Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಮ್ ಪಿಟ್ನೆಸ್ ಮತ್ತು ನಿರೂಪಣಾ ಮತ್ತು ವಾರ್ತಾ ವಾಚಕ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ೧೫ ದಿನಗಳ ಜಿಮ್ ತರಬೇತಿ ಇದ್ದು, ಜನೆವರಿ ೨೭ರಿಂದ ಫೆಬ್ರವರಿ ೧೦ರ ವರೆಗೆ ನಡೆಯಲಿದೆ. ದ್ವೀತೀಯ ಪಿ.ಯು.ಸಿ ಪಾಸ್/ಫೇಲ್ ಆದ ೧೮ವರ್ಷದಿಂದ ೪೦ ವರ್ಷದೊಳಗಿನ ಪ.ಜಾತಿ ಯುವಕ/ ಯುವತಿಯರು ಅರ್ಜಿಗಳನ್ನು ಸಲ್ಲಿಸಬಹುದು. ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿ ನಡೆಯಲಿದೆ.ನಿರೂಪಣಾ ಮತ್ತು ವಾರ್ತಾ ವಾಚಕ ತರಬೇತಿ ಅರ್ಜಿ ಸಲ್ಲಿಸಬಯಸುವವರು ದಿನಾಂಕ ೧೧ ಫೆಬ್ರವರಿಯಿಂದ ೧೮ ಫೆಬ್ರವರಿ ವರೆಗೆ ೮ ದಿನಗಳ ತರಬೇತಿ ನಡೆಯಲಿದೆ. ದ್ವೀತೀಯ ಪಿ.ಯು.ಸಿ ತೇರ್ಗಡೆ ಹೊಂದಿದ ೧೮ವರ್ಷದಿಂದ ೪೦ ವರ್ಷದೊಳಗಿನ ಪ.ಜಾತಿ ಯುವಕ/ ಯುವತಿಯರು ಅರ್ಜಿಗಳನ್ನು ಸಲ್ಲಿಸಬಹುದು. ಯುವನಿಕ ಸಭಾಂಗಣ ಆಯುಕ್ತರ ಕಚೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಯುವ ಕೇಂದ್ರ ನೃಪತುಂಗ ರಸ್ತೆ ಬೆಂಗಳೂರು ಇಲ್ಲಿ ತರಬೇತಿ ನಡೆಯಲಿದೆ.ಆಸಕ್ತರು ಜನವರಿ ೨೩ರ ಸಾಯಂಕಾಲ ೫ಗಂಟೆ ವರೆಗೆ ಅರ್ಜಿಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ೨೦೨೩ರ ಜ.೧ ರಿಂದ ೨೦೨೫ ಫೆ.೮ರ ವರೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಸೇನಾ ಸಿಬ್ಬಂದಿ ಮತ್ತು ಮಾಜಿ ಸೈನಿಕರ ಅವಲಂಬಿತ ಮಕ್ಕಳಿಗೆ ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಾಖಲಾತಿಗಳನ್ನು ಭರ್ತಿ ಮಾಡಿ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. ೦೮೩೫೨-೨೫೦೯೧೩ಗೆ ಸಂಪರ್ಕಿಸಬಹದು ಎಂದು ಪ್ರಕಟಣೆ ತಿಳಿಸಿದೆ.

Read More

ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಸೊಮಲಿಂಗ ಗೆಣ್ಣೂರು ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜಕ್ಕೆ ಅಂಟಿಕೊಂಡಂತಹ ರೋಗಗಳ ನಾಶಕ್ಕೆ ಅಂಬಿಗರ ಚೌಡಯ್ಯರ ವಚನಗಳು ಮದ್ದುಗಳಾಗಿದ್ದವು ಎಂದು ಅಪರ ಜಿಲ್ಲಾಧಿಕಾರಿ ಸೊಮ್ಮಲಿಂಗ ಗೆಣ್ಣೂರು ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳನ್ನು ನೇರ, ನಿಷ್ಠುರವಾಗಿ ತಮ್ಮ ವಚನಗಳಲ್ಲಿ ಅಂಬಿಗರ ಚೌಡಯ್ಯನವರು ಹೇಳಿ ಸಮಾಜಕ್ಕೆ ಬೆಳಕಾಗಿದ್ದಾರೆ. ಮೂಡನಂಬಿಕೆಗಳು ಸಮಾಜಕ್ಕೆ ಆಘಾತಕಾರಿ ಅಂತಹ ಮೂಡನಂಬಿಕೆಗಳ ವಿರುದ್ಧ ನೇರವಾಗಿ ಮಾತನಾಡಿದ ಶಿವಶರಣ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದಿನ ಸಮಾಜದಲ್ಲಿನ ಮೌಢ್ಯಗಳ ನಿರ್ಮೂಲನೆಗಾಗಿ ಶ್ರಮಿಸಿದವರು. ಮಹಿಳೆಯರು ಮತ್ತು ಪುರುಷ ಸಮಾನರೆಂದು ಪ್ರತಿಪಾದಿಸಿದ ತತ್ವನಿಷ್ಟ ಶ್ರೇಷ್ಟ ತತ್ವಜ್ಞಾನಿ, ವಚನಕಾರರಾಗಿದ್ದರು. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು.ನಿಜ ಶರಣ ಅಂಬಿಗರ ಚೌಡಯ್ಯ ಅವರ ಕುರಿತು ಸಾಹಿತಿ…

Read More

25 ಅಡಿ ಎತ್ತರದ ಬಾಪೂಜಿಯ ಕಂಚಿನ ಪುತ್ಥಳಿ | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆ | ವಿಪಕ್ಷ ನಾಯಕ ರಾಹುಲ್ ಗಾಂಧಿ ಗೈರು ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಸುವರ್ಣ ವಿಧಾನಸೌಧ ಮುಂದೆ ಮಹಾತ್ಮ ಗಾಂಧೀಜಿ ಕಂಚಿನ ಪುತ್ಥಳಿ ಅನಾವರಣಗೊಂಡಿತು.25 ಅಡಿ ಎತ್ತರದ ಬಾಪೂಜಿ ಪುತ್ಥಳಿಯನ್ನು ಚರಕ ನೇಯ್ಯುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದರು.ಈ ವೇಳೆ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ವಿಧಾನಸಭೆ ಸಭಾಧ್ಯಕ್ಷ ಯು.ಟಿ‌. ಖಾದರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ‌. ವೇಣುಗೋಪಾಲ್, ರಣದೀಪ ಸಿಂಗ್ ಸುರ್ಜೇವಾಲ, ಸಚಿವರಾದ ಹೆಚ್.ಕೆ. ಪಾಟೀಲ, ಡಾ. ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅನಾರೋಗ್ಯದಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಗಾಂಧೀಜಿ ಪ್ರತಿಮೆ ಉದ್ಘಾಟನೆ ಆಗುತ್ತಿದ್ದಂತೆ ಇತ್ತ ಸುವರ್ಣಸೌಧದ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ರಂಗದ ಬ್ಯಾಂಕುಗಳು, ಸಹಕಾರಿ ಸಂಘಗಳು, ಫೈನಾನ್ಸ್ ಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪಿಎಸ್ಐ ಅಮೋಜ್ ಕಾಂಬ್ಳೆ ಹೇಳಿದರು.ಪಟ್ಟಣದ ಪೋಲೀಸ್ ಠಾಣೆಯಲ್ಲಿ ಸೋಮವಾರ ಸಾಯಂಕಾಲ ಸಾರ್ವಜನಿಕ ಸ್ವಾಮ್ಯದ ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ ಬೀದರ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಹಾಗೂ ಮಂಗಳೂರಿನ ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್​ ದರೋಡೆ ಪ್ರಕರಣಗಳು ರಾಜ್ಯವನೇ ಬೆಚ್ಚಿಬೀಳಿಸುವಂತೆ ಮಾಡಿದ್ದು. ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕ ಸುರಕ್ಷತೆ ಅಧಿನಿಯಮ -2017 ಅಡಿಯಲ್ಲಿ ಬ್ಯಾಂಕುಗಳು, ಸಹಕಾರಿ ಸಂಘಗಳು ಫೈನಾನ್ಸ್ ಗಳ ಮುಖ್ಯಸ್ಥರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದವರು, ಗ್ರಾಹಕರ ಹಿತರಕ್ಷಣೆಗೆ ತರಬೇತಿ ಹೊಂದಿದ ಶಸ್ತ್ರ ಸಜ್ಜಿತ ಹಗಲು ರಾತ್ರಿ ಕಾವಲು ಕರ್ತವ್ಯ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ಡಿವಿಆರ್, ಸಿಸಿಟಿವಿ, ಸೈರನ್, ಸ್ಟ್ರಾಂಗ್ ರೂಮ್, ಹೆಚ್ಡಿಸಿಸಿ ಕ್ಯಾಮೆರಾ, ನೋಟಿಸ್ ಬೋರ್ಡ್, ಇತ್ಯಾದಿ ಸೌಲಭ್ಯಗಳನ್ನು ಅಳವಡಿಸಿಕೊಂಡು ಮುಂದೆ ಆಗಬಹುದಾದ ಅನಾಹುತಗಳ ತಪ್ಪಿಸುವಲ್ಲಿ…

Read More

ಕರ್ನಾಟಕ ನಾಮಕರಣ ಸುರ್ವಣ ಮಹೋತ್ಸವ ಸ್ಮರಣೆ | ಕವಿಗೋಷ್ಠಿ | ಕಾವ್ಯಗಾಯನ | ನೃತ್ಯ ನಮನ | ಸುವರ್ಣಸಿರಿ ಸಮ್ಮಾನ ಉದಯರಶ್ಮಿ ದಿನಪತ್ರಿಕೆ ಧಾರವಾಡ: ಪಂ.ಪುಟ್ಟರಾಜ ಗವಾಯಿಗಳ ಆಶಯದಂತೆ ಸಂಗೀತ, ಸಾಹಿತ್ಯ ಸೇವೆ ನಿರಂತರವಾಗಿ ನಡೆಸುತ್ತಾ, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿ ಕೊಟ್ಟು, ಅವರ ಕಲಾಪ್ರದರ್ಶನ ಸಾರ್ವತ್ರಿಕ ಗೊಳಿಸುತ್ತಿರುವ ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯ ನಾಡ ನುಡಿಯ ಸೇವೆ ಅನನ್ಯ ಎಂದು ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಡಾ. ಬಸವರಾಜ ದೇವರು ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಮನ್ಸೂರ ಗ್ರಾಮದ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಠದ ಸಭಾಭವನದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಜೊತೆಯಾಗಿ ಹಮ್ಮಿಕೊಂಡಿದ್ದ ಕರ್ನಾಟಕ ನಾಮಕರಣ ಸುರ್ವಣ ಮಹೊತ್ಸವ ಸ್ಮರಣೆಯಲ್ಲಿ ಹೆಸರಾಯಿತು ಕರ್ನಾಟಕ ಕವಿಗೋಷ್ಠಿ, ಕಾವ್ಯಗಾಯನ, ನೃತ್ಯ ನಮನ ಮತ್ತು ಸುವರ್ಣಸಿರಿ ಸಮ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಹೆಸರಾಯಿತು ಕರ್ನಾಟಕ ಉಪನ್ಯಾಸ ನೀಡಿದ ಸುರೇಶ ಕಡೆಮನಿಯವರು, ಕನ್ನಡ ಭಾಷೆಯ ಪ್ರಾಚೀನತೆ,ಇತಿಹಾಸ ಕರ್ನಾಟಕ ಏಕೀಕರಣದ ಹೋರಾಟ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಇಟ್ಟಂಗಿ ಭಟ್ಟಿಯ ಕೂಲಿ ಕಾರ್ಮಿಕರ ಮೇಲೆ ಅಮಾನವೀಯವಾಗಿ ಹಿಂಸೆ ಮಾಡಿರುವ ಕೃತ್ಯ ಸಮಾಜ ವಿರೋಧಿಯಾಗಿದೆ. ಕೂಲಿ ಕಾರ್ಮಿಕರ ಮೇಲೆ ಹಿಂಸೆ ಮಾಡಿರುವ ದುರುಳರನ್ನು ಪೊಲೀಸ್ ಇಲಾಖೆ ಅತ್ಯಂತ ಕಠಿಣ ಶಿಕ್ಷೆ ಒಳಪಡಿಸಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿಎಸ್ಎಸ್ ಮುಖಂಡ ಶರಣು ಶಿಂಧೆ ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು ಸಮಾಜದಲ್ಲಿ ಗೂಂಡಾ ವರ್ತನೆ ತಾಂಡವಾಡುತ್ತಿದೆ. ಹೊಟ್ಟೆಪಾಡಿಗಾಗಿ ಅಲೆದಾಡುತ್ತಿರುವ ಕೂಲಿ ಕಾರ್ಮಿಕರ ಮೇಲೆ ಈ ರೀತಿ ದೌರ್ಜನ್ಯ ಮಾಡುತ್ತಿರುವುದು ಯಾವ ನ್ಯಾಯ. ಅವರು ತಪ್ಪು ಮಾಡಿದ್ದರೆ ಅದನ್ನ ತಿಳಿ ಹೇಳುವಲ್ಲಿ ಮುಂದಾಗಬೇಕು ಹೊರತು ಕೂಲಿ ಕಾರ್ಮಿಕರು ಎಂದು ಅವರ ಮೇಲೆ ಹೀನ ಕೃತ್ಯ ಮಾಡುವುದು ಸಮಾಜದ ವಿರೋಧಿ ಕಾರ್ಯ ಮತ್ತು ಇದು ದೊಡ್ಡ ಅಪರಾಧ. ಕಾರ್ಮಿಕರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ ತಕ್ಷಣವೇ ವಿಜಯಪುರ ಗ್ರಾಮೀಣ ಪೊಲೀಸ್ ಇಲಾಖೆಯವರು ಅಪರಾದಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಇದನ್ನು ದಲಿತ ಸಂಘರ್ಷ…

Read More

ವಿವಿಧ ಇಲಾಖೆಯ ಹಾಸ್ಟೇಲ್ & ವಸತಿ ಶಾಲಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದರಣಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ , ಕ್ರೈಸ್ ವಸತಿ ನಿಲಯಗಳಲ್ಲಿ ಹಾಸ್ಟೇಲ್ & ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿಯನ್ನು ಕರ್ನಾಟಕ ರಾಜ್ಯ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ಈ ಅಹೋರಾತ್ರಿ ಹೋರಾಟವು ೩ನೇ ದಿನಕ್ಕೆ ಮುಂದುವರೆದಿದೆ.ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, ೧೫೦೦ ಜನ ಹೊರಗುತ್ತಿಗೆ ನೌಕರರು ಕಳೆದ ೧೫- ೨೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರಿಗೆ ಯಾವದೇ ಸೇವಾ ಭದ್ರತೆ ಇಲ್ಲಾ, ಇವರ ಸ್ಥಳಗಳಲ್ಲಿ ಖಾಯಂ ನೌಕರರ ವರ್ಗಾವಣೆ ಯಾದರೆ, ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಈ ನೌಕರರು ಮುಂದಿನ ದಿನಗಳಲ್ಲಿ ತಮ್ಮ ಬದುಕು ಒಳ್ಳೆಯದಾಗಬಹುದೆಂದು ನಂಬಿ ೫೦೦ ರುಪಾಯಿಯಿಂದ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನಾಟಕಗಳು ಬದುಕಿನ ಎಲ್ಲ ಮೌಲ್ಯಗಳನ್ನು ಬಿತ್ತುತ್ತವೆ. ಪ್ರತೀ ನಾಟಕಗಳು ಜನತೆಗೆ ಒಂದು ಹೊಸದಾದ ದಿವ್ಯ ಸಂದೇಶವನ್ನು ಕೊಡುತ್ತವೆ ಎಂದು ಕುಂಟೋಜಿ ಸಂಸ್ಥಾನ ಬಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.ಪಟ್ಟಣದ ಹುಡ್ಕೋ ಬಡಾವಣೆಯ ಗವಿಸಿದ್ದೇಶ್ವರ ವೇದಿಕೆಯಲ್ಲಿ ವಿಶ್ವ ದಾಸೋಹದ ದಿನಾಚರಣೆಯ ಅಂಗವಾಗಿ ಹಾನಗಲ್ಲನ ಲಿಂ.ಕುಮಾರೇಶ್ವರ ಮಹಾಸ್ವಾಮಿಗಳು, ಸಿದ್ಧಗಂಗಾಮಠದ ಲಿಂ.ಶಿವಕುಮಾರ ಮಹಾಸ್ವಾಮಿಗಳು, ತಾಲೂಕಿನ ಮಡಿಕೇಶ್ವರ ಗ್ರಾಮದ ಲಿಂ.ಚನ್ನಣ್ಣ ದೇಸಾಯಿ ಅವರ ಪುಣ್ಯ ಸ್ಮರಣೋತ್ಸವದ ನೆನಪಿನಲ್ಲಿ ಸಾಣೆಹಳ್ಳಿ ಶಿವಸಂಚಾರ ನಾಟಕೋತ್ಸವದ ವತಿಯಿಂದ ಪ್ರಾರಂಭವಾದ ಮೂರು ದಿನಗಳ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಒಳ್ಳೆಯ ನಾಟಕಗಳನ್ನು ನೋಡಿ ಅದರಲ್ಲಿನ ಬದುಕಿನ ಪಾಠಗಳನ್ನು, ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಹಸನಾಗಿರುತ್ತದೆ ಎನ್ನುತ್ತ, ಮೊದಲನೇ ದಿನದ ನಾಟಕ ನಾಟಕದ ಹೆಸರು ಬಂಗಾರದ ಮನುಷ್ಯ. ಲಿಂ.ಚನ್ನಣ್ಣ ದೇಸಾಯಿ ಅವರ ವ್ಯಕ್ತಿತ್ವ ಬಂಗಾರದ ಮನುಷ್ಯರ ತರವೇ ಆಗಿತ್ತು. ಅವರ ಪುತ್ರ ಪ್ರಭುಗೌಡ ದೇಸಾಯಿ ಅವರು ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡುತ್ತ ಅವರದೇ ಹಾದಿಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡದಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಂಡು ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.ರಾಜ್ಯದ ೪೩೦ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹತ್ತಾರು ವರ್ಷದಿಂದ ಗೌರವಧನದ ಆಧಾರದ ಮೇಲೆ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ೨೦೨೪-೨೫ನೇ ಸಾಲಿನಲ್ಲಿ ೧೦,೯೭೬ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಯುಜಿಸಿ ೨೦೧೮ ರ ಮಾರ್ಗಸೂಚಿ ಸೇವೆಯಿಂದ ಕೈಬಿಡದಂತೆ ಆಗ್ರಹಿಸಲಾಯಿತು.೨೦೨೪-೨೫ನೇ ಸಾಲಿಗೆ ಸಂಬಂಧಿಸಿದಂತೆ ಅನ್ವಯ ೨೦೨೪-೨೫ನೇ ಹೊಸದಾಗಿ ಆಯ್ಕೆ ಮಾಡಿಕೊಳ್ಳಲು ಮುಂದಾಗಿದೆ. ಇದರಿಂದ ೫೩೫೩ ಕ್ಕೂ ಹೆಚ್ಚು ಉಪನ್ಯಾಸಕರು ಸೇವೆಯಿಂದ ಹೊರಗುಳಿಯುವಂತಾಗಿದೆ. ಇದರಿಂದ ಇನ್ನುಳಿದ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗಲಿದೆ. ಕಾರಣ ೧೦,೭೯೬ ಅತಿಥಿ ಉಪನ್ಯಾಸರನ್ನು ಕರ್ತವ್ಯ ನಿರ್ವಹಿಸುವಂತೆ ಕ್ರಮ ವಹಿಸಬೇಕು. ಈ ಉಪನ್ಯಾಸಕರನ್ನು ಕೈ ಬಿಡುವದರಿಂದ ದೇ ವೃತ್ತಿಯನ್ನೇ ನಂಬಿರುವ ಕುಟುಂಬಗಳು ಬೀದಿಗೆ ಬೀಳುವಂತಾಗುತ್ತದೆ. ಇನ್ನೊಂದೆಡೆ ಬಹುತೇಕರು ಯಾವುದೇ ನೌಕರರಿಗೆ ಅರ್ಜಿ ಹಾಕಲು…

Read More