Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026

ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ

ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜವಳಿ ಉದ್ಯಮದ ಪ್ರೇರಕ ನಿಂಗಪ್ಪ ಹೊನವಾಡ ಈಗ ಬರೀ ನೆನಪು
(ರಾಜ್ಯ ) ಜಿಲ್ಲೆ

ಜವಳಿ ಉದ್ಯಮದ ಪ್ರೇರಕ ನಿಂಗಪ್ಪ ಹೊನವಾಡ ಈಗ ಬರೀ ನೆನಪು

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಾಮಾಜಿಕ ಛಾಫು ಬಿತ್ತಿ ಮರೆಯಾದ ಬನಹಟ್ಟಿಯ ಹಿರಿಯ ಚೇತನ

ಉದಯರಶ್ಮಿ ದಿನಪತ್ರಿಕೆ

ವರದಿ: ಗುಲಾಬಚಂದ ಜಾಧವ
ಚಿಕ್ಕಪಡಸಲಗಿ: ಸರಳ, ಸಜ್ಜನಿಕೆಯ ಸತ್ಕಾರ್ಯಗಳಿಂದ ತಮ್ಮದೇ ವಿಶೇಷ ಛಾಪು ಮೂಡಿಸಿ ಶಿಸ್ತು, ಬದ್ದತೆಗೆ ಹೆಸರುವಾಸಿಯಾಗಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದ ಹಿರಿಯ ಚೇತನ, ಜವಳಿ ಕ್ಷೇತ್ರಕ್ಕೆ ಹೊಸ ಭಾಷ್ಪ ಬರೆದು ಅಸ್ತಂಗತರಾದ ಅಮೂಲ್ಯ ಜೀವ ರತ್ನ ನಿಂಗಪ್ಪ ರಾಚಪ್ಪ ಹೊನವಾಡ ಈಗ ಬರೀ ನೆನಪು !
ಆದರ್ಶತನದ ಬೆಸುಗೆಯಲ್ಲಿ ಇಡೀ ಜೀವಪಥ ಸಾಗಿಸಿಕೊಂಡ ಬಂದ ನಿಂಗಪ್ಪ ಹೊನವಾಡ ಸಾವಲ್ಲೂ ಮಾನವೀಯತೆ ಮೆರೆದಿದ್ದಾರೆ. ಮೃತರು ಬಾಗಲಕೋಟೆ ಬಿವಿವಿ ನೇತ್ರ ಭಂಡಾರ ಮತ್ತು ಪಾರದರ್ಶಕ ಪಟಲ ಜೋಡಣಾ ಕೇಂದ್ರಕ್ಕೆ ನೇತ್ರದಾನದ ವಾಗ್ದಾನ ಮಾಡಿದ್ದಾರೆ. ಈ ಬಗ್ಗೆ ಕೇಂದ್ರದವರು ಕೃತಜ್ಞತೆಯ ಪತ್ರವನ್ನು ನೀಡಿ ಶ್ಲಾಘಿಸಿದ್ದಾರೆ. ಮತ್ತೊಬ್ಬರಿಗೆ ದೃಷ್ಟಿ ಭಾಗ್ಯ ನೀಡಿ ಮರೆಯಾಗಿರುವ ನಿಂಗಪ್ಪ ಹೊನವಾಡ ನೇಕಾರಿಕೆ ರಂಗದ ಪ್ರೇರಕ.ಜವಳಿ ಕ್ಷೇತ್ರದ ಮಾಣಿಕ್ಯರಾಗಿದ್ದರು. ತಮ್ಮ 93 ನೇ ಮುಸ್ಸಂಜೆಯ ಇಳಿವಯಸ್ಸಿನಲ್ಲಿ ಗುರುವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದರು. ಅವರ ಜೀವನ ರಂಗ ಶ್ರೇಷ್ಠ ಪುಂಜದ ಸಂಸ್ಕಾರದಲ್ಲಿ ಮಿಂದೆದ್ದು ಈ ಭಾಗದಲ್ಲಿ ಪರಿಮಳಿಸಿ ಘಮಘಮಿಸಿದೆ. ಸರಳತೆಯ ಆದರ್ಶಗಳ ದ್ರವ್ಯ ಸುಗಂಧ ಮನಮನಗಳಲ್ಲಿ ಬೀರಿ ಸೌಖ್ಯತೆಯ ಪ್ರತಿಬಿಂಬ ಮೂಡಿಸಿವೆ. ಅನರ್ಘ್ಯ ಚೈತನ್ಯ ಜೀವ ಮರೆಯಿಂದ ಅದೆಷ್ಟೋ ಮನಗಳು ನೋವಿನ ಮಡುಗಟ್ಟಿನಲ್ಲಿ ಬೆಂದು ನೊಂದಿವೆ. ಕಂಬನಿ ಧಾರೆಯ ಮಿಡಿತದಲ್ಲಿ ಶೋಕತಪ್ತವಾಗಿ ಹೊರಳಾಡಿ ದುಃಖಿಸಿವೆ. ವಾಣಿಜ್ಯ ನಗರಿ ಬನಹಟ್ಟಿ-ರಬಕವಿ ಕಂಡ ಅಪರೂಪದ ಮನುಜೀವಗಳಲ್ಲೊಂದಾದ ನಿಂಗಪ್ಪ ಹೊನವಾಡ ಅವರ ಜೀವನ ಚರಿತ್ರೆಯ ಯಶೋಗಾಥೆ ಬಲು ರೋಚಕಮಯವಾಗಿದೆ.
ಸರಳ ಜೀವಿಯ ನಡೆ,ನುಡಿ ಮೆಲುಕು
ದಿವ್ಯಾನುಭೂತಿಯ ತತ್ವಗಳನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ ಸೃಜನಶೀಲ ಈ ಮಹಾನುಭಾವರ ನಡೆ, ನುಡಿ ಒಂದಕ್ಕೊಂದು ಸಾಮೀಪ್ಯತೆಯ ಕೊಂಡಿಗಳಾಗಿದ್ದವು. ಅವರ ಸಮಾಜಮುಖಿ ಸಮರ್ಪಣಾ ಭಾವ ಎಂದಿಗೂ ಮರೆಯಲಾಗದು. ಆಶಾ ಕಿರಣದ ದ್ರುವತಾರೆಯಾಗಿ ಮಿನುಗಿದ್ದಾರೆ.ಜನತೆಯ ಬಾಳಲ್ಲಿ ಸರಳತೆವೆಂಬ ದೃಢತೆಯನ್ನು ಸೃಷ್ಟಿಸಿದ್ದಾರೆ. ಹೀಗಾಗಿ ಜನಸಾಮಾನ್ಯರ ಬದುಕಿನ ಅಂಗಳದ ಮನದಲ್ಲಿ ನೆಲೆಯಾಗಿ ಹೊಸ ಅಲೆ ಪುಷ್ಟೀಕರಣಗೊಳಿಸಿದ್ದಾರೆ.
ನಡೆದು ಬಂದ ದಾರಿಯೂ ಬದಲಾವಣೆ ದಿಕ್ಸೂಚಿಯೂ
ನಿಂಗಪ್ಪ ರಾಚಪ್ಪ ಹೊನವಾಡ ಬಡತನದ ಬೇಗುದಿಯಲ್ಲಿ ಬೆಂದು,ನೊಂದು ಬೆಂಕಿಯಲ್ಲಿ ಅರಳಿದ ಹೂವಂತೆ ಜೀವನ ಸಾಗಿಸಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದವರು. ಬನಹಟ್ಟಿಗೆ ವಲಸೆ ಬಂದು ಜವಳಿ ಕ್ರಾಂತಿ ಗೈದವರು. ಇವರ ಸೃಜನಾತ್ಮಕ ಯೋಚನೆ,ಯೋಜನೆಯಿಂದ ನೇಯ್ಗೆಯ ಜಟಪಟ ಸದ್ದು ಯಾವುದೇ ರೀತಿಯ ಗದ್ದಲವಿಲ್ಲದೆ ಆರಂಭ ಕಂಡಿತು. ರಬಕವಿ-ಬನಹಟ್ಟಿ ಅವಳಿ ಪಟ್ಟಣದಲ್ಲಿ ಮೆಲ್ಲನೆ ಶುರುವಾದ ಕೈಮಗ್ಗದ ಸೀರೆ ನೇಯ್ಗೆ ಉತ್ಪನ್ನಗಳು ಸಾಕಷ್ಟು ಪ್ರಚೋದನೆಗೆ ಒಳಗಾಗುತ್ತಾ ಸಾಗಿದವು.ಕೈಮಗ್ಗದ ಸೀರೆ ಆಕರ್ಷಣೆ ಕೇಂದ್ರವಾಗಿ ಕಂಗೊಳಿಸಿದ್ದು ಮಹಿಳಾ ಲೋಕದ ಗಮನ ಇತ್ತ ಸೆಳೆಯುವಂತೆ ಮಾಡಿತು. ನೇಕಾರಿಕೆಗೆ ನವ ದಿಕ್ಕುದಿಸೆಯ ಇಂಬು ಸಂದಿತು.
1935 ರಲ್ಲಿ ಜನ್ಮ ತಳೆದ ನಿಂಗಪ್ಪ ಹೊನವಾಡ ತಮ್ಮ15 ನೇ ವಯಸ್ಸಿನಲ್ಲಿಯೆ ಬನಹಟ್ಟಿಗೆ ವಲಸೆ ಬಂದು ಜವಳಿ ಮಳಿಗೆಯೊಂದರಲ್ಲಿ ಕೆಲಸಕ್ಕೆ ಕಾಲಿಡಬೇಕಾದ ಪರಿಸ್ಥಿತಿ ಬಂತು! ನಂತರದ ದಿನಮಾನಗಳಲ್ಲಿ ಸಾವಧಾನಚಿತ್ತದ ಪರಿಶ್ರಮದಿಂದ ಬೆವರು ಹನಿ ಸುರಿಸುವುದರೊಂದಿಗೆ ಸುಧಾರಣೆಗೊಂಡರು. ನಾಲ್ಕು ಮಗ್ಗಗಳ ಮಾಲೀಕರಾಗಿ ಯಶಸ್ಸು ದಾರಿ ಕಂಡ ಬಳಿಕ ಬದುಕಿನ ಪಥರಥ ಬದಲಾಯಿತು. ಮೊದಲು ಸೀರೆ ವ್ಯಾಪಾರ ವಹಿವಾಟು ಆರಂಭಿಸಿದರು.ಸೀರೆ ಉದ್ಯಮವನ್ನು ಈ ಭಾಗದಲ್ಲಿ ಬೃಹತ್ತಾದ ಉದ್ಯಮವನ್ನಾಗಿ ರೂಪಿಸಿ ಬೆಳೆಸಿದರು.ಪರಿಣಾಮ ವಿವಿಧ ರಾಜ್ಯ, ದೇಶಗಳಲ್ಲಿ ಇಲ್ಲಿನ ಸೀರೆಗಳ ಚಿತ್ತಾಕರ್ಷಕ ವೈಭವ ನಮ್ಯತೆ, ರಮ್ಯತೆಯಿಂದ ರಾರಾಜಿಸಿದವು. ಈ ಉದ್ಯಮದಲ್ಲಿ ನಿಂಗಪ್ಪನವರು ಜನಮನ್ನಣೆ ಪಡೆದು ಬಾಗಲಕೋಟೆ ಜಿಲ್ಲೆಯ ಗಣ್ಯ ವ್ಯಾಪಾರಸ್ಥರಲ್ಲೊಬ್ಬರಾಗಿ ಗೋಚರಿಸಿದರು.
ಹೊನವಾಡ ಟೆಕ್ಸ್ ಟೈಲ್ ಶುಭಾರಂಭಗೊಳಿಸಿ ರಾಜ್ಯದ ವಿವಿಧ ಭಾಗಗಳಲ್ಲಿ, ದಕ್ಷಿಣ ಭಾಗದ ಹಲ ಕಡೆಗಳಲ್ಲಿ ಸೀರೆ ಉದ್ಯಮದ ವೈವಿಧ್ಯಮಯ ತೋರಣ ಪೋಣಿಸಿದರು. ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿ ದುಡಿದು ಜೀವ ಸವೆದು ಮೈಮನ ಹಣ್ಣಾಗಿಸಿಕೊಂಡು ಪ್ರಗತಿ ಬೆಳಕು ಕಂಡಿದ್ದಾರೆ.
ಬನಹಟ್ಟಿ ಹಟಗಾರ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ನಿದೇ೯ಶಕರಾಗಿ , ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಹಾಗೂ ಜನತಾ ಶಿಕ್ಷಣ ಸಂಘದಲ್ಲಿ ಸದಸ್ಯರಾಗಿ ಬಹು ವಸಂತಕಾಲದವರೆಗೆ ಪರಿಶ್ರಮಿ ಜೀವಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲೂ ತಮ್ಮ ವಿಶಿಷ್ಟ ಛಾಪು, ಭಾವಾವರಣ ಮೂಡಿಸಿದ್ದಾರೆ.
ಒಬ್ಬ ಪುರುಷನ ಏಳಿಗೆಗೆ ಒಬ್ಬ ಹೆಣ್ಣು ಕಾರಣವೆಂಬ ಸಾಂಪ್ರದಾಯಿಕ ಶೈಲಿಯ ಹಿರಿಯರ ನುಡಿಗಳು ನಿಂಗಪ್ಪ ಹೊನವಾಡ ಅವರ ಜೀವನದಲ್ಲಿ ಹೆಚ್ಚು ಕಡಿಮೆ ಸಂದಿಸುತ್ತದೆ.ಇವರ ಬಾಳಸಂಗಾತಿ, ಧರ್ಮಪತ್ನಿ ದಿ, ಗುರುಶಾಂತವ್ವ ನಿ.ಹೊನವಾಡ ಇವರು ಸಹ ಪತಿಯ ಕಾಯಕದಲ್ವಿ ಕೈಜೋಡಿಸಿ ದೇವರನ್ನು ಕಂಡಿದ್ದಾರೆ.ಇವರು ಕಳೆದ ಎಂಟು ತಿಂಗಳ ಹಿಂದೆ ವಿಧಿವಶರಾಗಿದ್ದಾರೆ.
ನಿಂಗಪ್ಪ ಹೊನವಾಡ ದಂಪತಿಗಳಿಗೆ ಬರೋಬ್ಬರಿ ಬರೋಬ್ಬರಿ 9 ಜನ ಮಕ್ಕಳು. ಇವರಲ್ಲಿ 3 ಜನ ಪುತ್ರರು 6 ಪುತ್ರಿಯರು. ಈರಣ್ಣ ಶ್ರೀಶೈಲ ಸುಪುತ್ರರು ಇಬ್ಬರು ಗಣ್ಯ ವ್ಯಾಪಾರಸ್ಥರ ಪಟ್ಟಿಯಲ್ಲಿದ್ದಾರೆ. ಹಲವಾರು ಬ್ಯಾಂಕುಗಳ ನಿದೇ೯ಶಕರಾಗಿ ಸೇವೆ ಸಲ್ಲಿಸುತ್ತಿದ್ದರೆ ಇನ್ನೋರ್ವ ಮಗ ಡಾ.ಮಹಾದೇವ ಹೊನವಾಡ ವೈದ್ಯಕೀಯ ಕ್ಷೇತ್ರದಲ್ಲಿ ಕಾಯಕ ಗೈಯುತ್ತಿದ್ದಾರೆ. ಇವರು ಹುಬ್ಬಳ್ಳಿಯಲ್ಲಿ ಬೃಹತ್ “ಸ್ಪಂದನಾ ಹಾಸ್ಪಿಟಲ್” ತೆರೆದು ಜನತೆಯ ಆರೋಗ್ಯ ಸೇವೆ ಕೈಗೊಂಡಿದ್ದಾರೆ. ಡಾ.ಮಹಾದೇವ ಅವರ ಧರ್ಮಪತ್ನಿ ಡಾ.ವಿದ್ಯಾ ಎಂ ಮಹಾದೇವ ಅವರು ಕೂಡಾ ಅಲ್ಲೇ ಸೇವೆ ಸಮಪಿ೯ಸುತ್ತಿದ್ದಾರೆ. ಗಿರಿಜಾ, ಸೌಮ್ಯಾ, ವಿದ್ಯಾ ಸೊಸೆಯಂದಿರು ಹೊನವಾಡ ಮನೆ ನಂದಾದೀಪವಾಗಿದ್ದಾರೆ.
ಇನ್ನೊಂದು ವಿಶೇಷವೆಂದರೆ 6 ಜನ ಹೆಣ್ಣು ಮಕ್ಕಳಲ್ಲಿ ಡಾ, ಶೋಭಾ ಹೊನವಾಡ ಹಾಗೂ ಡಾ, ಸಾವಿತ್ರಿ ಹೊನವಾಡ ಇಬ್ಬರು ವೈದ್ಯರು. ಇವರು ಗದಗ ಹಾಗೂ ಹುಬ್ಬಳ್ಳಿ ನಗರದಲ್ಲಿ ಸ್ವಂತ ಆಸ್ಪತ್ರೆ ನಿಮಿ೯ಸಿ ಜನರ ಆರೋಗ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿ ಕಾಯಕದಲ್ಲಿ ಗುರುತಿಸಿಕೊಂಡಿದ್ದಾರೆ. ಉಳಿದ ನಾಲ್ಕು ಜನರಲ್ಲಿ ಮೂರು ಜನ ಗ್ರಹಿಣಿಯರಾಗಿ, ಒಬ್ಬರು ಮಹಿಳಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊಮ್ಮಕ್ಕಳು ಸಹ ಡಾಕ್ಟರ್ ಗಳಾಗಿ, ಇಂಜಿನಿಯರಗಳಾಗಿ ಹಾಗೂ ವ್ಯಾಪಾರಸ್ಥರಾಗಿ ಸೇವೆ ಮಾಡುತ್ತಾ ನಾಗರಿಕ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ.
ಒಟ್ಟಿಗೆ ಹೊನವಾಡ ಕುಟುಂಬ ಪರಿವಾರ ಸಂಸ್ಕಾರಯುತ ಸುಖಿ ಸಂಸಾರದ ನೌಕೆಯಲ್ಲಿ ಸಾಗುತ್ತಿದ್ದಾಗ ಮನೆಯ ಹಿರಿಯ ಯಜಮಾನ ನಿಂಗಪ್ಪ ಹೊನವಾಡ ಅವರು ದೇವರ ಕರೆಗೆ ಮನ್ನಿಸಿ ಮರೆಯಾಗಿ ಹೋಗಿದ್ದು ಹೊನವಾಡ ಪರಿವಾರದಲ್ಲಿ ದುಃಖ ಉಮ್ಮಳಿಸಿದೆ, ಶೋಕ ಭಾವದಲ್ಲಿ ಕಣ್ಣಿರು ಧಾರೆ ಎರೆದು ಹೃದಯ ಮನ ಭಾರ ಮಾಡಿಕೊಂಡಿದೆ.
ಸರಳತೆ ವ್ಯಾಖ್ಯಾನಕ್ಕೆ ಮುಗ್ದತೆ ಭಾಷ್ಪ ಬರೆದು ಅಸ್ತಂಗತರಾದ ಹಿರಿಯ ಜೀವ ನಿಂಗಪ್ಪ ಹೊನವಾಡ ಅವರ ದಿವ್ಯ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ, ಕುಟುಂಬ ಪರಿವಾರ, ಹಿತೈಷಿಗಳಿಗೆಲ್ಲ ದುಃಖ ಸಹಿಸಿಕೊಳ್ಳುವ ಶಕ್ತಿ ದಯಪಾಲಿಸಲಿ ಎಂಬ ಪ್ರಾರ್ಥನೆ ಅಭಿಮಾನಿಗಳ ಬಳಗ ಕೋರಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026

ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ

ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ

ಇಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಲೋಕಾರ್ಪಣೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026
    In ದಿನಪತ್ರಿಕೆ
  • ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ
    In (ರಾಜ್ಯ ) ಜಿಲ್ಲೆ
  • ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ
    In (ರಾಜ್ಯ ) ಜಿಲ್ಲೆ
  • ಇಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಲೋಕಾರ್ಪಣೆ
    In (ರಾಜ್ಯ ) ಜಿಲ್ಲೆ
  • ಪಿಓಪಿ ಗಣೇಶ ಬದಲು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ
    In (ರಾಜ್ಯ ) ಜಿಲ್ಲೆ
  • ಪ್ರಧಾನಿ ಮೋದಿ ಸಮ್ಮುಖದಲ್ಲಿ ಶಿಫಾ ಜಮಾದಾರ ವಿಚಾರ ಮಂಡನೆ
    In (ರಾಜ್ಯ ) ಜಿಲ್ಲೆ
  • ಕ್ರೀಡೆ ನಾಯಕತ್ವ, ಆತ್ಮವಿಶ್ವಾಸ ಬೆಳೆಸುವ ಸಾಧನ :ಡಾ.ಕಾಗವಾಡೆ
    In (ರಾಜ್ಯ ) ಜಿಲ್ಲೆ
  • ಬೇಕಾಬಿಟ್ಟಿಯಾಗಿ ಬರಗಾಲ ಪರಿಸ್ಥಿತಿ ನಿಭಾಯಿಸುತ್ತಿರುವ ಸರ್ಕಾರ
    In (ರಾಜ್ಯ ) ಜಿಲ್ಲೆ
  • ತಂತ್ರಜ್ಞಾನ ಮಿತವಾಗಿ ಬಳಸಿ, ನೈಜ ಸಂಬಂಧಗಳಿಗೆ ಒತ್ತು ನೀಡಿ
    In (ರಾಜ್ಯ ) ಜಿಲ್ಲೆ
  • ಕೂಡಲೇ ಬೆಳೆ ನಷ್ಟ ಪರಿಹಾರ ಬಿಡುಗಡೆಗೆ ರೈತರ ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.