Author: editor.udayarashmi@gmail.com

ಯಡ್ರಾಮಿ ವಿರಕ್ತಮಠದಲ್ಲಿ ಲಿಂಗೈಕ್ಯ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ ಪುಣ್ಯ ಸ್ಮರಣೆಯ ತನ್ನಿಮಿತ್ತ ಶ್ರೀಮಠದಿಂದ ವಿಶೇಷ ಸತ್ಕಾರ ಹಾಗೂ ಶ್ರೀರಕ್ಷೆ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ಪಟ್ಟಣದ ಶ್ರೀ ಮುರಘೇಂದ್ರ ಶಿವಯೋಗಿ ವಿರಕ್ತ ಮಠದ ಲಿಂ. ಸಿದ್ದರಾಮ ಮಹಾಸ್ವಾಮಿಗಳ ಐದನೇ ಪುಣ್ಯ ಸ್ಮರಣೆ ಅಂಗವಾಗಿಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಕಳೆದ ಹತ್ತು ದಿನಗಳಿಂದ ಗೋಲಗೇರಿಯ ಶ್ರೀ ಗೊಲ್ಲಾಳೇಶ್ವರರ ಮಹಾಪುರಾಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಗಿ ಬರುತ್ತಲಿವೆ.ಶುಕ್ರವಾರ ನೂತನವಾಗಿ ನಿರ್ಮಿಸಿದ ಲಿಂ. ಸಿದ್ದರಾಮ ಮಹಾಸ್ವಾಮಿಗಳ ಪಂಚಲೋಹದ ಮೂರ್ತಿ ಪ್ರತಿಷ್ಠಾಪನೆ ಗೊಳ್ಳಲಿದೆ. ಇದಕ್ಕೂ ಮುನ್ನ ಬೆಳಗ್ಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ನೂತನ ಮೂರ್ತಿಯ ಭವ್ಯ ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. ನಂತರ ಸಾಯಂಕಾಲ ಪುರಾಣ ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಹಾಗೂ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಅವರನ್ನು ಶ್ರೀಮಠದಿಂದ ವಿಶೇಷ ಸತ್ಕಾರ ಹಾಗೂ ಶ್ರೀರಕ್ಷೆ ಕಾರ್ಯಕ್ರಮ…

Read More

ಕೃಷ್ಣಾ ತಾಯಿಗೆ ಗಂಗಾ ಪೂಜೆ ಸಲ್ಲಿಸಿದ ಮೀನುಗಾರರು ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ವರ್ಷಪೂರ್ತಿ ಅನ್ನ ನೀಡುವ ಕೃಷ್ಣಾ ಮಾತೆಗೆ ಆಲಮಟ್ಟಿ ಜಲಾಶಯದ ಮುಂಭಾಗದ ಅರಳದಿನ್ನಿ ಗ್ರಾಮದ ಮೀನುಗಾರರು ಬುಧವಾರ ಕಡ್ಲಿಗರ ಹುಣ್ಣಿಮೆ ನಿಮಿತ್ತ ಗಂಗಾ ಪೂಜೆ ಸಲ್ಲಿಸಿದರು.ಬೆಳಿಗ್ಗೆಯಿಂದಲೇ ಕರಿಗಡಬು ಮತ್ತು ಇತರ ನೈವೇದ್ಯ ತಯಾರಿಸಿ ಜಲಾಶಯದ ಮುಂಭಾಗದ ಕೃಷ್ಣಾ ನದಿ ತೀರದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ನದಿಗೆ ಇಳಿದು ನೈವೇದ್ಯ, ದಕ್ಷಿಣೆ ಸಮೇತ ಎಲ್ಲವನ್ನೂ ಕೃಷ್ಣಾ ಮಾತೆಗೆ ಅರ್ಪಿಸಲಾಯಿತು.”ವರ್ಷಪೂರ್ತಿ ನಮ್ಮ ಬದುಕಿಗೆ ಅನ್ನ ಹಾಕುವ ಹಾಗೂ ನಮ್ಮನ್ನು ರಕ್ಷಿಸುವವಳು ಕೃಷ್ಣಾ ಮಾತೆ. ಹೀಗಾಗಿ ವರ್ಷಕೊಮ್ಮೆ ಕಡ್ಲಿಗರ ಹುಣ್ಣಿಮೆಯಂದು ನಾವೆಲ್ಲರೂ ಸೇರಿ ಪೂಜೆ ಸಲ್ಲಿಸುತ್ತೇವೆ. ಈ ದಿನ ಅರಳದಿನ್ನಿಯ ಯಾವೊಬ್ಬ ಮೀನುಗಾರರೂ ಬಲೆ ಹಾಕಿ ಮೀನು ಹಿಡಿಯುವುದಿಲ್ಲ” ಎಂದು ಮೀನುಗಾರ ಮಹೇಶ ಮಾದರ ತಿಳಿಸಿದರು.ಈ ಸಂದರ್ಭದಲ್ಲಿ ಮೀನುಗಾರರಾದ ನೀಲಪ್ಪ ಮಾದರ, ಅನಿಲ ವಾಲಿಕಾರ, ಮಹಾಂತೇಶ ಧನವೆ, ನಿಜಪ್ಪ ಮಾದರ, ಮಂಜುನಾಥ ಮಾದರ, ಶರಣಪ್ಪ ಮಾದರ, ಯಲಗೂರದಪ್ಪ ಮಾದರ, ದುರ್ಗಪ್ಪ ಮಾದರ, ಸದ್ದಾಂ ಕಂಕಣಪೀರ,…

Read More

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಆಗ್ರಹ ಉದಯರಶ್ಮಿ ದಿನಪತ್ರಿಕೆ ಇಂಡಿ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ನಿಂಬೆಹಣ್ಣು ಮಾರಾಟ ವ್ಯವಸ್ಥೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು, ಇಂಡಿ ಭಾಗದಲ್ಲೂ ಎಪಿಎಂಸಿ ಮುಖಾಂತರವೇ ಅಧಿಕೃತ ವ್ಯಾಪಾರ ನಡೆಯಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಆಗ್ರಹಿಸಿದ್ದಾರೆ.ಮಂಗಳವಾರ ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ನಗರದಲ್ಲಿ ಸುಸಜ್ಜಿತ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ಇರುವಂತೆ, ಇಂಡಿ ತಾಲೂಕಿನಲ್ಲೂ ತಕ್ಷಣವೇ ಇಂತಹದ್ದೇ ಪಾರದರ್ಶಕ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ನಿಂಬೆಹಣ್ಣು ವ್ಯಾಪಾರಕ್ಕೆ ಸಂಬಂಧಿಸಿದಂತೆ ಸದ್ಯ ಎರಡು ರೀತಿಯ ಭಿನ್ನ ಚಿತ್ರಣಗಳು ಕಂಡುಬರುತ್ತಿವೆ. ವಿಜಯಪುರ ನಗರದ ಎಪಿಎಂಸಿ ಆವರಣದಲ್ಲಿಯೇ ನಿಂಬೆಹಣ್ಣು ಮಾರಾಟ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತದೆ. ಇಲ್ಲಿ ಮುಕ್ತ ಹರಾಜು ಪ್ರಕ್ರಿಯೆ ಇರುವುದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತಿದೆ ಆದರೆ, ಅತಿ ಹೆಚ್ಚು ನಿಂಬೆಹಣ್ಣು ಬೆಳೆಯುವ ಇಂಡಿ ಭಾಗದಲ್ಲಿ ಇಂತಹ ಯಾವುದೇ ಸರ್ಕಾರಿ ನಿಯಂತ್ರಿತ ವ್ಯವಸ್ಥೆ ಇಲ್ಲ. ಇದರಿಂದಾಗಿ ರೈತರು…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಹುಟ್ಟುಹಬ್ಬದ ನಿಜವಾದ ಸಂಭ್ರಮ ಎಂದರೆ ಇನ್ನೊಬ್ಬರ ಮುಖದಲ್ಲಿ ನಗು ಮೂಡಿಸುವುದು. ಇಂದು ಆ ನಗುವನ್ನು ನಮ್ಮ ಸರ್ಕಾರಿ ಶಾಲೆಯ ಮಕ್ಕಳ ಮುಖದಲ್ಲಿ ಕಾಣುತ್ತಿದ್ದೇವೆ ಎಂದು ಸರ್ಕಾರಿ ನೌಕರರ ಸಂಘಧ ತಾಲ್ಲೂಕ ಘಟಕದ ಅಧ್ಯಕ್ಷ ಚನ್ನಯ್ಯ ಮಠಪತಿ ಹೇಳಿದರು.ತಾಲ್ಲೂಕಿನ ಅರಕೇರಿಯ ಶಿವಾಜಿನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ಕಲಾವಿದ ಗೋಪಾಲ ಇಂಚಗೇರಿ ಅವರಿಂದ ಅವರ ಮಗಳು ಶೀತಲಳ ಜನ್ಮ ದಿನದ ಪ್ರಯುಕ್ತ ಶಾಲೆಯ ಎಲ್ಲ ಮಕ್ಕಳಿಗೆ ಪರೀಕ್ಷೆ ಬರೆಯಲು ಸಹಾಯವಾಗುವ ಕ್ಲೀಪ್ಯಾಡ್ ಹಾಗೂ ಪೆನ್ನು ಸ್ವೀಕರಿಸಿ ಅವರು ಮಾತನಾಡಿದರು.ಇಂದು ನೀವು ನೀಡಿರುವ ಪೆನ್, ಕ್ಲೀಪ್ಯಾಡ ಕಲಿಕೋಪಕರಣಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೇರಣೆಯಾಗಲಿವೆ. ಕಲಿಕೋಪಕರಣಗಳು ಕೇವಲ ವಸ್ತುಗಳಲ್ಲ, ಅವು ಮಕ್ಕಳ ಕನಸುಗಳಿಗೆ ರೆಕ್ಕೆಗಳನ್ನು ನೀಡುವ ಸಾಧನಗಳು. ಇಂದು ನೀಡಿರುವ ಈ ಸಣ್ಣ ಕೊಡುಗೆ ನಾಳೆಯ ದೊಡ್ಡ ಸಾಧನೆಗೆ ಅಡಿಪಾಯವಾಗಬಹುದು.ತಮ್ಮ ಮಗಳ ಜನ್ಮದಿನವನ್ನು ಕೇವಲ ಕುಟುಂಬದ ಸಂಭ್ರಮವಾಗಿಸದೆ, ಶಾಲೆಯ ಮಕ್ಕಳಿಗೆ ಕಲಿಕೋಪಕರಣಗಳನ್ನು ನೀಡುವ ಮೂಲಕ ಸಮಾಜಮುಖಿ ಕಾರ್ಯವಾಗಿ ಆಚರಿಸಿರುವ ದಾನಿ ಕುಟುಂಬಕ್ಕೆ…

Read More

ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ (ಜಮಖಂಡಿ): ಸಮಾಜದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳೆಂದರೆ ಗುರುಗಳು. ಶಿಕ್ಷಣವು ಕೇವಲ ಅಕ್ಷರಜ್ಞಾನಕ್ಕೆ ಸೀಮಿತವಾಗದೆ, ಉತ್ತಮ ವ್ಯಕ್ತಿತ್ವ, ಸಂಸ್ಕಾರ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಶಕ್ತಿಯಾಗಿದೆ ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಪ್ರಾಚಾರ್ಯ ಡಾ. ರಾಜಾಗೌಡ ಕಾಗವಾಡೆ ಹೇಳಿದರು.ನಗರದ ಬಿ.ಎಲ್.ಡಿ.ಇ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಗುರು ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಗುರು ಎಂದರೆ ಕೇವಲ ಪಾಠ ಕಲಿಸುವ ವ್ಯಕ್ತಿಯಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡುವ ತಂದೆ-ತಾಯಿ, ಬಂಧು-ಬಳಗ, ನೆರೆಹೊರೆಯವರು ಹಾಗೂ ಸಮಾಜದ ಹಿರಿಯರೂ ನಮ್ಮ ಗುರುಗಳೇ. ಇಂತಹ ಗುರುಗಳ ಮಾರ್ಗದರ್ಶನವೇ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗುತ್ತದೆ” ಎಂದು ಹೇಳಿದರು.ಗುರು-ಶಿಷ್ಯ ಪರಂಪರೆಯು ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದ್ದು, ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಅದರ ಮಹತ್ವ ಕಡಿಮೆಯಾಗಿಲ್ಲ. ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಗುರುಗಳಿಗೆ ಗೌರವ ಸಲ್ಲಿಸುವ ಸಂಸ್ಕೃತಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ…

Read More

ಎಲ್ಲಾ ೨೬ ಗೇಟ್ ತೆರೆದ ಆಲಮಟ್ಟಿ ಜಲಾಶಯ | ೧.೧೦ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮುಂದುವರಿದ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಕೃಷ್ಣಾ ಕೊಳ್ಳದ ಪ್ರಮುಖ ಜಲಾಶಯವಾದ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ.ಒಳಹರಿವು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಈ ವರ್ಷ ಇದೇ ಮೊದಲ ಬಾರಿಗೆ ಜಲಾಶಯದ ಎಲ್ಲಾ ೨೬ ಗೇಟ್‌ಗಳನ್ನು ತೆರೆದು ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ.೧೨೩.೦೮೧ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯದಲ್ಲಿ ಸದ್ಯ ಸುಮಾರು ೧೧೮ ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ನೀರಿನ ಮಟ್ಟ ೫೧೯.೩೪ ಮೀಟರ್‌ಗೆ ತಲುಪಿದ್ದು, ಗರಿಷ್ಠ ಮಟ್ಟದ ಸಮೀಪದಲ್ಲಿದೆ. ಬುಧವಾರ ರಾತ್ರಿ ೭.೩೦ರ ವೇಳೆಗೆ ಜಲಾಶಯದ ಎಲ್ಲಾ ೨೬ ಗೇಟ್‌ಗಳನ್ನು ತೆರೆಯಲಾಗಿದ್ದು, ಹೆಚ್ಚುವರಿ ನೀರನ್ನು ನಿಯಂತ್ರಿತವಾಗಿ ನದಿಗೆ ಹರಿಸಲಾಗುತ್ತಿದೆ.೧.೧೦ ಲಕ್ಷ ಕ್ಯೂಸೆಕ್ ಹೊರಹರಿವು: ಪ್ರಸ್ತುತ ಆಲಮಟ್ಟಿ ಜಲಾಶಯಕ್ಕೆ ೮೯,೩೬೧ ಕ್ಯೂಸೆಕ್ ನೀರು…

Read More

ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ತಾಲೂಕು ಕೇಂದ್ರಕ್ಕೆ ಅಗತ್ಯವಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಸೋಮವಾರ ಮುಸ್ಸಂಜೆ ಬಬಲೇಶ್ವರ ಪಟ್ಟಣದಲ್ಲಿ‌ ₹200 ಲಕ್ಷ ವೆಚ್ಚದ ತಾಲೂಕು ಕ್ರೀಡಾಂಗಣ ₹300 ಲಕ್ಷ ವೆಚ್ಚದ ಅಗ್ನಿಶಾಮಕ ಠಾಣೆ, ₹575 ಲಕ್ಷ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಬಬಲೇಶ್ವರದ ಅಭಿವೃದ್ಧಿಗೆ ಮತ್ತೊಂದು ಐತಿಹಾಸಿಕ ಹೆಜ್ಜೆ ಇದಾಗಿದೆ. ಯುವ ಪ್ರತಿಭೆಗಳ ಕನಸುಗಳಿಗೆ ವೇದಿಕೆಯಾಗುವ ಕ್ರೀಡಾಂಗಣ, ಜನರ ಜೀವ-ಆಸ್ತಿಯ ರಕ್ಷಣೆಗೆ ಇನ್ನಷ್ಟು ಶಕ್ತಿ ತುಂಬುವ ಅಗ್ನಿಶಾಮಕ ಠಾಣೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಸುಸಜ್ಜಿತ ಆರೋಗ್ಯ ಕೇಂದ್ರಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಇವು ಕೇವಲ ಕಟ್ಟಡಗಳಲ್ಲ. ಜನರ ಬದುಕಿನ ಗುಣಮಟ್ಟವನ್ನು ಬದಲಾಯಿಸುವ ಅಭಿವೃದ್ಧಿಯ ಬುನಾದಿಗಳಾಗಿವೆ.…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಮ್ಮೊಳಗಿನ ಚಿಂತೆ, ಆಯಾಸ, ದುಃಖ ದುಮ್ಮಾನುಗಳಿಗೆ ಹಾಗೂ ಒತ್ತಡ ಜೀವನಕ್ಕೆ ಸಂಗೀತವೇ ಉತ್ತಮ ಔಷಧಿಯಾಗಿದೆ ಎಂದು ಕನ್ನಡ ಸಾಹಿತ್ಯ ಗೆಳೆಯರ ಬಳಗದ ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.ಪಟ್ಟಣದ ಬಸವ ಮಂಟಪದಲ್ಲಿ ಶ್ರೀ ರೇ.ಚ ರೇವಡಿಗಾರ (ರಿ) ಪ್ರತಿಷ್ಠಾನ ಹಮ್ಮಿಕೊಂಡ ಗುರು ಸ್ಮರಣೆ, ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸಂಗೀತ ಮನಸ್ಸಿನ ಭಾರ ತಗ್ಗಿಸಿ, ನೆಮ್ಮದಿ ಮತ್ತು ಆರೋಗ್ಯಕರ ಜೀವನ ನಡೆಸಲು ಶಕ್ತಿಯ ಸಂಕೇತವಾಗಿದೆ ಎಂದರು.ಪ್ರತಿಷ್ಠಾನದ ರಂಗನಾಥ್ ಥೋರ್ಪೆ ಮಾತನಾಡಿ, ಸಂಗೀತದಿಂದ ಜಗತ್ತನ್ನೆ ಬದಲಿಸಬಹುದು, ಸಂಗೀತ ಎಲ್ಲರನ್ನೂ ಒಂದುಗೂಡಿಸುವ ಕಲಾ ಸಂಪತ್ತು ಹೀಗಾಗಿ ಇಂದು ಹಿರಿಯ ಸಂಗೀತ ರತ್ನತ್ರೇಯರು, ಕಿರಿಯ ಪ್ರತಿಭಾನ್ವಿತ ಸಂಗೀತ ಯುವ ಕಲಾವಿದರ ಸಮ್ಮಿಲನವಾಗಲು ಸಾಧ್ಯವಾಗಿದೆ ಎಂದು ಪ್ರಾಸ್ತಾವಿಕ ಮಾತನಾಡಿದರು.ಆರಕ್ಷಕ ಮೌಲಾಲಿ ಆಲಗೂರ ಮಾತನಾಡಿ, ಎಲೆಮರೆಯಾಗಿ ಉಳಿದ ಸಂಗೀತ ದಿಗ್ಗಜರನ್ನು ಹಾಗೂ ಯುವ ಕಲಾವಿದರನ್ನು ಒಟ್ಟಿಗೆ ಒಂದೇ ವೇದಿಕೆ ನೀಡಿರುವುದು ಶ್ಲಾಘನೀಯ ಎಂದರು.ಇದೇ ವೇಳೆ ಹಿರಿಯ ಗಾಯಕರಾದ ರಾಜು ತಿವಾರಿ, ಮೌನಪ್ಪ ಪತ್ತಾರ, ಮುದ್ದುರಾಜ ಅಲ್ದಿ…

Read More

ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಾಗತಿಕ ಮಟ್ಟದ ಕೈಗಾರಿಕೆ ದೈತ್ಯ ಡಿ.ಎನ್. ಸಲ್ಯೂಷನ್ಸ್ ರಾಜ್ಯದಲ್ಲಿ ಆಗಸ್ಟ್ 26ರಿಂದ ಕಾರ್ಯಾರಂಭ ಮಾಡುತ್ತಿದ್ದು, ಮೊದಲ ಹಂತದಲ್ಲಿ 400 ಎಂಜಿನಿಯರ್ ಗಳಿಗೆ ಉದ್ಯೋಗ ನೀಡಲಿದೆ. ಇದರಲ್ಲಿ ವಿಜಯಪುರ ನಗರದ ಬಿ.ಎಲ್.ಡಿ.ಇ‌ ಎಂಜಿನಿಯರಿಂಗ್ ಕಾಲೇಜಿನ‌ 8 ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಕಾಲೇಜಿನ 12 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 20 ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ಈ ಕಂಪನಿಯಲ್ಲಿ ಉದ್ಯೋಗ ಪಡೆಯುವುದು ಹೆಮ್ಮೆಯ ವಿಷಯವಾಗಿದೆ. ಈಗ ಉದ್ಯೋಗ ಪಡೆದ ಒಟ್ಟು 400 ಯುವಕರಲ್ಲಿ ಉತ್ತರ ಕರ್ನಾಟಕದ 117 ಜನರಿಗೆ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ.ದಕ್ಷಿಣ ಕೊರಿಯಾದ ನಂ.1 ಮತ್ತು ವಿಶ್ವದ 3ನೇ ಅತಿದೊಡ್ಡ ಮೆಟಲ್-ಕಟಿಂಗ್ ಮೆಷಿನ್ ತಯಾರಿಕಾ ಸಂಸ್ಥೆ ಇದಾಗಿದೆ.…

Read More