Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುಗಾದಿ ಹಬ್ಬದ ಪ್ರಯುಕ್ತ ಶ್ರೀಶೈಲ ಶ್ರೀಮಲ್ಲಿಕಾರ್ಜುನ ಜಾತ್ರೆ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ದಿನಾಂಕ:೩೦-೦೩-೨೦೨೫ ರಂದು ಚಂದ್ರಮಾನ ಯುಗಾದಿಯಂದು ಶ್ರೀಶೈಲದಿಂದ ವಿಜಯಪುರಕ್ಕೆ ಹೆಚ್ಚಿನ ಜನದಟ್ಟಣೆಯಾಗಬಹುದಾದ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಪ್ರಯಾಣದ ಅನುಕೂಲಕ್ಕಾಗಿ ಶ್ರೀಶೈಲದಲ್ಲಿ ೨೫೦ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ಕಾರ್ಯಾಚರಣೆ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಯಾತ್ರಾರ್ಥಿಗಳು ಮಂತ್ರಾಲಯ ಹಾಗೂ ಮಹಾನಂದಿ ದರ್ಶನ ಮಾಡಲು ಇಚ್ಚಿಸಿದಲ್ಲಿ, ಮಹಾನಂದಿ ಹಾಗೂ ಮಂತ್ರಾಲಯ ಮಾರ್ಗವಾಗಿ ಬಸ್ ಕಾರ್ಯಾಚರಣೆ ಮಾಡಲಾಗುವುದು.ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಶ್ರೀಶೈಲದ ಜಾತ್ರಾ ಸ್ಥಳದಲ್ಲಿ ಬಸ್ ನಿಲ್ದಾಣದ ಜಾತ್ರಾ ಉಸ್ತುವಾರಿ ಅಧಿಕಾರಿ ಮೊಬೈಲ್ ಸಂಖ್ಯೆ: ೭೭೬೦೯೯೨೨೬೦, ವಿಭಾಗೀಯ ಸಾರಿಗೆ ಅಧಿಕಾರಿ ಮೊಬೈಲ್ ಸಂಖ್ಯೆ: ೭೭೬೦೯೯೨೨೫೨, ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮೊಬೈಲ್ ಸಂಖ್ಯೆ: ೭೭೬೦೯೯೨೨೫೮, ಶ್ರೀಶೈಲಂ ಜಾತ್ರಾ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕರ ಮೊಬೈಲ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತೀಯ ನೌಕಾಪಡೆಯಲ್ಲಿ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅಗ್ನಿವೀರ್ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಇಲಾಖಾ ವೆಬ್‌ಸೈಟ್ http://joinindiannavy.gov.inನಲ್ಲಿ ದಿನಾಂಕ ೨೯-೦೩-೨೦೨೫ ರಿಂದ ದಿನಾಂಕ ೧೦-೦೪-೨೦೨೫ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಯ ದೂರವಾಣಿ ಸಂಖ್ಯೆ :೦೮೩೫೨೨೫೦೯೧೩ ಅಥವ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾ.೨೮ ರಂದು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಜಯಪುರ ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ ಅವರು ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳಾದ ಅನಸೂಯಾ ಚಲವಾದಿ, ಅಗ್ರಣೀಯ ಬ್ಯಾಂಕಿನ ವ್ಯವಸ್ಥಾಪಕರಾದ ನೇತಾಜಿ ಗೌಡರ್, ಖಾದಿ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಎನ್.ಡಿ.ಕಾಂಬ್ಳೆ, ಮಹಾನಗರ ಪಾಲಿಕೆಯ ಉಪಾಯುಕ್ತರಾದ ವೈ.ಎಚ್.ನಾರಾಯಣಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ಅರವಿಂದ ಕನ್ನೂರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಪೌರ ನಿಗಮಗಳ ಅಧಿನಿಯಮದ ಅನ್ವಯ ಸ್ವತ್ತಿನ ಮಾರ್ಗಸೂಚಿ ಮೌಲ್ಯದ ಪರಿಷ್ಕರಣೆಯಾಗದ ವರ್ಷದಲ್ಲಿ ಪ್ರತಿ ಹಣಕಾಸು ವರ್ಷಕ್ಕೆ ಶೇ.೩ ರಿಂದ ೫ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಲು ಅವಕಾಶ ಇರುವುದರಿಂದ ೨೦೨೫-೨೬ನೇ ವರ್ಷಕ್ಕೆ ಅನ್ವಯವಾಗುವಂತೆ ದಿನಾಂಕ:೦೧-೦೪-೨೦೨೫ ರಿಂದ ೩೧-೦೩-೨೦೨೬ರವರೆಗೆ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ತಿಳಿಸಿದ್ದಾರೆ.ವಿಜಯಪುರ ಮಹಾನಗರ ಪಾಲಿಕೆಯ ಆಸ್ತಿ ತೆರಿಗೆಯನ್ನು ದಿನಾಂಕ:೦೧-೦೪-೨೦೨೫ ರಿಂದ ಜಾರಿಗೆ ಬರುವಂತೆ ವಾಸದ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು, ಖಾಲಿ ನಿವೇಶನಗಳು ಹಾಗೂ ಕೈಗಾರಿಕಾ ಪ್ರದೇಶಕ್ಕೆ ಶೇ.೩ರಷ್ಟು ಹೆಚ್ಚಿಸಿ ಪರಿಷ್ಕರಣೆ ಮಾಡಲಾಗಿದೆ. ಪಾಲಿಕೆಯ ೨೦೨೫-೨೬ಕ್ಕೆ ಅನ್ವಯವಾಗುವಂತೆ ಮೂಲ ಆಸ್ತಿ ತೆರಿಗೆಯಲ್ಲಿ ಶೇ.೩ರಷ್ಟು ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಹಿಪ್ಪರಗಿ ಗ್ರಾಮದ ಪೂಜ್ಯಶ್ರೀ ಡಾ.ಸಿದ್ಧರಾಮ ಶಿವಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿನಿ, ಕುಮಾರಿ ಆರಾಧ್ಯಾ ಸಿದ್ದು ಗಾಳಿ ಇವಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಶೇ 97 ಅಂಕ ಪಡೆದು ರಾಜ್ಯಕ್ಕೆ ಎರಡನೇಯ ರ್ಯಾಂಕ ಪಡೆದು ಹಿಪ್ಪರಗಿ ಗ್ರಾಮಕ್ಕೆ ಹಾಗೂ ಶಾಲೆಗೆ ಕೀರ್ತಿ ತಂದಿರುತ್ತಾಳೆ.ಸಂಸ್ಥೆಯ ಅಧ್ಯಕ್ಷ ಬಸವರಾಜ ಮ. ಕುಲ್ಹಳ್ಳಿ ಹಾಗೂ ಆಢಳಿತ ಮಂಡಳಿಯ ಸದಸ್ಯರು, ಮುಖ್ಯಗುರುಗಳು ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿರುತ್ತಾರೆ.

Read More

ಹಿಂದು-ಮುಸ್ಲಿಂ ಸಮಾಜದ ಧರ್ಮಗುರುಗಳ ಸಮ್ಮುಖದಲ್ಲಿ ರಂಜಾನ ಹಬ್ಬದ ಪ್ರಯುಕ್ತ ಮುಸ್ಲಿಂ ಸಮಾಜದ ಕುಟುಂಬಗಳಿಗೆ ದಿನಸಿ ಮತ್ತು ನಗದು ಸಹಾಯ ಉದಯರಶ್ಮಿ ದಿನಪತ್ರಿಕೆ ವರದಿ: ಚೇತನ ಶಿವಶಿಂಪಿಮುದ್ದೇಬಿಹಾಳ: ೩೦ ಫೂಟಿನ ರಸ್ತೆ. ಅಲ್ಲಿ ಚಿಕ್ಕದೊಂದು ಪೆಂಡಾಲ್. ಎದುರಿಗೆ ವೇದಿಕೆ. ವೇದಿಕೆಯ ಸಾನಿಧ್ಯ ವಹಿಸಿಕೊಂಡವರು ಹಿಂದು-ಮುಸ್ಲಿಂ ಸಮಾಜದ ಸ್ವಾಮೀಜಿಗಳು. ಅತಿಥಿಗಳಾಗಿದ್ದವರಲ್ಲೊಬ್ಬರು ವಕೀಲರು ಮತ್ತು ಇನ್ನೀತರರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯ ವ್ಯಕ್ತಿಗಳು. ಮುಂಭಾಗದಲ್ಲಿ ಅಂದಾಜು ೬೦೦ ಕ್ಕೂ ಹೆಚ್ಚು ಜನ ಬಡ ಮುಸ್ಲಿಂ ಸಮಾಜದ ಮಹಿಳೆಯರು. ಅಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿತ್ತು ಪವಿತ್ರ ರಂಜಾನ ಹಬ್ಬ.ಇಂಥದ್ದೊಂದು ಸೌಹಾರ್ಧಯುತ, ಬಡ ಜನರ ಸೇವೆಯ ಕಾರ್ಯಕ್ರಮ ನಡೆದಿದ್ದು ಇಲ್ಲಿನ ಹುಡಕೋ ಬಡಾವಣೆಯಲ್ಲಿ. ಈ ಕಾರ್ಯಕ್ರಮದ ರುವಾರಿ ಸಮಾಜ ಸೇವಕ ಅಯೂಬ ಮನಿಯಾರ. ರಂಜಾನ ಹಬ್ಬವನ್ನು ನಾನೊಬ್ಬನೇ ಆಚರಿಸಿದರೆ ಸಾಲದು ನನ್ನ ಜೊತೆಗೆ ಎಲ್ಲ ಬಡವರೂ ಹಬ್ಬವನ್ನು ಖುಷಿಯಾಗಿ ಆಚರಿಸಬೇಕು ಎಂದು ಅಂದಕೊಂಡ ಇವರು ಕಳೆದ ೨೮ ವರ್ಷಗಳಂತೆ ಈ ವರ್ಷವೂ ಕೂಡ ಹಬ್ಬದ ಅಂಗವಾಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಎಲ್.ಟಿ- 4 ಮತ್ತು ಎಲ್.ಟಿ- 5ರ ನಿವಾಸಿಗಳ ಅಳಲಿಗೆ ಸ್ಪಂದಿಸಿದ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಾಂಡಾ ನಿವಾಸಿಗಳ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಇಟ್ಟಂಗಿಹಾಳ ಎಲ್.ಟಿ- 4 ಮತ್ತು ಎಲ್.ಟಿ- 5ರ ಬಳಿ ಬಹಳ ವರ್ಷಗಳಿಂದ ಹಲವು ಕುಟುಂಬಗಳು ಸರಕಾರಿ ಜಾಗದಲ್ಲಿ ವಾಸಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿ ಸರಕಾರಿ ಜಮೀನು ಅತೀಕ್ರಮಣ ತೆರವುಗೊಳಿಸಲು ಕ್ರಮ ಕೈಗೊಂಡಿದ್ದರು. ಇದರಿಂದ ಸಂತ್ರಸ್ತರಾದ ತಾಂಡಾಗಳ ನಿವಾಸಿಗಳು ಶಾಸಕರನ್ನು ಭೇಟಿ ಮಾಡಿ ತಮ್ಮನ್ನು ತೆರವುಗೊಳಿಸದೇ ಹಿತ ಕಾಪಾಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಈ ಸಮಸ್ಯೆ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದರು. ಅಲ್ಲದೇ, ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ, ತಿಕೋಟಾ ತಹಸೀಲ್ದಾರ ಸುರೇಶ ಚವಲರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ ಸೌದಾಗರ ಅವರೊಂದಿಗೆ ತಾಂಡಾಗಳ ನಿವಾಸಿಗಳ ಸಮ್ಮುಖದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುಗಾದಿ, ರಂಜಾನ್ ಹಬ್ಬಗಳು ಹಾಗೂ ಆರ್ಥಿಕ ವರ್ಷಾಂತ್ಯ ಹಿನ್ನೆಲೆ 2025ರ ಫೆಬ್ರವರಿ-ಮಾರ್ಚ್ ತಿಂಗಳ ವೇತನವನ್ನು ಮಾ.28-29 ರಂದು ಪಾವತಿಸುವಂತೆ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಮನವಿಗೆ ಸ್ಪಂದಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಮಾ. 27 ರಂದೇ ವೇತನ ಪಾವತಿಸಿರುವ ಕಾರಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಸಾರಿಗೆ ಸಚಿವರಿಗೆ ಫೆಡರೇಷನ್ ಮುಖಂಡರು, ಸದಸ್ಯರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.ಕೆಕೆಆರ್ಟಿಸಿ ನಿಗಮದ ಅಧಿಕಾರಿಗಳು, ನೌಕರರಿಗೆ ಪ್ರತಿ ತಿಂಗಳು 01 ನೇ ತಾರೀಖು ವೇತನ ಪಾವತಿಯಾಗುತ್ತಿದೆ. ಆದರೆ ಮಾರ್ಚ್ 30 ರಂದು ಚಂದ್ರಮಾನ ಯುಗಾದಿ ಹಬ್ಬದ ರಜೆ, ಮಾರ್ಚ್ 31 ರಂದು ರಂಜಾನ್ ಹಬ್ಬದ ರಜೆ ಹಾಗೂ ಏ.01 ರಂದು ಬ್ಯಾಂಕ್ ರಜೆ ಇರುವ ಕಾರಣ ಏ.02 ರ ನಂತರ ವೇತನ ಪಾವತಿಯಾದರೆ ನೌಕರರಿಗೆ ಹಬ್ಬಗಳಿಗೆ ಆಚರಣೆ ಕಷ್ಟಕರವಾಗಲಿದೆ. ಹಾಗಾಗಿ ಫೆಬ್ರವರಿ-ಮಾರ್ಚ್ ತಿಂಗಳ ನೌಕರರ ವೇತನವನ್ನು ಮಾ.28 ಅಥವಾ ಮಾ.29 ರಂದು ಪಾವತಿಸುವಂತೆ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್…

Read More

ರಂಜಾನ್ ಮಾಸಾಚರಣೆಗಾಗಿ ನಡೆದ ಇಫ್ತಿಹಾರ ಕೂಟದಲ್ಲಿ ಎಂಎಲ್ಸಿ ಸುನೀಲಗೌಡ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಗುರುವಾರ ಮುಸ್ಸಂಜೆ ನಗರದ ಲಾಲ ಬಹದ್ದೂರ ಶಾಸ್ತ್ರೀ ಮಾರುಕಟ್ಟೆಯಲ್ಲಿ ರಂಜಾನ್ ಮಾಶಾಚರಣೆ ಅಂಗವಾಗಿ ಆಯೋಜಿಸಲಾದ ಇಫ್ತಿಹಾರ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಹಿಂದೂ, ಮುಸ್ಲಿಂ, ಕೈಸ್ತ ಸೇರಿದಂತೆ ಎಲ್ಲ ಧರ್ಮದವರು ವಿಜಯಪುರ ಜಿಲ್ಲೆಯಲ್ಲಿ ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಜಾತ್ರೆ ಮತ್ತು ಉರುಸುಗಳಲ್ಲಿ ಎಲ್ಲರು ಪಾಲ್ಗೊಳ್ಳುತ್ತಾರೆ. ತಿಕೋಟಾ ಹಾಜಿಮಸ್ತಾನ ದರ್ಗಾಕ್ಕೆ ಹಿಂದೂಗಳ ಮನೆಯಿಂದ ಮಾದಲಿ ನೈವೇದ್ಯ ಅರ್ಪಿಸಲಾಗುತ್ತದೆ. ತಿಗಣಿಬಿದರಿಯಲ್ಲಿ ಲಾಲಸಾಬ ಜಾತ್ರೆಯಲ್ಲಿ ಎಲ್ಲರೂ ಸೇರಿ ಜಾತ್ರೆ ಮಾಡುತ್ತಾರೆ. ಉಪ್ಪಲದಿನ್ನಿಯಲ್ಲಿ ಸಂಗಮನಾಥ ಜಾತ್ರೆಯಲ್ಲಿ ಮುಸ್ಮಿಮರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಜಿಲ್ಲೆಯಲ್ಲಿ ಇಂಥ ಹಲವಾರು ಜಾತ್ರೆಗಳಲ್ಲಿ ಯಾವುದೇ ಧರ್ಮ ಭೇದವಿಲ್ಲದೆ ಎಲ್ಲರೂ ಭ್ರಾತೃತ್ವದಿಂದ ಪಾಲ್ಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.ರಂಜಾನ್ ಪವಿತ್ರ ಮಾಸವಾಗಿದೆ. ಈ ಅವಧಿಯಲ್ಲಿ ಮನಃಪೂರ್ವಕವಾಗಿ ಉಪವಾಸ ಮಾಡುವುದರಿಂದ, ಉಪವಾಸ ಮಾಡುವವರಿಗೆ ಅಹಾರ ನೀಡುವುದರಿಂದ…

Read More

ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗಾಗಿ ಕೃಷ್ಣಾ ನದಿಯಿಂದ ನೀರೆತ್ತಿ ಕೊಲ್ಹಾರದಿಂದ ಮುಳವಾಡ, ಹೊನಗನಹಳ್ಳಿ, ವಿಜಯಪುರ ಮಾರ್ಗದಲ್ಲಿ ಅಳವಡಿಸಿರುವ ಪಿ.ಎಸ್.ಸಿ ಕೊಳವೆ ಮಾರ್ಗ ಪದೇ ಪದೇ ಒಡೆದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಈ ಸಮಸ್ಯೆಯನ್ನು ಸರಿಪಡಿಸಲು ಪಿ.ಎಸ್.ಸಿ ಕೊಳವೆ ಮಾರ್ಗ ಬದಲಾಯಿಸಿ, ಎಂ.ಎಸ್. ಪೈಪ್ ಅಳವಡಿಸುವ 50 ಕೋಟಿ ಮೊತ್ತದ ಕಾಮಗಾರಿಗೆ ನಿನ್ನೆಯ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.2011ರ ಜನಗಣತಿಯಂತೆ ವಿಜಯಪುರ ನಗರದ ಜನಸಂಖ್ಯೆ 3,26,360 ಇದ್ದು, ಪ್ರಸ್ತುತ ಅಂದಾಜು 4,80,000 ಇರುತ್ತದೆ. ವಿಜಯಪುರ ನಗರಕ್ಕೆ ಯೋಜನೆಗಾಗಿ ಕೃಷ್ಣಾ ನದಿ ಆಲಮಟ್ಟಿ ಹಿನ್ನಿರಿನಿಂದ 1ನೇ ಹಂತ, 2ನೇ ಹಂತ ಹಾಗೂ ಭೂತನಾಳ ಕೆರೆ ಮೂಲದಿಂದ ದಿನಂಪ್ರತಿ 83.32ದಶಲಕ್ಷ ಲೀಟರ್ ನೀರು ಪೂರೈಕೆ ಮಾಡುವ ಯೋಜನೆಗಳನ್ನು…

Read More