ರಚನೆ
– ಡಾ.ಶಶಿಕಾಂತ ಪಟ್ಟಣ
ರಾಮದುರ್ಗ
ಉದಯರಶ್ಮಿ ದಿನಪತ್ರಿಕೆ
ಕನಸು ಕಾಣು
ರಾತ್ರಿ ಪೂರ್ತಿ
ಇರುಳು ಕತ್ತಲೆ
ಕಳೆವ ಶಶಿಗೆ
ಹಕ್ಕಿ ಗೂಡಲಿ
ಪ್ರಾಣಿ ಪೊದರಲಿ
ನಿನ್ನ ಪ್ರೇಮ
ಅವನ ಬಯಲಲಿ
ಸ್ನೇಹ ಒಲವು
ಶಾಂತಿ ಪ್ರೀತಿ
ಕರುಣೆ ದಯೆ
ಅವನ ಆಸ್ತಿ
ನಿನ್ನ ನಗೆಸಿ
ತಾನು ನಗುವ
ನಿನ್ನ ನೋವದಿ
ಬಳಲುವ
ಅವನೆ ನಿನಗೆ
ಜೀವ ಸಾಥಿ
ದೂರ ಪಯಣದ
ಸಾರಥಿ
ಸೂರ್ಯ ಸುತ್ತ
ಭೂಮಿ ತಿರುಗಲಿ
ಬಾಳ ಬಟ್ಟೆಗೆ
ಚಂದ್ರ ನಿನ್ನ ಸ್ಫೂರ್ತಿ
