ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜ್ಞಾನವೆಂಬುದು ಆಧುನಿಕ ಯುಗದ ಧರ್ಮವಾಗಿದೆ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್‌ಎಚ್ ಬಿರಾದಾರ ಹೇಳಿದರು.
ಗಣಿಹಾರ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜ್ಞಾನದ ಮಾದರಿಗಳು ಮತ್ತು ಪರಂಪರೆಗಳು ಹಲವು ಆದರೆ ಇದರಲ್ಲಿ ವಿಜ್ಞಾನ ಒಂದು ಮಾದರಿ, ಜ್ಞಾನವೆಂದರೆ ವಿಜ್ಞಾನವಲ್ಲ ಅದೊಂದು ಭಾಗವಾಗಿ ತೆಗೆದುಕೊಂಡು ನಮ್ಮ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕಾಗಿದೆ, ಇಂತಹ ವಿನೂತನ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಗಣಿಹಾರ ಶಾಲೆಯು ತಾಲೂಕಿನಲ್ಲಿ ಮಾದರಿಯಾಗಿದೆ ಎಂದರು ಎಂದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯ ರವಿಕುಮಾರ್ ಹೊಸಮನಿ ಮಾತನಾಡಿ ಮೂಲವಿಜ್ಞಾನವನ್ನು ಕಲಿಸಲು, ಕಲಿಯಲು ಅನುವು ಮಾಡಿಕೊಡುವಂತಹ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಶಿಕ್ಷಕರಿಗೆ ವಿಜ್ಞಾನದ ಉನ್ನತ ತರಬೇತಿ ಕೊಡುವುದರ ಮೂಲಕ ಇದನ್ನು ಸಾಧಿಸಬಹುದು. ನಮಗೆ ವೈಜ್ಞಾನಿಕ ಸೂತ್ರ ಮತ್ತು ನಿಯಮಗಳ ಜೊತೆ ವಿಜ್ಞಾನದ ಭಾವವೂ ಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ಸಂತೋಷ ಅಮರಗೊಂಡ ಶಾಲೆಯಲ್ಲಿ ವಿಜ್ಞಾನ ಕೇವಲ ವಿಷಯಗಳನ್ನಾಗಿ ನೋಡದ ಹೊರತು ಆ ಕ್ಷೇತ್ರಗಳಲ್ಲಿ ಹೇಗೆ ಕೆಲಸ ಮಾಡಬೇಕೆನ್ನುವ ಕೌಶಲಗಳನ್ನು ಕಲಿಯುವುದು ತೀರಾ ವಿರಳ. ವಿಜ್ಞಾನ ನೈಸರ್ಗಿಕ ಜಗತ್ತನ್ನು ವಿವರಿಸುವ ಮತ್ತು ಅಲ್ಲಿನ ಸಮಸ್ಯೆಗಳನ್ನು ಬಿಡಿಸಲು ಬೆಳೆದು ಬಂದ ಕಸುಬು. ಸಿದ್ಧಸೂತ್ರಗಳನ್ನು ಬದಿಗಿಟ್ಟು ನಾವು ಸೃಜನಾತ್ಮಕವಾಗಿ ವಿಜ್ಞಾನವನ್ನು ಕಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿಕ್ಕನಗುತ್ತಿ ಲಿಂಗಾಯತ ಮಹಾಮಠದ ಪ್ರಭುಲಿಂಗ ಶರಣರು ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ಎಸ್ ಅಗ್ನಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಸುಧಾ ನನ್ನಶೆಟ್ಟಿ ಉಪಾಧ್ಯಕ್ಷ ರಮೇಶ ಕೋರಿ, ಸದಸ್ಯ ದಾದಾಪೀರ ಅಂಗಡಿ, ಶರಣು ಆನಗೊಂಡ, ಶಾಲೆಯ ಮುಖ್ಯ ಶಿಕ್ಷಕಿ ಇನಂದಾರ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಎಸ್ ದೇವರಮನಿ, ಸುಭೋದಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಸಿಂತುಜಾ ಪಾಟೀಲ ವೇದಿಕೆ ಮೇಲಿದ್ದರು.
ಶಾಲಾ ಮುಖ್ಯ ಶಿಕ್ಷಕ ಸಿದ್ದಲಿಂಗ ಚೌದರಿ ಸ್ವಾಗತಿಸಿ ಪ್ರಾಸ್ತಾವಿಕರಿಸಿದರು. ಶಿಕ್ಷಕ ಎಸ್ ಎಸ್ ಬಿರಾದಾರ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳ ತಯಾರಿಸಿದ ವಿಜ್ಞಾನ ಮಾದರಿಗಳು ಸಭಿಕರ ಗಮನ ಸೆಳೆದವು
ಈ ಸಂದರ್ಭದಲ್ಲಿ ಶಿಕ್ಷಕರಾದ ಜಿ ಎ ಮುಲ್ಲಾ, ಕಾಶಿರಾಯ ಹತ್ತಳ್ಳಿ ಪುಷ್ಪಾ ಸಂಕನಾಳ ಶುಷ್ಮಾ ಕಲ್ಲನಗೌಡ ತೊರವಿ, ಬಸವರಾಜ ಹಳ್ಳಿ ರೇಖಾ ಗಬ್ಬುರ, ಚೆನ್ನಮ್ಮ ಬೊಮ್ಮಣ್ಣಿ ಶಶಿಕಲಾ ನಾಟಿಕಾರ, ಎಂ ಎ ಕುಡಚಿ,ಎನ್ ಎಲ್ ಟೇಲರ, ಭೀಮು ನನಶೆಟ್ಟಿ, ಆರ್ ಜಿ ಬಿರಾದಾರ,ಎಸ್ ಸಿ ಬಿರಾದಾರ, ಎಚ್ ವಿ ಮುಲ್ಲಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

