Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜ್ಞಾನವೆಂಬುದು ಆಧುನಿಕ ಯುಗದ ಧರ್ಮವಾಗಿದೆ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್‌ಎಚ್ ಬಿರಾದಾರ ಹೇಳಿದರು.ಗಣಿಹಾರ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜ್ಞಾನದ ಮಾದರಿಗಳು ಮತ್ತು ಪರಂಪರೆಗಳು ಹಲವು ಆದರೆ ಇದರಲ್ಲಿ ವಿಜ್ಞಾನ ಒಂದು ಮಾದರಿ, ಜ್ಞಾನವೆಂದರೆ ವಿಜ್ಞಾನವಲ್ಲ ಅದೊಂದು ಭಾಗವಾಗಿ ತೆಗೆದುಕೊಂಡು ನಮ್ಮ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕಾಗಿದೆ, ಇಂತಹ ವಿನೂತನ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಗಣಿಹಾರ ಶಾಲೆಯು ತಾಲೂಕಿನಲ್ಲಿ ಮಾದರಿಯಾಗಿದೆ ಎಂದರು ಎಂದರು.ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯ ರವಿಕುಮಾರ್ ಹೊಸಮನಿ ಮಾತನಾಡಿ ಮೂಲವಿಜ್ಞಾನವನ್ನು ಕಲಿಸಲು, ಕಲಿಯಲು ಅನುವು ಮಾಡಿಕೊಡುವಂತಹ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಶಿಕ್ಷಕರಿಗೆ ವಿಜ್ಞಾನದ ಉನ್ನತ ತರಬೇತಿ ಕೊಡುವುದರ ಮೂಲಕ ಇದನ್ನು ಸಾಧಿಸಬಹುದು. ನಮಗೆ ವೈಜ್ಞಾನಿಕ ಸೂತ್ರ ಮತ್ತು ನಿಯಮಗಳ ಜೊತೆ ವಿಜ್ಞಾನದ ಭಾವವೂ ಬೇಕು ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ಸಂತೋಷ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಜನಪರವಾದ ಕಾಮಗಾರಿ ಮತ್ತು ಯೋಜನೆಗಳು ಜನರ ಆಶೋತ್ತರಗಳಿಗೆ ಸ್ಪಂದಿಸುವವರೆ ಜನನಾಯಕರಾಗಿ ಸಾರ್ವಜನಿಕ ಜೀವನದಲ್ಲಿ ತಮ್ಮ ಚಾಪನ್ನು ಮೂಡಿಸುತ್ತಾರೆ ಎಂದು ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ಹೇಳಿದರು.ಪಟ್ಟಣದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಉಸ್ಮಾನಸಾಬ ಪಟೇಲ ರಮಜಾನ ತಿಂಗಳ ಮೊದಲ ಉಪವಾಸ ಆಚರಣೆ ಮಾಡಿದವರಿಗಾಗಿ ಏರ್ಪಡಿಸಿದ್ದ ಇಪ್ತೀಯಾರಕೂಟ ಹಾಗೂ ಪಟ್ಟಣ ಪಂಚಾಯತ ನೂತನ ಅಧ್ಯಕ್ಷ ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ತಾಲೂಕು ಕೇಂದ್ರವಾದ ಕೊಲ್ಹಾರ ಪಟ್ಟಣದ ಸರ್ವಾಂಗೀಣ ಅಭಿವ್ರದ್ದಿಗಾಗಿ ಸ್ಥಳೀಯ ಆಡಳಿತ ಮಂಡಳಿ ಉತ್ತಮವಾದ ಕೆಲಸ ಮಾಡಲಿ ಎಂದು ಹಾರೈಸಿದರು.ಆಯೋಜಕರಾದ ಉಸ್ಮಾನಸಾಬ ಪಟೇಲ ಮಾತನಾಡಿ ಪುನರವಸತಿ ಕೇಂದ್ರದಲ್ಲಿ ನಿವೇಶನ ಹಂಚಿಕೆಯಲ್ಲಾದ ಲೋಪದೋಷವನ್ನು ಸರಿಪಡಿಸಿ ಸಂತ್ರಸ್ತರಿಗೆ ಆದಷ್ಟು ಬೇಗನೆ ಇ ಉತಾರಿಗಳು ಸಿಗುವಂತಾಗಲು ಕ್ರಮಕೈಗೊಳ್ಳಬೇಕು ಎಂದರು.ಚಂದ್ರಶೇಖರಯ್ಯ ಮ ಗಣಕುಮಾರ. ಶ್ರೀಶೈಲ ಪತಂಗಿ ಮತ್ತು ಸಲಿಂ ಅತ್ತಾರ ಮಾತನಾಡಿದರು.ಕಾಂಗ್ರೇಸ ಪಕ್ಷದ ಯುವಘಟಕದ ಅಧ್ಯಕ್ಷ ಮೋಹಶೀನ್ ಕಾಖಂಡಕಿ ಪಪಂ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಉಪಾಧ್ಯಕ್ಷೆ ಶ್ರೀಮತಿ ರಾಜಮಾ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ವಿಠ್ಠಲ ದೇವಸ್ಥಾನದ ಸಭಾಂಗಣದಲ್ಲಿ ಮಂಜುನಾಥ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ವಿಕಲಚೇತನರಿಗೆ ಗಾಲಿ ಕುರ್ಚಿ ಸೈಕಲ್ ವಿತರಣಾ ಸಮಾರಂಭ ಜರುಗಿತು.ಉದ್ಘಾಟನೆ ನೆರವೇರಿಸಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಮಾತನಾಡಿ, ಪಟ್ಟಣದ ನಿರುದ್ಯೋಗಿ ಮಹಿಳೆಯರಿಗೆ ಉಚಿತ ಉದ್ಯೋಗ ತರಬೇತಿ ನೀಡಿ ಸ್ವ ಉದ್ಯೋಗ ಮಾಡಿ ತಮ್ಮ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡುವ ಮತ್ತು ವಿಕಲಚೇತನರಿಗೆ ಉಚಿತವಾಗಿ ಗಾಲಿ ಕುರ್ಚಿ ಸೈಕಲ್ ಮತ್ತು ಮನೆ ನಿರ್ಮಾಣ ಮಾಡಿ ಕೊಡುವುದು ಸರ್ಕಾರ ಮಾಡದ ಕೆಲಸವನ್ನು ಮಂಜುನಾಥ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ ಇದು ನಿಜವಾಗಿಯೂ ಸಮಾಜದ ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ ಮಾತನಾಡಿ ಈ ಸಂಸ್ಥೆಯು ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುವುದು ಈ ಸೇವೆಯನ್ನು ನಾವುಗಳು ಸರಿಯಾಗಿ ಬಳಸಿಕೊಂಡು ನಿಮ್ಮ ಜೀವನ ರೂಪಿಸಿಕೊಳ್ಳಲು ಆ ಮಂಜುನಾಥ ದೇವರು ನಿಮಗೆ ಕರುಣಿಸಿದ್ದಾನೆ ಎಂದು ತಿಳಿಸಿದರು.ಅತಿಥಿಗಳಾಗಿ ತಾಲ್ಲೂಕು ಯೋಜನಾಧಿಕಾರಿ ಪ್ರಸನ್ನ ಆರ್, ತರಬೇತಿದಾರರು ಸ್ಮೀತಾ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲ್ಲೂಕಿನ ಮುಳವಾಡ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಾನಿಧ್ಯ ಮನಗೂಳಿ ಹಿರೇಮಠದ ಶ್ರೀ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಮಾತನಾಡಿ ಮಕ್ಕಳಿಗೆ ಶಿಕ್ಷಣ ಜೋತೆಗೆ ಉತ್ತಮ ಸಂಸ್ಕಾರ ಕಲಿಸಿದರೆ ಆ ಮಗು ಸಮಾಜದಲ್ಲಿ ತಂದೆತಾಯಿಗಳಿಗೆ ಗುರುಹಿರಿಯರಿಗೆ ಸಮಾಜಕ್ಕೆ ಗ್ರಾಮಕ್ಕೆ ಒಳಿತನ್ನು ಬಯಸುವ ಉತ್ತಮ ಪ್ರಜೆಗಳಾಗಿ ದೇಶ ಕಟ್ಟುವ ಕೆಲಸದಲ್ಲಿ ಮುಂದೆ ಇರುವರು ಇಂತಹ ಮಕ್ಕಳನ್ನು ಈ ಶಾಲೆ ನೀಡಿದೆ ಎಂದು ನನಗೆ ಈ ಶಾಲೆ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.ಉಪನ್ಯಾಸಕಿಯಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಭಾರತಿ ಸಿದ್ದನಗೌಡ ಪಾಟೀಲ ಮಾತನಾಡಿ ನಾನು ಇದೆ ಶಾಲೆಯ ಹಳೆಯ ವಿದ್ಯಾರ್ಥಿ ಶಾಲೆಯಲ್ಲಿ ಮಹಾನ್ ಸಂತರ ಸತ್ಪುರುಷರ ನಡೆದಾಡಿದ ಭೂಮಿ ಇದಾಗಿದ್ದು ಈ ಶಾಲೆಯ ಹೆಸರು ಉಳಿಯ ಬೇಕಾದರೆ ನಾವು ಯಾವುದಾದರೊಂದು ಹುದ್ದೆಯಲ್ಲಿ ಇದ್ದರೆ ಮಾತ್ರ ನನ್ನ ಶಾಲೆ ಹೆಸರು ಬೆಳಕಿನಂತೆ ಹರಡುತ್ತದೆ ಆದ್ದರಿಂದ ಮಕ್ಕಳೆ ನೀವು ಚೆನ್ನಾಗಿ ಓದಿ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ಎಸ್.ಕೆ.ಎಂ.ಟ್ರಸ್ಟ್ ಬೆಳ್ಳುಬ್ಬಿ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ನವಚೈತನ್ಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಗಳಾಗಿ ಪಿಎಸ್‌ಐ ಎಮ್.ಬಿ.ಬಿರಾದಾರ ಮಾತನಾಡಿ ಮಗು ಹುಟ್ಟಿನಿಂದ ತನ್ನ ಬೆಳವಣಿಗೆಯಲ್ಲಿ ಪರಿಸರದ ಪರಿಣಾಮವಾಗಿ ಅಲ್ಪ ಮಾನವರಾಗಿ ಬಿಡುತ್ತಿದ್ದಾರೆ, ಆ ಮಗುವಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡಿದರೆ ವಿಶ್ವಮಾನವನಾಗಿ ಗುರುತಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಆದುದರಿಂದ ನಿಜವಾಗಿಯೂ ಶಾಲೆಗಳು ಜೀವಂತ ದೇವಾಲಯಗಳು ಇದ್ದಂತೆ ಎಂದು ತಿಳಿಸಿದರು.ತಾಯಿಯು ಮಗುವಿನ ಬೆಳವಣಿಗೆ ನಿರ್ಲಕ್ಷ್ಯ ತೋರಬಾರದು ಏಕೆಂದರೆ ಮಗು ಆರು ವರ್ಷ ತಾಯಿ ತಂದೆ ಕಾರ್ಯಗಳನ್ನು ನೋಡಿ ಕಲಿಯುತ್ತದೆ ಆದ್ದರಿಂದ ತಾಯಿ ಮೊದಲ ಗುರು ಇದ್ದಂತೆ ಮಗುವಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿದರೆ ಸಮಾಜಕ್ಕೆ ಅದೇ ದೊಡ್ಡ ಕೊಡುಗೆ ಎಂದು ಹೇಳಿದರು.ಉಪನ್ಯಾಸಕರಾಗಿ ನಿರ್ಮಲಾ ಶೀಲವಂತ ಮಾತನಾಡಿ ಮಕ್ಕಳಿಗೆ ಕುಟುಂಬ, ಸಮಾಜ, ಪರಿಸರ ಇವುಗಳ ಬಗ್ಗೆ ಸಂಪೂರ್ಣ ಜ್ಞಾನ ತಾಯಿ ಬಾಲ್ಯದಲ್ಲಿ ನೀಡಿದರೆ ಮಗು ಬಹಳ ಖುಷಿ ಸಂತೋಷ ಸಂಭ್ರಮ ದಿಂದ ಬೆಳೆದು ಉತ್ತಮ ಆರೋಗ್ಯವಂತ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳೆಯರು ಸ್ವಾವಲಂಬಿಯಾಗುವುದು ಸಮಾಜದ ಸಮಗ್ರ ಅಭಿವೃದ್ಧಿಗೆ ಬಹಳ ಮುಖ್ಯ ಎಂದು ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಐ.ಎಸ್. ವಿದ್ಯಾಸಾಗರ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ಮಹಿಳೆಯರ ವಿಮೋಚನೆಗೆ ಡಾ. ಬಿ.ಆರ್. ಅಂಬೇಡ್ಕರವರ ಕೊಡುಗೆಗಳು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತವು ವಿವಿಧ ಜನಾಂಗ ಮತ್ತು ಧರ್ಮಗಳಿಂದ ಕೂಡಿದ ರಾಷ್ಟçವಾಗಿದ್ದು, ಇತಿಹಾಸದಲ್ಲಿ ಮಹಿಳೆಯರು ಪಿತೃಪ್ರಧಾನ ವ್ಯವಸ್ಥೆಯಿಂದ ಶೋಷಣೆಗೆ ಒಳಗಾಗಿದ್ದಾರೆ. ಈ ಶೋಷಣೆಯನ್ನು ತೊಡೆದುಹಾಕಲು ಮತ್ತು ಮಹಿಳೆಯರ ಸಬಲಿಕರಣಕ್ಕೆ ಪೂರಕವಾಗಿ ಹಲವು ಮಹಾನುಭಾವರು ಶ್ರಮಿಸಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕ ಪದವಿ (ಎನ್.ಇ.ಪಿ) ವಿಭಾಗ ವಿಶೇಷಾಧಿಕಾರಿ ಪ್ರೊ. ಸಕ್ಪಾಲ್ ಹೂವಣ್ಣ ಮಾತನಾಡಿ, ವಿದ್ಯಾರ್ಥಿನಿಯರಿಗೆ ಸಾಮಾಜಿಕ ಮಹಿಳಾ ಸ್ಥಾನಮಾನ ಮತ್ತು ಕಾಯ್ದೆ ಕಾನೂನುಗಳ ಕುರಿತು ತಿಳಿಸಿದರು.ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕ ಜಗದೀಶ ಜಾವೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಸಮಾನತೆ ಸಾಧಿಸಲಿ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ. ಕೆ ರಮೇಶ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ಸ್ಮಾರ್ಟ ಆಪ್ಟಿಕಲ್ ಮಟೆರಿಯಲ್ಸ ಆ್ಯಂಡ್ ಆ್ಯಂಗುಲರ್ ಮೊಮೆಂಟಮ್’ ಎಂಬ ವಿಶೇಷ ಉಪನ್ಯಾಸದಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಿತ್ಯಜೀನದಲ್ಲಿ ವೈಜ್ಞಾನಿಕ ವಿಚಾರಗಳು, ಆಚರಣೆಗಳು ಬಳಕೆಯಲ್ಲಿ ಇರಬೇಕು. ವಿದ್ಯಾರ್ಥಿನಿಯರ ಜೀವನಕ್ರಮವೂ ವೈಜ್ಞಾನಿಕತೆಯಿಂದ ಒಳಗೊಂಡಿರಬೇಕು ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಣ ನಿಕಾಯದ ಡೀನ್ ಪ್ರೊ. ಸಕ್ಪಾಲ್ ಹೂವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿ ಉಪನ್ಯಾಸಕಿ ವಾಣಿಶ್ರೀ ಕಿರಣಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾರ್ಯಕ್ರಮದ ಸಂಯೋಜಕಿ ಡಾ. ಜಿ ಸೌಭಾಗ್ಯ, ಬೋಧಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಾದೇಶಿಕ ಸಾರಿಗೆ ಕಚೇರಿ ವಿಜಯಪುರ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆ-೨೫ ಅಂಗವಾಗಿ ಮಾ.೬ ರಂದು ಬೆಳಿಗ್ಗೆ ೯-೩೦ಕ್ಕೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಂಗಳೂರಿನ ಗೋಲ್ಡನ್ ಪಾಮ್ ಕ್ಯಾಂಟೀನ್ ಮತ್ತು ಅದರ ಎಕ್ಸಟೆನ್ಸೆನ್ ಕೌಂಟರ್‌ಗಳಲ್ಲಿ ತಾತ್ಕಾಲಿಕ ಖಾಲಿ ಹುದ್ದೆಗಳಿಗಾಗಿ (೧೧ ತಿಂಗಳುಗಳಿಗೆ ಮಾತ್ರ) ನಿವೃತ್ತ ಹಾನರರಿ ಕ್ಯಾಪ್ಟನ್, ಲೆಫ್ಟಿನೆಂಟ್, ಜೆಸಿಓ, ಎನ್‌ಸಿಒ ಮತ್ತು ಅವರ ಅಲಂಬಿತ ಪುರುಷ-ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು gಠಿಛಿsಛಿbiಡಿ.ಛಿo.iಟಿ ಸಂಪರ್ಕಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ : ೧೦-೦೩-೨೦೨೫ ಕೊನೆಯ ದಿನವಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ವಿಜಯಪುರ ಕಚೇರಿ ದೂ: ೦೮೩೫೨-೨೫೦೯೧೩ ಸಂಖ್ಯೆಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಬಸವಯುಗದ ವಚನ ಮಹಾ ಸಂಪುಟ-೧ ಹಾಗೂ ಬಸವೋತ್ತರ ಯುಗದ ವಚನ ಮಹಾಸಂಪುಟ-೨ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಮಾರಾಟಕ್ಕೆ ಲಭ್ಯವಿದೆ.ಈ ಎರಡು ಸಂಪುಟಗಳು ಸೇರಿ ೬೦೦ ರೂ. ಬೆಲೆ ಇದ್ದು, ಆಸಕ್ತರು ಪುಸ್ತಕಗಳನ್ನು ಖರೀದಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More