ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಮಹಾ ಶಿವರಾತ್ರಿ ನಿಮಿತ್ಯ ಪಟ್ಟಣದ ಪುರಾತನ ವಿಶ್ವೇಶ್ವರ ದೇವಸ್ಥಾನ ಮತ್ತು ರಾಮಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಶಿವರಾತ್ರಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಬುಧವಾರ ಶಿವರಾತ್ರಿ ನಿಮಿತ್ಯ ಪಟ್ಟಣದ ವಿಶ್ಚೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿದ್ದು. ದೇವಸ್ಥಾನ ಕಮಿಟಿ ವತಿಯಿಂದ ಭಕ್ತರಿಗೆ ಪ್ರಸಾದ ಮಾಡಿದರು. ಶಿವರಾತ್ರಿ ನಿಮಿತ್ಯ ಎಲ್ಲರು ಉಪವಾಸ ಇರುವದಿರಂದ ಸಾಯಂಕಾಲ ೫ ಗಂಟೆಯಿಂದ ಗ್ರಾಮಸ್ಥರು ವಿಶೇಶ್ವರ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದರು. ದೇವಸ್ಥಾನಕ್ಕೆ ಸಾವಿರಾರು ಜನರು ಆಗಮಿಸಿದ್ದರಿಂದ ಸುಮಾರು ೧ ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು.
ದೇವಸ್ಥಾನದ ಪೂಜಾರಿ ಪ್ರವೀಣ ಗುಡಿಮಠಸ್ವಾಮಿ, ದೇವಸ್ಥಾನ ಕಮೀಟಿಯ ಅಧ್ಯಕ್ಷ ಬಸವರಾಜ ತೆಲ್ಲೂರ, ಪ್ರಭು ವಾಲಿಕಾರ, ಮಲ್ಲಿಕಾರ್ಜುನ ಅಚಲೇರಿ, ಕಾಮಣ್ಣ ಕಲ್ಲೂರ, ಶಿವಾನಂದ ಬುರಡ, ಮಲಕು ಕೊಳಾರಿ ಮುಂತಾದವರು ಇದ್ದರು.

