ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುಗಾದಿ ಹಬ್ಬದ ಪ್ರಯುಕ್ತ ಶ್ರೀಶೈಲ ಶ್ರೀಮಲ್ಲಿಕಾರ್ಜುನ ಜಾತ್ರೆ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ದಿನಾಂಕ:೩೦-೦೩-೨೦೨೫ ರಂದು ಚಂದ್ರಮಾನ ಯುಗಾದಿಯಂದು ಶ್ರೀಶೈಲದಿಂದ ವಿಜಯಪುರಕ್ಕೆ ಹೆಚ್ಚಿನ ಜನದಟ್ಟಣೆಯಾಗಬಹುದಾದ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಪ್ರಯಾಣದ ಅನುಕೂಲಕ್ಕಾಗಿ ಶ್ರೀಶೈಲದಲ್ಲಿ ೨೫೦ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ಕಾರ್ಯಾಚರಣೆ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಯಾತ್ರಾರ್ಥಿಗಳು ಮಂತ್ರಾಲಯ ಹಾಗೂ ಮಹಾನಂದಿ ದರ್ಶನ ಮಾಡಲು ಇಚ್ಚಿಸಿದಲ್ಲಿ, ಮಹಾನಂದಿ ಹಾಗೂ ಮಂತ್ರಾಲಯ ಮಾರ್ಗವಾಗಿ ಬಸ್ ಕಾರ್ಯಾಚರಣೆ ಮಾಡಲಾಗುವುದು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಶ್ರೀಶೈಲದ ಜಾತ್ರಾ ಸ್ಥಳದಲ್ಲಿ ಬಸ್ ನಿಲ್ದಾಣದ ಜಾತ್ರಾ ಉಸ್ತುವಾರಿ ಅಧಿಕಾರಿ ಮೊಬೈಲ್ ಸಂಖ್ಯೆ: ೭೭೬೦೯೯೨೨೬೦, ವಿಭಾಗೀಯ ಸಾರಿಗೆ ಅಧಿಕಾರಿ ಮೊಬೈಲ್ ಸಂಖ್ಯೆ: ೭೭೬೦೯೯೨೨೫೨, ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮೊಬೈಲ್ ಸಂಖ್ಯೆ: ೭೭೬೦೯೯೨೨೫೮, ಶ್ರೀಶೈಲಂ ಜಾತ್ರಾ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕರ ಮೊಬೈಲ್ ಸಂಖ್ಯೆ: ೭೪೮೩೭೩೬೨೭೪ಗೆ ಸಂಪರ್ಕಿಸಬಹುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.