ಉದಯರಶ್ಮಿ ದಿನಪತ್ರಿಕೆ
ಉತ್ತಮ ಬಜೆಟ್ ಮಂಡನೆ
“ಬಡವ, ದೀನ, ದಲಿತರು ಸೇರಿದಂತೆ ಸರ್ವಜನತೆಯ ಪರವಾದ ಬಜೆಟ್. ಗ್ಯಾರಂಟಿ ಯೋಜನೆಗಳ ಜೊತೆಜೊತೆಗೆ ಆರ್ಥಿಕ ಸಂಕಷ್ಟದಲ್ಲಿಯೂ ಬಡಜನತೆಗೆ ಉತ್ತಮ ಕೊಡುಗೆಗಳನ್ನು ನೀಡುವುದರ ಮೂಲಕ ಉತ್ತಮವಾದ ಬಜೆಟ್ ಮಂಡನೆ ಮಾಡಿದ್ದಾರೆ.”
– ಡಾ.ಪ್ರಭುಗೌಡ ಲಿಂಗದಳ್ಳಿ, ಕೆಪಿಸಿಸಿ ರಾಜ್ಯ ಪ್ರಧಾನಕಾರ್ಯದರ್ಶಿ ದೇವರಹಿಪ್ಪರಗಿ ಮತಕ್ಷೇತ್ರ
ಪ್ರಗತಿಗೆ ಮುನ್ನುಡಿ ಬರೆಯುವ ಬಜೆಟ್
“ಪ್ರತಿ ಪ್ರಗತಿಗೆ ಮುನ್ನುಡಿ ಬರೆಯುವ ಬಜೆಟ್ ಇದಾಗಿದ್ದು, ವಿಶೇಷವಾಗಿ ಬಡವರು ಹಾಗೂ ಹಿಂದುಳಿದ ವರ್ಗಗಳ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದೆ.”
– ಆನಂದಗೌಡ ದೊಡ್ಡಮನಿ
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ
ದೇವರಹಿಪ್ಪರಗಿ ಮತಕ್ಷೇತ್ರ
ಬಜೆಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ
“ಬಜೆಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಜ್ಯದ ಸಮಗ್ರ ರೈತ ಸಮುದಾಯಕ್ಕೆ ಪೂರಕವಾದ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಕೇವಲ ಇದು ಭರವಸೆಯ ಬಜೆಟ್ ಆಗಿದೆ.”
– ಪ್ರಭುಗೌಡ ಬಿರಾದಾರ ಅಸ್ಕಿ
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು
ವಿಜಯಪುರ

