ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿರಿಯ ಪತ್ರಿಕರ್ತ ಟಿ ಕೆ ಮಲಗೊಂಡ ಸಂಪಾದಕತ್ವದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಹೊರತಂದಿರುವ “ಯುಗಾದಿ ವಿಶೇಷಾಂಕ -2025” ನ್ನು ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರು ಅಧಿಕೃತವಾಗಿ ಬಿಡುಗೊಳಿಸಿದರು.
ನಂತರ ವಿಶೇಷಾಂಕ ಓದಿದ ಅವರು ವಿಶೇಷಾಂಕ ಮೂಡಿಬಂದ ರೀತಿ ಮತ್ತು ವಿನ್ಯಾಸಕ್ಕೆ ಮಾರುಹೋದರು. ಅಷ್ಟೇ ಅಲ್ಲದೆ ಈ ವರ್ಷದ ವಿಶೇಷಾಂಕದ ಸಾಧಕರ ಲೇಖನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಭೀಮಾತೀರದಲ್ಲಿ ಕೆ ವಿ ಪ್ರಭಾಕರ್ ಎನ್ನುವ ಶಿರ್ಷಿಕೆ ನೋಡಿ ಸಂತಸ ಪಟ್ಟು, ತಾವು ಬರೆದ ಹಳೆಯ ಸಮಗ್ರ ಲೇಖನಗಳನ್ನು ಸಂಪಾದಕ ಟಿ ಕೆ ಮಲಗೊಂಡರ ಮುಂದೆ ಸ್ಮರಿಸಿದರು.
ಸಾಧಕರ ಲೇಖನದಲ್ಲಿ ಅಕ್ಷರಕ್ಕಿಳಿಸಿದ ಸಾಧಕರ ಜೀವನ ಚರಿತ್ರೆಯ ಮಾಹಿತಿ ರೋಚಕವಾಗಿವೆ. ಯುಗಾದಿ ಹಬ್ಬದ ಕುರಿತ ಲೇಖನಗಳು, ಹಬ್ಬದಾಚರಣೆ ಸಂಪ್ರದಾಯದ ಬಗೆಗಿನ ವಿಶೇಷ ಬರಹಗಳು, ಇನ್ನಿತ ಲೇಖನಗಳು ಆಕರ್ಷಕವಾಗಿವೆ ಎಂದರು. ಒಟ್ಟಾರೆ ಇಡೀ ವಿಶೇಷಾಂಕದ ಸಂಗ್ರಹ ಯೋಗ್ಯವಾಗಿದೆ. ಜಿಲ್ಲಾಮಟ್ಟದ ಪತ್ರಿಕೆ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಲಿ ಎಂದು ಪತ್ರಿಕೆಗೆ ಶುಭ ಹಾರೈಸಿದರು.
ನಂತರ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ, ಕಾನೂನು ಸಂಸದೀಯ ಸಚಿವ ಎಚ್ ಕೆ ಪಾಟೀಲ್, ಏಷ್ಯಾ ನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜೀತ್ ಹನಮಕ್ಕನವರ, ರಾಜಕೀಯ ಸುದ್ದಿ ವಿಶ್ಲೇಷಕ ಪ್ರಶಾಂತ ನಾತು, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಮ್, ಕಾರ್ಮಿಕ ಇಲಾಖೆಯ ಜಂಟಿ ಕಾರ್ಯದರ್ಶಿ, ನಟ ನಿರ್ಮಾಪಕ ಡಾ.ಸಂಗಮೇಶ ಉಪಾಸೆ, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಆರ್ ಮಹಾದೇವ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಗಣ್ಯರು ಯುಗಾದಿ ವಿಶೇಷಾಂಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಪಾದಕ ಟಿ ಕೆ ಮಲಗೊಂಡ, ಪತ್ರಕರ್ತ ಗುರುರಾಜ ಹೂಗಾರ ಸೇರಿದಂತೆ ಇನ್ನಿತರರು ಇದ್ದರು.