ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ವಿದ್ಯಾರ್ಥಿ ಜೀವನ ಬಂಗಾರದಂತಹ ಜೀವನ, ಈ ಪುಣ್ಯ ನೆಲದ ಈ ಪ್ರೌಢ ಶಾಲೆಯಲ್ಲಿ ಕಲಿತ ಪ್ರತಿಯೊಬ್ಬರೂ ಉತ್ತಮ ಭವಿಷ್ಯ ಕಟ್ಟಿಕೊಂಡಿದ್ದಾರೆ ಎಂದು ವಿಶ್ರಾಂತ ಪ್ರಾಚಾರ್ಯ ಜೆ.ಜೆ. ಕುರಂದವಾಡೆ ಹೇಳಿದರು.
ಬಬಲೇಶ್ವರ ಪಟ್ಟಣದ ಶಾಂತವೀರ ಪ್ರೌಢ ಶಾಲೆ ಸೋಮವಾರ ನಡೆದ 1999-2000 ನೇ ಸಾಲಿನ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಲಕ್ಷ್ಮೀ ನರಸಯ್ಯ ರಾಜಶಾಸ್ತ್ರದ ವಿಶ್ರಾಂತ ಶಿಕ್ಷಕ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ತಾವು ಕಷ್ಟ ಪಟ್ಟು ಓದಿ ಈ ಹಂತಕ್ಕೆ ಬಂದಿದ್ದೀರಿ ನಾವು ನಿಮ್ಮೆಲ್ಲರ ಉತ್ತಮ ಸ್ಥಿತಿ ನೋಡಿ ತುಂಬಾ ಸಂತಸವಾಗಿದೆ ಎಂದರು.
ಹಿಂದಿ ವಿಷಯದ ವಿಶ್ರಾಂತ ಶಿಕ್ಷಕ ಎಸ್. ಡಿ. ಗಡದೆ ಮಾತನಾಡಿ, ಕಬೀರದಾಸ ಹಾಗೂ ತುಳಸಿದಾಸರ ದೋಹೆಗಳು ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ ನಿಮ್ಮೆಲ್ಲರ ಜೀವನ ಇನ್ನೂ ಉತ್ತಮವಾಗಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.
ಸಾನಿಧ್ಯ ವಹಿಸಿದ ಬಬಲೇಶ್ವರ ಬ್ರಹನ್ಮಠದ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ರುದ್ರಗೌಡ ಬಿರಾದಾರ, ಸಂಸ್ಥೆಯ ಕಾರ್ಯದರ್ಶಿ ವಿ.ಎನ್ ಬಿರಾದಾರ,ವಿ.ಎಂ. ಬಿಳ್ಳೂರ, ಬಿ.ಎಸ್. ಅಳಗಿ, ಬಿ. ಡಿ. ತೆನಹಳ್ಳಿ, ವಿ. ಬಿ. ಮಠ, ಪಿ.ಎಸ್. ಗುಡ್ಡೇವಾಡಿ, ಎಸ್. ವಿ. ಬಿರಾದಾರ, ಎಂ. ಎಸ್. ತಮಗೊಂಡ, ಜಿ.ಕೆ.ಕೊಟ್ಯಾಳ, ಎಸ್. ಆರ್. ನರೂಟಿ, ಐ. ಎಸ್. ಹುಂಡೇಕಾರ, ಎನ್. ಲಕ್ಷ್ಮಿ ನರಸಯ್ಯ, ಕೆ.ಕೆ. ಚಲವಾದೀ, ಎಸ್. ಡಿ.ಗಡದೆ ಇದ್ದರು.
ಲಕ್ಷ್ಮಿ ಬಿರಾದಾರ ಪ್ರಾರ್ಥಿಸಿದರು, ಸಂಗಪ್ಪ ದಂದರಗಿ ಹಾಗೂ ಲಕ್ಷ್ಮಿ ನಾಗನೂರ ಸ್ವಾಗತಿಸಿದರು, ಬಸವರಾಜ ಪಾಟೀಲ್ ವಂದಿಸಿದರು. ಶ್ರೀಕಾಂತ್ ಬಿ. ಎಂ. ಕಾರ್ಯಕ್ರಮವನ್ನು ನಿರೂಪಿಸಿದರು.

