Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮುಲ್ಲಾ ಸಮುದಾಯದ ಕುರಿತು ರಾಜ್ಯ ಬಿಜೆಪಿ ಧುರೀಣ ಸಿ.ಟಿ. ರವಿ ಅವಹೇಳನಕಾರಿ ಹಾಗೂ ಅಗೌರವದ ಪದಗಳನ್ನು ಬಳಸಿ ಮಾತನಾಡಿರುವುದನ್ನು ಖಂಡಿಸಿ, ಅವರ ವಿರುದ್ಧ ಪ್ರತಿಭಟನೆ ಕೈಗೊಂಡು ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಮುಂದೆ ಮಂಗಳವಾರ ಸಭೆ ಸೇರಿ ಪ್ರತಿಭಟನೆ ಕೈಗೊಂಡರು. ಈ ಸಂದರ್ಭದಲ್ಲಿ ಜೆಡಿಎಸ್ ಧುರೀಣ ಮುನೀರ್ ಅಹ್ಮದ್ ಮಳಖೇಡ ಮಾತನಾಡಿ, ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆಗಳು ಸಮಾಜದಲ್ಲಿ ಸೌಹಾರ್ದತೆಯನ್ನು ಹಾಳುಮಾಡುತ್ತವೆ. ಸಾರ್ವಜನಿಕ ಜೀವನದಲ್ಲಿರುವವರು ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಮುಖಂಡರಾದ ಎ.ಡಿ.ಮುಲ್ಲಾ, ಇಮ್ತಿಯಾಜ್ ಮುಲ್ಲಾ ಮಾತನಾಡಿ, ಮುಸ್ಲಿಮ್ ಸಮುದಾಯ ವೈವಿಧ್ಯಮಯವಾಗಿದ್ದು ಇದರಲ್ಲಿ ಮುಲ್ಲಾ, ಸೈಯದ್,ಶೇಖ್, ಪಠಾಣ, ಪಿಂಜಾರ, ಬೇರಿ ಸಹಿತ ಹಲವು ಪಂಗಡಗಳಿವೆ. ಇವುಗಳನ್ನು ತಿಳಿಯದೇ ಕೇವಲ ಇಡೀ ಸಮುದಾಯದ ಕುರಿತು ಹೇಳಿಕೆ ನೀಡುವುದು ಸಮಂಜಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.ಪಟ್ಟಣ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಶಂಕರ ಜಮಾದಾರ ಮತಕ್ಷೇತ್ರದ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್‌ಎಸ್‌ಯುಐ)ದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ಎನ್‌ಜಿ ಅವರ ಸಮ್ಮತಿಯೊಂದಿಗೆ ಜಿಲ್ಲಾಧ್ಯಕ್ಷ ಕಿರಣಗೌಡ ಬಿರಾದಾರ ನೇಮಕಗೊಳಿಸಿದ್ದಾರೆ ಎಂದು ವಿಜಯಪುರ ಕಾಂಗ್ರೆಸ್ ಭವನದ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಜು.೩೦ ಗುರುವಾರದಿಂದ ಮೂರು ದಿನಗಳ ಕಾಲ ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಧಾರ್ಮಿಕ, ಸಾಮಾಜಿಕ ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿರುವ ಹಜರತ್ ಮತಾಬಷಹೀದ ಜಾತ್ರಾ ಮಹೋತ್ಸವ (ಉರುಸು)ನಡೆಯಲಿದೆ.ದಿನಾಂಕ ೩೦ ರಂದು ಗುರುವಾರ ಜಾತ್ರಾ ಮಹೋತ್ಸವದ ಅಂಗವಾಗಿ ಮುಕ್ತ ಕಬ್ಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದ್ದು, ಪ್ರಥಮ ೨೦೦೦೧ ರೂ, ೧೦೦೦೧ ದ್ವಿತೀಯ,೧೫೦೦೧ ರೂ. ತೃತೀಯ ಬಹುಮಾನ ೧೦೦೦೧ ನೀಡಲಾಗುವುದು. ರಾತ್ರಿ ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದ ಕಾಸೀವiಪಟೇಲ ಪೊಲೀಸ್ ಪಾಟೀಲ ಇವರಿಂದ ಧಾರ್ಮಿಕ ಕ್ರೀಯಾಚರಣೆಗಳಿಂದ ಸ್ಥಳೀಯ ಸಧ್ಭಕ್ತ, ಸರ್ವ ಸಮುದಾಯದೊಡನೆ ಗಂಧೋತ್ಸವ ನಡೆಯಲಿದೆ. ಅಂದೇ ರಾತ್ರಿ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ಜರುಗುವುದು. ರಾತ್ರಿ “ಕರ್ಮದ ಕೂಸಿಗೆ ಧರ್ಮದ ತೊಟ್ಟಿಲು” ಎಂಬ ಸಾಮಾಜಿಕ ನಾಟಕ ಜರುಗಲಿದೆದಿ:೩೧ ಶುಕ್ರವಾರದಂದು ದೀಪೋತ್ಸವ, ನೈವಿಧ್ಯ ಸಮರ್ಪಣೆ ನಂತರ ರಾತ್ರಿ ೧೦ ಘಂಟೆಗೆ ಅಪ್ಪಾಜಿ ಮೆಲೋಡಿಸ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.ದಿ:೧ ಶನಿವಾರದಂದು ಬಾಶೀದೀಪೋತ್ಸವ, ಕಾಯಿಕರ್ಪೂರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಪೂರ್ಣಗೊಳ್ಳಲಿವೆ. ಅದೇ ದಿನ ಬೆಳಿಗ್ಗೆ ಭಾರ ಎತ್ತುವ…

Read More

ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ​ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಆಗಸ್ಟ್ ೧೫ರಂದು ಆಯೋಜಿಸಲಾಗುವ ಸ್ವಾತಂತ್ರ‍್ಯ ದಿನಾಚರಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಹಾಗೂ ಅರ್ಥಪೂರ್ಣವಾಗಿ ನೆರವೇರಿಸಲು ಎಲ್ಲ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಬೇಕು ಮತ್ತು ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.​ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ವಾತಂತ್ರ‍್ಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಗಸ್ಟ್ ೧೫ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಅಭಿಷೇಕ ಸೆಹರಾ, ಅಪರ ಜಿಲ್ಲಾಧಿಕಾರಿ ಡಾ. ಓದ್ರಾಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸAಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದಲ್ಲಿ ವಾಸಿಸುವ ೧೨೦ಕ್ಕೂ ಅಧಿಕ ಮಾಜಿ ಸೈನಿಕರಿಗೆ ಬಹುದಿನಗಳಿಂದ ನಿರೀಕ್ಷಿತವಾಗಿದ್ದ ಸಮುದಾಯ ಭವನ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ಮಾಂಗಲ್ಯ ಭವನದ ಹಿಂಭಾಗದಲ್ಲಿ ನಿರ್ಮಾಣಗೊಳ್ಳಲಿರುವ ೨೦೨೫-೨೬ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಅಂದಾಜು ರೂ.೨೫ಲಕ್ಷ ವೆಚ್ಚದಲ್ಲಿ ಮಾಜಿ ಸೈನಿಕರ ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭವನವು ಮಾಜಿ ಸೈನಿಕರು ತಮ್ಮ ಸಭೆಗಳು, ಸಮಾರಂಭಗಳು, ಸಂಘದ ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಗೌರವ ಸಮಾರಂಭಗಳು ಹಾಗೂ ಇತರೆ ಸಾಮಾಜಿಕ ಚಟುವಟಿಕೆಗಳನ್ನು ಒಂದೇ ಸೂರಿನಡಿ ಆಯೋಜಿಸಲು ಅನುಕೂಲವಾಗಲಿದೆ. ಇದೀಗ ನಿರ್ಮಾಣವಾಗುತ್ತಿರುವ ಸಮುದಾಯ ಭವನದಿಂದ ಅವರ ಸಂಘಟನಾ ಚಟುವಟಿಕೆಗಳಿಗೆ ಹೊಸ ಉತ್ತೇಜನ ದೊರೆಯಲಿದೆ ಎಂದರು.ಈ ವೇಳೆ ಪೌರಾಯುಕ್ತ ರವಿ ಶಿರಗುಪ್ಪ, ವಿ.ಬಿ.ಕುರಡಿ, ಮುತ್ತು ಮುಂಡೇವಾಡಗಿ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಅಶೋಕ ಕೋಳಾರಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ ಯಳಮೇಲಿ, ಭೀಮನಗೌಡ ಗೋಲಗೇರಿ, ಶಾಂತು…

Read More

ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿಲಾಧರ ಎನ್. ಜಾಧವ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿಕ್ಷಣವೆಂದರೆ ಕೇವಲ ಅಂಕಗಳನ್ನು ಗಳಿಸುವುದಲ್ಲ. ಉತ್ತಮ ವ್ಯಕ್ತಿತ್ವ, ಮಾನವೀಯತೆ, ಶಿಸ್ತು ಹಾಗೂ ಸಮಾಜದ ಬಗ್ಗೆ ಕಾಳಜಿ ಬೆಳೆಸಿಕೊಳ್ಳುವುದೂ ಶಿಕ್ಷಣದ ಮುಖ್ಯ ಉದ್ದೇಶವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿಲಾಧರ ಎನ್. ಜಾಧವ ಹೇಳಿದರು.ಸಿಂದಗಿ ನಗರದ ಆರ್.ಡಿ. ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪಠ್ಯಪೂರಕ ಚಟುವಟಿಕೆಗಳು, ರೋವರ್ ಮತ್ತು ರೇಂಜರ್, ಭಾರತ ಸೇವಾದಳ ಹಾಗೂ ಎನ್.ಎಸ್.ಎಸ್. ಘಟಕಗಳ ಉದ್ಘಾಟನೆ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಮಹಾವಿದ್ಯಾಲಯವು ಪ್ರತಿವರ್ಷ ಉತ್ತಮ ಫಲಿತಾಂಶ ನೀಡುತ್ತಿದ್ದು, ಶಿಸ್ತು, ಸಂಸ್ಕಾರ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ಹೆಸರುವಾಸಿಯಾಗಿದೆ. ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ಹಾಗೂ ದೇಶದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.ಈ ವೇಳೆ…

Read More

ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ (ಜಮಖಂಡಿ): ನಿವೃತ್ತ ನೌಕರರ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳ ಕಡತ ವಿಲೇವಾರಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಜಮಖಂಡಿ ತಾಲೂಕು ಖಜಾನೆ ಕಚೇರಿಯ ತಾಲೂಕು ಖಜಾನಾಧಿಕಾರಿ ಎಸ್.ಎಸ್. ಬಿರಾದಾರ ಹಾಗೂ ಸಿಬ್ಬಂದಿ ವಿನಾಯಕ ಹೊನವಾಡ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಬೀಳಿಸಿ ವಶಕ್ಕೆ ಪಡೆದರು.ಚೇತನ ತರತರಿ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದರು. ದೂರಿನ ಪ್ರಕಾರ, ನಿವೃತ್ತ ನೌಕರರ ಪಿಂಚಣಿ ಮತ್ತು ಇತರೆ ನಿವೃತ್ತಿ ಸೌಲಭ್ಯಗಳನ್ನು ಮಂಜೂರು ಮಾಡಲು ಆರಂಭದಲ್ಲಿ ₹70 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಬಳಿಕ ₹40 ಸಾವಿರಕ್ಕೆ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ.ಫಿರ್ಯಾದಿದಾರರಿಂದ ₹40 ಸಾವಿರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು, ಹಣವನ್ನು ವಶಪಡಿಸಿಕೊಂಡರು. ಬಳಿಕ ಕಚೇರಿಯಲ್ಲಿ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡರು.ಈ ಕಾರ್ಯಾಚರಣೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿಯ ಉಗಮಸ್ಥಳ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ 25ನೇ ವರ್ಷದ ನಿರಂತರ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 100ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ಹಾಗೂ ಮುಖಂಡರು ಮಂಗಳವಾರ ಮಹಾಬಳೇಶ್ವರಕ್ಕೆ ಪ್ರಯಾಣ ಬೆಳೆಸಿದರು.ವಿಜಯಪುರ ನಗರದ ಹೊಸ ಪ್ರವಾಸಿ ಮಂದಿರದಿಂದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ ರೈತರ ತಂಡ ವಿಶೇಷ ವಾಹನಗಳಲ್ಲಿ ಹೊರಟಿತು.ಬುಧವಾರ ಮಹಾಬಳೇಶ್ವರದ ಪಂಚಗಂಗಾ ದೇವಸ್ಥಾನದಲ್ಲಿ ಕೃಷ್ಣಾ ಮಾತೆಗೆ ವಿಶೇಷ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ.ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯಿದ್ದರೂ ಪ್ರತಿವರ್ಷ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುವ ಮಳೆಯಿಂದ ಕೃಷ್ಣಾ ನದಿ ತುಂಬಿ ಹರಿದು ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ಜನರು ಮತ್ತು ರೈತರ ಬದುಕಿಗೆ ಜೀವಜಲ ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ಮಾತೆಯ ಮೇಲಿನ ಕೃತಜ್ಞತೆಯ ಸಂಕೇತವಾಗಿ ಕಳೆದ 25 ವರ್ಷಗಳಿಂದ ಈ ಪೂಜೆ ನಿರಂತರವಾಗಿ ನಡೆಯುತ್ತಿದೆ.ಈ ವರ್ಷದ…

Read More

ಲೇಖನ- ಶ್ರೀ ಪ್ರಶಾಂತ ಕುಲಕರ್ಣಿ.ಉಪನ್ಯಾಸಕರುಶ್ರೀ ಪದ್ಮರಾಜ ಬಿ.ಇಡಿ ಕಾಲೇಜ್ಸಿಂದಗಿ. ವಿಜಯಪುರ ಜಿಲ್ಲೆPh :9845442237 ಉದಯರಶ್ಮಿ ದಿನಪತ್ರಿಕೆ “ಗುರು ಬ್ರಹ್ಮಾ ಗುರು ವಿಷ್ಣುಃ ಗುರು ದೇವೋ ಮಹೇಶ್ವರಃ।ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ॥” ಭಾರತೀಯ ಸಂಸ್ಕೃತಿಯು ವಿಶ್ವಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಳಲ್ಲಿ ಗುರು-ಶಿಷ್ಯ ಪರಂಪರೆ ಅತ್ಯಂತ ಶ್ರೇಷ್ಠವಾದುದು. ಜ್ಞಾನವನ್ನು ದೇವತ್ವದ ಮಟ್ಟಕ್ಕೇರಿಸಿದ ಸಂಸ್ಕೃತಿ ಜಗತ್ತಿನಲ್ಲಿ ವಿರಳ. ಭಾರತದಲ್ಲಿ ಜ್ಞಾನವು ಕೇವಲ ಮಾಹಿತಿಯ ಸಂಗ್ರಹವಲ್ಲ; ಅದು ಜೀವನವನ್ನು ರೂಪಿಸುವ ಸಾಧನ. ಆ ಜ್ಞಾನಕ್ಕೆ ದಾರಿದೀಪವಾಗುವವನೇ ಗುರು. ಆದ್ದರಿಂದಲೇ ಭಾರತೀಯರು ಗುರುವನ್ನು ದೇವರ ಸಮಾನವಾಗಿ ಮಾತ್ರವಲ್ಲ, ದೇವರಿಗಿಂತಲೂ ಶ್ರೇಷ್ಠನೆಂದು ಗೌರವಿಸಿದ್ದಾರೆ. ದೇವರು ನಮ್ಮನ್ನು ಸೃಷ್ಟಿಸಿದರೆ, ಗುರು ನಮ್ಮನ್ನು ರೂಪಿಸುತ್ತಾನೆ; ತಾಯಿಯು ಜನ್ಮ ನೀಡಿದರೆ, ಗುರು ಬದುಕಿನ ಅರ್ಥವನ್ನು ತಿಳಿಸುತ್ತಾನೆ; ತಂದೆಯು ಕೈ ಹಿಡಿದು ನಡೆಯಲು ಕಲಿಸಿದರೆ, ಗುರು ಜೀವನದ ಹಾದಿಯಲ್ಲಿ ದೃಢವಾಗಿ ನಡೆಯಲು ಕಲಿಸುತ್ತಾನೆ. ಅಜ್ಞಾನದ ಅಂಧಕಾರವನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಹಚ್ಚುವ ಶಕ್ತಿ ಗುರುದಲ್ಲಿದೆ. ಆಷಾಢ ಮಾಸದ ಪೌರ್ಣಿಮೆಯಂದು ಆಚರಿಸಲಾಗುವ…

Read More

ಲೇಖನ- ಅವಿನಾಶ ಸೆರೆಮನಿ.ಬೈಲಹೊಂಗಲ ಉದಯರಶ್ಮಿ ದಿನಪತ್ರಿಕೆ ಅಕ್ಷರಗಳ ಮೂಲಕ ವಿದ್ಯೆಯನು ಪರಿಚಯಿಸುತ ಅಜ್ಞಾನದ ಕತ್ತಲೆ ಅಳಿಸಿ ಜ್ಞಾನವ ಧಾರೆ ಎರೆಯುವ ನಿಸ್ವಾರ್ಥ ಜೀವಿ ಅರಿವಿನ ಬೆಳಕನು ಸದಾ ನಮ್ಮೊಳಗೆ ಬೆಳಗುತ ಸಂತೃಪ್ತ ಬದುಕಿಗೆ ದೇವರ ಪ್ರತಿರೂಪಿಯಾಗಿ ಸದಾ ಮಾರ್ಗದರ್ಶನ ಮಾಡುತ್ತ ತಪ್ಪಿದಾಗ ತಿದ್ದಿ ಬುದ್ದಿಯ ಹೇಳಿ ಮುನ್ನಡೆಸುವ ಮಹಾನ್ ಶಕ್ತಿಯೇ ಗುರು. ತಾಯಿಯು ನಮಗೆ ಜನ್ಮ ನೀಡಿದರೆ ಗುರುವು ಬದುಕಿಗೆ ಜನ್ಮ ನೀಡುತ್ತಾರೆ ಎಂಬುದು ಅಕ್ಷರಶ:ಸತ್ಯಗುರುವಿಲ್ಲದ ಬದುಕು ದಿಕ್ಕಿಲ್ಲದ ದೋಣಿಯಂತೆ ಗುರುವು ಜೊತೆಗಿದ್ದರೆ ದೀಪದ ಬೆಳಕಿನಲಿ ಸಾಗುವ ಪಯಣದಂತೆ ಎಂಬ ಸಾಲುಗಳು ಬದುಕಿನಲ್ಲಿ ಗುರುವಿನ ಮಹತ್ವವನ್ನು ಸಾರಿ ಹೇಳುತ್ತವೆ. ಶಾಲೆಯ ಮೆಟ್ಟಿಲೆರುವಾಗ ಮನಸು ಖಾಲಿ ಖಾಲಿ. ದಿನಗಳು ಕಳೆದಂತೆ ಪ್ರತಿದಿನ ಒಂದೊಂದೇ ಅಕ್ಷರಗಳನ್ನು ಕಲಿಸುತ ನಮ್ಮೊಳಗೆ ಜ್ಞಾನದ ಬೀಜವನ್ನು ಬಿತ್ತುತ್ತಾರೆ.ಈ ಅಕ್ಷರಗಳೆ ಕನಸುಗಳಿಗೆ ರೆಕ್ಕೆಗಳಾಗಿ ಸುಂದರ ಬದುಕಿಗೆ ದಾರಿದೀಪವಾ ಗುತ್ತವೆ.ಏನು ಅರಿಯದ ಮನಸೊಳು ತಮ್ಮಯ ಕರ ಸ್ಪರ್ಶದಿಂದ ವಿದ್ಯೆಯನು ಕರುಣಿಸಿ ತಮ್ಮ ಮಕ್ಕಳಿಗಿಂತ ಹೆಚ್ಚು ಕಾಳಜಿ ವಹಿಸಿ ಇಡೀ ಬದುಕನ್ನು ನಮಗಾಗಿ…

Read More