ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುಧಾನಿತ ಬಸವೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಡಶಾಲೆ, ಪ್ರಾಥಮಿಕ ಶಾಲೆ, ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರೌಡಶಾಲೆಯ ಮುಖ್ಯಗುರುಗಳಾದ ಜಗದೀಶ ಗುಮಶೆಟ್ಟಿ ಮಾತನಾಡಿ, ಸಕಲ ಜೀವಿಗಳಿಗೂ ಲೇಸನ್ನೆ ಬಯಸಿದ ಅಣ್ಣ ಬಸವಣ್ಣನವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕಿದೆ ಎಂದು ಹೆಳಿದರು.
ಬಸವೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಜೆ ಎಸ್ ಕಾದಳ್ಳಿ ನಿಂಗನಗೌಡ ಗುಂಡಕನಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶ್ವನಾಥ ಸಿಂದಗಿ, ಕಂಠೀರವ ದೇಸಾಯಿ, ರವಿಕುಮಾರ ಗುಮಶೆಟ್ಟಿ, ಆರ್ ವ್ಹಿ ಕುಲಕರ್ಣಿ, ಐ ಎಂ ಝಳಕಿ ಸೇರಿದಂತೆ ಕಾಲೇಜಿನ ವಿಧ್ಯಾರ್ಥಿಗಳು ಹಾಗೂ ಭೋದಕ,ಭೋದಕೇತರ ಸಿಬ್ಬಂದ್ದಿ ಹಾಜರಿದ್ದರು.

