ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಜನಪರವಾದ ಕಾಮಗಾರಿ ಮತ್ತು ಯೋಜನೆಗಳು ಜನರ ಆಶೋತ್ತರಗಳಿಗೆ ಸ್ಪಂದಿಸುವವರೆ ಜನನಾಯಕರಾಗಿ ಸಾರ್ವಜನಿಕ ಜೀವನದಲ್ಲಿ ತಮ್ಮ ಚಾಪನ್ನು ಮೂಡಿಸುತ್ತಾರೆ ಎಂದು ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ಹೇಳಿದರು.
ಪಟ್ಟಣದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಉಸ್ಮಾನಸಾಬ ಪಟೇಲ ರಮಜಾನ ತಿಂಗಳ ಮೊದಲ ಉಪವಾಸ ಆಚರಣೆ ಮಾಡಿದವರಿಗಾಗಿ ಏರ್ಪಡಿಸಿದ್ದ ಇಪ್ತೀಯಾರಕೂಟ ಹಾಗೂ ಪಟ್ಟಣ ಪಂಚಾಯತ ನೂತನ ಅಧ್ಯಕ್ಷ ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ತಾಲೂಕು ಕೇಂದ್ರವಾದ ಕೊಲ್ಹಾರ ಪಟ್ಟಣದ ಸರ್ವಾಂಗೀಣ ಅಭಿವ್ರದ್ದಿಗಾಗಿ ಸ್ಥಳೀಯ ಆಡಳಿತ ಮಂಡಳಿ ಉತ್ತಮವಾದ ಕೆಲಸ ಮಾಡಲಿ ಎಂದು ಹಾರೈಸಿದರು.
ಆಯೋಜಕರಾದ ಉಸ್ಮಾನಸಾಬ ಪಟೇಲ ಮಾತನಾಡಿ ಪುನರವಸತಿ ಕೇಂದ್ರದಲ್ಲಿ ನಿವೇಶನ ಹಂಚಿಕೆಯಲ್ಲಾದ ಲೋಪದೋಷವನ್ನು ಸರಿಪಡಿಸಿ ಸಂತ್ರಸ್ತರಿಗೆ ಆದಷ್ಟು ಬೇಗನೆ ಇ ಉತಾರಿಗಳು ಸಿಗುವಂತಾಗಲು ಕ್ರಮಕೈಗೊಳ್ಳಬೇಕು ಎಂದರು.
ಚಂದ್ರಶೇಖರಯ್ಯ ಮ ಗಣಕುಮಾರ. ಶ್ರೀಶೈಲ ಪತಂಗಿ ಮತ್ತು ಸಲಿಂ ಅತ್ತಾರ ಮಾತನಾಡಿದರು.
ಕಾಂಗ್ರೇಸ ಪಕ್ಷದ ಯುವಘಟಕದ ಅಧ್ಯಕ್ಷ ಮೋಹಶೀನ್ ಕಾಖಂಡಕಿ ಪಪಂ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಉಪಾಧ್ಯಕ್ಷೆ ಶ್ರೀಮತಿ ರಾಜಮಾ ಗೈಬುಸಾಬ ನಧಾಪ ಸೇರಿದಂತೆ ಅನೇಕರನ್ನು ಗೌರವಿಸಲಾಯಿತು.
ಖಾನಕಾಯೇ ಗಫಾರಿಯಾ ಆಶ್ರಮದ ಪೀಠಾಧಿಕಾರಿ ಭಕ್ತಿಯಾರಖಾನ ಪಠಾಣ ಸಾನಿಧ್ಯ ವಹಿಸಿದ್ದರು.
ಟಿ ಟಿ ಹಗೇದಾಳ ಬಸಪ್ಫ ಗಿಡ್ಡಪ್ಫಗೋಳ ಇಸ್ಮಾಯಿಲಸಾಬ ತಹಶೀಲದಾರ ನಬಿಸಾಬ ಹೊನ್ಯಾಳ ಬಾಬುಸಾಬ ಕೂಡಗಿ ಅಬ್ದುಲಸಾಬ ಪಕಾಲಿ ಪರಶುರಾಮ ಬ ಗಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಅಯ್ಯುಬ್ ಪಠಾಣ ಸ್ವಾಗತಿಸಿ ನಿರೂಪಿಸಿದರು.

