Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಎಲ್ಲೆಲ್ಲಿಯೂ ಹಬ್ಬ ಹಬ್ಬ.. ಬಂತು ಯುಗಾದಿ ಹಬ್ಬ ಎಂಬ ಹಾಡು ಮನೆ ಮನೆಗಳಲ್ಲಿಯೂ ಅನುರಣಿಸುವ ಸಮಯವಿದು. “ಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುವುದುಹೊಸ ವರುಷಕೆ ಹೊಸ ಹರುಷವಹೊಸತು ಹೊಸತು ತರುವುದು” ಎಂಬ ಬೇಂದ್ರೆ ಅಜ್ಜನವರ ಕವನ ಯುಗಾದಿಯ ಮಹತ್ವವನ್ನು ಸಾರಿ ಸಾರಿ ಹೇಳುತ್ತದೆ. ಯುಗಾದಿ ಎಂದರೆ ವಸಂತಕಾಲ. ಯುಗಾದಿ ಎಂದರೆ ಚೈತ್ರ ಮಾಸದ ಆರಂಭದ ಮೊದಲ ಹಬ್ಬ. ಇಡೀ ಪ್ರಕೃತಿಯೇ ಈ ಹಬ್ಬಕ್ಕೆ ಸಜ್ಜಾಗುತ್ತದೆ. ಚಳಿಗಾಲದಲ್ಲಿ ತನ್ನ ಹಳೆಯ ಎಲೆಗಳನ್ನೆಲ್ಲ ಉದುರಿಸಿಕೊಂಡು ಬೋಳಾಗಿರುತ್ತಿದ್ದ ಮರಗಳೆಲ್ಲ ಎಳೆಯ ಹಚ್ಚ ಹಸಿರಿನ ಎಲೆಗಳನ್ನು ತನ್ನದಾಗಿಸಿಕೊಂಡು, ಎಳೆಯ ಕಾಯಿ, ಹಣ್ಣುಗಳು ಬಿಡುವ ಸಮಯ. ಮಾವಿನಲ್ಲಿ ಚಿಗುರೆಲೆಗಳು ಬೇವಿನಲ್ಲಿ ಹೂವುಗಳು ಮೂಡುವ ಈ ಸಮಯದಲ್ಲಿ ಇಡೀ ಪ್ರಕೃತಿಯೇ ಮೈ ಮರೆಸುವ ಸೌಂದರ್ಯಧಾರೆ ಇಳಿದು ಬಂದಂತೆ ಹಸಿರು ಸೀರೆಯುಟ್ಟು ಯುಗಾದಿ ಹಬ್ಬವನ್ನು ಆಚರಿಸಲು ಸಜ್ಜಾಗಿ ನಿಂತಂತೆ ಕಾಣುತ್ತದೆ. ಯುಗಾದಿ ಹಳ್ಳಿಗರ ಭಾಷೆಯಲ್ಲಿ ಉಗಾದಿ ಹಬ್ಬ.. ಯುಗದ ಅಂದರೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿರಿಯ ಪತ್ರಿಕರ್ತ ಟಿ ಕೆ ಮಲಗೊಂಡ ಸಂಪಾದಕತ್ವದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಹೊರತಂದಿರುವ “ಯುಗಾದಿ ವಿಶೇಷಾಂಕ -2025” ನ್ನು ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರು ಅಧಿಕೃತವಾಗಿ ಬಿಡುಗೊಳಿಸಿದರು.ನಂತರ ವಿಶೇಷಾಂಕ ಓದಿದ ಅವರು ವಿಶೇಷಾಂಕ ಮೂಡಿಬಂದ ರೀತಿ ಮತ್ತು ವಿನ್ಯಾಸಕ್ಕೆ ಮಾರುಹೋದರು. ಅಷ್ಟೇ ಅಲ್ಲದೆ ಈ ವರ್ಷದ ವಿಶೇಷಾಂಕದ ಸಾಧಕರ ಲೇಖನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಭೀಮಾತೀರದಲ್ಲಿ ಕೆ ವಿ ಪ್ರಭಾಕರ್ ಎನ್ನುವ ಶಿರ್ಷಿಕೆ ನೋಡಿ ಸಂತಸ ಪಟ್ಟು, ತಾವು ಬರೆದ ಹಳೆಯ ಸಮಗ್ರ ಲೇಖನಗಳನ್ನು ಸಂಪಾದಕ ಟಿ ಕೆ ಮಲಗೊಂಡರ ಮುಂದೆ ಸ್ಮರಿಸಿದರು.ಸಾಧಕರ ಲೇಖನದಲ್ಲಿ ಅಕ್ಷರಕ್ಕಿಳಿಸಿದ ಸಾಧಕರ ಜೀವನ ಚರಿತ್ರೆಯ ಮಾಹಿತಿ ರೋಚಕವಾಗಿವೆ. ಯುಗಾದಿ ಹಬ್ಬದ ಕುರಿತ ಲೇಖನಗಳು, ಹಬ್ಬದಾಚರಣೆ ಸಂಪ್ರದಾಯದ ಬಗೆಗಿನ ವಿಶೇಷ ಬರಹಗಳು, ಇನ್ನಿತ ಲೇಖನಗಳು ಆಕರ್ಷಕವಾಗಿವೆ ಎಂದರು. ಒಟ್ಟಾರೆ ಇಡೀ ವಿಶೇಷಾಂಕದ ಸಂಗ್ರಹ ಯೋಗ್ಯವಾಗಿದೆ. ಜಿಲ್ಲಾಮಟ್ಟದ ಪತ್ರಿಕೆ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಲಿ…
ರಚನೆ-ದೀಪಾ ಪೂಜಾರಿಕುಶಾಲನಗರ ಉದಯರಶ್ಮಿ ದಿನಪತ್ರಿಕೆ ಅಮ್ಮ, ನಿನ್ನ ಮಮತೆಯತಟ್ಟೆ ಖಾಲಿಯಾಗಿದೆ,ನಿನ್ನ ಮಾತಿನ ಸೀತೆಯುಮೌನವಾಗಿದೆ.ಎಲ್ಲಾ ಹಾದಿಗಳೂನಿರ್ಜನವಾಗಿವೆ,ನೀ ಇಲ್ಲದ ಲೋಕಕತ್ತಲಾಗಿದೆ ನನಗೆ ನನ್ನ ಜನ್ಮದಿನ ಬಂತು,ಆದರೆ ನಿನ್ನ ಕರೆ ಇಲ್ಲ,ನಿನ್ನ ಮಾತುಗಳ ಸಿಹಿಯಿಲ್ಲ.ಎಲ್ಲರ ಶುಭಾಶಯಗಳುಒತ್ತಿ ಬರುತ್ತಿವೆಆದರೆ ನೀನಿಲ್ಲದೆಮನಸ್ಸು ಖಾಲಿಯಾಗಿದೆ. ನಿನ್ನ ನೆನಪಿನಲ್ಲಿಕಣ್ಣೀರಾಗಿದ್ದೇನೆ,ನಿನ್ನ ಸ್ಮೃತಿಗಳೇ ನನ್ನ ಬೆಳಕು.ಅಮ್ಮ, ನೀ ಕಾಣದಿದ್ದರೂ,ನಿನ್ನ ಪ್ರೀತಿ ಸದಾ ನನ್ನ ಜೊತೆ…ನಿನ್ನ ನೆನಹು ನಿನ್ನ ನೆನಪುನನ್ನ ಜೀವದ ಬೆಳಗು
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಕಳೆದ ಎರಡು ದಿನಗಳಿಂದ ಮುಖ ಕಿವುಚಿ ಓಡಾಡುತ್ತಿದ್ದ ಮೊಮ್ಮಗ ಒದ್ದಾಟವನ್ನು ಕಂಡು ಅಜ್ಜಿ ಆತನನ್ನು ತನ್ನ ಬಳಿ ಕರೆದು ಆತನ ತಲೆಯನ್ನು ನೇವರಿಸಿ ‘ಏನಾಯಿತು ಮಗು’ ಎಂದು ಕೇಳಿದರು.ತುಸು ಸಂಕೋಚದಿಂದ ಮೊಮ್ಮಗ “ಏನಿಲ್ಲ ಅಜ್ಜಿ, ತುಸು ಹೊಟ್ಟೆ ನೋವು” ಎಂದು ಹೇಳಿದ.ಅಜ್ಜಿ ನಸುನಗುತ್ತಾ ನಾನು ಆಡಿಸಿ ಬೆಳೆಸಿದ ಮಗು, ನನ್ನ ಮುಂದೆ ಸಂಕೋಚ ಏಕೆ? ನೀನು ಸರಿಯಾದ ಕಾರಣ ಹೇಳಿದ್ರೆ ನಿನಗೇ ಅನುಕೂಲ’ ಎಂದು ಹೇಳಲು ಮೊಮ್ಮಗ ಅಜ್ಜಿ ಸರಿಯಾಗಿ ಟಾಯ್ಲೆಟ್ ಆಗ್ತಾ ಇಲ್ಲ ಏನೋ ಒಂತರ ಅನ ಈಸಿನೆಸ್ ಫೀಲ್ ಆಗ್ತಾ ಇದೆ.ಗಂಭೀರವಾಗಿ ತಾನು ಕುಳಿತ ಜಾಗದಿಂದ ಎದ್ದ ಅಜ್ಜಿ ‘ನಾನು ಹೇಳಿದ ಮಾತು ಕೇಳ್ತೀನಿ ಅನ್ನೋದಾದ್ರೆ ಇದಕ್ಕೆ ಪರಿಹಾರ ಹೇಳ್ತೀನಿ’ ಎಂದು ಹೇಳಿದರು. ಒದ್ದಾಡುತ್ತಿದ್ದ ಮೊಮ್ಮಗ ಖಂಡಿತ ಅಜ್ಜಿ, ಈ ತೊಂದರೆಯಿಂದ ಪಾರಾದರೆ ಸಾಕು. ನೀನು ಹೇಳಿದ್ದನ್ನ ಮಾಡೇ ಮಾಡ್ತೀನಿ, ಅದೇನು ಅಂತ ಹೇಳಿ ಎಂದು ಅತ್ಯುತ್ಸಾಹದಿಂದ…
ಹುತ್ಮಾತ್ಮ ದಿನದ ಪ್ರಯುಕ್ತ ಉಘೇ ವೀರಭೂಮಿ ಕಾರ್ಯಕ್ರಮ | ವಾಗ್ಮಿ ಪ್ರಕಾಶ ಮಲ್ಪೆ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತದ ಸ್ವಾತಂತ್ರ ಹೋರಾಟಕ್ಕೆ ಕ್ರಾಂತಿಕಾರಿ ಬದಲಾವಣೆಯ ದಿಕ್ಕನ್ನು ನೀಡಿ ಭಾರತ ಮಾತೆ ಬ್ರಿಟಿಷರ ಕಪಿಮುಷ್ಠಿಯಿಂದ ಬಿಡುಗಡೆಯಾಗಬೇಕು ಅನ್ನುವ ಉದ್ದೇಶಕ್ಕೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅಮರ ಕಲಿಗಳು ಸ್ಮರಿಸುವುದು ದೇಶದ ಪ್ರತಿಯೊಬ್ಬರ ಕರ್ತವ್ಯ ಎಂದು ವಾಗ್ಮಿ ಪ್ರಕಾಶ ಮಲ್ಪೆ ಮಾತನಾಡಿದರು.ನಗರದ ಹುತಾತ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ಭಗತ್ ಸಿಂಗ್, ರಾಜಗುರು, ಸುಖದೇವ, ಅವರ ಹುತಾತ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ಉಘೇ ವೀರಭೂಮಿ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ತಾಯ್ನಾಡನ್ನು ಸ್ವತಂತ್ರಗೊಳಿಸುವ ಮಹಾನ್ ಗುರಿಯನ್ನು ಸಾಧಿಸಲು ಯಾವುದೇ ತ್ಯಾಗವು ಸಾಕಾಗುವುದಿಲ್ಲ’ ಸ್ವಾತಂತ್ರ‍್ಯ ಹೋರಾಟದಲ್ಲಿ ಅವರ ಸಹಚರರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಸ್ಪೂರ್ತಿದಾಯಕ ದೃಷ್ಟಿಕೋನವಾಗಿತ್ತು. ಚಂದ್ರಶೇಖರ್ ಆಜಾದ್ ಅವರ ಸಹಾಯದಿಂದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ (ಎಚ್‌ಎಸ್‌ಆರ್‌ಎ) ಅನ್ನು ರಚಿಸಿದರು ಅದರ ಮೂಲಕ ಸ್ವಾತಂತ್ರದ…
ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಗ್ರಾಮೀಣ ಬಾಗದ ಮಕ್ಕಳಲ್ಲಿ ಪ್ರತಿಭೆಗೇನು ಕಡಿಮೆ ಇಲ್ಲ ಅವರನ್ನು ಪ್ರೋತ್ಸಾಹಿಸಿ ಗುರುತಿಸುವ ಕಾರ್ಯ ನಿಮ್ಮಿಂದಗಬೇಕು ಸಿಡಿಪಿಒ ಎನ್ ಎನ್ ಹಿರೇಮಠ ಮನವಿ ಮಾಡಿದರು.ಶಿಶು ಅಭಿವೃದ್ದಿ ಯೋಜನೆ ಸಿಂದಗಿ ವ್ಯಾಪ್ತಿಯಲ್ಲಿ ಬರುವ ಸಮೀಪದ ಗಬಸಾವಳಗಿ ಅಂಗನವಾಡಿ ಕೇಂದ್ರ-೨ರಲ್ಲಿ ಮಕ್ಕಳಿಗೆ ವಿನೂತನವಾದ ಅಂಗನವಾಡಿ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಾರ್ಷಿಕಸ್ನೇಹ ಸಮ್ಮೇಳನಗಳು ಕೇವಲ ಕಾನವೆಂಟ್ ಶಾಲೆಗಳಿಗೆ ಮಾತ್ರ ಸೀಮಿತವಾಗಿರದೇ, ಪಟ್ಟಣ ಸೇರಿದಂತೆ ಗ್ರಾಮೀಣ ಬಾಗದ ಅಂಗನವಾಡಿ ಕೇಂದ್ರದಲ್ಲಿ ಬಡ ಮಕ್ಕಳೇ ಹೆಚ್ಚು ಕಲಿಯುವುದರಿಂದ ಅವರಲ್ಲಿರುವಭಯ ಓಡಿಸಲು ಹಾಗೂ ಆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಈ ಕಾರ್ಯಕ್ರಮ ಮುಖ್ಯ ವೇದಿಕೆಯಗಲಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಯಕರ್ತೆಯರು ತಮ್ಮ ತಮ್ಮ ಗ್ರಾಮ ಪಂಚಾಯತ ಮಟ್ಟದಲ್ಲಿಯೂ ಇಂತಹ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲು ಕರೆ ನೀಡಿದರು.ಕಾರ್ಯಕ್ರಮಲ್ಲಿ ಮಕ್ಕಳಿಗೆ ನೃತ್ಯ, ವೇಷಭೂಷಣ, ಹಾಡು, ಕಿರುನಾಟಕ, ಚಿತ್ರಕಲೆ ಸ್ಪರ್ಧೇಗಳನ್ನು ಆಯೋಜಿಸಿ ಗಣ್ಯರಿಂದ ಮಕ್ಕಳಿಗೆ ಅಭಿನಂದನಾ ಪತ್ರಗಳನ್ನು ನೀಡಿ ಹುರಿದುಂಬಿಸಲಾಯಿತು. ಹಾಗೂ ಅಂಗನವಾಡಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ೬ ವರ್ಷದ ಪುಟಾಣಿ ಬಾಲಕಿ ಸಮಾ ಫಾತಿಮಾ ಫಯಾಜಹ್ಮದ ಕಲಾದಗಿ ರಂಜಾನ್ ಮಾಸಾಚರಣೆಯ ಪ್ರಥಮ ರೋಜಾ ಮಾಡಿದಳು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರು ಏಪ್ರಿಲ್ ೩೦ರೊಳಗಾಗಿ ೨೦೨೫-೨೬ನೇ ಸಾಲಿನ ಆಸ್ತಿ ತೆರಿಗೆ ಪಾವತಿಸಿ ಆಸ್ತಿ ತೆರಿಗೆಯ ಮೇಲೆ ಶೇ.೫ ರಷ್ಟು ರಿಯಾಯತಿ ಲಾಭ ಪಡೆದುಕೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ತಿಳಿಸಿದ್ದಾರೆ.ಪ್ರತಿ ವರ್ಷ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಏಪ್ರಿಲ್ ತಿಂಗಳಲ್ಲಿ ಪಾವತಿಸುವ ಕರದಾತರಿಗೆ ಚಾಲ್ತಿ ಸಾಲಿನ ಆಸ್ತಿ ತೆರಿಗೆಯ ಮೇಲೆ ಶೇ.೫ ರಷ್ಟು ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ. ೨೦೨೫-೨೬ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ೩೦ರೊಳಗಾಗಿ ಪಾವತಿಸುವ ಕರದಾತರಿಗೆ ಶೇ.೫ ರಿಯಾಯಿತಿಯನ್ನು ನೀಡಲಾಗುತ್ತಿದ್ದು, ತೆರಿಗೆ ಪಾವತಿಸಿ ಇದರ ಲಾಭ ಪಡೆಯಬಹುದು. ಜೂನ್ ಒಳಗಾಗಿ ಪಾವತಿಸದಿದ್ದರೆ ಜುಲೈ ತಿಂಗಳಿನಿಂದ ಪ್ರತಿ ತಿಂಗಳಿಗೆ ಶೇ.೨ ರಷ್ಟು ದಂಡದೊಂದಿಗೆ ಪಾವತಿಸಬೇಕಾಗುತ್ತದೆ.ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಸಕಾಲದಲ್ಲಿ ಪಾವತಿಸಲು ವಿಫಲರಾದ ಆಸ್ತಿ ಮಾಲೀಕರುಗಳ ವಿರುದ್ಧ ಕೆಎಂಸಿ ಕಾಯ್ದೆ ೧೯೭೬ರ ಅಧಿನಿಯಮಗಳನ್ವಯ ಬಾಕಿ ಇರುವ ಮೊತ್ತಗಳನ್ನು ವಸೂಲಿ ಮಾಡಲು, ಆಸ್ತಿ ಕರ ಬಾಕಿ ಉಳಿಸಿಕೊಂಡವರ ವಿರುದ್ಧ ನ್ಯಾಯಾಲಯದಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ೨೦೨೫-೨೬ನೇ ಸಾಲಿನ ಸಂತೆ ಬಜಾರ, ಸಂಡೆ ಬಜಾರ, ಕೋಳಿ ಬಜಾರಗಳಲ್ಲಿ ವ್ಯಾಪಾರಸ್ಥರಿಂದ ನಿಗದಿತ ದರದಂತೆ ಶುಲ್ಕ ಸಂಗ್ರಹಿಸುವ ಬಹಿರಂಗ ಹರಾಜನ್ನು ಪಾಲಿಕೆ ಸಭಾಂಗಣದಲ್ಲಿ ದಿನಾಂಕ: ೨೭-೦೩-೨೦೨೫ ರಂದು ಜಿಲ್ಲಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ಮಹಾನಗರಪಾಲಿಕೆ ವಿಜಯಪುರ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಸಂತೆ ಹಾಗೂ ಸಂಡೆ ಬಜಾರಿನ ಲೀಲಾವಿನಲ್ಲಿ ೧೯ ಗುತ್ತಿಗೆದಾರರು ಭಾಗವಹಿಸಿದ್ದರು. ಸ್ಪರ್ಧಾತ್ಮಕ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ರೂ.೧,೩೭,೧೦,೦೦೦ ಬೇಡಿಕೆಯಾಗಿರುತ್ತದೆ. ಕೋಳಿ ಬಜಾರ ಬಹಿರಂಗ ಹರಾಜಿನಲ್ಲಿ ರೂ.೧.೭೬ಲಕ್ಷಕ್ಕೆ ದಾಖಲೆ ಮಟ್ಟಕ್ಕೆ ಹರಾಜು ಆಗಿದೆ.ಈ ವರ್ಷದ ಹರಾಜಿನ ಮೊತ್ತವು ಹಿಂದಿನ ಆರ್ಥಿಕ ವರ್ಷಗಳಿಗೆ ಹೋಲಿಸಿದಲ್ಲಿ ದಾಖಲೆ ಮೊತ್ತಕ್ಕೆ ಜರುಗಿರುತ್ತದೆ.ಸನ್-೨೦೨೨-೨೦೨೩ ಸಾಲಿನಲ್ಲಿ ಸಂತೆ ಬಜಾರ ೯೯.೨೫ ಲಕ್ಷ ರೂ. ಹಾಗೂ ಕೋಳಿ ಬಜಾರ್ ರೂ.೧,೨೦,೦೦೦ ಮೊತ್ತಕ್ಕೆ ಹರಾಜು ಆಗಿತ್ತು.ಈ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ದಾಖಲೆ ಮೊತ್ತಕ್ಕೆ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ರಂಜಾನ್ ಎಂದರೆ ಚಿಕ್ಕಮಕ್ಕಳಿಗೆ ಉಪವಾಸದ ಪರಿಚಯ ಮಾಡಿಕೊಡುವ ಸಮಯ, ಪವಿತ್ರ ತಿಂಗಳಲ್ಲಿ ಕನಿಷ್ಠ ಒಂದು ಅಥವಾ ಎರಡು ಉಪವಾಸಗಳನ್ನು ಆಚರಿಸಬೇಕು ಎಂದು ಮಕ್ಕಳ ಭಕ್ತಿಯಾಗಿರುತ್ತದೆ. ಅದೇ ರೀತಿಯಾಗಿ ಪಟ್ಟಣದ ಚಾಂದ ತಾರಾ ಗಲ್ಲಿಯ ನಿವಾಸಿ ಅಲ್ತಾಫ್ ಕಮಲಾಪೂರ ಅವರ 7 ವರ್ಷ ಮಗಳಾದ ಅಲೀನಾ ಕಮಲಾಪೂರ ರೋಜಾ (ರಂಜಾನ ಉಪವಾಸ) ವ್ರತವನ್ನು ಮಾಡಿದ್ದಾರೆ. ಮಗು ಉಪವಾಸ ವ್ರತ ಮಾಡಿದ್ದಕ್ಕೆ ಸಂಬಂಧಿಕರು ಶುಭಾಶಯಗಳನ್ನು ತಿಳಿಸಿದ್ದಾರೆ.
