ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬಸವೇಶ್ವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವುದರ ಮೂಲಕ ರೈತ ಬಳಗದಿಂದ ಬಸವ ಜಯಂತಿ ಆಚರಿಸಲಾಯಿತು.
ಪಟ್ಟಣದಲ್ಲಿ ಸೋಮವಾರ ಸಾಯಂಕಾಲ ರೈತ ಬಳಗದ ಸದಸ್ಯರು ಬಸವ ಜಯಂತಿ ಅಂಗವಾಗಿ ಬಸವೇಶ್ವರ ಭಾವಚಿತ್ರವನ್ನು ಎತ್ತಿನಗಾಡಿಯಲ್ಲಿ ಅಳವಡಿಸುವುದರ ಮೂಲಕ ಹಲಗೆ ವಾದ್ಯವೃಂದಗಳೊಂದಿಗೆ ಬಸವ ವೃತ್ತದಿಂದ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಪನ್ನಗೊಳಿಸಿದರು.
ಕಾಸುಗೌಡ ಬಿರಾದಾರ(ಜಿರ್ಲಿ), ರಾಚೋಟಯ್ಯ ಹಿರೇಮಠ, ಕಾಶೀನಾಥ ಸರೂರ, ಅಪ್ಪುಗೌಡ ಪಾಟೀಲ (ಜಿಡ್ಡಿಮನಿ), ಗುರು ಜಡಗೊಂಡ, ಬಸವರಾಜ ಇಂಡಿ, ಕಾಶೀನಾಥ ಮಡಗೊಂಡ, ರಮೇಶ ಅಸ್ಕಿ, ಸಂಪತ್ ಜಮಾದಾರ, ರಾಮು ದೇಸಾಯಿ, ಬಸವರಾಜ ಸರೂರ, ಸಂಜು ಕೋಟಿನ್ ಇದ್ದರು.

