ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ಬಸ್ ನಿಲ್ದಾಣದ ಬಳಿ ಜನಜಂಗುಳಿ ರಸ್ತೆಯ ಮದ್ಯೆ ಕಬ್ಬಿನ ಟ್ಯಾಕ್ಟರ ಪಲ್ಟಿಯಾಗಿದ್ದು, ತಪ್ಪಿದ ಅನಾಹುತ ಬೈಕುಗಳು ಸಿಕ್ಕಿಕೊಂಡು ನುಚ್ಚಾಗಿವೆ.
ಶುಕ್ರವಾರ ಮದ್ಯಾನ ೨ ಗಂಟೆ ಸುಮಾರಿಗೆ ಕಬ್ಬು ತುಂಬಿಕೊಂಡು ತೆರಳುತ್ತಿದ್ದ ಟ್ಯಾಕ್ಟರನ ಹಿಂಬದಿಯ ಚಕ್ರ ಮುರಿದ ಪರಿಣಾಮ ಕಬ್ಬಿನ ಸಮೇತ ಟ್ಯಾಕ್ಟರ ಪಲ್ಟಿಯಾಗಿದೆ ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿಯಾಗಿಲ್ಲ. ಎರಡು ದ್ವಿಚಕ್ರ ವಾಹನಗಳ ಮೇಲೆ ಬಿದ್ದ ಪರಿಣಾಮ ದ್ವಿಚಕ್ರ ವಾಹನಗಳು ಅಪ್ಪಚ್ಚಿಯಾಗಿವೆ.
ಆಲಮೇಲ ಪಟ್ಟಣದಲ್ಲಿ ಶುಕ್ರವಾರ ವಾರದ ಸಂತೆ ಜರುಗುತ್ತೆ. ಸುತ್ತಮುತ್ತಲಿನ ಹಳ್ಳಿಯ ಸಾವಿರಾರು ಜನರು ಸಂತೆಗೆ ಆಗಮಿಸಿ ಜನರಿಂದ ತುಂಬಿರುತ್ತದೆ ಈ ಮದ್ಯೆ ಕಬ್ಬಿನ ಟ್ಯಾಕ್ಟರ ಕಬ್ಬಿನ ಸಮೇತ ಪಲ್ಟಿಯಾಗಿದ್ದು ಅದೃಷ್ಟವಶಾತ್ ಪಾರಾಗಿದ್ದು ದೊಡ್ಡ ದುರಂತ ತಪ್ಪಿದೆ. ಅದೆ ಜಾಗದಲ್ಲಿ ರಸ್ತೆ ಪಕ್ಕ ಸಣ್ಣಪುಟ ವ್ಯಾಪಾರ ವೈವಾಟುಗಳು ನಡೆಯುವುದರಿಂದ ಸದಾಕಾಲ ಜನರಿಂದ ಕೂಡಿರುತ್ತದೆ. ಕಬ್ಬಿನ ಟ್ಯಾಕ್ಟರನ ಹಿಂಬದಿ ಚಕ್ರ ಮುರಿದು ಬೀಳುತ್ತಿದ್ದಂತೆ ಜನರು ದೂರ ಸರೆದು ಅಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿ ದ್ವಿಚಕ್ರ ವಾಹನಗಳಿದ್ದು ಎರಡು ಬೈಕುಗಳ ಮೇಲೆ ಬಿದ್ದ ಕಬ್ಬನ್ನು ಸಾರ್ವಜನಿಕರು ಬೇರೆಡೆ ಸ್ಥಳಾಂತರಿಸಿ ಬೈಕ್ ಹೊರ ತಗೆದಿದ್ದಾರೆ. ವಿಷಯ ತಿಳಿದ ಆಲಮೇಲ ಪೊಲೀಸ್‌ರು ಸ್ಥಳಕ್ಕೆ ಆಗಮಿಸಿ ಜೆಸಿಬಿಯಿಂದ ತೆರವು ಕಾರ್ಯಚರಣೆಗೆ ಅನುವು ಮಾಡಿ ತಕ್ಷಣವೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಅನುಕೂಲ ಮಾಡಿಕೊಟ್ಟರು.

