ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅನಾಮಧೇಯ ಅಂದಾಜು ೩೦ ರಿಂದ ೩೫ ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತು ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮಧೇಯ ವ್ಯಕ್ತಿಯ ವಾರಸುದಾರರ ಪತ್ತೆಗೆ ಸಾರ್ವಜನಿಕರಲ್ಲಿ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಪತ್ತೆಯಾದ ವ್ಯಕ್ತಿಯು ೫.೮ ಫೂಟ್ ಎತ್ತರ, ಸಾದಾಕಪ್ಪು ಬಣ್ಣ, ದುಂಡು ಮುಖ, ದಪ್ಪ ಮೂಗು ಹೊಂದಿದ್ದು, ಕರಿ ಬಣ್ಣದ ಜಾಕೇಟ್, ನೀಲಿ ಬಣ್ಣದ ಟೀ ಶರ್ಟ್ ಧರಿಸಿರುತ್ತಾನೆ.
ಈ ಚಹರೆಪಟ್ಟೆಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಸಾರ್ವಜನಿಕರು ಜಿಲ್ಲೆಯ ಡಿಎಸ್‌ಪಿ ಮೊಬೈಲ್ ಸಂಖ್ಯೆ :೯೪೮೦೮೦೪೨೨೦, ವಿಜಯಪುರ ಸಂಚಾರಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೫೨-೨೫೨೬೦೦ ಹಾಗೂ ಮೊಬೈಲ್ ಸಂಖ್ಯೆ: ೯೪೮೦೮೦೪೨೪೬, ವಿಜಯಪುರ ಕಂಟ್ರೋಲ್ ರೂಂ ದೂರವಾಣಿ ೦೮೩೫೨-೨೫೦೮೪೪ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಚಾರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

