ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ೨೦೨೫-೨೬ನೇ ಸಾಲಿನ ಸಂತೆ ಬಜಾರ, ಸಂಡೆ ಬಜಾರ, ಕೋಳಿ ಬಜಾರಗಳಲ್ಲಿ ವ್ಯಾಪಾರಸ್ಥರಿಂದ ನಿಗದಿತ ದರದಂತೆ ಶುಲ್ಕ ಸಂಗ್ರಹಿಸುವ ಬಹಿರಂಗ ಹರಾಜನ್ನು ಪಾಲಿಕೆ ಸಭಾಂಗಣದಲ್ಲಿ ದಿನಾಂಕ: ೨೭-೦೩-೨೦೨೫ ರಂದು ಜಿಲ್ಲಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ಮಹಾನಗರಪಾಲಿಕೆ ವಿಜಯಪುರ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಂತೆ ಹಾಗೂ ಸಂಡೆ ಬಜಾರಿನ ಲೀಲಾವಿನಲ್ಲಿ ೧೯ ಗುತ್ತಿಗೆದಾರರು ಭಾಗವಹಿಸಿದ್ದರು. ಸ್ಪರ್ಧಾತ್ಮಕ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ರೂ.೧,೩೭,೧೦,೦೦೦ ಬೇಡಿಕೆಯಾಗಿರುತ್ತದೆ. ಕೋಳಿ ಬಜಾರ ಬಹಿರಂಗ ಹರಾಜಿನಲ್ಲಿ ರೂ.೧.೭೬ಲಕ್ಷಕ್ಕೆ ದಾಖಲೆ ಮಟ್ಟಕ್ಕೆ ಹರಾಜು ಆಗಿದೆ.
ಈ ವರ್ಷದ ಹರಾಜಿನ ಮೊತ್ತವು ಹಿಂದಿನ ಆರ್ಥಿಕ ವರ್ಷಗಳಿಗೆ ಹೋಲಿಸಿದಲ್ಲಿ ದಾಖಲೆ ಮೊತ್ತಕ್ಕೆ ಜರುಗಿರುತ್ತದೆ.
ಸನ್-೨೦೨೨-೨೦೨೩ ಸಾಲಿನಲ್ಲಿ ಸಂತೆ ಬಜಾರ ೯೯.೨೫ ಲಕ್ಷ ರೂ. ಹಾಗೂ ಕೋಳಿ ಬಜಾರ್ ರೂ.೧,೨೦,೦೦೦ ಮೊತ್ತಕ್ಕೆ ಹರಾಜು ಆಗಿತ್ತು.
ಈ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ದಾಖಲೆ ಮೊತ್ತಕ್ಕೆ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

