ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಅಧುನಿಕ ಜಗತ್ತನಲ್ಲಿ ಜಗತ್ತು ವೇಗವಾಗಿ ಬೆಳೆಯುತ್ತಿರುವದರಿಂದ ಇಂದಿನ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಅಗತ್ಯವಾಗಿ ಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕ ಅಧ್ಯಕ್ಷ ಚನ್ನಯ್ಯ ಮಠಪತಿ ಹೇಳಿದರು.
ತಾಲ್ಲೂಕಿನ ಕನಮಡಿ ಗ್ರಾಮದಲ್ಲಿರುವ ಶ್ರೀ ಮಾಣಿಕೇಶ್ವರಿ ಚೈತನ್ಯ ಕನ್ನಡ ಮತ್ತು ಆಂಗ್ಲ ಪ್ರಾಥಮಿಕ ಪ್ರೌಢ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಕಂಪ್ಯೂಟರ್ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಡಿ ಭಾಗದಲ್ಲಿರುವ ಈ ಶಾಲೆಯ ಮಕ್ಕಳಿಗೆ ಪಠ್ಯ, ಪಠ್ಯೇತರ ಪಾಠಗಳ ಜೊತೆಗೆ ತಂತ್ರಜ್ಞಾನದ ಜ್ಞಾನ ನೀಡಲು ಕಂಪ್ಯೂಟರ್ ಲ್ಯಾಬ್ ಆರಂಭಿಸಿರುವದು ಸಂತಸ ತಂದಿದೆ. ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಈ ಮಾಣಿಕೇಶ್ವರಿ ಶಾಲೆ ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೆಯಾಗಿದ್ದರು ಮಕ್ಕಳ ಪಾಲಿನ ಆಶಾಕಿರಣವಾಗಿ ಈ ಸಂಸ್ಥೆ ಹೊರಹೊಮ್ಮಿದೆ ಎಂದರು.
ಸಂಸ್ಥೆಯ ಮುಖ್ಯಸ್ಥ ಚಿದಾನಂದ ಅವಟಿಯವರು ಮಕ್ಕಳು ಶಿಕ್ಷಣದ ಜೊತೆಗೆ ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲೆ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಕೊಡುವದರಿಂದ ಅಗತ್ಯವಾದ ಶಿಕ್ಷಣವನ್ನು ತಂತ್ರಜ್ಞಾನದ ಮೂಲಕ ಪಡೆಯಲು ಸಹಕಾರವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯಸ್ಥ ಚಿದಾನಂದ ಅವಟಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶಂಕರಗೌಡ ಬಿರಾದಾರ್, ಮಹಾನಿಂಗ ಜವನರ, ವಿಜು ಮೆಡೆಗಾರ್ , ಕಲ್ಲಪ್ಪ ಪಲ್ಲೆದಕಟ್ಟಿ, ಮಂಜು ಹುಳಪಲ್ಲಿ, ಶಿವಲಿಂಗಪ್ಪ ಬಸಗೊಂಡವರ ಹಾಗೂ ಶಾಲೆ ಶಿಕ್ಷಕರಾದ ಪ್ರಭುದೇವ್, ವಾಸುದೇವ ಪಾಟೀಲ , ಮುಖ್ಯೋಪಾಧ್ಯಾಯ ಬಸವರಾಜ ಪಡನೂರ ಇದ್ದರು.

