Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 01, 2026

ವಿಜಯಪುರದಲ್ಲಿ ವೇದಾಂತ ಸೌಹಾರ್ದ ಸಹಕಾರಿ ಸಂಘ ಶುಭಾರಂಭ

ಯಡ್ರಾಮಿ: ಶೌಚಾಲಯ ಸ್ಥಳಕ್ಕಾಗಿ ಸಿಡಿದು ನಿಂತ ನಾರಿಶಕ್ತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಎಂಎಲ್ಸಿ ಸುನೀಲಗೌಡ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಸ್ಪಂದನೆ
(ರಾಜ್ಯ ) ಜಿಲ್ಲೆ

ಎಂಎಲ್ಸಿ ಸುನೀಲಗೌಡ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಸ್ಪಂದನೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ವಿಜಯಪುರ- ಹುಬ್ಬಳ್ಳಿ ಮತ್ತು ವಿಜಯಪುರ- ಬೆಳಗಾವಿ ಹೆದ್ದಾರಿಯನ್ನು ಷಟ್ಪಥ(ಆರು ಪಥ) ಅಂದರೆ 6ಲೇನ್ ಮಾರ್ಗವಾಗಿ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಬರೆದಿದ್ದ ಪತ್ರಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ ಗಡ್ಕರಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಜನೇವರಿ 15, 2025 ರಂದು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದ ಸುನೀಲಗೌಡ ಪಾಟೀಲ, ವಿಜಯಪುರ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆದ್ದಾರಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿಜಯಪುರದಿಂದ ಹುಬ್ಬಳ್ಳಿ ಮತ್ತು ವಿಜಯಪುರದಿಂದ ಬೆಳಗಾವಿಗೆ ಈಗ ಇರುವ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವುದು ಅಗತ್ಯವಾಗಿದೆ. ಈಗ ಇರುವ ಹೆದ್ದಾರಿಯನ್ನು ಆರು ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದ್ದರು.
ಉತ್ತರ ಕರ್ನಾಟಕದ ಕೇಂದ್ರ ಭಾಗದಲ್ಲಿರುವ ಐತಿಹಾಸಿಕ ವಿಜಯಪುರ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಇಲ್ಲಿರುವ ಪ್ರಾಚೀನ ಸ್ಮಾರಕಗಳು, ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳು ದೇಶವಷ್ಟೇ ಅಲ್ಲ, ವಿದೇಶಗಳಲ್ಲಿಯೂ ಹೆಸರುವಾಸಿಯಾಗಿವೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಈ ಜಿಲ್ಲೆಯಿಂದ ಹುಬ್ಬಳ್ಳಿ ಮತ್ತು ಬೆಳಗಾವಿ ಸಂಪರ್ಕಿಸುವ ಹೆದ್ದಾರಿಗಳು ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ಹೆಚ್ಚು ಸಮಯ ತಗಲುತ್ತಿದೆ. ಇದರಿಂದ ಆರ್ಥಿಕತೆಗೂ ಹಿನ್ನೆಡೆಯಾಗಿದೆ.
ಈ ಹೆದ್ದಾರಿಗಳನ್ನು ಆರು ಪಥಕ್ಕೆ ಅಗಲೀಕರಣ ಮಾಡುವುದರಿಂದ ಸರಕು ಸಾಗಾಣಿಕೆಗೆ ಅನುಕೂಲವಾಗಲಿದ್ದು, ಸುರಕ್ಷತೆಯ ಜೊತೆಗೆ ಸಂಚಾರಕ್ಕೆ ಸಮಯವೂ ತಗ್ಗಲಿದೆ. ಜೊತೆಗೆ ಆರ್ಥಿಕ ನಗರಗಳಾದ ಹುಬ್ಬಳ್ಳಿ ಮತ್ತು ಬೆಳಗಾವಿಗಳ ಜೊತೆ ವಾಣಿಜ್ಯ ವ್ಯವಹಾರವೂ ವೃದ್ಧಿಸಿ ಪ್ರವಾಸೋದ್ಯಮದ ಅವಕಾಶವನ್ನೂ ಹೆಚ್ಚಿಸಲಿದೆ. ಉದ್ಯೋಗ ಸೃಷ್ಠಿ, ಯುವಕರಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಳ, ಹೊಸ ಕೈಗಾರಿಕೆಗಳ ಸ್ಥಾಪನೆ, ಆರೋಗ್ಯ, ಶಿಕ್ಷಣ ಮತ್ತೀತರ ಕ್ಷೇತ್ರಗಳಿಗೂ ಇದರಿಂದ ಲಾಭವಾಗಲಿದೆ.
ಹೀಗಾಗಿ ಈ ಬೇಡಿಕೆಗೆ ಸ್ಪಂದಿಸಿ ತಮ್ಮ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಾಗೂ ಈ ಭಾಗದಲ್ಲಿ ಅನುಕೂಲ ಮಾಡಿಕೊಡುಂತೆ ಶಾಸಕರು ಪತ್ರದಲ್ಲಿ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದರು.
ಈ ಪತ್ರಕ್ಕೆ ಸ್ಪಂದಿಸಿರುವ ಸಚಿವ ನಿತೀನ ಗಡ್ಕರಿ ಬೇಡಿಕೆ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸಚಿವ ನಿತೀನ ಗಡ್ಕರಿ ಉತ್ತರಕ್ಕೆ ಕೃತಜ್ಞತೆ ಸಲ್ಲಿಸಿರುವ ಶಾಸಕ ಸುನೀಲಗೌಡ ಪಾಟೀಲ, ಸಚಿವರು ವಿಜಯಪುರ-ಹುಬ್ಬಳ್ಳಿ ಮತ್ತು ವಿಜಯಪುರ- ಬೆಳಗಾವಿ ಹೆದ್ದಾರಿಗಳನ್ನು ಆದಷ್ಟು ಬೇಗ ಷಟ್ಪಥ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸುವ ವಿಶ್ವಾಸವಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 01, 2026

ವಿಜಯಪುರದಲ್ಲಿ ವೇದಾಂತ ಸೌಹಾರ್ದ ಸಹಕಾರಿ ಸಂಘ ಶುಭಾರಂಭ

ಯಡ್ರಾಮಿ: ಶೌಚಾಲಯ ಸ್ಥಳಕ್ಕಾಗಿ ಸಿಡಿದು ನಿಂತ ನಾರಿಶಕ್ತಿ

ಕ್ರೀಡೆಯಿಂದ ದೈಹಿಕ & ಮಾನಸಿಕ ಆರೋಗ್ಯ ವೃದ್ಧಿ :ಡಾ.ತೇಜಸ್ವಿನಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 01, 2026
    In ದಿನಪತ್ರಿಕೆ
  • ವಿಜಯಪುರದಲ್ಲಿ ವೇದಾಂತ ಸೌಹಾರ್ದ ಸಹಕಾರಿ ಸಂಘ ಶುಭಾರಂಭ
    In (ರಾಜ್ಯ ) ಜಿಲ್ಲೆ
  • ಯಡ್ರಾಮಿ: ಶೌಚಾಲಯ ಸ್ಥಳಕ್ಕಾಗಿ ಸಿಡಿದು ನಿಂತ ನಾರಿಶಕ್ತಿ
    In (ರಾಜ್ಯ ) ಜಿಲ್ಲೆ
  • ಕ್ರೀಡೆಯಿಂದ ದೈಹಿಕ & ಮಾನಸಿಕ ಆರೋಗ್ಯ ವೃದ್ಧಿ :ಡಾ.ತೇಜಸ್ವಿನಿ
    In (ರಾಜ್ಯ ) ಜಿಲ್ಲೆ
  • ಸೆ.2ರಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಸಚಿವ ರಾಯರೆಡ್ಡಿ ಹೇಳಿಕೆಗೆ ಡಾ.ಶಶಿಕಾಂತ ಪಟ್ಟಣ ಖಂಡನೆ
    In (ರಾಜ್ಯ ) ಜಿಲ್ಲೆ
  • ಕಲ್ಯಾಣ ಪಥಕ್ಕೆ ಗ್ರಹಣ: ಗಡುವು ಮುಗಿದರೂ ಮುಗಿಯದ ಕಾಮಗಾರಿ
    In (ರಾಜ್ಯ ) ಜಿಲ್ಲೆ
  • ಮಾಹಿತಿ ಹಕ್ಕು ಕಾಯ್ದೆ ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವಕ್ಕೆ ಪ್ರಮುಖ ಕಾಯ್ದೆ
    In (ರಾಜ್ಯ ) ಜಿಲ್ಲೆ
  • ೩೪ ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಸೆ.೨ ರಂದು ಶಿಶಿಕ್ಷು ಮೇಳಕ್ಕೆ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.