Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಆರೋಗ್ಯ ಇಲಾಖೆಯಲ್ಲಿನ ನಿರತ ನುರಿತ ಸಿಬ್ಬಂದಿಗಳ ಸೇವೆಯನ್ನು ಸಾರ್ವಜನಿಕರು ಸೇರಿದಂತೆ ವಿಶೇಷವಾಗಿ ಗ್ರಾಮೀಣ ಜನತೆ ನೆನೆಯುವಂತಾಗಬೇಕು ಆಗ ಮಾತ್ರ ಸೇವೆಗೆ ಸಾರ್ಥಕತೆ ಎಂದು ಜಿಲ್ಲಾ ಕ್ಷಯರೋಗ ಕಾರ್ಯಾಕ್ರಮಾಧಿಕಾರಿ (ಡಿಟಿಓ) ವೈ.ಎಸ್.ಪಾಟೀಲ ಹೇಳಿದರು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಇಲಾಖೆಯ ಎಲ್ಲ ಸೇವಾನಿರತ ಸಿಬ್ಬಂದಿಗೆ ಪದನ್ನೋತಿ, ವರ್ಗಾವಣೆ ಸಾಮಾನ್ಯ ಇವುಗಳ ನಡುವೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸೇವೆ ಸಲ್ಲಿಸುವುದು ಎಲ್ಲಕ್ಕಿಂತಲೂ ಮೀಗಿಲಾದುದು ಎಂದರು.ಇದೇ ಸಂದರ್ಭದಲ್ಲಿ ಪದನ್ನೋತಿ ಹಾಗೂ ವರ್ಗಾವಣೆ ಹೊಂದಿದ ವ್ಹಿ.ಜಿ.ಕುಲಕರ್ಣಿ, ಡಿ.ಡಿ.ಪಾಟೀಲ, ಎಸ್.ಬಿ.ಕಲ್ಲೂರ, ಸುಜಾತಾ ದಂಡಿನ, ಜಯಶ್ರೀ ಹುಬ್ಬಳ್ಳಿ ದಂಪತಿಗಳನ್ನು ಸನ್ಮಾನಿಸಲಾಯಿತು.ಆರೋಗ್ಯ ಕೇಂದ್ರದ(ಸಿಎಚ್‌ಸಿ) ಎಎಮ್‌ಓ ವಿರೇಶ ಹಳ್ಳೂರ ಅಧ್ಯಕ್ಷತೆ ವಹಿಸಿದ್ದರು.ಡಾ.ಸಂತೋಷ ಯಡಹಳ್ಳಿ, ಡಾ.ದೌಲತ್ರಾಯಗೌಡ ಬಿರಾದಾರ, ಡಾ.ಶ್ವೇತಾ, ಡಾ.ಪ್ರಿಯಾಂಕಾ, ಕಿರಣ ಪಾಟೀಲ, ಎಸ್.ಡಿ.ಕುಲಕರ್ಣಿ, ವಿಜಯ ಹುಬ್ಬಳ್ಳಿ, ಪ್ರಭು ಜಂಗಿನಮಠ, ಮಹಾಲಿಂಗ ಫಕೀರಪುರ, ಎಂ.ಆರ್,ಮಾಶ್ಯಾಳ, ಸುಕನ್ಯಾ ಚಳಗೇರಿ, ಪ್ರೇಮಾ ಬಡಿಗೇರ, ರಶ್ಮೀ ಗುತ್ತೇದಾರ, ಲಕ್ಷ್ಮೀಕಾಂತ, ವಿಶಾಲ ಬಾಗಲೆ, ನಿಂಗರಾಜ, ಮೈಬೂಬ ಗಿರಣಿ ಶಫೀಕ, ರಮೇಶ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಬರ ವೀಕ್ಷಣೆಯ ಅಂಗವಾಗಿ ದಿ:೩೦ ರಂದು(ಇಂದು) ಬಿಜೆಪಿ ನಿಯೋಗ ಕಡ್ಲೇವಾಡ ಪಿಸಿಎಚ್ ಕೆರೆ ಭೇಟಿ ನೀಡಲಿದೆ.ಗುರುವಾರ (ಇಂದು) ಮಧ್ಯಾಹ್ನ ೧೨ಕ್ಕೆ ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಕೆರೆಗೆ ದೇವರಹಿಪ್ಪರಗಿ ಮತಕ್ಷೇತ್ರದ ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ನೇತೃತ್ವದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಭೇಟಿ ನೀಡಿ ವೀಕ್ಷಣೆ ಮಾಡಲಿದ್ದಾರೆ ಎಂದು ಪಕ್ಷದ ಜಿಲ್ಲಾ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮೆ ಹಾಗೂ ದಿ.ಶಿವಕಾಂತ ಬಡದಾಳ ರವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶ್ರೀಶೈಲಪ್ಪ ಜೋಗೂರ, ಪುರಾಣ ಕಾಲದಿಂದಲೂ ಗುರು ಸ್ಮರಣೆ ಬೆಳೆದುಕೊಂಡು ಬಂದಿದ್ದು, ಇಂದು ಪ್ರತಿ ವ್ಯಕ್ತಿಯ ಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಬಹಳಷ್ಟು ಜನರಿಂದ ಶಿಕ್ಷಣ ಹಾಗೂ ಮಾರ್ಗದರ್ಶನ ಪಡೆದಿರುತ್ತೇವೆ. ಅಂತಹ ಗುರುಗಳಿಗೆ ಸ್ಮರಣೆ ಮಾಡಿ ಅವರಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಇದುವೇ ಗುರು ಪೂರ್ಣಿಮೆಯ ಆಚರಣೆಯ ಉದ್ದೇಶ.ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ, ಗುರು ಪೂರ್ಣಿಮೆಯು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕು ನೀಡುವ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವಾಗಿದೆ. ಆಷಾಢ ಮಾಸದ ಹುಣ್ಣಿಮೆಯಂದು ಬರುವ ಈ ಹಬ್ಬವು ಮಹರ್ಷಿ ವೇದವ್ಯಾಸರ ಜನ್ಮದಿನ ಹಾಗೂ ಆದಿಯೋಗಿಯಾದ ಶಿವನು ಮೊದಲ ಗುರುವಾಗಿ ಜ್ಞಾನ ಬೋಧನೆ ಆರಂಭಿಸಿದ ದಿನವೆಂದು ನಂಬಲಾಗಿದೆ. ಇಂದು ಸಂಸ್ಥೆಯ ಅಧ್ಯಕ್ಷರು ಎಸ್.ಆಯ.ಜೋಗೂರ ರವರು ಪ್ರತಿನಿತ್ಯ ಎಲ್ಲಾ ಶಿಕ್ಷಕ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಶಿವಶರಣ ಹಡಪದ ಅಪ್ಪಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶವನ್ನು ತಮ್ಮ ಜೀವನದಲ್ಲಿ ಅಕ್ಷರಶಃ ಅನುಸರಿಸಿದ್ದರು. ಕ್ಷೌರ ವೃತ್ತಿಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತಾ ಪ್ರತಿಯೊಂದು ಕಾಯಕವು ಪವಿತ್ರ ಎಂಬ ಸಂದೇಶವನ್ನು ಸಾರಿದರು ಎಂದು ತಹಶೀಲ್ದಾರ ಸಂತೋಷ ಮ್ಯಾಗೇರಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಬುಧವಾರ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತಿ ಕಾರ್ಯಕ್ರಮವನ್ನು ತಹಶೀಲ್ದಾರ ಅವರು ಉದ್ಘಾಟಿಸಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದ ಅಪ್ಪಣ್ಣನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ಅಂಧಶ್ರದ್ಧೆ, ಅಸಮಾನತೆ ಹಾಗೂ ಅಜ್ಞಾನವನ್ನು ಖಂಡಿಸಿದರು. “ಬಸವಪ್ರಿಯ ಕೂಡಲಚನ್ನಸಂಗಮದೇವ” ಎಂಬ ಅಂಕಿತನಾಮದಿಂದ ಅವರು ಅನೇಕ ಅರ್ಥಪೂರ್ಣ ವಚನಗಳನ್ನು ರಚಿಸಿದ್ದಾರೆ. ಅವರ ಜೀವನ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಎನ್.ಕೆ. ನದಾಫ್, ಗ್ರಾಮ ಆಡಳಿತಾಧಿಕಾರಿ ಬಿ.ಎನ್. ಜಿಡ್ಡಿಮನಿ, ಆನಂದ ಇಂಡಿ ಉಪಸ್ಥಿತರಿದ್ದರು.ಸಮಾಜದ ಮುಖಂಡರಾದ ಲಕ್ಷ್ಮಣ ಸು.…

Read More

ಉದಯರಶ್ಮಿ ದಿನಪತ್ರಿಕೆ ಅಥಣಿ: ಗುರುಗಳ ಮಾರ್ಗದರ್ಶನದಿಂದ ಸತತವಾಗಿ ಅಭ್ಯಾಸದಿಂದ ಮುಂದೆ ಜೀವನದಲ್ಲಿ ಒಂದು ಸಾಧನೆ ಮಾಡಬಹುದು ಎಂದು ಅಥಣಿ ಪೊಲೀಸ ಅಧಿಕಾರಿ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ಮಾತನಾಡಿದರು.ಅವರು ಗುಂಡೇವಾಡಿ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆ ವತಿಯಿಂದ ಸರ್ವೋದಯ ಸ್ವತಂತ್ರ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯಲ್ಲಿ ಸಂಸ್ಕೃತಿ ಮತ್ತು ಕ್ರೀಡಾ ಚಟುವಟಿಕೆ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು. ಶಾಲೆಯಲ್ಲಿ ಕಡಿಮೆ ಅಂಕ ಹಾಗೂ ಭಾಷೆ ಮುಖ್ಯವಲ್ಲ ನಾವು ಒಂದು ನಿರ್ಧಷ್ಟವಾದ ಗುರಿ ಹಾಗೂ ಸತತವಾಗಿ ಅಭ್ಯಾಸ ಮಾಡಿದರೆ ಇಟ್ಟ ಗುರಿ ಮುಟ್ಟಲ್ಲೂ ಸಾಧ್ಯವಾಗುತ್ತದೆ ಎಂದರು.ಈ ಕಾರ್ಯಕ್ರಮದಲ್ಲಿ ಅಥಣಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಮನಿ ಮಾತನಾಡಿ ಗುರುವಿನ ಸ್ಥಾನ ಬಹಳ ಮಹತ್ವವಾಗಿದೆ, ಗುರುಗಳು ಒಂದು ಕಾರ್ಖಾನೆ ಇದ್ದ ಹಾಗೆ, ಗುರುಗಳ ಮಾತು ಹೇಳಿದ ಪಾಲನೆ ಯಾರು ಮಾಡುತ್ತಾರೆ ಅವರು ಜೀವನದಲ್ಲಿ ಸಾಧನೆ ಮಾಡಬಹುದು.ವಿದ್ಯಾರ್ಥಿಗಳು ಗುರುವಿನ ಬಗ್ಗೆ ತಂದೆ ತಾಯಿ ಬಗ್ಗೆ ಗೌರವ, ಪ್ರೀತಿ…

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಅರ್ಹ ಸಾಧಕ ಕ್ರೀಡಾಪಟುಗಳು ಹಾಗೂ ಇತರರಿಂದ ವಿವಿಧ ಪ್ರಶಸ್ತಿ ಮತ್ತು ವಿವಿಧ ಪ್ರೋತ್ಸಾಹಧನ ನೀಡುವ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಅಗಸ್ಟ್ ೩೧ ರವರೆಗೆ ವಿಸ್ತರಿಸಿದೆ.೨೦೨೫-೨೬ ನೇ ಸಾಲಿನ ಕ್ರೀಡಾ ವಿದ್ಯಾರ್ಥಿ ವೇತನ ಹಾಗೂ ೨೦೨೬-೨೭ ನೇ ಸಾಲಿನ ಶೈಕ್ಷಣಿಕ ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಕೆಗೆ ಈ ಹಿಂದೆ ಜುಲೈ ೩೧ ಕೊನೆಯ ದಿನವಾಗಿತ್ತು ಈಗ ಅವಧಿಯನ್ನು ಅಗಸ್ಟ್ ೩೧ ರವರೆಗೆ ವಿಸ್ತರಿಸಲಾಗಿದೆ.ಅರ್ಹ ಕ್ರೀಡಾಪಟುಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಎಂ.ಎನ್.ಅನುಚೇತ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಚನಗಳಲ್ಲಿ ಜೀವನದ ಸಾರ ಅಡಗಿದ್ದು, ಸತ್ಯ ಪಥದ ನಡೆ-ನುಡಿ, ಸಮಾಜ ಸುಧಾರಣೆಯ ಮೌಲ್ವಿಕ ವಿಚಾರಗಳು ಬಸವಾದಿ ಶರಣರು ರಚನೆಯ ವಚನಗಳು ಬೆಳಕು ಚೆಲ್ಲುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹಡಪದ ಅಪ್ಪಣ್ಣನವರ ರಚನೆಯ ೧೫೦ಕ್ಕೂ ಹೆಚ್ಚು ವಚನಗಳು ಜೀವನದ ಸತ್ಯ, ಮಾನವೀಯ ಮೌಲ್ಯಗಳು ಹಾಗೂ ಮಾನವೀಯತೆಯನ್ನು ಪ್ರತಿಪಾದಿಸುತ್ತವೆ. ಸಮಾಜದ ಒಳಿತಿಗಾಗಿ ಶ್ರಮಿಸಿದ ಶರಣರು ಜನರಾಡುವ ಭಾಷೆಯಲ್ಲಿ ವಚನಗಳನ್ನು ಜನಮಾನಸಕ್ಕೆ ನೀಡಿ, ಸಮಾಜ ಸುಧಾರಣೆಗೆ ಅವರ ಕೊಡುಗೆ ಮಹತ್ತರವಾಗಿದೆ. ತನ್ನ ತಾನು ಅರಿತು ನಡೆಯಬೇಕೆಂಬ ಶರಣರ ಆಶಯದಂತೆ ನಡೆಯೋಣ ಯುವ ಪೀಳಿಗೆ ಶರಣ ಸಾಹಿತ್ಯ ಅಧ್ಯಯನ ಮಾಡುವ ಮೂಲಕ ವಚನಗಳಲ್ಲಿ ಸತ್ವ ತಿಳಿಯಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ…

Read More

ವಿಜಯಪುರದಲ್ಲಿ ಅಕ್ಕನ ವಿವಿಯ ದಶಮಾನೋತ್ಸವ ಕಟ್ಟಡ ಸಂಸ್ಥಾಪನಾ ದಿನಾಚರಣೆ | ಸಭಾಪತಿ ಬಸವರಾಜ ಎಸ್. ಹೊರಟ್ಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಹಿಳೆಯರು ಶಿಕ್ಷಣವಂತರಾಗುವುದರ ಜೊತೆಗೆ ವಿವಿಧ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಎಸ್. ಹೊರಟ್ಟಿ ಅವರು ಹೇಳಿದರು.ನಗರದ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನೂತನವಾಗಿ ನಿರ್ಮಿಸಲಾದ ದಶಮಾನೋತ್ಸವ ಕಟ್ಟಡದ ಉದ್ಘಾಟನೆ ಹಾಗೂ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು ಮನಸ್ಸು ಮಾಡಿದರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯ. ಹಾಗಾಗಿ ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಹೊಸ ಆವಿಷ್ಕಾರ ಮಾಡಬೇಕು ಎಂದರು.ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ವಚನಗಳನ್ನು ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಜ್ಞಾನ, ಶಿಕ್ಷಣ ಹಾಗೂ ಆತ್ಮವಿಶ್ವಾಸದಿಂದ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬಹುದಾಗಿದೆ ಎಂದು ತಿಳಿಸಿದರು.ಭಾರತದ ಮೊದಲ ವಿಜ್ಞಾನ ಅಕಾಡೆಮಿಯನ್ನು ಕರ್ನಾಟಕದಲ್ಲಿ ಆರಂಭಿಸಲಾಗಿದ್ದು, ಅದರ ಉದ್ಘಾಟನೆಯನ್ನು ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ…

Read More

ಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭ | ಸಚಿವ ಎಂ ಬಿ ಪಾಟೀಲ ಮಾಹಿತಿ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕಾರ್ಯಾರಂಭ‌ ಮಾಡಲು ಸಿದ್ಧವಾಗಿರುವ ವಿಜಯಪುರ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಇದ್ದ ಪರಿಸರ ಸಂಬಂಧಿ ಅನುಮತಿಯ ಅಡೆತಡೆಯನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ಬುಧವಾರ ನೀಡಿರುವ ಅಂತಿಮ‌ ತೀರ್ಪಿನಲ್ಲಿ ನಿವಾರಿಸಿದೆ. ಹೀಗಾಗಿ ಮುಂದಿನ ಪ್ರಕ್ರಿಯೆಗಳು ನಿರೀಕ್ಷೆಯಂತೆ ನಡೆದರೆ ಮೂರು ತಿಂಗಳೊಳಗೆ ವಿಮಾನ‌ ನಿಲ್ದಾಣದ ಲೋಕಾರ್ಪಣೆ ನೆರವೇರಿಸಬಹುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ‌ ಬಿ ಪಾಟೀಲ ಹೇಳಿದ್ದಾರೆ.ಈ ಬಗ್ಗೆ ಮಾತನಾಡಿರುವ ಅವರು, ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜಯಮಾಲ್ಯ ಬಾಗ್ಚಿ ಮತ್ತು ನ್ಯಾ.ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠವು ನೀಡಿರುವ ಅಂತಿಮ ತೀರ್ಪು ಸ್ವಾಗತಾರ್ಹ ಎಂದಿದ್ದಾರೆ.ಅಲ್ಲದೆ, ಈ ವಿಚಾರದಲ್ಲಿ ವಿಜಯಪುರ ವಿಮಾನ ನಿಲ್ದಾಣ ಯೋಜನೆಯಲ್ಲಿ ಇರುವ ಸಾರ್ವಜನಿಕ ಹಿತಾಸಕ್ತಿಯನ್ನು ತಿಳಿದುಕೊಂಡು, ರಾಜ್ಯದ ಪರವಾಗಿ ವಿಚಾರ ಮಂಡಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ, ಹೆಸರಾಂತ ನ್ಯಾಯವಾದಿಗಳಾದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸಿಬಿಎಸ್ಇ ಶಾಲೆಯಲ್ಲಿ ಬುಧವಾರ ಗುರುಪೂರ್ಣಿಮೆ ಅಂಗವಾಗಿ ವಿಶೇವಾಗಿ “ಮಾತೃ ವಂದನಾ* ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದಲಿ ಭಾಗವಹಿಸಿದ ಅಮೇರಿಕದ ಖ್ಯಾತ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಾಹಿತಿ ಶಾರದಾ ಮುಳ್ಳೂರ ಮಾತನಾಡಿ,ಪ್ರತಿಯೊಬ್ಬರ ಮನೆಯೇ ಮೊದಲ ಪಾಠ ಶಾಲೆ. ಜನನಿ ಮೊದಲ ಗುರು. ಅವಳಿಂದ ಪಾಠ ಕಲಿತ ನಾವೆಲ್ಲ ಧನ್ಯರು. ಮಗು ಮೊದಲ ಬಾರಿ ಹೊಸ್ತಿಲು ದಾಟಿದರೆ ಟೆಂಗಿನಕಾಯಿ ಒಡೆದು ಸಂಭ್ರಮಿಸುವ ತಾಯಿ, ಮಕ್ಕಳ ಪ್ರತಿ ಬೆಳವಣಿಗೆಯನ್ನು ಕಂಡು ಆನಂದಿಸುತ್ತಾಳೆ. ಅವರು ಬಾನೆತ್ತರಕ್ಕೆ ಬೆಳೆಯಲಿ ಎಂದು ನಿರಪೇಕ್ಷಿತ ಭಾವ ಹೊಂದಿರುವ ತಾಯಿಯ ಗುರುವಂದನೆ, ಮಾತೃವಂದನೆ ಎಂಬುದು ಒಂದೇ ದಿನಕ್ಕೆ ಸಲ್ಲಿಸುವ ಗೌರವವಲ್ಲ. ಅದು ಜೀವನ ಪರ್ಯಂತ ಕೊಡಬೇಕಾದ ಗೌರವ ಎಂದು ಹೇಳಿದರು.10ನೇ ತರಗತಿಯ ವಿದ್ಯಾರ್ಥಿಗಳ ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಎಲ್ಲ ತಾಯಂದಿರನ್ನು ವೇದಿಕೆಯ ಎದುರಿಗೆ ವಿಶೇಷ ಆಸನದಲ್ಲಿ ಕುಳ್ಳಿರಿಸಿ ಮಕ್ಕಳು ಕಳಸ, ಹೂ-ಗಂಧದಿಂದ ಪಾದ ಪೂಜೆಯನ್ನು ಮಾಡಿದರು.ಇದೇ…

Read More