Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಫೆಬ್ರವರಿ ೨೮ರ ಬೆಳಿಗ್ಗೆ ೧೦:೩೦ಕ್ಕೆ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಸಭಾ ಭವನದಲ್ಲಿ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ ಅವರ ಬದುಕು ಮತ್ತು ಸಾಧನೆಗಳ ಪರಿಚಯದ ಕುರಿತ ಓದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಿ.ಎಸ್.ಬೆಳಗಲಿ ಅವರು ವಹಿಸಲಿದ್ದು, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಕೆ.ಹೊಸಮನಿ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಬಸವರಾಜ ಗಂಗನಹಳ್ಳಿ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಿ.ಬಿ.ನಾಟಿಕಾರ, ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ತಿರುಮಲ ಕುಲಕರ್ಣಿ, ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಕಾಂತ ಕೆ.ಎಸ್ ಅವರು ಭಾಗವಹಿಸುವರು. ಮಾಧವ ಗುಡಿ ಅವರು ವಿಶೇಷ ಉಪನ್ಯಾಸ ನೀಡಲಿದ್ದು, ಶೃತಿ ಮೇಲಿನಮನಿ ಸುಗಮ ಸಂಗೀತ ನಡೆಸಿಕೊಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ನಗರಾಭಿವೃದ್ಧಿ ಇಲಾಖೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ತಾಳಿಕೋಟಿ ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆಯಡಿ ತಾಳಿಕೋಟಿ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ವಿತರಣಾ ವ್ಯವಸ್ಥೆ ಕಲ್ಪಿಸುವ ಹಂತ ೧ ಹಾಗೂ ೨ರ ಯೋಜನೆಗೆ ತಾಳಿಕೋಟಿಯ ಪುರಸಭೆ ಕಾರ್ಯಲಯದ ಮುಂಭಾಗದಲ್ಲಿ ಮಾರ್ಚ್ ೦೧ರ ಬೆಳಿಗ್ಗೆ ೧೧ಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಸಚಿವರಾದ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತದ ಅಧ್ಯಕ್ಷರಾದ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ,…
ತುಮಕೂರಿನ ವಿನಯ್‌ರಾಮ ಹಳೇಮನಿ ಸಂಕಲ್ಪ | ೧೦೮ ಕ್ಷೇತ್ರಗಳಲ್ಲಿ ಪ್ರದರ್ಶನದ ಇರಾದೆ | ಹಿರಿಯ ಜೀವಿಗಳಿಗೆ, ಬಡವರಿಗೆ ದರ್ಶನದ ಭಾಗ್ಯ ಉದಯರಶ್ಮಿ ದಿನಪತ್ರಿಕೆ ವರದಿ: ಚೇತನ ಶಿವಶಿಂಪಿಮುದ್ದೇಬಿಹಾಳ: ಭಕ್ತಿಗೆ ಜಾತಿ, ಮತ, ಪಂಥ ಬೇಧ ಇಲ್ಲ. ಭಕ್ತರು ತಮ್ಮ ಭಕ್ತಿಯನ್ನು ವಿವಿಧ ರೀತಿಯಲ್ಲಿ ತೋರಿಸಿರುವದು ನೋಡಿದ್ದೇವೆ ಕೇಳಿದ್ದೇವೆ. ಅದರಂತೆ ಇಲ್ಲೊಬ್ಬ ಭಕ್ತರು ಹಿರಿಯ ಜೀವಿಗಳಿಗೆ, ಅಯೋಧ್ಯೆಗೆ ತೆರಳಿ ದರ್ಶನ ಪಡೆಯಲಾಗದ ಬಡವರಿಗೆ ಸಾಕ್ಷಾತ್ ಅಯೋಧ್ಯೆಯ ಶ್ರೀ ರಾಮ ಮಂದಿರವನ್ನೇ ತಯಾರಿಸಿ, ಪ್ರದರ್ಶಿಸಿ, ಎಲ್ಲರಿಗೂ ದರ್ಶನದ ಭಾಗ್ಯ ಕಲ್ಪಿಸಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಹೌದು ಓದುಗರೆ, ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇಲ್ಲಿನ ಜನತೆ ದರ್ಶನ ಪಡೆದು ಪುನೀತರಾಗಿದ್ದಾರೆ. ಇನ್ನು ರಾಮ ಮಂದಿರವನ್ನು ತಯಾರಿಸಿ ಪ್ರದರ್ಶಿಸುತ್ತಿರುವವರು ತುಮಕೂರಿನ ವಿನಯ್‌ರಾಮ ಹಳೇಮನಿ. ಕಳೆದ ಕೆಲವು ವರ್ಷಗಳ ಹಿಂದೆ ತಮ್ಮ ತಂದೆಯನ್ನು ಕಳೆದುಕೊಂಡ ಇವರ ಕುಟುಂಬದಲ್ಲಿರೋದು ಸಧ್ಯ ತಾಯಿ ಮಾತ್ರ. ಶ್ರೀ ರಾಮರ ಆದರ್ಶಗಳನ್ನು ಇಡೀ ವಿಶ್ವಕ್ಕೆ ಹರಡುವ ಹಂಬಲ ಇವರದಾಗಿದ್ದು, ಥರ್ಮಾಕೋಲ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ- ಹುಬ್ಬಳ್ಳಿ ಮತ್ತು ವಿಜಯಪುರ- ಬೆಳಗಾವಿ ಹೆದ್ದಾರಿಯನ್ನು ಷಟ್ಪಥ(ಆರು ಪಥ) ಅಂದರೆ 6ಲೇನ್ ಮಾರ್ಗವಾಗಿ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಬರೆದಿದ್ದ ಪತ್ರಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ ಗಡ್ಕರಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಜನೇವರಿ 15, 2025 ರಂದು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದ ಸುನೀಲಗೌಡ ಪಾಟೀಲ, ವಿಜಯಪುರ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆದ್ದಾರಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿಜಯಪುರದಿಂದ ಹುಬ್ಬಳ್ಳಿ ಮತ್ತು ವಿಜಯಪುರದಿಂದ ಬೆಳಗಾವಿಗೆ ಈಗ ಇರುವ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವುದು ಅಗತ್ಯವಾಗಿದೆ. ಈಗ ಇರುವ ಹೆದ್ದಾರಿಯನ್ನು ಆರು ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದ್ದರು.ಉತ್ತರ ಕರ್ನಾಟಕದ ಕೇಂದ್ರ ಭಾಗದಲ್ಲಿರುವ ಐತಿಹಾಸಿಕ ವಿಜಯಪುರ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಇಲ್ಲಿರುವ ಪ್ರಾಚೀನ ಸ್ಮಾರಕಗಳು, ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳು ದೇಶವಷ್ಟೇ ಅಲ್ಲ, ವಿದೇಶಗಳಲ್ಲಿಯೂ ಹೆಸರುವಾಸಿಯಾಗಿವೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಈ ಜಿಲ್ಲೆಯಿಂದ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಸಿನಿಮೀಯ ದಾಟಿಯ ಈ ಲೇಖನದ ಶೀರ್ಷಿಕೆಯನ್ನು ಕಂಡು ಹುಬ್ಬು ಹಾರಿಸದಿರಿ. ಹುಟ್ಟಿನಿಂದ ಸಾವಿನವರೆಗೂ ಹೆಣ್ಣು ಮಕ್ಕಳು ತಂದೆಯ, ಪತಿಯ ಮತ್ತು ಮಕ್ಕಳ ರಕ್ಷೆಯಲ್ಲಿ ಬದುಕಬೇಕು ಎಂಬ ಮನು ಸ್ಮೃತಿಯ ವಾಕ್ಯಗಳು ಮತ್ತು ನಮ್ಮ ಸಾಮಾಜಿಕ ಪರಿಸ್ಥಿತಿಯು ಹೆಣ್ಣು ಮಕ್ಕಳನ್ನು ಅತಂತ್ರವಾಗಿಸಿದೆ. ಆಕೆಯದ್ದೇ ಪಾಲನೆ ಪೋಷಣೆಯಲ್ಲಿ ಬೆಳೆಯುವ ಆಕೆಯ ಮಕ್ಕಳಿಗೆ ತಾಯಿಯಾಗಿ, ಗೃಹ ಕೃತ್ಯಗಳನ್ನು ಸಂಭಾಳಿಸುವ ಪತಿಯ ಎಲ್ಲಾ ಅವಶ್ಯಕತೆಗಳಿಗೆ ಸ್ಪಂದಿಸುವ ಪತ್ನಿಯಾಗಿ, ತನ್ನ ಹೆತ್ತ ತಂದೆ ತಾಯಿಯರ ಬಾಳಿಗೆ ಆಶಾಕಿರಣವಾಗಿ! ಬೆಳೆಯುವ ಹೆಣ್ಣು ಮಕ್ಕಳಲ್ಲಿ ಒಂದು ರೀತಿಯ ಅತಂತ್ರ ಮನೋಭಾವ ಸದಾ ಇದ್ದೇ ಇರುತ್ತದೆ.ಅದೃಷ್ಟವಂತರು ಮಾತ್ರ ತಂದೆಯ ಮನೆಯಲ್ಲಿ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ ಎಂದಾದರೂ ಕೂಡ ಆಕೆ ಎಂದಾದರೂ ಕೊಟ್ಟ ಮನೆಗೆ ಹೋಗುವವಳು ಎಂಬ ಭಾವ, ಮದುವೆಯಾಗಿ ಬಂದ ಗಂಡನ ಮನೆಯಲ್ಲಿ ಹೊರಗಿನಿಂದ ಬಂದವಳು ಎಂಬ ಭಾವ ಮುಂದೆ ಮಕ್ಕಳ ಮದುವೆ ಮಾಡಿದಾಗ ಬರುವ ಸೊಸೆಗೆ ಹೊರೆ ಆಗುತ್ತಿದ್ದೇನೆ ಎಂಬ ಭಾವ…
ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಅನಿರೀಕ್ಷಿತ ದಾಳಿ | ಪುರಸಭೆಗೆ ಸಲ್ಲಬೇಕಾದ ಲಕ್ಷಾಂತರ ತೆರಿಗೆ ಅನ್ಯರ ಪಾಲು ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರಕಾರಿ ಅಧಿಕಾರಿಯು ಗೌಪ್ಯವಾಗಿ ಇಟ್ಟುಕೊಳ್ಳಬೇಕಾದ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ್ ಸರ್ಕಾರಿ ಲಾಗಿನ್‌ನ್ನು ಖಾಸಗಿ ವ್ಯಕ್ತಿಗೆ ನೀಡಿದ್ದು ನೋಡಿದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ಪುರಸಭೆ ಅಧ್ಯಕ್ಷರ ಮಾತಾಗಿದೆ. ಒಂದು ವೇಳೆ ಕೆಲಸದ ಒತ್ತಡವೇ ಇದ್ದರೆ ಅಧಿಕಾರಿ ಅಥವಾ ಸಿಬ್ಬಂದಿಗಳು ಕಛೇರಿಯಲ್ಲಿದ್ದುಕೊಂಡೆ ಕೆಲಸ ಮಾಡುಬೇಕಾಗಿತ್ತು. ಅದನ್ನು ಖಾಸಗಿ ವ್ಯಕ್ತಿ ಅಭಿಷೇಕ್ ಎಂಬಾತ ಮನೆಗೆ ಕೊಂಡ್ಯೂಯುವ ಜರೂರತ್ ಏನಿತ್ತು. ಈ ಖಾಸಗಿ ವ್ಯವಹಾರದಿಂದಾಗಿ ಪುರಸಭೆ ಆದಾಯಕ್ಕೆ ಕೋಟ್ಯಾಂತರ ಹಾನಿಯಾಗಿದೆ. ಪುರಸಭೆಯ ಕಾರ್ಮಿಕರಿಗೆ ಸಂಬಳ ಬಟವಾಡೆ ಮಾಡಲು ತೆರಿಗೆ ಹಾಗೂ ಇತರೆ ಆದಾಯಗಳನ್ನೆ ಅವಲಂಬಿಸಿದೆ. ಪುರಸಭೆಯ ಗಳಿಕೆ ಈ ರೀತಿ ಸೋರಿಕೆಯಾದರೆ ಸಿಬ್ಬಂದಿಗೆ ಸಂಬಳ ಕೋಡುವುದಾದರೂ ಹೇಗೆ ಮತ್ತು ನಗರವನ್ನು ಅಭಿವೃದ್ಧಿ ಮಾಡುವುದಾದರೂ ಹೇಗೆ?ಪುರಸಭೆಗೆ ಹೋಗದೆ ಲೇಔಟ್ ಮಾಲೀಕರು ಅಬಿಷೇಕ ಕೊಡಗೆ ಎಂಬಾತನ…
ವಸತಿ ಮತ್ತು ವಕ್ಫ್ ಸಚಿವ ಬಿ.ಝಡ್. ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ಬಳ್ಳಾರಿ: ರಾಜ್ಯ ಕಾಂಗ್ರೆಸ್‌ನಲ್ಲಿ ಪಕ್ಷದೊಳಗಿನ ಆಂತರಿಕ ಕಲಹದ ನಡುವೆ, ವಸತಿ ಮತ್ತು ವಕ್ಫ್ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಟ್ಟಲು ಧೈರ್ಯ ಮಾಡುವವರು ಸುಟ್ಟು ಬೂದಿಯಾಗುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಅಧಿಕಾರ ಹಂಚಿಕೆ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯ ಬಗ್ಗೆ ನಡೆಯುತ್ತಿರುವ ಚರ್ಚೆಯ ಮಧ್ಯೆ ಜಮೀರ್ ಅಹ್ಮದ್ ಖಾನ್ ಅವರು ರೋಷಾವೇಶದಿಂದ ಮಾತನಾಡಿದ್ದಾರೆ.ಸಚಿವ ಜಮೀರ್ ಅಹ್ಮದ್ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿರುವುದರಿಂದ, ಈ ಹೇಳಿಕೆ ಉಪಮುಖ್ಯಮಂತ್ರಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿರಿಸಿಕೊಂಡು ನೀಡಲಾಗಿದೆ ಎಂದು ಪಕ್ಷದ ಒಳಗಿನವರು ಹೇಳುತ್ತಿದ್ದಾರೆ.ಬುಧವಾರ ಹಂಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗೋಲ್ಲಾ ಮುಟ್ಟಿದ್ರೆ ಭಸ್ಮ ಆಗ್ತಾರೆ. ಸಿಎಂ ಸ್ಥಾನ, ಕೆಪಿಸಿಸಿ ಸ್ಥಾನ ಖಾಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಮಹಾ ಶಿವರಾತ್ರಿ ನಿಮಿತ್ಯ ಪಟ್ಟಣದ ಪುರಾತನ ವಿಶ್ವೇಶ್ವರ ದೇವಸ್ಥಾನ ಮತ್ತು ರಾಮಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಶಿವರಾತ್ರಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.ಬುಧವಾರ ಶಿವರಾತ್ರಿ ನಿಮಿತ್ಯ ಪಟ್ಟಣದ ವಿಶ್ಚೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿದ್ದು. ದೇವಸ್ಥಾನ ಕಮಿಟಿ ವತಿಯಿಂದ ಭಕ್ತರಿಗೆ ಪ್ರಸಾದ ಮಾಡಿದರು. ಶಿವರಾತ್ರಿ ನಿಮಿತ್ಯ ಎಲ್ಲರು ಉಪವಾಸ ಇರುವದಿರಂದ ಸಾಯಂಕಾಲ ೫ ಗಂಟೆಯಿಂದ ಗ್ರಾಮಸ್ಥರು ವಿಶೇಶ್ವರ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದರು. ದೇವಸ್ಥಾನಕ್ಕೆ ಸಾವಿರಾರು ಜನರು ಆಗಮಿಸಿದ್ದರಿಂದ ಸುಮಾರು ೧ ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು.ದೇವಸ್ಥಾನದ ಪೂಜಾರಿ ಪ್ರವೀಣ ಗುಡಿಮಠಸ್ವಾಮಿ, ದೇವಸ್ಥಾನ ಕಮೀಟಿಯ ಅಧ್ಯಕ್ಷ ಬಸವರಾಜ ತೆಲ್ಲೂರ, ಪ್ರಭು ವಾಲಿಕಾರ, ಮಲ್ಲಿಕಾರ್ಜುನ ಅಚಲೇರಿ, ಕಾಮಣ್ಣ ಕಲ್ಲೂರ, ಶಿವಾನಂದ ಬುರಡ, ಮಲಕು ಕೊಳಾರಿ ಮುಂತಾದವರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಮುಖ್ಯ ಬಜಾರನಲ್ಲಿ ಹೈಟೆಕ್ ಮೆಗಾ ಮಾರುಕಟ್ಟೆ ನಿರ್ಮಾಣವಾಗುತ್ತಿದ್ದು ಅದರ ಭೂಮಿ ಪೂಜೆಯನ್ನು ಫೆ.೨೭ ರಂದು ಸಂಜೆ ೫ಗಂಟೆಗೆ ನೆರವೇರಿಸಲಾಗುತ್ತಿದೆ. ಎಲ್ಲ ವ್ಯಾಪಾರಸ್ಥರು, ಅಭಿವೃದ್ಧಿ ಪರ ಚಿಂತಕರು, ವ್ಯಾಪಾರಸ್ಥರು, ರಾಜಕೀಯ ಮುಖಂಡರು, ಎಲ್ಲ ನಾಗರಿಕರು ಭಾಗಿಯಾಗಿ ಕಾರ್ಯಕ್ರಮಕ್ಕೆ ಶೋಭೆ ತರಬೇಕು ಎಂದು ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಹೇಳಿದರು.ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಗಣ್ಯ ವ್ಯಾಪಾರಸ್ಥರ ಸಭೆ ಕರೆದು ಮಾತನಾಡಿದ ಅವರು, ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ಹಾಗೂ ಪುರಸಭೆ ಮುದ್ದೇಬಿಹಾಳ ಇವರ ಸಂಯುಕ್ತ್ತ ಆಶ್ರಯದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಭೂಮಿ ಪೂಜೆಯನ್ನು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್.ನಾಡಗೌಡ ಅಪ್ಪಾಜಿ ನೆರವೇರಿಸಲಿದ್ದಾರೆ.ಈ ಕಟ್ಟಡ ಹಲವು ವ್ಯಾಪಾರಿಗಳ ಕನಸಾಗಿದೆ. ಕಟ್ಟಡದ ಅಂಡರ್ ಗ್ರೌಂಡ್ ನಲ್ಲಿ ಪಾರ್ಕಿಂಗ್ ಸೌಲಭ್ಯ ಕೂಡ ಇರಲಿದ್ದು ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.ಈ ವೇಳೆ ಗಣ್ಯ ವರ್ತಕ ವಾಸುದೇವ ಶಾಸ್ತ್ರೀ ಮಾತನಾಡಿ ಕಟ್ಟಡ ನಿರ್ಮಾಣವಾಗುತ್ತಿರುವದು ಸಂತಸದ ವಿಷಯ. ಅಂಗಡಿಗಳನ್ನು…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನಲ್ಲಿ ರೈತರು ಒಂದು ಎಕರೆ ಕಬ್ಬು ಪ್ರದೇಶದಲ್ಲಿ ಕೇವಲ ೩೦ ರಿಂದ ೪೦ ಟನ್ ಇಳುವರಿ ಮಾತ್ರ ಕಬ್ಬು ಬೆಳೆ ಪಡೆಯುತ್ತಿದ್ದು ಪ್ರತಿ ಎಕರೆಗೆ ೧೦೦ ಟನ್‌ಇಳುವರಿ ಪಡೆಯಲು ಪ್ರಯತ್ನಿಸುವ ಅಗತ್ಯತೆ ಇದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಶಂಕರಮೂರ್ತಿ ಹೇಳಿದರು.ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಬ್ಬಿನಲ್ಲಿ ಸಮಗ್ರ ಬೆಳೆ ನಿರ್ವಹಣೆ ಹಾಗೂ ಅತ್ಯಾಧಿಕ ಇಳುವರಿ ಮತ್ತು ಕಿಸಾನ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಕಬ್ಬು ಬೆಳೆಗೆ ಮಣ್ಣು ಪರೀಕ್ಷೆ ಮತ್ತು ಮಣ್ಣಿನಲ್ಲಿ ಸವಳು ಅಥವಾ ಪಿಎಚ್ ಪರೀಕ್ಷೆಗಳು ಮುಖ್ಯ. ಅದರ ಆಧಾರದ ಮೇಲೆ ಇಳುವರಿ ಹೆಚ್ಚು ಬರುವ ಹಾಗೆ ವ್ಯವಸ್ಥೆ ಮಾಡಬೇಕು. ಕಬ್ಬು ಗಾಳಿ ಮತ್ತು ಬೆಳಕು ಬಯಸುವ ಬೆಳೆ. ಹಾಗಿದ್ದರೆ ಮಾತ್ರ ಪ್ರತಿ ಕಬ್ಬಿನ ತೂಕವೂ ಹೆಚ್ಚು ಬರುತ್ತದೆ. ಗ್ಲೂಕೋಸ್ ಮತ್ತು ಸಾರಜನಕ ಪೂರೈಕೆ ಇದ್ದರೆ ಮೊಳಕೆ ಬರುತ್ತದೆ. ೩೦ ರಿಂದ ೧೨೦ ದಿನಗಳ ವರೆಗೆ ಮರಿ ಒಡೆಯುವ ಹಂತ. ಆಗ ನೀರು ಕಡಿಮೆ ಬಿಡಬೇಕು.…
