Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ಕತಕನಹಳ್ಳಿ ಗ್ರಾಮದ ಮಾತೋಶ್ರೀ ಶಂಕ್ರೆಮ್ಮಾ ತಾಯಿ ಪ್ರಾಥಮಿಕ ಶಾಲೆಯಲ್ಲಿ ೭ ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಇತ್ತೀಚೆಗೆ ಜರುಗಿತು.ಕಾರ್ಯಕ್ರಮದ ಅದ್ಯಕ್ಷ ಸ್ಥಾನ ಸಂಸ್ಥೆಯ ನಿರ್ದೇಶಕ ಬಸವರಾಜ ಅರಕೇರಿ ವಹಿಸಿದ್ದರು.ಮುಖ್ಯ ಅತಿಥಿ ಎಕ್ಸಲಂಟ್ ಪಿ ಯು ಕಾಲೇಜಿನ ಉಪಪ್ರಾಚಾರ್ಯ ಮಂಜುನಾಥ ಜುನಗೊಂಡ ಮಾತನಾಡಿ, ಇಂದಿನ ಸ್ಪರ್ದಾಜಗತ್ತಿನಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಸರಕಾರಿ ಹುದ್ದೆಯಲ್ಲಿ ನೇಮಕಾತಿ ಆಗಬೇಕು ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಅದ್ಬುತವಾಗಿರಬೇಕು ಈ ಸ್ಪರ್ದಾಜಗತ್ತಿನ ಸ್ಪರ್ದಾ ಪರೀಕ್ಷೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿ ಜೀವನದಲ್ಲಿ ಏನಾದರು ಒಳ್ಳೆಯ ಸಾಧನೆ ಮಾಡಲು ಈ ಚಿಕ್ಕ ವಯಸ್ಸಿನಿಂದಲೆ ಗುರಿಯನ್ನು ಇಟ್ಟುಕೊಳ್ಳಬೇಕು. ನಿಮ್ಮ ಬಗ್ಗೆ ತಂದೆ ತಾಯಿ ಕಾಣುವ ಒಳ್ಳೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಬೇಕು. ತಾಯಿ ಯಾವಾಗಲು ತಮ್ಮ ಬಗ್ಗೆ ಒಳ್ಳೆಯ ಕನಸು ಕಾಣುತ್ತಿರುತ್ತಾಳೆ. ಆ ಕನಸು ತಾವು ಈಡೇರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.ಶಾಲೆಯ ಮುಖ್ಯಗುರು ಅರವಿಂದ ಪವಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವೇದಿಕೆಯಲ್ಲಿ ಪ್ರಮುಖರಾದ ಅಪ್ಪಾಸಾಹೇಬ ಕೊಟ್ಯಾಳ, ಶರಣಪ್ಪ ಬಬಲೇಶ್ವರ, ಸಾಹೇಬಗೌಡ ಬಿರಾದಾರ,…

Read More

ಸಾಮಾಜಿಕ ಛಾಫು ಬಿತ್ತಿ ಮರೆಯಾದ ಬನಹಟ್ಟಿಯ ಹಿರಿಯ ಚೇತನ ಉದಯರಶ್ಮಿ ದಿನಪತ್ರಿಕೆ ವರದಿ: ಗುಲಾಬಚಂದ ಜಾಧವಚಿಕ್ಕಪಡಸಲಗಿ: ಸರಳ, ಸಜ್ಜನಿಕೆಯ ಸತ್ಕಾರ್ಯಗಳಿಂದ ತಮ್ಮದೇ ವಿಶೇಷ ಛಾಪು ಮೂಡಿಸಿ ಶಿಸ್ತು, ಬದ್ದತೆಗೆ ಹೆಸರುವಾಸಿಯಾಗಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದ ಹಿರಿಯ ಚೇತನ, ಜವಳಿ ಕ್ಷೇತ್ರಕ್ಕೆ ಹೊಸ ಭಾಷ್ಪ ಬರೆದು ಅಸ್ತಂಗತರಾದ ಅಮೂಲ್ಯ ಜೀವ ರತ್ನ ನಿಂಗಪ್ಪ ರಾಚಪ್ಪ ಹೊನವಾಡ ಈಗ ಬರೀ ನೆನಪು !ಆದರ್ಶತನದ ಬೆಸುಗೆಯಲ್ಲಿ ಇಡೀ ಜೀವಪಥ ಸಾಗಿಸಿಕೊಂಡ ಬಂದ ನಿಂಗಪ್ಪ ಹೊನವಾಡ ಸಾವಲ್ಲೂ ಮಾನವೀಯತೆ ಮೆರೆದಿದ್ದಾರೆ. ಮೃತರು ಬಾಗಲಕೋಟೆ ಬಿವಿವಿ ನೇತ್ರ ಭಂಡಾರ ಮತ್ತು ಪಾರದರ್ಶಕ ಪಟಲ ಜೋಡಣಾ ಕೇಂದ್ರಕ್ಕೆ ನೇತ್ರದಾನದ ವಾಗ್ದಾನ ಮಾಡಿದ್ದಾರೆ. ಈ ಬಗ್ಗೆ ಕೇಂದ್ರದವರು ಕೃತಜ್ಞತೆಯ ಪತ್ರವನ್ನು ನೀಡಿ ಶ್ಲಾಘಿಸಿದ್ದಾರೆ. ಮತ್ತೊಬ್ಬರಿಗೆ ದೃಷ್ಟಿ ಭಾಗ್ಯ ನೀಡಿ ಮರೆಯಾಗಿರುವ ನಿಂಗಪ್ಪ ಹೊನವಾಡ ನೇಕಾರಿಕೆ ರಂಗದ ಪ್ರೇರಕ.ಜವಳಿ ಕ್ಷೇತ್ರದ ಮಾಣಿಕ್ಯರಾಗಿದ್ದರು. ತಮ್ಮ 93 ನೇ ಮುಸ್ಸಂಜೆಯ ಇಳಿವಯಸ್ಸಿನಲ್ಲಿ ಗುರುವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದರು. ಅವರ ಜೀವನ ರಂಗ ಶ್ರೇಷ್ಠ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಜೊತೆಗೆ ನೈತಿಕ ಶಿಕ್ಷಣವನ್ನು ನೀಡಲು ಎಲ್ಲ ಪಾಲಕರು ಮುಂದಾಗಬೇಕು ಎಂದು ಹೋರಾಟಗಾರ ಬಸವರಾಜ ನಂದಿಕೇಶ್ವರಮಠ ಹೇಳಿದರು.ಪಟ್ಟಣದ ವಿದ್ಯಾಜ್ಯೋತಿ ಪಬ್ಲಿಕ್ ಶಾಲೆಯ ೩ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ನಮ್ಮಲ್ಲಿ ಮಕ್ಕಳಿಗೆ ಶಿಕ್ಷಣದ ಕೊರತೆ ಇಲ್ಲ. ಆದರೆ ನೈತಿಕ ಶಿಕ್ಷಣದ ಕೊರತೆ ಸಾಕಷ್ಟು ಕಾಣುತ್ತಿದೆ. ಅದಕ್ಕೆ ಹೊಣೆಗಾರರು ಪಾಲಕರು. ನಮ್ಮ ಮಕ್ಕಳು ಡಾಕ್ಟರ್, ಇಂಜಿನೀಯರ್ ಆಗಬೇಕು ಎಂದು ಬರೀ ಓದಿನತ್ತ ಅವರನ್ನು ಪ್ರೋತ್ಸಾಹಿಸುತ್ತಿದ್ದೇವೆ ಹೊರತು ನಮ್ಮ ಮಗ ಜಗ ಬೆಳಗುವ ವ್ಯಕ್ತಿಯಾಗಲಿ ಎಂದು ಭಾವಿಸುವದಿಲ್ಲ. ಜಗ ಬೆಳಬೇಕಾದ ಮನುಷ್ಯನಿಗೆ ಮೊದಲು ಮಾನವೀಯತೆ ಬೇಕು. ನೈತಿಕತೆ ಬೇಕು. ಮತ್ತೊಬ್ಬರಿಗೆ ಸಹಾಯ ಮಾಡುವ ಒಳ್ಳೆಯ ಗುಣಗಳು ಬೇಕು. ಅದೆಲ್ಲವನ್ನು ಕಲಿಸಿಕೊಡಲು ಪಾಲಕರಿಂದ ಮಾತ್ರ ಸಾಧ್ಯ ಎಂದರು. ಇಂದಿನಿಂದಲೇ ಎಲ್ಲ ಪಾಲಕರು ನಿಮ್ಮ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲು ಮುಂದಗಿ ಎಂದರು.ಪಾಲಕರ ಪ್ರತಿನಿಧಿ, ಶಿಕ್ಷಕ ರೇವಣಸಿದ್ದಪ್ಪ ವಡಗೇರಿ ಮಾತನಾಡಿ ಸಧ್ಯದ ಸಿನಮಾನಗಳಲ್ಲಿ ಶಿಕ್ಷಣ ಸಂಸ್ಥೆಗಳು ಹಣದ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಹುಲ್ಲೂರ ಗ್ರಾಮದ ಎಸ್.ಎನ್.ಡಿ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಮಾ.೯ ರಂದು ಬೆಳಿಗ್ಗೆ ೧೧:೩೦ ಕ್ಕೆ ಸ್ಕಾಲರ್‌ಶಿಪ್ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. ಪರೀಕ್ಷೆಯಲ್ಲಿ ಟಾಪ್ ಬರುವ ೧೦ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುವದು ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎ.ಕೊಪ್ಪ ಹೇಳಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಈ ಅವಕಾಶವನ್ನು ಕಲ್ಪಿಸಿದ್ದು ಪ್ರಸಕ್ತ ಸಾಲಿನ ೪ ಮತ್ತು ೭ ನೇ ತರಗತಿಯ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದು. ಪ್ರತೀ ತರಗತಿಯಲ್ಲಿ ಪರೀಕ್ಷೆ ಬರೆದು ಟಾಪ್ ಬಂದಿರುವ ಮೊದಲ ೫ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಪ್ರತೀ ವರ್ಗಕ್ಕೆ ಮುಂದಿನ ೫ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದಲ್ಲಿ ಶೇ೫೦ ರಷ್ಟು ರಿಯಾಯತಿ ಮತ್ತು ಪರೀಕ್ಷೆಯಲ್ಲಿ ಭಾಗಿಯಾದ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದಲ್ಲಿ ಶೇ೧೦ ರಷ್ಟು ರಿಯಾಯತಿ ನೀಡಿ ಪ್ರೋತ್ಸಾಹಿಸಲಾಗುವದು. ಈ ಪರೀಕ್ಷೆಯನ್ನು ೫ ಮತ್ತು ೮ನೇ ತರಗತಿಯ ಪ್ರವೇಶ ಪರೀಕ್ಷೆ ಎಂದು ಪರಿಗಣಿಸಲಾಗುವದು. ಆಸಕ್ತ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು ಆಸಕ್ತ ತಿಕೋಟಾ ತಾಲೂಕಿನ ಕವಿಗಳು ಮತ್ತು ಕವಿಯತ್ರಿಯರು ತಮ್ಮ ಎರಡು ಸ್ವ ರಚಿತ ಕವನಗಳನ್ನು ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗನಗೌಡ ಬಿರಾದಾರ್ ಇವರ ವಿಳಾಸಕ್ಕೆ ಕಳಿಸಿಕೊಡಲು ಕ ಸಾ ಪ ಅಧ್ಯಕ್ಷರಾದ ಶ್ರೀ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮ್ಮೇಳನದ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವದು.ವಿಳಾಸ: ಎಸ್ ಬಿ ಬಿರಾದಾರ ಶಿಕ್ಷಕರುಮನೆ ನಂಬರ ಎಂ೮೧ಕೆ ಎಚ್ ಬಿ ಕಾಲೋನಿ ಇಟ್ಟಂಗಿಹಾಳ ರಸ್ತೆ;ವೈಭವ ನಗರ ವಿಜಯಪುರ೫೮೬೧೦೪೮೧೨೩೩೪೩೦೬೮, ೯೯೭೨೦೮೭೩೨೮

Read More

ಲೇಖನ- ವಿವೇಕಾನಂದ. ಎಚ್. ಕೆಬೆಂಗಳೂರುಮೊ: 9844013068 ಉದಯರಶ್ಮಿ ದಿನಪತ್ರಿಕೆ “ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?ಎದೆಯ ದನಿಗೂ ಮಿಗಿಲು‌ ಶಾಸ್ತ್ರವಿಹುದೇನು”ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ..ಸೌಜನ್ಯ ಎಂಬ ಬಾಲಕಿಯ ಕೊಲೆ ಮತ್ತು ಅತ್ಯಾಚಾರ ಇತ್ತೀಚಿನ ವರ್ಷಗಳ ಅತ್ಯಂತ ವಿಶೇಷ ಪ್ರಕರಣ. ಬಹುಶಃ ನಿಜವಾದ ಅಪರಾಧಿ ಪತ್ತೆಯಾದರೆ ಅತ್ಯಂತ ಘೋರ ಅಪರಾಧಿ ಎಂದು ಪರಿಗಣಿಸಿ ಗಲ್ಲು ಶಿಕ್ಷೆ ಆಗುವಷ್ಟು ತೀವ್ರವಾದ ಹೇಯ ಕೃತ್ಯ. ದುರಾದೃಷ್ಟವಶಾತ್ ಪೋಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯ ಆರೋಪಿ ಸಹ ಹತ್ತು ವರ್ಷಗಳ ದೀರ್ಘ ವಿಚಾರಣೆಯ ನಂತರ ನಿರಪರಾಧಿ ಎಂದು ಬಿಡುಗಡೆ ಗೊಳಿಸಲಾಗಿದೆ.ಆ ಸಂತೋಷ್ ರಾವ್ ನಿಜವಾದ ಅಪರಾಧಿಯಾಗಿದ್ದು ಸಾಕ್ಷಿ ಆಧಾರಗಳ ಕೊರತೆಯ ಕಾರಣದಿಂದಾಗಿ ಬಿಡುಗಡೆಯಾದನೇ ಅಥವಾ ಇವನಲ್ಲದೆ ಮತ್ತೊಬ್ಬ ಅಥವಾ ಮತ್ತಷ್ಟು ಜನ ಇದ್ದಾರೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಈಗ ಮತ್ತೊಮ್ಮೆ ವಿಶೇಷ ತನಿಖೆಗೆ ಒತ್ತಾಯಿಸುತ್ತಿರುವ ಪ್ರಮುಖರ ಅನುಮಾನವೇನೆಂದರೆ ಅವರಿಗೆ ಮಾಹಿತಿ ಹಕ್ಕು ಕಾಯಿದೆಯಡಿ ದೊರೆತಿರುವ ದಾಖಲೆಗಳ ಪ್ರಕಾರ ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಹತ್ತು ಹದಿನೈದು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಸಕ್ತ ೨೦೨೫-೨೬ ರ ಬಜೆಟ್ ನಲ್ಲಿ ಆರ್ಥಿಕ ಸುಧಾರಣೆ, ಆರ್ಥಿಕ ಸಬಲೀಕರದತ್ತ ರಾಜ್ಯವನ್ನು ತೆಗೆದುಕೊಂಡು ಹೋಗುವ ಯಾವುದೇ ಕ್ರಮ ಇಲ್ಲ. ಇದೊಂದು ಮತ್ತೊಂದು ಜನರ ಮೇಲೆ ಆರ್ಥಿಕ ಹೊರೆಯನ್ನು ಹೇರಿರುವ ಜನ ವಿರೋಧಿ ನಿರಾಶಾದಾಯಕ ಬಜೆಟ್ – ರಮೇಶ್ ಜಿಗಜಿಣಗಿಸಂಸದರು, ವಿಜಯಪುರ ದೂರದೃಷ್ಟಿರಹಿತ ಬಜೆಟ್ “ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಅತ್ಯಂತ ನಿರಾಶಾದಾಯಕ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ರಹಿತ ಬಜೆಟ್ ಇದಾಗಿದೆ.” – ಅಪ್ಪಾಸಾಹೇಬ ಪಟ್ಟಣಶೆಟ್ಟಿಮಾಜಿ ಸಚಿವರು ನಿರಾಶಾದಾಯಕ ಬಜೆಟ್ “ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ನಿರಾಶಾದಾಯಕ ಬಜೆಟ್ ಆಗಿದೆ.” – ವಿಜಯ್ ಜೋಶಿಬಿಜೆಪಿ ಮಾಧ್ಯಮ ಪ್ರಮುಖ

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಬಸ್ ನಿಲ್ದಾಣದ ಬಳಿ ಜನಜಂಗುಳಿ ರಸ್ತೆಯ ಮದ್ಯೆ ಕಬ್ಬಿನ ಟ್ಯಾಕ್ಟರ ಪಲ್ಟಿಯಾಗಿದ್ದು, ತಪ್ಪಿದ ಅನಾಹುತ ಬೈಕುಗಳು ಸಿಕ್ಕಿಕೊಂಡು ನುಚ್ಚಾಗಿವೆ.ಶುಕ್ರವಾರ ಮದ್ಯಾನ ೨ ಗಂಟೆ ಸುಮಾರಿಗೆ ಕಬ್ಬು ತುಂಬಿಕೊಂಡು ತೆರಳುತ್ತಿದ್ದ ಟ್ಯಾಕ್ಟರನ ಹಿಂಬದಿಯ ಚಕ್ರ ಮುರಿದ ಪರಿಣಾಮ ಕಬ್ಬಿನ ಸಮೇತ ಟ್ಯಾಕ್ಟರ ಪಲ್ಟಿಯಾಗಿದೆ ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿಯಾಗಿಲ್ಲ. ಎರಡು ದ್ವಿಚಕ್ರ ವಾಹನಗಳ ಮೇಲೆ ಬಿದ್ದ ಪರಿಣಾಮ ದ್ವಿಚಕ್ರ ವಾಹನಗಳು ಅಪ್ಪಚ್ಚಿಯಾಗಿವೆ.ಆಲಮೇಲ ಪಟ್ಟಣದಲ್ಲಿ ಶುಕ್ರವಾರ ವಾರದ ಸಂತೆ ಜರುಗುತ್ತೆ. ಸುತ್ತಮುತ್ತಲಿನ ಹಳ್ಳಿಯ ಸಾವಿರಾರು ಜನರು ಸಂತೆಗೆ ಆಗಮಿಸಿ ಜನರಿಂದ ತುಂಬಿರುತ್ತದೆ ಈ ಮದ್ಯೆ ಕಬ್ಬಿನ ಟ್ಯಾಕ್ಟರ ಕಬ್ಬಿನ ಸಮೇತ ಪಲ್ಟಿಯಾಗಿದ್ದು ಅದೃಷ್ಟವಶಾತ್ ಪಾರಾಗಿದ್ದು ದೊಡ್ಡ ದುರಂತ ತಪ್ಪಿದೆ. ಅದೆ ಜಾಗದಲ್ಲಿ ರಸ್ತೆ ಪಕ್ಕ ಸಣ್ಣಪುಟ ವ್ಯಾಪಾರ ವೈವಾಟುಗಳು ನಡೆಯುವುದರಿಂದ ಸದಾಕಾಲ ಜನರಿಂದ ಕೂಡಿರುತ್ತದೆ. ಕಬ್ಬಿನ ಟ್ಯಾಕ್ಟರನ ಹಿಂಬದಿ ಚಕ್ರ ಮುರಿದು ಬೀಳುತ್ತಿದ್ದಂತೆ ಜನರು ದೂರ ಸರೆದು ಅಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿ ದ್ವಿಚಕ್ರ ವಾಹನಗಳಿದ್ದು ಎರಡು ಬೈಕುಗಳ ಮೇಲೆ…

Read More

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಮೊಣಕಾಲು ಮತ್ತು ಚಪ್ಪೆಯ ಎಲಬು ಮರು ಜೋಡಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಮೊಣಕಾಲು ಮತ್ತು ಚಪ್ಪೆಯ ಎಲುಬು ಮರು ಜೋಡಣಾ ಶಸ್ತ್ರಚಿಕಿತ್ಸೆಯನ್ನು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಶಿವಾನಂದ ಮಾಸ್ತಿಹೊಳಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.ಈ ಶಸ್ತ್ರಚಿಕಿತ್ಸೆಯನ್ನು ಬೆಳಗಾವಿಯ ವೈದ್ಯಕೀಯ ಸಹ ಪ್ರಾಧ್ಯಾಪಕರಾದ ಡಾ.ಸತೀಶ ನೇಸರಿ ಇವರ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಯ ಎಲುಬು-ಕೀಲು ತಜ್ಞ ವೈದ್ಯರಾದ ಡಾ.ಎಸ್.ನಾಗಠಾಣ, ಡಾ.ಎಸ್.ವಿ.ಹಾವಿನಾಳ, ಡಾ.ಜಿಲಾನಿ ಬಾಷಾ, ಡಾ.ಆನಂದ ಮೇತ್ರಿ ಹಾಗೂ ಅರವಳಿಕೆ ತಜ್ಞರಾದ ಡಾ.ಸಂದೀಪ ಸಜ್ಜನ, ಮಹಾ ಶಸ್ತçಚಿಕಿತ್ಸೆಯ ವಿಭಾಗದ ಉಸ್ತುವಾರಿಗಳಾದ ಶ್ರೀಮತಿ ಕಾಶಿಬಾಯಿ ಬಡಿಗೇರ, ಶ್ರೀಮತಿ ಕಸ್ತೂರಿ ನಡುವಿನಮನೆ, ಶ್ರೀಮತಿ ಸುಮಿತ್ರಾ ರಾಮಕೃಷ್ಣ ಮತ್ತು ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗ ಈ ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ಶ್ರಮವಹಿಸಿದ್ದಾರೆ.ಸ್ಥಳೀಯ ವೈದ್ಯಾಧಿಕಾರಿಯಾದ ಡಾ.ಚಂದು ರಾಠೋಡ, ಎಬಿಎಆರ್‌ಕೆ ನೋಡಲ್ ಅಧಿಕಾರಿಗಳಾದ ಡಾ.ಎ.ಜಿ.ಬಿರಾದಾರ ಜಿಲ್ಲಾ ಸಂಯೋಜಕರಾದ ಡಾ.ಸತೀಶ ಶಿರೋಳ ಹಾಗೂ ಸಿಬ್ಬಂದಿ ಸಹಕಾರ ನೀಡಿದ್ದಾರೆ. ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅನಾಮಧೇಯ ಅಂದಾಜು ೩೦ ರಿಂದ ೩೫ ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತು ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮಧೇಯ ವ್ಯಕ್ತಿಯ ವಾರಸುದಾರರ ಪತ್ತೆಗೆ ಸಾರ್ವಜನಿಕರಲ್ಲಿ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.ಪತ್ತೆಯಾದ ವ್ಯಕ್ತಿಯು ೫.೮ ಫೂಟ್ ಎತ್ತರ, ಸಾದಾಕಪ್ಪು ಬಣ್ಣ, ದುಂಡು ಮುಖ, ದಪ್ಪ ಮೂಗು ಹೊಂದಿದ್ದು, ಕರಿ ಬಣ್ಣದ ಜಾಕೇಟ್, ನೀಲಿ ಬಣ್ಣದ ಟೀ ಶರ್ಟ್ ಧರಿಸಿರುತ್ತಾನೆ.ಈ ಚಹರೆಪಟ್ಟೆಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಸಾರ್ವಜನಿಕರು ಜಿಲ್ಲೆಯ ಡಿಎಸ್‌ಪಿ ಮೊಬೈಲ್ ಸಂಖ್ಯೆ :೯೪೮೦೮೦೪೨೨೦, ವಿಜಯಪುರ ಸಂಚಾರಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೫೨-೨೫೨೬೦೦ ಹಾಗೂ ಮೊಬೈಲ್ ಸಂಖ್ಯೆ: ೯೪೮೦೮೦೪೨೪೬, ವಿಜಯಪುರ ಕಂಟ್ರೋಲ್ ರೂಂ ದೂರವಾಣಿ ೦೮೩೫೨-೨೫೦೮೪೪ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಚಾರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More