈತರ ತೊಗರಿ ಖರೀದಿಯಾಗುವವರೆಗೂ ಎಲ್ಲವನ್ನು ಪ್ರಾಮಾಣಿಕವಾಗಿ ಖರೀದಿ ಮಾಡಲಾಗುವುದು ಎಂದು ಹೇಳುತ್ತಾ, ರೈತರ ಕುರಿತು ವಿಶೇಷ ಕಾಳಜಿ ವಹಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಸಾನಿಧ್ಯ ವಹಿಸಿದ್ದ ಮಹಾಲಿಂಗೇಶ್ವರಶ್ರೀ ಹಾಗೂ ಕಾಶೀನಾಥ ಸ್ವಾಮೀಜಿ ತೂಕದ ಯಂತ್ರಕ್ಕೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.
ಪಿಕೆಪಿಎಸ್ ಉಪಾಧ್ಯಕ್ಷ ರಾಜುಗೌಡ ನ್ಯಾಮಣ್ಣವರ, ಸದಸ್ಯರಾದ ಆನಂದಗೌಡ ಮೂಲಿಮನಿ, ತಮ್ಮಣ್ಣ ನಾಯ್ಕೋಡಿ, ಕಾರ್ಯ ನಿರ್ವಹಣಾಧಿಕಾರಿ ಚೆನ್ನಬಸಪ್ಪ ಲಗಳಿ, ಕುಪೇಂದ್ರ ಜಾಯವಾಡಗಿ, ಮುತ್ತುಗೌಡ ಪಾಟೀಲ, ಬಸನಗೌಡ ದೊಡಮನಿ, ಅರುಣ ಹುಣಶ್ಯಾಳ, ರವಿಗೌಡ ದೊಡಮನಿ, ಅರವಿಂದ ನಾಗರಾಳ, ಶಿವಾನಂದ ನ್ಯಾಮಣ್ಣವರ, ತುಕಾರಾಮ ಹಂಚಾಟಿ, ದೀಪು ಶ್ಯಾಬಾದಿ, ಆನಂದ ಗರಡಿಮನಿ ಸೇರಿದಂತೆ ಸಿಬ್ಬಂದಿ, ರೈತರು ಉಪಸ್ಥಿತರಿದ್ದರು.

