Author: editor.udayarashmi@gmail.com

ನದಿಯಲ್ಲಿ ನೀರಿದ್ದರೂ ರೈತರ ಹೊಲಕ್ಕೆ ನೀರಿಲ್ಲ | ಅಳ್ಳಗಿ (B) ಕಾಲುವೆಯಲ್ಲಿ ಮುಳ್ಳು-ಕಂಟಿ | ಶಿವೂರ್–ಕುಡಿಗನೂರ್ ರೈತರು ಸಂಕಷ್ಟದಲ್ಲಿ | ಕಾಲುವೆ ನಿರ್ವಹಣೆ ವೈಫಲ್ಯಕ್ಕೆ ಬೆಳೆ ಬಲಿ ಉದಯರಶ್ಮಿ ದಿನಪತ್ರಿಕೆ ವಿಶೇಷ ವರದಿಅಫಜಲಪುರ: ಭೀಮಾ ಏತ ನೀರಾವರಿ ಯೋಜನೆಯ ಅಳ್ಳಗಿ (B) ಏತ ನೀರಾವರಿ ಕಾಲುವೆ, ಬರಪೀಡಿತ ಪ್ರದೇಶದ ರೈತರಿಗೆ ಆಶಾಕಿರಣವಾಗಬೇಕಿದ್ದರೂ ಇದೀಗ ಸಮಸ್ಯೆಯ ಮೂಲವಾಗಿರುವ ಆರೋಪ ಕೇಳಿಬರುತ್ತಿದೆ.ಯೋಜನೆಯ ಕಾಲುವೆಯ ಕೊನೆಯ ಭಾಗದ ಶಿವೂರ್ ಹಾಗೂ ಕುಡಿಗನೂರ್ ಗ್ರಾಮಗಳ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಈಗಾಗಲೇ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಮಳೆ ಕೈಕೊಟ್ಟ ಪರಿಣಾಮ ಹಲವು ಜಮೀನುಗಳಲ್ಲಿನ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ.ಇಂತಹ ಸಂದರ್ಭದಲ್ಲಿ ಭೀಮಾ ನದಿಯಲ್ಲಿ ನೀರು ಇದ್ದರೂ ಅದನ್ನು ರೈತರ ಜಮೀನುಗಳಿಗೆ ತಲುಪಿಸಲು ಸಾಧ್ಯವಾಗದಿರುವುದು ವಿಪರ್ಯಾಸವಾಗಿದೆ.ನೀರು ಹರಿಯಬೇಕಾದ ಅಳ್ಳಗಿ (B) ಕಾಲುವೆಯ ಹಲವು ಭಾಗಗಳು ಮುಳ್ಳು-ಕಂಟಿ ಹಾಗೂ ಕಳೆಗಿಡಗಳಿಂದ ತುಂಬಿಕೊಂಡಿವೆ ಎಂಬುದು ಸ್ಥಳೀಯರ ಆರೋಪವಾಗಿದೆ.ಕಾಲುವೆಯನ್ನು ಸಮಯಕ್ಕೆ ಸರಿಯಾಗಿ…

Read More

ಇಂಡಿಯಲ್ಲಿ ಮುಂದುವರೆದ ಬಿಜೆಪಿ ಧರಣಿ ಸತ್ಯಾಗ್ರಹ ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಧರಣಿ ಸತ್ಯಾಗ್ರಹ ಮುಂದುವರೆದಿದೆ.ಬುಧವಾರ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಎಸ್.ಬಿ.ಕಂಬೋಗಿ ಮತ್ತು ಸಂಗಡಿಗರು, ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಮತ್ತು ಸಂಗಡಿಗರು, ಮಹಿಳಾ ಮೋರ್ಚಾ ಅಧ್ಯಕ್ಷೆ ಬಸಮ್ಮ ಮರಡಿ, ಜೆಡಿ ಎಸ್ ಪಕ್ಷದ ತಾಲೂಕಾ ಅಧ್ಯಕ್ಷ ಬಿ.ಡಿ.ಪಾಟೀಲ, ಅಯೂಬ ನಾಟಿಕಾರ, ಡಾ|| ರಮೇಶ ರಾಠೋಡ ತಮ್ಮ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.ಮಾಜಿ ಸಚಿವ ಮತ್ತು ಬಿಜೆಪಿ ಧುರೀಣ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ ಇಂಡಿ ತಾಲೂಕಿನಲ್ಲಿ ಮಳೆಯ ಕೊರತೆ ಮತ್ತು ಕೃಷಿ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ಮರುಪರಿಶೀಲಿಸುವದು ಅಗತ್ಯವಾಗಿದೆ ಎಂದರು.ಬಿಜೆಪಿಯ ರಾಜ್ಯ ಒ.ಬಿ ಸಿ ಮೋರ್ಚಾ ಉಪಾಧ್ಯಕ್ಷ ವಿವೇಕ ಡಬ್ಬಿ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ, ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ, ಶೀಲವಂತ…

Read More

ಬ.ಕಲ್ಯಾಣ & ಕೂಡಲ ಸಂಗಮಕ್ಕೆ ನೀಡುವ ಮಹತ್ವ ಬಸವನ ಬಾಗೇವಾಡಿಗೂ ನೀಡಲಿ | ಶಾಸಕ ಶಿವಾನಂದ ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಬಸವಣ್ಣನ ಜನ್ಮಸ್ಥಳವಾದ ಬಸವನ ಬಾಗೇವಾಡಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಬೇಕು. ಬಸವ ಕಲ್ಯಾಣ ಹಾಗೂ ಕೂಡಲ ಸಂಗಮಕ್ಕೆ ನೀಡುವ ಮಹತ್ವವನ್ನು ಬಸವನ ಬಾಗೇವಾಡಿಗೂ ನೀಡುವ ಅಗತ್ಯವಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಮಸೂತಿ ಗ್ರಾಮದಲ್ಲಿ ಮಂಗಳವಾರ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹70 ಲಕ್ಷ ಅನುದಾನದಲ್ಲಿ ಗಣಪತಿ ವೃತ್ತದಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ ನಿರ್ಮಿಸಲಾಗುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಬಸವಣ್ಣನ ಜನ್ಮಸ್ಥಳದ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಮೀನಮೇಷ ಎಣಿಸದೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಮುಂದಿನ ದಿನಗಳಲ್ಲಿ ಬಸವನ ಬಾಗೇವಾಡಿಗೆ ಹೆಚ್ಚಿನ ಆದ್ಯತೆ ದೊರೆಯುವಂತೆ ಪ್ರಯತ್ನಿಸಲಾಗುವುದು ಎಂದರು.ಮಸೂತಿ ಗ್ರಾಮವು ಶೈಕ್ಷಣಿಕ ಕ್ಷೇತ್ರದ ಹರಿಕಾರ ಬಂಥನಾಳ ಶಿವಯೋಗಿಗಳನ್ನು ನಾಡಿಗೆ ನೀಡಿದ ಹೆಗ್ಗಳಿಕೆ ಹೊಂದಿದೆ. ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆಗಾಗಿ…

Read More

ರವಿ ಬೆಳಗೆರೆ ಧ್ವನಿಮುದ್ರಿತ ಮಾತುಗಳಿಗೆ ರಂಗಸ್ಪರ್ಶ | ಪ್ರೇಕ್ಷಕರ ಮನಗೆದ್ದ ಏಕವ್ಯಕ್ತಿ ನಾಟಕ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಧ್ಯೇಯ, ಶ್ರದ್ಧೆ ಹಾಗೂ ಕಾಯಕನಿಷ್ಠೆಯಿಂದ ಬದುಕಿದಾಗ ಮಾತ್ರ ಮನುಷ್ಯ ಉನ್ನತಿ ಸಾಧಿಸಲು ಸಾಧ್ಯ. ಈ ಮಹತ್ವದ ಸಂದೇಶವನ್ನು ‘ಓ ಮನಸ್ಸೇ’ ನಾಟಕ ಪರಿಣಾಮಕಾರಿಯಾಗಿ ಸಾರುತ್ತದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಸಾಂಸ್ಕೃತಿಕ ಭವನದಲ್ಲಿ ಶ್ರೀ ದ್ಯಾಮವ್ವ ದೇವಿ ಕಲಾ ಬಳಗದ ವತಿಯಿಂದ ಸಾಣೇಹಳ್ಳಿ ಗ್ರಾಮರಂಗ ಸಾಂಸ್ಕೃತಿಕ ಟ್ರಸ್ಟ್‌ನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಓ ಮನಸ್ಸೇ’ ಏಕವ್ಯಕ್ತಿ ರಂಗಪ್ರಯೋಗದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಾನಪದ ವಿಶ್ವಕೋಶ ಬಿ.ಆರ್. ಪೊಲೀಸ್‌ಪಾಟೀಲ ಮಾತನಾಡಿ, ನಾಟಕಗಳು ಸಮಾಜದ ಓರೆಕೋರೆಗಳನ್ನು ತಿದ್ದುವುದರ ಜತೆಗೆ ಸಾಮಾಜಿಕ ಪ್ರಜ್ಞೆ ಮೂಡಿಸುವ ತೆರೆದ ಪುಸ್ತಕಗಳಾಗಿವೆ. ಮೊಬೈಲ್‌ ವ್ಯಾಮೋಹದಿಂದ ಹೊರಬಂದು ರಂಗಭೂಮಿ, ಸಾಮಾಜಿಕ ನಾಟಕ ಹಾಗೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.55 ನಿಮಿಷಗಳ ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟಿತು. ಮಂಜುಳಾ ಸಾಣೇಹಳ್ಳಿ ಅವರ ಅಭಿನಯ ಹಾಗೂ…

Read More

ಸಂಪೂರ್ಣ ಕೈಕೊಟ್ಟ ಮಳೆ, ಹಸಿರಾಗದ ಇಳೆ | ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಅನಿರ್ಧಿಷ್ಟ ಹೋರಾಟ ಪ್ರಾರಂಭ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ 2026-27 ನೇ ಸಾಲಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿರುವುದನ್ನು ತಿಳಿದಿದ್ದರೂ ಕೇವಲ 3 ತಾಲೂಕುಗಳನ್ನು ಬರಗಾಲವೆಂದು ಪರಿಗಣಿಸಿ ಉಳಿದ 10 ತಾಲೂಕುಗಳನ್ನು ಕೈ ಬಿಡಲಾಗಿದ್ದು ಕೂಡಲೇ ಜಿಲ್ಲೆಯ 13 ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬುಧವಾರದಿಂದ ಅನಿರ್ಧಿಷ್ಟ ಹೋರಾಟ ಪ್ರಾರಂಭ ಮಾಡಲಾಯಿತು.ನಗರದ ಗಾಂಧಿ ವೃತ್ತದಿಂದ ಮೆರೆವಣಿಗೆ ಮೂಲಕ ಅಂಬೇಡ್ಕರ ವೃತ್ತದ ಹಿಂದುಗಡೆ ಹಾಕಿರುವ ಟೆಂಟಿನಲ್ಲಿ ಹೋರಾಟ ಪ್ರಾರಂಭ ಮಾಡಿದರು.ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ಮಾಡಲಾಯಿತು.ಜಿಲ್ಲೆಯ ಎಲ್ಲ ಶಾಸಕರು ರಾಜೀನಾಮೆ ಕೊಡಲು ಆಗ್ರಹತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೂ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮಾಡಲಾಗುವುದು. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ…

Read More

ರೈತರೊಂದಿಗೆ ಚರ್ಚೆ | ಅಹವಾಲು ಆಲಿಕೆ | ಹಾಳಾದ ತೊಗರಿ, ಬೆಳೆಯ ವೀಕ್ಷಣೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಆಗ್ರಹಿಸಿದರು.ತಾಲ್ಲೂಕಿನ ಜಾಲವಾದ, ಬಮ್ಮನಜೋಗಿ, ಇಬ್ರಾಹಿಂಪೂರ ಗ್ರಾಮದ ಜಮೀನುಗಳಿಗೆ ಬುಧವಾರ ರೈತರೊಂದಿಗೆ ಭೇಟಿ ನೀಡಿ ಮಾತನಾಡಿದರು. ದೇವರಹಿಪ್ಪರಗಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ತಾಲ್ಲೂಕುಗಳ ವ್ಯಾಪ್ತಿಯ ಹತ್ತಿ, ತೊಗರಿ, ಕಬ್ಬು ಸಹಿತ ಬಿತ್ತನೆಯಾದ ಎಲ್ಲ ಬೆಳೆಗಳು ಮಳೆಯ ಕೊರತೆಯಿಂದ ಸಂಪೂರ್ಣ ಹಾಳಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಸಮಗ್ರ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರಾಜ್ಯ ಸರ್ಕಾರ ಈಗ ಘೋಷಣೆ ಮಾಡಿರುವ ೩ ತಾಲ್ಲೂಕುಗಳ ಜೊತೆಗೆ ಉಳಿದ ಜಿಲ್ಲೆಯ ೧೦ ತಾಲ್ಲೂಕುಗಳ ಬೆಳೆಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಅಲ್ಲದೇ ಅಧಿಕಾರಿಗಳ ಮೂಲಕ ಪುನಃ ಸರ್ವೇ ಕಾರ್ಯ ಮಾಡಿಸುವುದರ ಮೂಲಕ ಬೆಳೆ ಪರಿಹಾರ, ಸಾಲ ಮನ್ನಾ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದರು.ಜಾಲವಾದ ಗ್ರಾಮದ ರೈತ…

Read More

ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ | ಮಕ್ಕಳ ಕ್ರೀಡಾಕೂಟದಲ್ಲಿ ಸುರಕ್ಷತಾ ವ್ಯವಸ್ಥೆ ಕುರಿತು ಪ್ರಶ್ನೆ ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ (ಜಮಖಂಡಿ): ನಗರದ ಪೋಲೊ ಮೈದಾನದಲ್ಲಿ ಶಾಲಾ ಮಕ್ಕಳ ಕ್ರೀಡಾಕೂಟ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೀಸಿದ ಭಾರಿ ಗಾಳಿಗೆ ಅತಿಥಿಗಳು ಹಾಗೂ ನಿರ್ಣಾಯಕರಿಗಾಗಿ ಅಳವಡಿಸಲಾಗಿದ್ದ ತಾತ್ಕಾಲಿಕ ಪೆಂಡಾಲ್‌ವೊಂದು ಕಿತ್ತು ನೆಲಕ್ಕುರುಳಿದ ಘಟನೆ ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯ ಸಂಭವಿಸದೆ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.ನಗರದ ಪೋಲೊ ಮೈದಾನದಲ್ಲಿ ಹುನ್ನೂರು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ಆಯೋಜಿಸಲಾಗಿತ್ತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ, ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದರು. ವಿದ್ಯಾರ್ಥಿಗಳು ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಅತಿಥಿಗಳು, ಶಿಕ್ಷಕರು ಹಾಗೂ ಕ್ರೀಡಾಕೂಟದ ನಿರ್ಣಾಯಕರಿಗಾಗಿ ತಾತ್ಕಾಲಿಕ ಪೆಂಡಾಲ್‌ ಅಳವಡಿಸಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.ಕ್ರೀಡಾಕೂಟ ನಿರಾತಂಕವಾಗಿ ನಡೆಯುತ್ತಿದ್ದ ವೇಳೆ ಮಧ್ಯಾಹ್ನದ ಹೊತ್ತಿಗೆ ಏಕಾಏಕಿ ಗಾಳಿಯ ರಭಸ…

Read More

ರೈತರ ಸಾಲ ಸಂಪೂರ್ಣ ಮನ್ನಾ ಹಾಗೂ ಮಧ್ಯಂತರ ಬೆಳೆ ವಿಮೆ ಪಾವತಿಗೆ ಆಗ್ರಹಿಸಿ ಮಾಜಿ ಶಾಸಕ ಡಾ. ದೇವಾನಂದ ಚವ್ಹಾಣ ಮನವಿ ಉದಯರಶ್ಮಿ ದಿನಪತ್ರಿಕೆ ಚಡಚಣ: ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಚಡಚಣ ತಾಲೂಕನ್ನು ತಕ್ಷಣ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ, ರೈತರಿಗೆ ಅಗತ್ಯ ಪರಿಹಾರ ಕಲ್ಪಿಸಬೇಕು ಎಂದು ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕ ಡಾ. ದೇವಾನಂದ ಫೂ. ಚವ್ಹಾಣ ಆಗ್ರಹಿಸಿದ್ದಾರೆ.ಈ ಕುರಿತು ಚಡಚಣ ತಹಶೀಲ್ದಾರರಿಗೆ ಬುಧವಾರ ಮನವಿ ಸಲ್ಲಿಸಿರುವ ಅವರು, ರಾಜ್ಯ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಚಡಚಣ ತಾಲೂಕು ಸೇರ್ಪಡೆಯಾಗದಿರುವುದು ರೈತರಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನ ಮೂಡಿಸಿದೆ ಈ ವರ್ಷ ಚಡಚಣ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮುಂಗಾರು ಸಂಪೂರ್ಣ ಕೈಕೊಟ್ಟ ಪರಿಣಾಮ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭರವಸೆಯಿಂದ ಬಿತ್ತನೆ ಮಾಡಿದ ಬೆಳೆಗಳು ಮಳೆಯಿಲ್ಲದೆ ಹಾನಿಗೊಳಗಾಗಿವೆ. ಕೃಷಿ ಚಟುವಟಿಕೆಗಳಿಗಾಗಿ ಸಾಲ ಮಾಡಿಕೊಂಡಿರುವ ರೈತರು ಇದೀಗ ಸಾಲದ ಸುಳಿಯಲ್ಲಿ ಸಿಲುಕಿದ್ದು,…

Read More

ಉದಯರಶ್ಮಿ ದಿನಪತ್ರಿಕೆ ಅಥಣಿ: ಧರ್ಮ ಜಾತಿ ಭಾಷೆಗಳನ್ನು ಮೀರಿ ಪರಸ್ಪರ ಪ್ರೀತಿ ಸಹೋದರತ್ವ ಹಾಗೂ ಮಾನವೀಯತೆಯಿಂದ ಬದುಕುವುದೇ ಭಾರತೀಯ ಸಂಸ್ಕೃತಿಯ ವಿಶೇಷತೆ. ಇದಕ್ಕೆ ನೈಜ ಉದಾಹರಣೆಯಾಗಿ ಅಥಣಿ ತಾಲೂಕಿನ ಬಳವಾಡ ಗ್ರಾಮದ ರಸೂಲ ನದಾಪ ಹಾಗೂ ಜಾಪರಸಾಬ ನದಾಪ ಸಹೋದರರು ವಿಶೇಷ ಗಮನ ಸೆಳೆಯುತ್ತಿದ್ದಾರೆ.ನದಾಪ ಕುಟುಂಬದವರು ಗ್ರಾಮದ ಹಿಂದೂ ಸಮುದಾಯದ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದಾರೆ. ಹಿಂದೂಗಳ ಹಬ್ಬ ಹರಿದಿನಗಳಲ್ಲಿ ಮುಂಚೂಣಿಯಲ್ಲಿ ಪಾಲ್ಗೊಳ್ಳುವ ಅವರು, ಹಿಂದೂ ಕುಟುಂಬಗಳ ಕಷ್ಟ ಸುಖಗಳಲ್ಲಿಯೂ ಸಹೋದರರಂತೆ ಜೊತೆಗೆ ಇರುತ್ತಾರೆ.ಪವಿತ್ರ ಶ್ರಾವಣ ಮಾಸದಲ್ಲಿ ಡಾ.ವಿವೇಕಾನಂದ ಸ್ವಾಮೀಜಿಯವರು ಬಳವಾಡ ಗ್ರಾಮದ ಎಲ್ಲರ ಮನೆ ಮನೆಗೆ ತೆರಳಿ ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗದಂತೆ ಪಾಲಕರಿಗೆ ಹಾಗೂ ಸಮಾಜದ ಗುರು ಹಿರಿಯರಿಗೆ ಜಾಗೃತಿ ಮೂಡಿಸುತ್ತಿರುವದನ್ನು ಕಂಡು ಸ್ವಾಮೀಜಿಯವರನ್ನು ತಮ್ಮ ಮನೆಗೆ ಆತ್ಮೀಯವಾಗಿ ಆಹ್ವಾನಿಸಿ ಸತ್ಕರಿಸಿ ಗೌರವಿಸಿರುವುದು ವಿಶೇಷ ಗಮನ ಸೆಳೆಯಿತು. ಸ್ವಾಮೀಜಿಯವರನ್ನು ಗೌರವದಿಂದ ಬರಮಾಡಿಕೊಂಡು ಆತಿಥ್ಯ ನೀಡಿದ ಸಹೋದರರಾದ ರಸೂಲ ನದಾಪ ಹಾಗೂ ಜಾಫರಸಾಬ ನದಾಪ ರ ನಡೆ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ…

Read More

ಭವ್ಯ ರಥೋತ್ಸವ, ಮನರಂಜನೆ, ವಿವಿಧ ಸ್ಪರ್ಧೆ, ವೈವಿಧ್ಯಮಯ ಕಾರ್ಯಕ್ರಮಗಳು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಸಾರವಾಡ ಗ್ರಾಮದಲ್ಲಿ ಶ್ರೀ ಈಶ್ವರ ಹಾಗೂ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವವು ಪ್ರತೀ ವರ್ಷದಂತೆ ಈ ವರ್ಷವೂ ಇದೇ ಸೆಪ್ಟೆಂಬರ್ 3 ರಿಂದ ಐದು ದಿನಗಳವರೆಗೆ ಅತ್ಯಂತ ವೈಭವದಿಂದ ಜರುಗಲಿದೆ.ಜಾತ್ರೆಯ ಅಂಗವಾಗಿ ಪಲ್ಲಕ್ಕಿ ಉತ್ಸವ, ರಥೋತ್ಸವ, ಅನ್ನಸಂತರ್ಪಣೆ, ಎತ್ತಿನಗಾಡಿ ಸ್ಪರ್ಧೆ, ಕುಸ್ತಿ, ಹೊನಲು ಬೆಳಕಿನ ಕಬಡ್ಡಿ, ಗೀಗಿ ಪದಗಳು, ಸಾಮಾಜಿಕ ನಾಟಕ, ರಸಮಂಜರಿ, ಬಯಲಾಟ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಸೆ.3ರಂದು ಶ್ರೀ ಮಾರುತಿ ದೇವರ ಉತ್ಸವ ಮೂರ್ತಿಯನ್ನು ಕುಲಕರ್ಣಿಯವರ ಮನೆಯಿಂದ ಪಲ್ಲಕ್ಕಿ ಹಾಗೂ ವಾದ್ಯಮೇಳಗಳೊಂದಿಗೆ ಶ್ರೀ ಮಾರುತಿ ದೇವಸ್ಥಾನಕ್ಕೆ ಕರೆತರಲಾಗುವುದು. ನಂತರ ಓಕಳಿ ಕಂಬ ನಿಲ್ಲಿಸುವುದರೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ. ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ 10.30ಕ್ಕೆ ಶ್ರೀ ಜೈಹನುಮಾನ ನಾಟ್ಯ ಸಂಘದಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಇದೇ ದಿನ ರಾತ್ರಿ ಸ್ಥಳೀಯ ಬ್ರದರ್ ಗ್ರೂಪ್ ವತಿಯಿಂದ ಹೊನಲು…

Read More