ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಮಗಳ ಜನ್ಮ ದಿನಕ್ಕೆ ಅತಿಯಾದ ದುಂದು ವೆಚ್ಚ ಮಾಡದೇ, ಜನ್ಮ ದಿನಕ್ಕೆ ಖರ್ಚು ಮಾಡುವ ಹಣವನ್ನೆ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟಬುಕ್ ಹಾಗೂ ಪೆನ್ ವಿತರಣೆ ಮಾಡಿದ್ದಾರೆ.
ತಾಲ್ಲೂಕಿನ ಘೋಣಸಗಿ ಎಲ್.ಟಿ. 01 ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪಾ ಬಾರಿಗಿಡದ ಹಾಗೂ ಪತ್ನಿ ಪವಿತ್ರಾ ಆಗಮಿಸಿ ಅದೇ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿರುವ ಅವರ ಮಗಳ ಸಾನ್ವಿಯ ಜನ್ಮ ದಿನದಂದು ಶಾಲೆಯ ಎಲ್ಲ ಮಕ್ಕಳಿಗೆ ನೋಟಬುಕ್ ಹಾಗೂ ಪೆನ್ ವಿತರಿಸಿದ್ದಾರೆ.
ಮಗಳ ಜನ್ಮ ದಿನಕ್ಕೆ ಮಾಡುವ ಖರ್ಚು ವೆಚ್ಚದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳ ಕಲಿಕೆಗೆ ಅನೂಕೂಲ ಆಗಲೆಂದು ನೋಟಬುಕ್ ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು.
ಎಲ್ಲ ಮಕ್ಕಳಿಗೆ ಸಿಹಿ ನೀಡಿ ದಂಪತಿಗಳು ಖುಷಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳು, ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಮಕ್ಕಳು ಇದ್ದರು.

