Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅನಾಮಧೇಯ ಅಂದಾಜು ೩೦ ರಿಂದ ೩೫ ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತು ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮಧೇಯ ವ್ಯಕ್ತಿಯ ವಾರಸುದಾರರ ಪತ್ತೆಗೆ ಸಾರ್ವಜನಿಕರಲ್ಲಿ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.ಪತ್ತೆಯಾದ ವ್ಯಕ್ತಿಯು ೫.೮ ಫೂಟ್ ಎತ್ತರ, ಸಾದಾಕಪ್ಪು ಬಣ್ಣ, ದುಂಡು ಮುಖ, ದಪ್ಪ ಮೂಗು ಹೊಂದಿದ್ದು, ಕರಿ ಬಣ್ಣದ ಜಾಕೇಟ್, ನೀಲಿ ಬಣ್ಣದ ಟೀ ಶರ್ಟ್ ಧರಿಸಿರುತ್ತಾನೆ.ಈ ಚಹರೆಪಟ್ಟೆಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಸಾರ್ವಜನಿಕರು ಜಿಲ್ಲೆಯ ಡಿಎಸ್‌ಪಿ ಮೊಬೈಲ್ ಸಂಖ್ಯೆ :೯೪೮೦೮೦೪೨೨೦, ವಿಜಯಪುರ ಸಂಚಾರಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೫೨-೨೫೨೬೦೦ ಹಾಗೂ ಮೊಬೈಲ್ ಸಂಖ್ಯೆ: ೯೪೮೦೮೦೪೨೪೬, ವಿಜಯಪುರ ಕಂಟ್ರೋಲ್ ರೂಂ ದೂರವಾಣಿ ೦೮೩೫೨-೨೫೦೮೪೪ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಚಾರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಎಲ್ಲ ಖಾಸಗಿ ನೊಂದಾಯಿತ ಆರೋಗ್ಯ ಸಂಸ್ಥೆಗಳು, ಚಿಕಿತ್ಸಾಲಯಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು ಸಂಸ್ಥೆಯ ಆವರಣದಲ್ಲಿ ಕೆಪಿಎಂಇ ನಿಯಮದನ್ವಯ ನಿಗದಿತ ನಮೂನೆಯ ಫಲಕಗಳನ್ನು ಮಾ.೧೦ರೊಳಗೆ ಕಡ್ಡಾಯವಾಗಿ ಅಳವಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ನೊಂದಾಯಿತ ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳು ಕೆಪಿಎಂಇ ನಿಯಮ ೨೦೦೯ರ ನಿಯಮ ೫ರ ನೊಂದಣಿಯನ್ವಯ ವೈದ್ಯಕೀಯ ಚಿಕಿತ್ಸಾ ಪದ್ಧತಿ ವಿಧಾನ, ಸಂಸ್ಥೆಯ ಹೆಸರು, ನೊಂದಣಿ ಪ್ರಮಾಣ, ಸಂಸ್ಥೆಯ ಹೆಸರು, ಮಾಲೀಕರು, ವ್ಯವಸ್ಥಾಪಕರ ಹೆಸರು, ಸಂಸ್ಥೆಯಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳನ್ನೊಳಗೊಂಡ ಫಲಕಗಳನ್ನು ಪ್ರದರ್ಶಿಸುವುದು ನಿಯಮವಿದೆ. ಆದರೆ ಕೆಲವು ನೊಂದಾಯಿತ ಖಾಸಗಿ ಸಂಸ್ಥೆಗಳು ನಾಮಫಲಕಗಳನ್ನು ಅಳವಡಿಸಿಕೊಂಡಿರುವುದಿಲ್ಲ. ಇಂತಹ ಸಂಸ್ಥೆಗಳು ನಿಗದಿತ ನಮೂನೆಯಲ್ಲಿ ನಾಮಫಲಕಗಳ ಅಳವಡಿಕೆಗೆ ಕೊನೆಯ ಅವಕಾಶ ಒದಗಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಅಳವಡಿಸದೇ ಇರುವ ಸಂಸ್ಥೆಗಳ ವಿರುದ್ಧ ಕಾನೂನು ರಿತ್ಯ ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ವಿಜಯಪುರ ತಾಲೂಕಿನಲ್ಲಿ ಕೆಪಿಎಂಇ ಅಡಿ ನೊಂದಣಿಯಾದ ೫೦೦ ಆರೋಗ್ಯ ಸಂಸ್ಥೆಗಳ ಪೈಕಿ ೧೯೬…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಅತ್ತ್ಯುತ್ತಮವಾಗಿದೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಹೇಳಿದ್ದಾರೆ.ವಿಜಯಪುರ ಜಿಲ್ಲೆಗಂತೂ ಬಂಪರ್ ಕೊಡುಗೆ ದೊರಕಿದೆ. ನಿಡಗುಂದಿಯಲ್ಲಿ ಪ್ಲ್ಯಾಟ್ ಫ್ಯಾಕ್ಟರಿ ಸ್ಥಾಪನೆ, ಮುದ್ದೇಬಿಹಾಳದಲ್ಲಿ ಕೃಷಿ ವಿಜ್ಞಾನ ಕೇಂದ್ರ, ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರದ ಸಹಾಯ ಧನ ಪಡೆಯುವ ನಿಟ್ಟಿನಲ್ಲಿ ಪ್ರಸ್ತಾವನೆ ಹೀಗೆ ವಿಜಯಪುರ ಪ್ರಗತಿಗೆ ಪೂರಕವಾದ ಬಜೆಟ್ ಇದಾಗಿದೆ, ರಾಜ್ಯದ ದೃಷ್ಟಿಯಿಂದ ನೋಡುವುದಾದರೆ ಎಲ್ಲ ವಲಯಗಳಿಗೂ ಆದ್ಯತೆ ದೊರಕಿದಂತಾಗಿದೆ ಎಂದು ಶಕೀಲ್ ಬಾಗಮಾರೆ ಪ್ರತಿಕ್ರಿಯಿಸಿದ್ದಾರೆ.

Read More

ವಿಜಯಪುರದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಮಾಧ್ಯಮ ಕಾರ್ಯಾಗಾರದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳು ಸತತ ಅಧ್ಯಯನಶೀಲತೆ ರೂಢಿಸಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಸುಂದರಗೊಳಿಸಿಕೊಳ್ಳಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಭಜಂತ್ರಿ ಹೇಳಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಬಿ.ವಿ ದರ್ಬಾರ್ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಸಭಾಂಗಣದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡ ಮಾಧ್ಯಮ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿರಂತರ ಕಲಿಕೆಯಿಂದ ಅಧ್ಯಯನಶೀಲರಾಗುವುದರೊಂದಿಗೆ ಉತ್ತಮ ಗುರಿಯನ್ನಿಟ್ಟುಕೊಂಡು ಉನ್ನತ ಸ್ಥಾನ ಪಡೆಯುವ ಮೂಲಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.ಪತ್ರಕರ್ತರಾದ ಪರಶುರಾಮ ಭಾಸಗಿ ಅವರು ಮಾತನಾಡಿ, ಮಾಧ್ಯಮ ಎಂದರೆ ಮಾಹಿತಿ, ಮನರಂಜನೆ ಹಾಗೂ ಶಿಕ್ಷಣದ ಕುರಿತ ಮಾಹಿತಿಯನ್ನು ಕನ್ನಡಿಯ ರೀತಿಯಲ್ಲಿ ಜನರಿಗೆ ಮುಟ್ಟಿಸುವ ಕೌಶಲ್ಯವಾಗಿದೆ. ಸತತ ಅಧ್ಯಯನ, ಪ್ರತಿ ವಿಷಯವನ್ನು ಅರಿತುಕೊಳ್ಳುವ ಹಂಬಲ, ಇಚ್ಛಾಶಕ್ತಿಯೊಂದಿಗೆ ಈ ಕೌಶಲ್ಯಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ಉತ್ತಮ ಬಜೆಟ್ ಮಂಡನೆ “ಬಡವ, ದೀನ, ದಲಿತರು ಸೇರಿದಂತೆ ಸರ್ವಜನತೆಯ ಪರವಾದ ಬಜೆಟ್. ಗ್ಯಾರಂಟಿ ಯೋಜನೆಗಳ ಜೊತೆಜೊತೆಗೆ ಆರ್ಥಿಕ ಸಂಕಷ್ಟದಲ್ಲಿಯೂ ಬಡಜನತೆಗೆ ಉತ್ತಮ ಕೊಡುಗೆಗಳನ್ನು ನೀಡುವುದರ ಮೂಲಕ ಉತ್ತಮವಾದ ಬಜೆಟ್ ಮಂಡನೆ ಮಾಡಿದ್ದಾರೆ.” – ಡಾ.ಪ್ರಭುಗೌಡ ಲಿಂಗದಳ್ಳಿ, ಕೆಪಿಸಿಸಿ ರಾಜ್ಯ ಪ್ರಧಾನಕಾರ್ಯದರ್ಶಿ ದೇವರಹಿಪ್ಪರಗಿ ಮತಕ್ಷೇತ್ರ ಪ್ರಗತಿಗೆ ಮುನ್ನುಡಿ ಬರೆಯುವ ಬಜೆಟ್ “ಪ್ರತಿ ಪ್ರಗತಿಗೆ ಮುನ್ನುಡಿ ಬರೆಯುವ ಬಜೆಟ್ ಇದಾಗಿದ್ದು, ವಿಶೇಷವಾಗಿ ಬಡವರು ಹಾಗೂ ಹಿಂದುಳಿದ ವರ್ಗಗಳ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದೆ.” – ಆನಂದಗೌಡ ದೊಡ್ಡಮನಿಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿದೇವರಹಿಪ್ಪರಗಿ ಮತಕ್ಷೇತ್ರ ಬಜೆಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ “ಬಜೆಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಜ್ಯದ ಸಮಗ್ರ ರೈತ ಸಮುದಾಯಕ್ಕೆ ಪೂರಕವಾದ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಕೇವಲ ಇದು ಭರವಸೆಯ ಬಜೆಟ್ ಆಗಿದೆ.” – ಪ್ರಭುಗೌಡ ಬಿರಾದಾರ ಅಸ್ಕಿಜಿಲ್ಲಾ ಬಿಜೆಪಿ ಉಪಾಧ್ಯಕ್ಷರುವಿಜಯಪುರ

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶಾರದಾ ಮಾತೆಯನ್ನು ನಂಬಿ ಅಧ್ಯಯನಿಸಿದವರಿಗೆ ಖಂಡಿತವಾಗಿ ಜ್ಞಾನಪ್ರಾಪ್ತಿಯಾಗುತ್ತದೆ ಎಂದು ಸಾಹಿತಿ ಸಂಗಮೇಶ ಕರೆಪ್ಪಗೋಳ್ ಹೇಳಿದರು.ತಾಲ್ಲೂಕಿನ ಯಾಳವಾರ ಗ್ರಾಮದ ಶ್ರೀಸೋಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ಎಸ್ ಎಸ್‌ಎಲ್‌ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯೆ ಯಾರಪ್ಪನ ಸ್ವತ್ತು ಅಲ್ಲ ಶ್ರಮ ಪಟ್ಟು ಸಾಧಿಸುವ ಛಲ ಇದ್ದರೆ ಎಲ್ಲವೂ ಸಾಧ್ಯ ಅಭ್ಯಾಸದ ಜೊತೆಗೆ ನೈತಿಕ ಮೌಲ್ಯಗಳನ್ನು ಆಭರಣವಾಗಿ ಸ್ವೀಕರಿಸಬೇಕು ಆಗ ಬದುಕೇ ಬಂಗಾರವಾಗುತ್ತದೆ ಎಂದರು.ಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಮಾತನಾಡಿ, ಶಾಲೆಗೆ ಬೇಕಾಗಿರುವ ಪೂರಕ ಸಾಮಗ್ರಿಗಳನ್ನು ಹಾಗೂ ಮೂಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಪೂರೈಸಲಾಗುತ್ತದೆ ಎಂದರು,ಗ್ರಾಮದ ಪಂಚವಟಿ ಆಶ್ರಮದ ಕಾಶೀನಾಥ ಶ್ರೀಗಳು ಆಶೀರ್ವಚನ ನೀಡಿದರು. ಶಿಕ್ಷಕ ಬಿ. ವೈ. ಭಂಟನೂರು ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಸ್ಥೆಯ ನಿರ್ದೇಶಕರಾದ ಬಿ.ಆರ್.ಪಾಟೀಲ್, ಎ.ಡಿ.ನಾಗರಾಳ, ಮುಖ್ಯಶಿಕ್ಷಕ ಕೆ.ಆಯ್. ಹೊಸಮನಿ, ಉಪನ್ಯಾಸಕ ಎಚ್.ಕೆ. ಕರಡಿ, ಶಿಕ್ಷಕ ಶಿವರಾಜ್ ನಾಗರಹಳ್ಳಿ, ಅನಿತಾ ಕೊಟಾರಗಸ್ತಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನೀಯರು, ಪಾಲಕರು ಇದ್ದರು.

Read More

ರಚನೆ- ಮೌಲಾಲಿ ಕೆ ಆಲಗೂರಬೋರಗಿತಾ.ಸಿಂದಗಿಜಿ.ವಿಜಯಪುರದೂ: 9742849663. ಉದಯರಶ್ಮಿ ದಿನಪತ್ರಿಕೆ ಮನುಜ ಕುಲದಸೃಷ್ಟಿ ಹೆಣ್ಣುಸಮಾಜವನ್ನುಬೆಳಗುವ ಕಣ್ಣು ಧರೆಯ ಮೇಲಿನದೈವ ಹೆಣ್ಣುಪುರುಷ ಕೀರ್ತಿಗೆಸ್ಪೂರ್ತಿ ಹೆಣ್ಣು ಸ್ಥಿರತೆ, ಸದೃಢತೆಗೆಸಾಕ್ಷಿ ಹೆಣ್ಣುಹಿರಿಮೆ, ಗರಿಮೆಗೆಮೂಲ ಹೆಣ್ಣು ಭಕ್ತಿ ಮುಕ್ತಿ ಸರಸ್ವತಿಸದ್ಗತಿ ಹೆಣ್ಣುಛಲ ಬಲ ಸಾಧನೆಗೆಯುಕ್ತಿ ಶಕ್ತಿ ಹೆಣ್ಣು ತ್ಯಾಗ ಮಮತೆಯಪ್ರತಿರೂಪ ಹೆಣ್ಣುಶಾಂತಿಯ ಬದುಕಿಗೆಕಾರಣ ಈ ಹೆಣ್ಣು ಹೆಣ್ಣು ಬರಿ ಹೆಣ್ಣಲ್ಲಅಗೋಚರ ಹೊನ್ನುಜಗವನ್ನೇ ಸಾಕುವಕಾಮಧೇನು ಹೆಣ್ಣು.

Read More

2025-26ನೇ ಸಾಲಿನ ಬಜೆಟ್ ಮಂಡನೆ | 19 ಸಾವಿರ ಕೋಟಿ ಆದಾಯ ಕೊರತೆ | 1,16,000 ಕೋಟಿ ಸಾಲದ ಮೊರೆ | ಗ್ಯಾರಂಟಿ ಯೋಜನೆಗಳಿಗೆ ರೂ.51ಸಾವಿರ ಕೋಟಿ ಬೆಂಗಳೂರು: ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2025-26ನೇ ಸಾಲಿನ ಬಜೆಟ್ ಮಂಡಿಸಿದ್ದು, ಗ್ಯಾರಂಟಿ ಯೋಜನೆಗಳಿಗೆ ಬರೋಬ್ಬರಿ 51 ಸಾವಿರ ಕೋಟಿ ರೂ. ನೀಡುವುದರ ಜೊತೆಗೆ ಹತ್ತು ಹಲವು ಹೊಸ ಘೋಷಣೆಗಳನ್ನೂ ಮಾಡಿದ್ದಾರೆ.ಶುಕ್ರವಾರ ವಿಧಾನಸಭೆಯಲ್ಲಿ 4,09,549 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು ಇದರಲ್ಲಿ 19,262 ಕೋಟಿ ರೂ.‌ ರಾಜಸ್ವ ಕೊರತೆಯನ್ನು ಉಲ್ಲೇಖಿಸಿದ್ದಾರೆ.1994 ರಲ್ಲಿ ಜನತಾ ದಳದ ಆಡಳಿತದಲ್ಲಿ ಡಿಸಿಎಂ ಆಗಿ ಮೊದಲ ಬಾರಿ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಇಂದು ತಮ್ಮ 16ನೇ ಬಜೆಟ್ ಅನ್ನು ಮಂಡಿಸುವ ಮೂಲಕ ಒಂದು ರೀತಿಯ ಇತಿಹಾಸವನ್ನು ಸೃಷ್ಟಿಸಿದರು. ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಇದು ಅವರ ಮೂರನೇ ಬಜೆಟ್ ಮತ್ತು ಸತತ ಎರಡನೇ ಆದಾಯ ಕೊರತೆ ಬಜೆಟ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ನಿರಾಶೆ ಮಾಡಿದ್ದು ನಿರೀಕ್ಷೆಗಳಿಗೆ ಸಂಪೂರ್ಣ ತಣ್ಣೀರೆಚಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ‌ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.ಈ ಕುರಿತು ಪತ್ರಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಜಯಪುರ ಜಿಲ್ಲೆಗೆ ದೊಡ್ಡ ಅನ್ಯಾಯವಾಗುತ್ತಲೇ ಇದೆ, ಅವಳಿ ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಅನುದಾನವಂತೂ ಮರೀಚಿಕೆಯಾಗಿದೆ, ಈ ಹಿಂದೆ ಕೃಷ್ಣೆಯ ಸನ್ನಿಧಿಯಲ್ಲಿ ೧೦ ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಒಂದೇ ಒಂದು ರೂ. ಬಿಡುಗಡೆ ಮಾಡಿಲ್ಲ, ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ, ಈ ಹಿಂದೆ ಬಿಜೆಪಿ ಆಡಳಿತ ಅವಧಿಯಲ್ಲಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗಳಿಗೆ ಅಂತಿಮ ಸ್ಪರ್ಶ ನೀಡಲಾಗಿತ್ತು, ಕೇವಲ ಲೋಕಾರ್ಪಣೆ ಕಾಮಗಾರಿ ಮಾಡಲು ಸಹ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ, ಶೀಘ್ರ ಪೂರ್ಣ ಎಂಬಷ್ಟೇ ಘೋಷಣೆಗೆ ಸೀಮಿತ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಬಗ್ಗೆ ಕಾಂಗ್ರೆಸ ಸರ್ಕಾರ ಅಸಡ್ಡೆ ನೀತಿ ಪುನರಾವರ್ತನೆಯಾಗುತ್ತಲೇ ಇದೆ‌.ಮುಖ್ಯವಾಗಿ ಸರ್ಕಾರಿ ವೈದ್ಯಕೀಯ ಕಾಲೇಜು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಜೆಟ್ ಎಂಬುದು ಬರೀ ಹಾಳೆಗಳ ಮೇಲಿನ ಲೆಕ್ಕವಲ್ಲ, ಅದು ರಾಜ್ಯದ ಜನತೆಯ ಭವಿಷ್ಯ ರೂಪಿಸುವ ಕೈಪಿಡಿ ಎಂಬ ನಂಬಿಕೆಯನ್ನು ಮತ್ತೊಮ್ಮೆ ಮಾನ್ಯ ಸಿದ್ಧರಾಮಯ್ಯನವರು ಸಾಬೀತು ಪಡಿಸಿದ್ದಾರೆ ಎಂದು ಆಲಮೇಲ ಬ್ಲಾಕ್ ಕಾಂಗ್ರೆಸ್ ಡಾಕ್ಟರ್ ಸೆಲ್ ಅಧ್ಯಕ್ಷ ಡಾ.ಸಮೀರ ಹಾದಿಮನಿ ತಿಳಿಸಿದ್ದಾರೆ.ದಶಕಗಳ ನಿರೀಕ್ಷೆಯಾಗಿದ್ದ ವಿಜಯಪುರ ವಿಮಾನ ನಿಲ್ದಾಣ 2026 ರಲ್ಲಿ ಪ್ರಾರಂಭಗೊಳಿಸಲು ಹಸಿರು ನಿಶಾನೆ ದೊರೆತಿದ್ದು ಸಂತಸತಂದಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೊಂಡಿದ್ದು ರೈತರಿಗೆ ಅನುಕೂಲವಾಗಲಿದೆ. ರಾಯಚೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣದಿಂದ ಕಲ್ಯಾಣಕರ್ನಾಟಕ ಮತ್ತು ಉತ್ತರ ಕರ್ನಾಟಕದ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಅನುಕೂಲವಾಗಲಿದೆ. ಕೈಗಾರಿಕೆಗಳ ಸ್ಥಾಪನೆ ಮತ್ತು ಕೆಐಎಡಿಬಿ ಜಾಗೆ ಹಂಚಿಕೆಯಲ್ಲಿ ಮುಸ್ಲಿಂ ಸಮುದಾಯಕ್ಕೆ 20% ಪ್ರತಿಶತ ಮೀಸಲು ನೀಡಿದ್ದು, ಸಮುದಾಯದ ಸರಳ ವಿವಾಹಗಳಿಗೆ 50 ಸಾವಿರ ಸಹಾಯ ಧನ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, 169 ಹಾಸ್ಟೆಲ್ ಗಳು ಅಲ್ಲದೆ ಸಿಕ್, ಬೌದ್ಧ, ಜೈನ ಸಮುದಾಯದ ಅಭಿವೃದ್ಧಿಗೆ ಅನುದಾನ ಘೋಷಣೆಯ ಮೂಲಕ ಅಲ್ಪಸಂಖ್ಯಾತರ…

Read More