ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಗ್ರಾಮೀಣ ಬಾಗದ ಮಕ್ಕಳಲ್ಲಿ ಪ್ರತಿಭೆಗೇನು ಕಡಿಮೆ ಇಲ್ಲ ಅವರನ್ನು ಪ್ರೋತ್ಸಾಹಿಸಿ ಗುರುತಿಸುವ ಕಾರ್ಯ ನಿಮ್ಮಿಂದಗಬೇಕು ಸಿಡಿಪಿಒ ಎನ್ ಎನ್ ಹಿರೇಮಠ ಮನವಿ ಮಾಡಿದರು.
ಶಿಶು ಅಭಿವೃದ್ದಿ ಯೋಜನೆ ಸಿಂದಗಿ ವ್ಯಾಪ್ತಿಯಲ್ಲಿ ಬರುವ ಸಮೀಪದ ಗಬಸಾವಳಗಿ ಅಂಗನವಾಡಿ ಕೇಂದ್ರ-೨ರಲ್ಲಿ ಮಕ್ಕಳಿಗೆ ವಿನೂತನವಾದ ಅಂಗನವಾಡಿ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾರ್ಷಿಕಸ್ನೇಹ ಸಮ್ಮೇಳನಗಳು ಕೇವಲ ಕಾನವೆಂಟ್ ಶಾಲೆಗಳಿಗೆ ಮಾತ್ರ ಸೀಮಿತವಾಗಿರದೇ, ಪಟ್ಟಣ ಸೇರಿದಂತೆ ಗ್ರಾಮೀಣ ಬಾಗದ ಅಂಗನವಾಡಿ ಕೇಂದ್ರದಲ್ಲಿ ಬಡ ಮಕ್ಕಳೇ ಹೆಚ್ಚು ಕಲಿಯುವುದರಿಂದ ಅವರಲ್ಲಿರುವ
ಭಯ ಓಡಿಸಲು ಹಾಗೂ ಆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಈ ಕಾರ್ಯಕ್ರಮ ಮುಖ್ಯ ವೇದಿಕೆಯಗಲಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಯಕರ್ತೆಯರು ತಮ್ಮ ತಮ್ಮ ಗ್ರಾಮ ಪಂಚಾಯತ ಮಟ್ಟದಲ್ಲಿಯೂ ಇಂತಹ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲು ಕರೆ ನೀಡಿದರು.
ಕಾರ್ಯಕ್ರಮಲ್ಲಿ ಮಕ್ಕಳಿಗೆ ನೃತ್ಯ, ವೇಷಭೂಷಣ, ಹಾಡು, ಕಿರುನಾಟಕ, ಚಿತ್ರಕಲೆ ಸ್ಪರ್ಧೇಗಳನ್ನು ಆಯೋಜಿಸಿ ಗಣ್ಯರಿಂದ ಮಕ್ಕಳಿಗೆ ಅಭಿನಂದನಾ ಪತ್ರಗಳನ್ನು ನೀಡಿ ಹುರಿದುಂಬಿಸಲಾಯಿತು. ಹಾಗೂ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಆಟದ ಸಾಮಾಗ್ರಿ, ನೊಟ್ ಬುಕ್, ಕುರ್ಚಿ ಮೇಜು ಹಾಗೂ ಅಲ್ಮೇರಾ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ನಿಡಿದ ದಾನಿಗಳಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಎನ್. ಕೋರವಾರ, ವಲಯ ಮೇಲ್ವಿಚಾರಕಿ, ಸುನೀತಾ ಕಪ್ಪೇನವರ, ಅಂಬವ್ವ ಕುಂಬಾರ, ಉಜ್ವಲ ಸಂಸ್ಥೆಯ ಸಂಯೋಜಕ ಸಾಗರ್ ಘಾಟ್ಗೆ, ಕಲಾವತಿ ವಾಲಿಕಾರ, ವಲಯದ ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು ಹಾಗೂ ಪಾಲಕರು ಇದ್ದರು.