ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಪೌರ ನಿಗಮಗಳ ಅಧಿನಿಯಮದ ಅನ್ವಯ ಸ್ವತ್ತಿನ ಮಾರ್ಗಸೂಚಿ ಮೌಲ್ಯದ ಪರಿಷ್ಕರಣೆಯಾಗದ ವರ್ಷದಲ್ಲಿ ಪ್ರತಿ ಹಣಕಾಸು ವರ್ಷಕ್ಕೆ ಶೇ.೩ ರಿಂದ ೫ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಲು ಅವಕಾಶ ಇರುವುದರಿಂದ ೨೦೨೫-೨೬ನೇ ವರ್ಷಕ್ಕೆ ಅನ್ವಯವಾಗುವಂತೆ ದಿನಾಂಕ:೦೧-೦೪-೨೦೨೫ ರಿಂದ ೩೧-೦೩-೨೦೨೬ರವರೆಗೆ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ತಿಳಿಸಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆಯ ಆಸ್ತಿ ತೆರಿಗೆಯನ್ನು ದಿನಾಂಕ:೦೧-೦೪-೨೦೨೫ ರಿಂದ ಜಾರಿಗೆ ಬರುವಂತೆ ವಾಸದ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು, ಖಾಲಿ ನಿವೇಶನಗಳು ಹಾಗೂ ಕೈಗಾರಿಕಾ ಪ್ರದೇಶಕ್ಕೆ ಶೇ.೩ರಷ್ಟು ಹೆಚ್ಚಿಸಿ ಪರಿಷ್ಕರಣೆ ಮಾಡಲಾಗಿದೆ. ಪಾಲಿಕೆಯ ೨೦೨೫-೨೬ಕ್ಕೆ ಅನ್ವಯವಾಗುವಂತೆ ಮೂಲ ಆಸ್ತಿ ತೆರಿಗೆಯಲ್ಲಿ ಶೇ.೩ರಷ್ಟು ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

