ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ವಿಠ್ಠಲ ದೇವಸ್ಥಾನದ ಸಭಾಂಗಣದಲ್ಲಿ ಮಂಜುನಾಥ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ವಿಕಲಚೇತನರಿಗೆ ಗಾಲಿ ಕುರ್ಚಿ ಸೈಕಲ್ ವಿತರಣಾ ಸಮಾರಂಭ ಜರುಗಿತು.
ಉದ್ಘಾಟನೆ ನೆರವೇರಿಸಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಮಾತನಾಡಿ, ಪಟ್ಟಣದ ನಿರುದ್ಯೋಗಿ ಮಹಿಳೆಯರಿಗೆ ಉಚಿತ ಉದ್ಯೋಗ ತರಬೇತಿ ನೀಡಿ ಸ್ವ ಉದ್ಯೋಗ ಮಾಡಿ ತಮ್ಮ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡುವ ಮತ್ತು ವಿಕಲಚೇತನರಿಗೆ ಉಚಿತವಾಗಿ ಗಾಲಿ ಕುರ್ಚಿ ಸೈಕಲ್ ಮತ್ತು ಮನೆ ನಿರ್ಮಾಣ ಮಾಡಿ ಕೊಡುವುದು ಸರ್ಕಾರ ಮಾಡದ ಕೆಲಸವನ್ನು ಮಂಜುನಾಥ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ ಇದು ನಿಜವಾಗಿಯೂ ಸಮಾಜದ ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ ಮಾತನಾಡಿ ಈ ಸಂಸ್ಥೆಯು ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುವುದು ಈ ಸೇವೆಯನ್ನು ನಾವುಗಳು ಸರಿಯಾಗಿ ಬಳಸಿಕೊಂಡು ನಿಮ್ಮ ಜೀವನ ರೂಪಿಸಿಕೊಳ್ಳಲು ಆ ಮಂಜುನಾಥ ದೇವರು ನಿಮಗೆ ಕರುಣಿಸಿದ್ದಾನೆ ಎಂದು ತಿಳಿಸಿದರು.
ಅತಿಥಿಗಳಾಗಿ ತಾಲ್ಲೂಕು ಯೋಜನಾಧಿಕಾರಿ ಪ್ರಸನ್ನ ಆರ್, ತರಬೇತಿದಾರರು ಸ್ಮೀತಾ ಕರಣೆ, ತಾಲ್ಲೂಕ ಸಮನ್ವಯ ಅಧಿಕಾರಿ ಸಂಗೀತಾ ಮಡಿವಾಳರ, ವಲಯ ಮೇಲ್ವಿಚಾರಕಿ ಸುಮಂಗಲಾ, ಈರಮ್ಮ, ಸಕ್ಕುಬಾಯಿ ಕ್ಷತ್ರಿ, ಪ್ರೀಯಾಂಕಾ, ಯಶೋಧಾ, ಇಂದ್ರಾ, ಭಾರತಿ ಹಾಗೂ ಸೇವಾ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

