Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನಿವೇದಿತಾ ಶಾಲಾವರಣದಲ್ಲಿ 100 ಸಸಿಗಳ ನೆಡುವಿಕೆಗೆ ಚಾಲನೆ

ವಿತರಕರಿಂದ ಎಲ್‌ಪಿಜಿ ಸಿಲಿಂಡರ್‌ಗೆ ಹೆಚ್ಚುವರಿ ಶುಲ್ಕ ವಸೂಲಿ

ಪ್ರಕೃತಿ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳಿ :ಬೆಳ್ಳುಬ್ಬಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಇತರರಿಗೆ ಆಸರೆಯಾಗಿ ಬದುಕದಿದ್ದರೆ ಅದು ನಶ್ವರದ ಬದುಕು
(ರಾಜ್ಯ ) ಜಿಲ್ಲೆ

ಇತರರಿಗೆ ಆಸರೆಯಾಗಿ ಬದುಕದಿದ್ದರೆ ಅದು ನಶ್ವರದ ಬದುಕು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕಲ್ಶಾಣದೇಶ್ವರ ಜಾತ್ರೆ | ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ | ಮಾಗಣಗೇರಿಯ ಏಕಾಕ್ಷರ ಶಿವಾಚಾರ್ಯ ಅಭಿಮತ

ಉದಯರಶ್ಮಿ ದಿನಪತ್ರಿಕೆ

ಸಿಂದಗಿ: ಮಾನವ ಇತರರಿಗೆ ಆಸರೆಯಾಗಿ ಬದುಕಬೇಕು. ಇತರರಿಗೆ ಬೇಸರವಾಗುವಂತಿದ್ದರೆ ಅದು ನಶ್ವರದ ಬದುಕಾಗಿರುತ್ತದೆ ಎಂದು ಯಡ್ರಾಮಿ ತಾಲೂಕಿನ ಸುಕ್ಷೇತ್ರ ಮಾಗಣಗೇರಿಯ ರುದ್ರಮುನೇಶ್ವರ ಹಿರೇಮಠದ ಪಟ್ಟಾಧ್ಶಕ್ಷ ಏಕಾಕ್ಷರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿಂದಗಿ ತಾಲೂಕಿನ ಸುಕ್ಷೇತ್ರ ಹೊನ್ನಳ್ಳಿ ಬ್ರಹ್ಮದೇವನಮಡು ಗ್ರಾಮದ ಕಲ್ಯಾಣದೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡ ಶ್ರೀದೇವಿ ಹಾಗೂ ೩೫೧ ಮುತೈದಿಯರಿಗೆ ಉಡಿ ತುಂಬುವ ಕಾಯಕ್ರಮದಲ್ಲಿ ಸಮ್ಮುಖ ವಹಿಸಿ ಮಾತನಾಡಿದ ಅವರು, ಮಾನವನ ಜನ್ಮದಿಂದ ಜಗತ್ತಿಗೆ ಉಪಯೋಗವಾಗಬೇಕು. ಇದಕ್ಕೆ ನಿದರ್ಶನವೇ ಶ್ರೀಮಠದ ಲಿಂಗೈಕ್ಯ ವೀರಘಂಟಯ್ಶ ಸ್ವಾಮೀಜಿ. ಇವರ ಸತ್ಯ ಸನ್ಮಾರ್ಗವು ಮನುಕುಲಕ್ಕೆ ದಾರಿದೀಪವಾಗಿದೆ. ಸಂಪತ್ತಿನ ಬೆನ್ನು ಹತ್ತದೇ ಸದ್ವಿಚಾರಗಳು, ನಡೆ ನುಡಿಯಲ್ಲಿ ಭಿನ್ನವಿಲ್ಲದಂತೆ ಬದುಕಿದ್ದೇ ಆದಲ್ಲಿ ದೈವಾನುಗ್ರಹ ಸದಾ ಇರುತ್ತದೆ. ವಿಕೃತಿಯಾಗಿ ಯಾರು ಬದುಕುತ್ತಾರೋ ಅವರು ಮಣ್ಣಲ್ಲಿ ಮಣ್ಣಾಗುತ್ತಾರೆ. ಇಂತಹ ಬದುಕು ನಿರರ್ಥಕವಾಗಿರುತ್ತದೆ. ಈ ಬದುಕು ಎಂಬ ಮೂರಕ್ಷರದ ಪದಕ್ಕೆ ಸದ್ಗುರುವಿನ ಆಶೀರ್ವಾದ ಇರಬೇಕು. ಭಕ್ತ ವೃಂದವು ಸತ್ಸಂಗದಲ್ಲಿ ನಿರತರಾಗಿರಬೇಕು. ವಿಕೃತಿ ಬದುಕು ತ್ಯಜಿಸಿ ಸುಸಂಸ್ಕೃತ ಬದುಕು ಸಾಗಿಸುವುದು ಅಗತ್ಯವಾಗಿದೆ ಎಂದರು.
ಈ ವೇಳೆ ಯಂಕಂಚಿ ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮಾನವೀಯತೆ ನಶಿಸುತ್ತಿದೆ. ಹಿರಿಯರನ್ನು ಅಗೌರವದಿಂದ ಕಾಣುವ ಮನುಷ್ಯರೇ ಹೆಚ್ಚಾಗುತ್ತಿದ್ದಾರೆ. ಪೂಜ್ಯನೀಯ ತಂದೆ ತಾಯಿಯರನ್ನು ಗೌರವಿಸುವವರೇ ಪುಣ್ಯವಂತರಾಗುತ್ತಾರೆ. ಪ್ರಾಣಿ ಪ್ರೀತಿಯ ಜೊತೆಗೆ ಮಾನವ ಸಂಬಂಧಗಳಿಗೂ ಬೆಲೆ ಇರಬೇಕು. ಹಿರಿಯರನ್ನು ವೃದ್ಧಾಶ್ರಮಕ್ಕೆ ಕಳಿಸುವ ದುಸ್ಥಿತಿ ಯಾರಿಗೂ ಬರಬಾರದು. ಭಕ್ತರು ಸದಾ ಶ್ರೀಮಠದ ಮೇಲೆ ಕಾಳಜಿ ಸೇವಾ ಮನೋಭಾವ ಹೊಂದಬೇಕು. ಸದ್ಗುಣಗಳಿಂದ ಜೀವನ ನಡೆಸುವ ಪ್ರತಿಯೋರ್ವರಿಗೂ ಗುರುವಿನ ಕೃಪಕಟಾಕ್ಷ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಚಾಮನಾಳದ ಗುರಣ್ಣಸಾಹು ಅಂಗಡಿ ದಂಪತಿಗಳ ಹಾಗೂ ಪತ್ರಕರ್ತ ಮಲ್ಲಿಕಾರ್ಜುನ ಕೆಂಭಾವಿ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ೩೫೧ಕ್ಕೂ ಅಧಿಕ ಮುತೈದೆಯರಿಗೆ ಉಡಿ ತುಂಬಲಾಯಿತು.
ಈ ವೇಳೆ ಶ್ರೀಮಠದ ಒಡೆಯ ಕಲ್ಯಾಣದಯ್ಯ ವೀರಘಂಟಯ್ಶ ಗದ್ದುಗೆಮಠ ಸ್ವಾಮೀಜಿ, ರಾಜೇಶ್ರೀ ಅಮ್ಮನವರು, ಚನ್ನಮಲ್ಲಯ್ಶ ಹಿರೇಮಠ, ಸೋಮನಗೌಡ ಚಿಂಚೊಳ್ಳಿ, ಶಿವುಸಾಹ ಅಂಗಡಿ, ಪ್ರವಚನಕಾರ ಡಾ.ಶಿವಲಿಂಗಯ್ಶ ಶರಣರು ಪುರಾಣಿಕಮಠ, ಶಹಾಪೂರ ಮನಗೂಳಿ ಆಸ್ಪತ್ರೆಯ ಡಾ.ಶಂಭುಲಿಂಗ ಮನಗೂಳಿ, ಮಲ್ಹಾರಾವ್ ಕುಲಕರ್ಣಿ, ಗುರುಲಿಂಗಪ್ಪಸಾಹು ಸಜ್ಜನ, ಎಸ್.ವೈ.ಅಮರಗೋಳ, ಪವನ ಕುಲಕರ್ಣಿ ಚಾಮನಾಳ, ಅರವಿಂದಸಾಹು ಕುರಳಗೇರಾ ಸೇರಿದಂತೆ ಹಲವರಿದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನಿವೇದಿತಾ ಶಾಲಾವರಣದಲ್ಲಿ 100 ಸಸಿಗಳ ನೆಡುವಿಕೆಗೆ ಚಾಲನೆ

ವಿತರಕರಿಂದ ಎಲ್‌ಪಿಜಿ ಸಿಲಿಂಡರ್‌ಗೆ ಹೆಚ್ಚುವರಿ ಶುಲ್ಕ ವಸೂಲಿ

ಪ್ರಕೃತಿ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳಿ :ಬೆಳ್ಳುಬ್ಬಿ

ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ :ಹರ್ಷಾನಂದ ಶ್ರೀ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನಿವೇದಿತಾ ಶಾಲಾವರಣದಲ್ಲಿ 100 ಸಸಿಗಳ ನೆಡುವಿಕೆಗೆ ಚಾಲನೆ
    In (ರಾಜ್ಯ ) ಜಿಲ್ಲೆ
  • ವಿತರಕರಿಂದ ಎಲ್‌ಪಿಜಿ ಸಿಲಿಂಡರ್‌ಗೆ ಹೆಚ್ಚುವರಿ ಶುಲ್ಕ ವಸೂಲಿ
    In (ರಾಜ್ಯ ) ಜಿಲ್ಲೆ
  • ಪ್ರಕೃತಿ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳಿ :ಬೆಳ್ಳುಬ್ಬಿ
    In (ರಾಜ್ಯ ) ಜಿಲ್ಲೆ
  • ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ :ಹರ್ಷಾನಂದ ಶ್ರೀ
    In (ರಾಜ್ಯ ) ಜಿಲ್ಲೆ
  • ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಪತ್ರಕರ್ತ ಫಿರೋಜ್
    In (ರಾಜ್ಯ ) ಜಿಲ್ಲೆ
  • ಸ್ವಚ್ಚತಾ ಕಾರ್ಯದೊಂದಿಗೆ ಸಸಿ ನೆಟ್ಟು ಪರಿಸರ ರಕ್ಷಣೆಗೆ ಮುಂದಾಗಿ
    In (ರಾಜ್ಯ ) ಜಿಲ್ಲೆ
  • ಪ್ರತಿಯೊಬ್ಬರು ಮನೆಗೊಂದು ಮರ ಬೆಳೆಸಬೇಕು :ರಮೇಶ
    In (ರಾಜ್ಯ ) ಜಿಲ್ಲೆ
  • ಹಸಿರೀಕರಣಕ್ಕೆ ಕೆಬಿಜೆಎನ್‌ಎಲ್ ಕೊಡುಗೆ ಶ್ಲಾಘನೆ
    In (ರಾಜ್ಯ ) ಜಿಲ್ಲೆ
  • ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ :ಪ್ರಾಚಾರ್ಯ ಸಜ್ಜನ
    In (ರಾಜ್ಯ ) ಜಿಲ್ಲೆ
  • ಪರಿಸರ ರಕ್ಷಣೆಗಾಗಿ ಪಣ ತೊಡೋಣ :ನ್ಯಾ.ಕಾಂಬಳೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.